ಹರಿಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
 
ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಾದ '''[[ನಂದಾದೀಪ]]'''(೧೯೬೩) ಮತ್ತು '''[[ನಾಂದಿ]]'''(೧೯೬೪) ಹರಿಣಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದ ಮಹೋನ್ನತ ಚಿತ್ರಗಳು. '''[[ಎಂ.ಆರ್.ವಿಠಲ್]]''' ಅವರ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ '''ನಂದಾದೀಪ'''. ಚಿತ್ರ ನಿರ್ಮಾಣದಲ್ಲಿ ಸುರಕ್ಷೆಯ ಕಕ್ಷೆಯಲ್ಲೇ ಪರಿಭ್ರಮಿಸುವ ಅನಿವಾರ್ಯಕ್ಕೆ ನಿರ್ಮಾಪಕ-ನಿರ್ದೇಶಕರು ಜೋತು ಬಿದ್ದಿದ್ದಂತಹ ಕಾಲದಲ್ಲಿ ವಿಭಿನ್ನ ಕಥಾವಸ್ತು ಮತ್ತು ನಿರೂಪಣೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಪ್ರಯೋಗಾತ್ಮಕ ಚಿತ್ರ. ಅಣ್ಣನ ವಿಧ್ಯಾಭ್ಯಾಸಕ್ಕಗಿ ತಂದೆ ಮಾಡಿದ ಸಾಲವನ್ನು ತೀರಿಸಲು ಮನಸಾರೆ ಪ್ರೀತಿಸಿದ
ಯುವಕನೊಂದಿಗಿನ ಪ್ರೀತಿಯ ಭಾವನೆಗಳನ್ನು ತೊರೆದು ತನ್ನ ವಯಸ್ಸಿನ ಮಗಳಿರುವ ಶ್ರೀಮಂತ ವಿಧುರನೊಂದಿಗೆ ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಂಶಯ ಪಡುವ ಆತನ ವರ್ತನೆಗೆ ಬೇಸತ್ತು ಹಳೆಯ ಗೆಳೆಯನನ್ನು ಅರಸುತ್ತಾ ಬರುವಾಗ ಸ್ಪೋಟಕ್ಕೆ ಬಲಿಯಾಗುವ ದುರಂತ '''ಗೌರಿ'''ಯ ಪಾತ್ರದಲ್ಲಿ ತಮ್ಮ ಅವಿಸ್ಮರಣೀಯ ನೈಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ<ref name="ಸಿನಿಮಾ ಯಾನ, ಡಾ. ಕೆ ಪುಟ್ಟಸ್ವಾಮಿ">{{cite web|title=ಎಂ.ಆರ್.ವಿಠ್ಠಲ್ ಎಂಬ ಪ್ರಯೋಗಶೀಲ ನಿರ್ದೇಶಕ|url=http://samvaada.com/themes/article/424/mrvittala.html|website=http://samvaada.com/|publisher=ಸಂವಾದ}}</ref>. ೧೯೬೩ನೇ ಸಾಲಿನ ರಾಷ್ಟಪ್ರಶಸ್ತಿ ಪಡೆದಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿಯಾಗಿತ್ತು. '''ಹಳ್ಳಿಯ ಹುಡುಗಿ''' ಚಿತ್ರದಲ್ಲೂ ಇದೇ ಮಾದರಿಯ ಪಾತ್ರದಲ್ಲಿ ಮಿಂಚಿದ್ದಾರೆ<ref name="BAGESHREE S., FRIDAY REVIEW"/>. '''[[ನಾಂದಿ]]''' ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ '''[[ಎನ್.ಲಕ್ಷ್ಮೀನಾರಾಯಣ್]]''' ನಿರ್ದೇಶನದ ಚೊಚ್ಚಲ ಚಿತ್ರ. ಅಂಗವಿಕಲರೂ ಸಂತೃಪ್ತ ಜೀವನ ಸಾಧಿಸಬಹುದೆಂಬ ಸಂದೇಶವಿದ್ದ ಈ ಚಿತ್ರದಲ್ಲಿ ಹೆರಿಗೆಯ ಸಂಧರ್ಭದಲ್ಲಿ ಮೊದಲ ಪತ್ನಿಯನ್ನು ಕಳೆದುಕೊಂಡ ಆದರ್ಶ ಶಿಕ್ಷಕನ ಎರಡನೇ ಪತ್ನಿ '''ಗಂಗಾ'''ಳ ಪಾತ್ರದಲ್ಲಿ ಹರಿಣಿ ಅಭಿನಯಿಸಿದ್ದಾರೆ. ಮೂಗಿ ಮತ್ತು ಕಿವುಡಿಯಾಗಿದ್ದು ಪತಿಯ ಜೀವನದಲ್ಲಿ ಅನೇಕ ಅಚಾತುರ್ಯಗಳಿಗೆ ಕಾರಣಳಾಗಿದ್ದರೂ ತನ್ನ ಸನ್ನಡತೆಯಿಂದ ಪತಿಯ ಸಹಕಾರ ಪಡೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಪಾತ್ರದಲ್ಲಿ ಹರಿಣಿಯವರ ನೈಜ ಹೃದಯಸ್ಪರ್ಶಿ ಅಭಿನಯ ಅಪಾರ ಜನಮೆಚ್ಚುಗೆ ಗಳಿಸಿತ್ತು. ಪಾತ್ರದ ನೈಜತೆಗಾಗಿ [[ರಾಜ್ ಕುಮಾರ್]] ಅವರೊಂದಿಗೆ ಮೂಗ ಮತ್ತು ಕಿವುಡರ ಶಾಲೆಗಳಿಗೆ ಭೇಟಿ ನೀಡಿ ಅವರ ಹಾವಭಾವಗಳನ್ನು ಹತ್ತಿರದಿಂದ ಗಮನಿಸಿ ಕಲಿತು ಅಭಿನಯಿಸುವ ಮೂಲಕ ವೃತ್ತಿಪರತೆಯನ್ನು ಮೆರೆದಿದ್ದರು. '''[[ಲಂಡನ್]]'''ನ ಕಾಮನ್ ವೆಲ್ತ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.<ref name="ಬಿ.ಸುರೇಶ್, ಸುದ್ದಿ-ಗಾಸಿಪ್">{{cite web|title=ಕನ್ನಡದ ಹೊಸ ಅಲೆಗೆ ನಾಂದಿ ಹಾಡಿದವರು?|url=http://vijaykarnataka.indiatimes.com/entertainment/gossip/-/articleshow/19110236.cms|publisher=ವಿಜಯ ಕರ್ನಾಟಕ}}</ref>
 
'''[[ರಾಜಾಶಂಕರ್]]''' ಅವರೊಂದಿಗೆ '''[[ಮಂಗಳ ಮುಹೂರ್ತ]]'''(೧೯೬೩) ಮತ್ತು '''[[ಸುದರ್ಶನ್]]''' ಅವರೊಂದಿಗೆ '''[[ಆನಂದಭಾಷ್ಪ]]'''(೧೯೬೪) ಚಿತ್ರಗಳಲ್ಲಿ ಹೊಸ ಸಾಧ್ಯತೆಯ ಅಭಿನಯ ನೀಡಿದ್ದರು. [[ಎಂ.ಆರ್.ವಿಠಲ್]] ಅವರ ನಿರ್ದೇಶನದ '''[[ಮಂಗಳ ಮುಹೂರ್ತ]]''' ಚಿತ್ರದಲ್ಲಿ ಆಧುನಿಕತೆಯಿಂದ ಆಕರ್ಷಣೆಗೊಂಡು ಸಂಗಾತಿಯನ್ನು ತಿರಸ್ಕರಿಸಿ ತಾನು ಹೆಣೆದ ಬಲೆಯಲ್ಲಿ ತಾನೇ ಸಿಲುಕಿಕೊಂಡು ಕೊನೆಗೆ ಆಧುನಿಕತೆಯ ಸೋಗು ಅರ್ಥವಾಗಿ ಮಾನವೀಯತೆಯತ್ತ ಒಲಿಯುವ ಸವಾಲಿನ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ<ref name="ಡಾ. ಕೆ ಪುಟ್ಟಸ್ವಾಮಿ, ಸಿನಿಮಾ ಯಾನ"/>. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ದೊರಕಿತ್ತು<ref name="ಬೆಳ್ಳಿ ಹೆಜ್ಜೆಯಲ್ಲಿ ಹರಿಣಿ"/>. [[ಆರ್.ನಾಗೇಂದ್ರರಾವ್|ಆರ್. ನಾಗೇಂದ್ರ ರಾವ್]] ನಿರ್ದೇಶನದ '''[[ಆನಂದಭಾಷ್ಪ]]''' ಚಿತ್ರದಲ್ಲಿನ ಹರಿಣಿಯವರ ಅಭಿನಯಕ್ಕೆ ಪತ್ರಿಕೆಗಳು ಮೆಚ್ಚುಗೆಯ ಸುರಿಮಳೆಗರೆದಿದ್ದವು. ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಅಪೂರ್ವ ಯಶಸ್ಸು ಗಳಿಸಿತ್ತು<ref name="ಗಂಗಾಧರ ಮೊದಲಿಯಾರ್, ಫಿಲಂ ಡೈರಿ"/>. '''[[ಪತಿವ್ರತಾ]]'''(೧೯೬೫) ಚಿತ್ರದಲ್ಲಿ ವೇಶ್ಯೆಯಾಗಿ<ref name="BAGESHREE S., FRIDAY REVIEW"/> ಪ್ರಭಾವಶಾಲಿ ಅಭಿನಯ ನೀಡಿದ್ದ ಹರಿಣಿ '''[[ಕಲ್ಯಾಣ್ ಕುಮಾರ್]]''' ಅವರು ಶೀರ್ಷಿಕೆ ಪಾತ್ರದಲ್ಲಿ ಅಭಿನಯಿದ್ದ ವಿಭಿನ್ನ ಪ್ರಯೋಗಾತ್ಮಕ ಚಿತ್ರ '''[[ಸುಬ್ಬಾಶಾಸ್ತ್ರಿ]]'''(೧೯೬೬)ಯಲ್ಲಿ ತನ್ನ ಪತಿಯನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡಿರುವ ಅಷಾಢಭೂತಿ ಸುಬ್ಬಾಶಾಸ್ತ್ರಿಯ ಮೋಸ ಮಂಚನೆಗಳನ್ನು ತನ್ನ ಜಾಣ್ಮೆಯಿಂದ ಬಯಲು ಮಾಡುವ '''ಶಾರದಾ'''ಳ ಪಾತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ.
"https://kn.wikipedia.org/wiki/ಹರಿಣಿ" ಇಂದ ಪಡೆಯಲ್ಪಟ್ಟಿದೆ