ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೧ ನೇ ಸಾಲು:
==ನಟನಾವೃತ್ತಿ ಅರಸಿ ಮದ್ರಾಸಿಗೆ ಪಯಣ==
*ತಾಯಿ ಸಂಧ್ಯಾ ಸಹ ಆ ಕಾಲದ ಪ್ರಖ್ಯಾತ ಭರತನಾಟ್ಯ ಕಲಾವಿದೆ. ಬಣ್ಣದ ಬದುಕು ಅರಸಿ ಸಂಧ್ಯಾ ಮದ್ರಾಸ್‌ಗೆ ಹೋದರು. ತಮಿಳು ಸಿನಿಮಾಗಳಲ್ಲಿ ಮಿಂಚತೊಡಗಿದರು.ಸೆಕ್ರೇಡ್‌ ಹಾರ್ಟ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಜಯಾ ಆಗಷ್ಟೇ ಅರಳುತ್ತಿದ್ದರು. ತಾಯಿ ಸಂಧ್ಯಾಗೆ ಮಗಳ ಉಜ್ವಲ ಭವಿಷ್ಯ ಕಣ್ಣಿಗೆ ಕಟ್ಟತೊಡಗಿತು. ಬೇಸಿಗೆ ರಜೆಯಲ್ಲಿ ಚಿತ್ರರಂಗಕ್ಕೆ ಪರಿಚಯಿಸೇಬಿಟ್ಟರು.
==ಸಹಾಯಾರ್ಥ ಉಚಿತ ನೃತ್ಯ==
*ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನ ಹಳ್ಳಿಯಲ್ಲಿ ತಾಲ್ಲೂಕು ಬೋರ್ಡ್ ಪ್ರೌಢಶಾಲೆ ಕಟ್ಟಡ ನಿರ್ಮಾಣದ ಸಹಾಯರ್ಥವಾಗಿ ನೃತ್ಯ ಪ್ರದರ್ಶನ ನೀಡಿದ್ದರು.1967ರಲ್ಲಿ ಮೈಸೂರು ವಿಶ್ವವಿಶ್ವವಿದ್ಯಾಲಯ ಕ್ರಾಫರ್ಡ್‌ ಹಾಲಿನಲ್ಲಿ ನಟಿ ಜಯಲಲಿತಾ ಅವರು ಶಾಲೆಯ ಕಟ್ಟಡ ನಿರ್ಮಾಣದ ನೆರವಿಗಾಗಿ ಹೆಜ್ಜೆ ಹಾಕಿದ್ದರು.
*ಹಾಸ್ಯ ನಟ [[ಬಾಲಕೃಷ್ಣ]] ಅವರ ನೆರವಿನಿಂದ ಜಯಲಲಿತಾ ಅವರನ್ನು ಭೇಟಿಯಾಗಿ ಶಾಲೆ ಕಟ್ಟಡ ನಿರ್ಮಾಣ ಸಹಾಯಾರ್ಥ ನೃತ್ಯ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೆರವಾಗಬೇಕು ಎಂದು ಕೋರಿದರು.
*1967 ಮಾರ್ಚ್‌ 19ರಂದು ಮೈಸೂರು ವಿ.ವಿ ಕ್ರಾಫರ್ಡ್‌ ಹಾಲಿನಲ್ಲಿ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಯಿತು. ರೂ. 10, 25, 50 ಪ್ರವೇಶ ಧನ ನಿಗದಿಯಾಯಿತು. ಕಿಕ್ಕಿರಿದು ಜನರು ಸೇರಿದ್ದರಿಂದ ರೂ.48 ಸಾವಿರ ಹಣ ಸಂಗ್ರಹವಾಯಿತು. ಕಾರ್ಯಕ್ರಮಕ್ಕೆ ರೂ.18 ಸಾವಿರ ಖರ್ಚಾಗಿತ್ತು. ರೂ.30 ಸಾವಿರ ಉಳಿಯಿತು. ಒಂದು ರೂಪಾಯಿಯೂ ಸಂಭಾವನೆ ಪಡೆಯದ ಅವರು, ಎಲ್ಲ ಹಣವನ್ನು ಶಾಲಾ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಹೇಳಿದರು ಎಂದು ಗ್ರಾಮದ ಜನತೆ ಸ್ಮರಿಸುತ್ತಾರೆ.<ref>[http://www.prajavani.net/news/article/2016/12/06/457031.html ಶಾಲಾ ಕಟ್ಟಡ ಧನಸಹಾಯಾರ್ಥ ನೃತ್ಯ ಮಾಡಿದ್ದ ಜಯಲಲಿತಾ;ಬಸವರಾಜ ಹವಾಲ್ದಾರ;6 Dec, 2016]</ref>
 
==ಸಿನೇಮಾ ರಂಗಕ್ಕೆ ಪ್ರವೇಶ==
*1961 ರಲ್ಲಿ ಬಿಡುಗಡೆಯಾದ ‘ಎಪಿಸ್ಟಲ್‌’ ಎಂಬ ಇಂಗ್ಲಿಷ್‌ ಚಿತ್ರದಲ್ಲಿ ಜಯಾ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದರು. 1964 ರಲ್ಲಿ 15 ವರ್ಷದವರಿದ್ದಾಗ ಬಿಡುಗಡೆಯಾದ ‘ಚಿನ್ನದ ಗೊಂಬೆ’ ಕನ್ನಡ ಚಿತ್ರ ಅವರು ನಾಯಕಿಯಾಗಿ ಅಭಿನಯಿಸಿದ್ದ ಮೊದಲ ಚಿತ್ರ. ದಿ. ಕಲ್ಯಾಣ್‌ ಕುಮಾರ್‌ ಚಿತ್ರ ನಾಯಕ.
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ