ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೩ ನೇ ಸಾಲು:
 
==ವೈಯುಕ್ತಿಕ ಜೀವನ==
*ಜೆ.ಜಯಲಲಿತಾ 1948ರ ಫೆಬ್ರುವರಿ 24 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಮಧ್ಯಮ ವರ್ಗದ ಅಯ್ಯಂಗಾರ್ ಮನೆತನದ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್‌, ಸಂಧ್ಯಾ ದಂಪತಿಗೆ ಜನಿಸಿದರು. ಅವರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಜನಿಸಿದರು. ಹುಟ್ಟು ಹೆಸರು ‘ಕೋಮಲವಲ್ಲಿ.’ ತಾತ (ತಂದೆಯ ತಂದೆ) ಮೈಸೂರು ಒಡೆಯರ್‌ ಬಳಿ ಕೆಲಸ ಮಾಡುತ್ತಿದ್ದರಿಂದ ಜಯಲಲಿತಾ ಎಂದು ಮರುನಾಮಕರಣ ಮಾಡಿದರು. ಮೈಸೂರು ಲಕ್ಷ್ಮಿಪುರಂನಲ್ಲಿರುವ ಇವರ ‘ಸ್ವರ್ಣವಿಲಾಸ’ ನಿವಾಸ ಈಗ ಕ್ಲಬ್‌ ಆಗಿ ಪರಿವರ್ತನೆಯಾಗಿದೆ. ಕ್ಲಬ್‌ನಲ್ಲಿರುವ ಜಯಲಲಿತಾ ಅವರ ಭಾವಚಿತ್ರ ಇತಿಹಾಸದ ಕುರುಹುವಾಗಿ ಉಳಿದಿದೆ.<ref>[http://www.prajavani.net/news/article/2016/12/06/457036.html ಮೈಸೂರಿನಲ್ಲಿ ಬಾಲ್ಯ ಕಳೆದಿದ್ದ ಜಯಲಲಿತಾ;6 Dec, 2016]</ref>
 
*ಜಯಾ ಅವರ ತಾಯಿಯ ತಂದೆ ರಂಗಸ್ವಾಮಿ ಅಯ್ಯಂಗಾರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದರು.ಜಯಾ ಎರಡು ವರ್ಷದವರಾಗಿದ್ದಾಗ ತಂದೆ ಜಯರಾಮ್ ತೀರಿಕೊಂಡರು. ನಂತರ ತಾಯಿ ವೇದವಲ್ಲಿ, ಬೆಂಗಳೂರಿನ ತಂದೆಯ ಮನೆಗೆ ಮರಳಿದರು. ಜಯಾ ಎರಡು ವರ್ಷದ ಹಸುಳೆಯಾಗಿದ್ದಾಗ ತಂದೆಯ ಹಠಾತ್‌ ಮರಣಹೊಂದಿದ್ದರಿಂದ ತಾಯಿ ಸಂಧ್ಯಾ ತಮ್ಮ ತವರು ಬೆಂಗಳೂರಿಗೆ ಮರಳಿದರು. 1952ರಲ್ಲಿ ಮದ್ರಾಸಿಗೆ ತೆರಳಿದ ವೇದವಲ್ಲಿ, ಅಲ್ಲಿ ‘ಸಂಧ್ಯಾ’ ಎಂಬ ಹೆಸರಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಅಜ್ಜ, ಅಜ್ಜಿ ಕಣ್ಣಳತೆಯಲ್ಲಿ ಬಿಷಪ್‌ ಕಾಟನ್‌ ಗರ್ಲ್‌್ಸ ಸ್ಕೂಲ್‌ನಲ್ಲಿ ಜಯಾ ಪ್ರಾಥಮಿಕ ಶಿಕ್ಷಣ ಪಡೆದರು. ಎಲ್ಲ ಅಯ್ಯಂಗಾರ್ ಹೆಣ್ಣು ಮಕ್ಕಳಂತೆ ಸಂಗೀತ, ಭರತನಾಟ್ಯದಲ್ಲಿ ಪಳಗಿದರು. 1950ರಿಂದ 1958ರವೆಗೆ ಜಯಲಲಿತಾ ಅವರು ಮೈಸೂರಿನಲ್ಲಿ ತಮ್ಮ ಅಜ್ಜ–ಅಜ್ಜಿ ಜತೆ ಇದ್ದರು.
 
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ