ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
:'''''ಅಂಚೆ''' ಇಲ್ಲಿ ಪುನರ್ನಿರ್ದೇಶಿಸುತ್ತದೆ. '''ಹಂಸ ಪಕ್ಷಿ''' ಬಗ್ಗೆ ಲೇಖನಕ್ಕಾಗಿ [[ಇಲ್ಲಿ ನೋಡಿ]]''
[[File:Pillarboxes.jpg|thumb|right|[[Pillar boxes]] on the island of [[Madeira]], [[Portugal]]. (1st class mail in blue and 2nd class in red)]]
ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ '''ಅಂಚೆ ವ್ಯವಸ್ಥೆ''' (ಪೋಸ್ಟಲ್ ಸಿಸ್ಕಮ್) ಮುಖ್ಯವಾದದ್ದು. '''ಅಂಚೆ''' [[ಪತ್ರ]]ಗಳನ್ನು ಮತ್ತು ಚಿಕ್ಕ ಪುಟ್ಟ ಪೊಟ್ಟಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಒಂದು ವ್ಯವಸ್ಥೆ. ಅಂಚೆ ವ್ಯವಸ್ಥೆಗಳು ಹೆಚ್ಚಾಗಿ [[ಸರಕಾರ|ಸರಕಾರಿ]] ವ್ಯವಸ್ಥೆಗಳಾಗಿರುತ್ತವೆ. ಈ ಸಾಗುವಣೆಗೆ ಶುಲ್ಕ ನೀಡಿರುವ ಗುರುತಾಗಿ ಸಾಮಾನ್ಯವಾಗಿ [[ಅಂಚೆ ಚೀಟಿ]]ಗಳನ್ನು ಪತ್ರಕ್ಕೆ ಲಗತ್ತಿಸಲಾಗುತ್ತದೆ. ಅಂಚೆ ಇತಿಹಾಸ ಬಹಳ ಪುರಾತನ ವಾದದ್ದು. ಬಹು ಹಿಂದೆ ಪೂರ್ವದೇಶಗಳಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ಚಕ್ರಾಧಿಪತ್ಯಗಳ ಕಾಲದಲ್ಲಿಯೂ ಅಂಚೆ ವ್ಯವಸ್ಥೆಯಿದ್ದುದು ತಿಳಿದು ಬಂದಿದೆ. ಆ ಕಾಲದ ಚಕ್ರಾಧಿಪತ್ಯಗಳಿಗೆ ಒಳಪಟ್ಟಿದ್ದ ವಿಶಾಲವಾದ ಭೂ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಲು ಈ ವ್ಯವಸ್ಥೆ ಅಗತ್ಯವಾಗಿತ್ತು. ಬಹು ಪುರಾತನವಾದ [[ಪರ್ಷಿಯ]] ಚಕ್ರಾಧಿಪತ್ಯದಲ್ಲಿ ಅಂಚೆ ವ್ಯವಸ್ಥೆಯಿತ್ತೆಂಬುದಾಗಿ ಗೊತ್ತಾಗಿದೆ. ಅನಂತರ ಬಂದ [[ಮೆಸಿಡೋನಿಯ]]ನ್ನರೂ ಅಲ್ಪಪ್ರಮಾಣದಲ್ಲಿ ಈ ವ್ಯವಸ್ಥೆಯನ್ನಿಟ್ಟುಕೊಂಡಿದ್ದರು. [[ರೋಮನ್ ಚಕ್ರಾಧಿಪತ್ಯ]]ದ ಕಾಲದಲ್ಲಂತೂ ಈ ವ್ಯವಸ್ಥೆ ಬಹಳ ಸಮರ್ಪಕವಾಗಿತ್ತು. ಈ ಚಕ್ರಾಧಿಪತ್ಯಗಳು ಕ್ಷೀಣಿಸಿ, ಮತ್ತೆ ಅನಾಗರಿಕತೆಯ ಸ್ಥಿತಿ ಬಂದಾಗ ಅಂಚೆಯ ವ್ಯವಸ್ಥೆಯೂ ಅಳಿಸಿಹೋಯಿತು.
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ