ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೬ ನೇ ಸಾಲು:
==ಆಭರಣಗಳಿಗಾಗಿ ಉಪಯೋಗಿಸುವ ಸ್ಫಟಕಾಕೃತಿಯ ವಜ್ರ==
ಇದು ಸ್ವಾಭಾವಿಕವಾಗಿ ಎಂಟು ತ್ರಿಕೋಣಾಕಾರದ ಪಟ್ಟಿಗಳು ಹೊಡೆದಂತೆ ಇರುತ್ತದೆ. ಕೆಲವು ವೇಳೆ ಪಟ್ಟಿಗಳು ಎಂಟಕ್ಕಿಂತಲೂ ಹೆಚ್ಚಾಗಿಯೂ ಅಥವಾ ಕಡಿಮೆಯಾಗಿಯೂ ಇರಬಹುದು. ಈ ಪಟ್ಟಿಗಳು ಸಾಮಾನ್ಯವಾಗಿ ಚಪ್ಪಟೆಯಾಗಿರುವುದಿಲ್ಲ, ಸ್ವಲ್ಪ ಗುಂಡುತಿರುಗಿರುತ್ತವೆ.
==ಕೊಂಚಮಟ್ಟಿಗೆ ಸ್ಫಟಿಕಾಕೃತಿಯಿದ್ದು ಮೊದಲಿನದಕ್ಕಿಂತ ಗಡುಸಾಗಿರುವ “ಬೋರ್ಟ್’’ ಎನ್ನುವಬೋರ್ಟ್ ವಜ್ರ==
ಆಭರಣಗಳಿಗೆ ಉಪಯೋಗವಾಗದ ಸ್ಫಟಿಕಾಕೃತಿಯ ವಜ್ರದ ಚೂರುಗಳನ್ನೂ ಈ ಹೆಸರಿಂದ ವ್ಯಾಪಾರಸ್ಥರು ಕರೆಯುವುದುಂಟು. ಈ ವಜ್ರಗಳು ಗಾಜು ಮೊದಲಾದುವನ್ನು ಸೀಳುವ, ಅಥವಾ ಅವುಗಳಲ್ಲಿ ಕಂಡಿಮಾಡುವ ಆಯುಧಗಳಿಗಾಗಿ ಉಪಯೋಗವಾಗುತ್ತವೆ, ಕಲ್ಲುಗಳನ್ನು ಕುಯ್ಯುವ ಗರಗಸಗಳನ್ನು ಮಾಡುವುದಕ್ಕೂ ಒದಗಿಸುತ್ತವೆ.
==ಸ್ಫಟಿಕಾಕೃತಿಯೇ ಇಲ್ಲದೆ ಇದ್ದಲಿನಂತೆ ಕಪ್ಪಗಿರುವ ಮತ್ತು ಮೇಲೆ ಹೇಳಿದ ಎರಡು ಜಾತಿಗಳಿಗಿಂತಲೂ ಹೆಚ್ಚು ಗಡುಸಾಗಿರುವ “ಕಾರ್ಪೊನೇಡೋ’’ಕರೀವಜ್ರ==
==ಸ್ಫಟಿಕಾಕೃತಿಯೇ ಇಲ್ಲದೆ ಇದ್ದಲಿನಂತೆ ಕಪ್ಪಗಿರುವ ಮತ್ತು ಮೇಲೆ ಹೇಳಿದ ಎರಡು ಜಾತಿಗಳಿಗಿಂತಲೂ ಹೆಚ್ಚು ಗಡುಸಾಗಿರುವ “ಕಾರ್ಪೊನೇಡೋ’’ ಎನ್ನುವ ಕರೀವಜ್ರ== ಇದನ್ನು ಭೂಮಿಯಲ್ಲಿ ಸಾವಿರಾರು ಅಡಿಗಳ ಆಳಕ್ಕೆ ಕಂಡಿಗಳನ್ನು ಕೊರೆಯುವುದಕ್ಕಾಗಿ ತಯಾರುಮಾಡುವ ಬೈರಿಗೆಗಳಿಗೆ ಉಪಯೋಗಿಸುವರು. ಇದು ಎಂತಹ ಗಟ್ಟಿ ಬಂಡೆಯನ್ನಾದರೂ ಸುಲಭವಾಗಿ ಕೊರೆದುಹಾಕುವುದು. ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಗಣಿಗಳನ್ನು ಕಂಡುಹಿಡಿಯುವುದಕ್ಕಾಗಿ ಈ ಬೈರಿಗೆಯನ್ನು ಉಪಯೋಗಿಸುವರು. ಈ ತರದ ವಜ್ರವು ಬ್ರೆಜಿಲ್ ದೇಶದ ಒಂದು ಪ್ರಾಂತ್ಯದಲ್ಲಿ ಮಾತ್ರ ದೊರೆತಿರುವುದು. ಬೋರ್ಟ್ ವಜ್ರವನ್ನೂ ಬೈರಿಗೆಯ ಕೆಲಸಕ್ಕೆ ಉಪಯೋಗಿಸುವರು, ಆದರೆ ಕರೀವಜ್ರದಂತೆ ಇದು ತಡೆಯಲಾರದು. ಮೇಲೆ ಹೇಳಿದ ಮೂರು ಜಾತಿಯ ವಜ್ರಗಳಲ್ಲಿ ಮೊದಲೆನೆಯದು ಪ್ರಪಂಚಕ್ಕೆ ಅಷ್ಟು ಉಪಯೋಗವಿಲ್ಲದಿದ್ದರೂ, ಅದರ ಥಾಳಥಳ್ಯದಿಂದ ಎಲ್ಲರ ಮನಸ್ಸನ್ನೂ ಸೆಳೆದು ಚಕ್ರವರ್ತಿಗಳೇ ಮೊದಲಾದವರ ಉತ್ತಮಾಂಗದಲ್ಲಿ ಸೇರುವುದು. ಮಿಕ್ಕವೆರಡೂ ಅತಿ ಕಾಠಿಣ್ಯ ಸ್ವಭಾವವುಳ್ಳವುಗಳಾದುದರಿಂದ, ಈ ರೀತಿಯಾದ ಮನ್ನಣೆಯನ್ನು ಹೊಂದದೆ, ಕಲ್ಲುಬಂಡೆ ಮೊದಲಾದವನ್ನು ಕೊರೆಯುವ ಕೆಲಸದಲ್ಲಿ ಉಪಯೋಗಿಸಲ್ಪಡುವವು. ಕರೀವಜ್ರಕ್ಕಿರುವ ಕಾಠಿಣ್ಯವೂ ಶಕ್ತಿಯೂ ಪ್ರಪಂಚದಲ್ಲಿ ಮತ್ತಾವ ಪದಾರ್ಥಕ್ಕೂ ಇಲ್ಲ. ಈ ಕಾರಣದಿಂದ ಇದರ ಬೆಲೆಯೂ ಹೆಚ್ಚಾಗಿಯೇ ಇರುವುದು. ಸ್ವಭಾವಸ್ಥಿತಿಯಲ್ಲಿಯೇ ಕ್ಯಾರಟ್ ಒಂದಕ್ಕೆ ಇನ್ನೂರ ಐವತ್ತು ರೂಪಾಯಿಗಳಾಗಬಹುದು.
ವಜ್ರವು ನದಿಗಳು ಹೊಡೆದುಕೊಂಡುಬಂದ, ಗ್ರಾವೆಲ್, ಮರಳು, ಅಥವಾ ಜೇಡಿಮಣ್ಣಿನಲ್ಲಿ ಬೆಣಚುಕಲ್ಲು, ಕುರಂಗದಕಲ್ಲು ಮೊದಲಾದ ಕಲ್ಲುಗಳೊಡನೆಯೂ, ಚಿನ್ನ, ಪ್ಲಾಟಿನಮ್ ಲೋಹಗಳೊಡನೆಯೂ, ಬೇರೆ ಬೇರೆ ಹಳಕುಗಳಾಗಿ ಸೇರಿಯೂ, ಕಂಗ್ಲಾಮರೇಟ್ ಎಂಬ ಶಿಲಾ ವಿಶೇಷದಲ್ಲಿಯೂ, ದಕ್ಷಿಣ ಆಫ್ರಿಕದ ,ಕಿಂಬರ್ಲಿ’ ಪ್ರಾಂತದಲ್ಲಿ ಸಿಕ್ಕುವ “ಕಿಂಬರ್ಲೈಟ್’’ ಎಂಬ ಹಸಿರು ಮತ್ತು ನೀಲಿ ಮಿಶ್ರವಾದ ಖನಿಜ ವಿಶೇಷದಲ್ಲಿಯೂ ದೊರೆಯುವುದು. ಪ್ರಪಂಚದಲ್ಲಿ ವಜ್ರಗಳು ಸಿಕ್ಕುವ ಮುಖ್ಯವಾದ ಪ್ರದೇಶಗಳು ಮೂರು.
 
"https://kn.wikipedia.org/wiki/ವಜ್ರ" ಇಂದ ಪಡೆಯಲ್ಪಟ್ಟಿದೆ