"ಸದಸ್ಯ:C s anjali/ನನ್ನ ಪ್ರಯೋಗಪುಟ1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ಅದಾ ಲವ್ಲೇಸಲವ್ಲೇಸ್==
ಅದಾ ಒಬ್ಬ ಇಂಗ್ಲೀಷ್ ಗಣಿತಜ್ಞ ಮತ್ತು ಬರಹಗಾರ್ತಿ, ಮುಖ್ಯವಾಗಿ ಚಾರ್ಲ್ಸ್ ಬ್ಯಾಬೇಜ್ ಅವರ ಹಿಂದಿನ ಸಾಮಾನ್ಯ ಯಾಂತ್ರಿಕ ಕಂಪ್ಯೂಟರ್, ವಿಶ್ಲೇಷಣಾತ್ಮಕ ಎಂಜಿನ್ ಮೇಲೆ ತನ್ನ ಕೆಲಸವನ್ನು ಮಾಡಿದ್ದಳು.ಅವಳು ಬರೆದಿದ್ದ ಟಿಪ್ಪಣಿಗಳು ಮೊದಲ ಯಂತ್ರದ ಅಲ್ಗಾರಿದಮ್ ನ ಮೇಲೆ ಬರೆದಿದ್ದ ಕೆಲಸಗಳನ್ನು ಒಳಗೊಂಡಿದ್ದವು.ಆದ್ದರಿಂದ ಇವಳನ್ನು ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯಲಾಗುತ್ತದೆ.ಇವಳ ತಂದೆ ಕವಿ ಜಾರ್ಜ್, ಲಾರ್ಡ್ ಬೈರನ್ ಮತ್ತು ತಾಯಿ ಅನ್ನೆ ಇಸಾಬೆಲ್ಲಾ ಮಿಬಾಂಕೆ,ಇವಳನ್ನು ಲೇಡಿ ವೆಂಟ್ವರ್ತ್ ಎಂದು ಕರೆಯುತ್ತಾರೆ.ಅದಾ ಖ್ಯಾತ ಬ್ರಿಟಿಷ್ ಸಾಹಿತಿ ಲಾರ್ಡ್ ಜಾರ್ಜ ಬೈರಾನ್ ನ ಮಗಳು. ನಿಜವೆಂದರೆ ಅದಾ ಜಾರ್ಜ್ ಬೈರಾನ್ ನ ಅನೇಕ ಮಕ್ಕಳಲ್ಲಿ ಏಕೈಕ ಧರ್ಮಸಂತಾನ. ಆತ ಅದೆಂತಹ ರಸಿಕನಾಗಿದ್ದನೆಂದರೆ ಅನೇಕ ಪ್ರೇಯಸಿಯರಿಂದ ಆತನಿಗೆ ಅನೇಕ ಮಕ್ಕಳಿದ್ದರು.ತನ್ನ ಪತಿಯ ರಸಿಕತೆಯಿಂದ ಬೇಸತ್ತು ಹೋಗಿದ್ದ ಅಡಾಳ ತಾಯಿ ಮಗಳನ್ನು ಸಾಧ್ಯವಾದಷ್ಟು ಕವಿತೆ ಗ್ರಂಥಗಳಿಂದ ದೂರವಿಟ್ಟು ಗಣಿತ ವಿಜ್ಞಾನದ ಕಡೆಗೆ ಆಸಕ್ತಿ ಇರುವಂತೆ ಶಿಕ್ಷಣ ಕೊಡಿಸಿ ಬೆಳೆಸಿದಳು. ಅದಾ ಚುರುಕು ಬುದ್ಧಿಯಿಂದಾಗಿ ಗಣಿತದಲ್ಲಿ ಒಳ್ಳೆಯ ಪರಿಣಿತಿ ಗಳಿಸಿದಳು. ಅದಾ ಜನಿಸಿದ ನಂತರದಲ್ಲಿ ಬೈರನ್ ಒಂದು ತಿಂಗಳಲ್ಲಿ ತನ್ನ ಪತ್ನಿಯನ್ನು ಪ್ರತ್ಯೇಕಿಸಿ ಶಾಶ್ವತವಾಗಿ ಇಂಗ್ಲೆಂಡ್ ಬಿಟ್ಟು ಹೋದನು.ನಾಲ್ಕು ತಿಂಗಳ ನಂತರ, ಅಂತಿಮವಾಗಿ ಸ್ವಾತಂತ್ರ್ಯ ಗ್ರೀಕ್ ಯುದ್ಧದಲ್ಲಿ ರೋಗದದಿಂದ ಸತ್ತನು.ಆಗ ಅದಾ ಎಂಟು ವರ್ಷದವಳಾಗಿದ್ದಳು.ಅದಾ ತನ್ನ ಇಡೀ ಬಾಲ್ಯವನ್ನು ಅನಾರೋಗ್ಯದಿಂದ ಕಳೆದಳು.ನಂತರ ೧೮೩೫ ರಲ್ಲಿ ವಿಲಿಯಂ ಕಿಂಗ್ ವಿವಾಹವಾದಳು.೧೮೩೮ ರಲ್ಲಿ ಅದಾ ಕಿಂಗ್ ಲವ್ಲೇಸ್ ಅರ್ಲ್ ಆದಳು.
ಮದುವೆಯಾಗಿ ಲೇಡಿ ಲೋವೆನ್ಸ್ ಆದಳು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅದಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟಳು. ಅದಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು.ಅವಳು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. ಚಾರ್ಲ್ಸ್ ಬಾಬೇಜ್ ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅದಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅದಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು. ಇಂತಹ ಒಂದು ಸಮಯದಲ್ಲಿ ಅದಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು.
೩೭೧

edits

"https://kn.wikipedia.org/wiki/ವಿಶೇಷ:MobileDiff/735454" ಇಂದ ಪಡೆಯಲ್ಪಟ್ಟಿದೆ