ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
ಬೃಂಹಣ ಚಿಕಿತ್ಸೆಗೆ ದೇವದಾರು, ತಗರ, ಚಂಗಲಕೋಷ್ಠ, ದಶಮೂಲ, ಬಲ, ಅತಿಬಲ ಮತ್ತು ವಿದಾರ್ಯಾದಿ ಔಷಧ ದ್ರವ್ಯಗಳನ್ನೂ ಮಾಂಸ, ಹಾಲು, ತುಪ್ಪ, ಮಧುರವಾದ ಜಿಡ್ಡಾದ ಪದಾರ್ಥಗಳು, ಅಭ್ಯಂಗಸ್ನಾನ, ಹೆಚ್ಚು ನಿದ್ರೆ ಬರಿಸುವ ವಿಧಾನಗಳನ್ನೂ, ಮಾನಸಿಕ ಮತ್ತು ಶಾರೀರಿಕ ಯೋಚನೆಗಳು ಇಲ್ಲದಂತೆ ಮಾಡುವ ವಿಧಾನಗಳನ್ನೂ ಮಾಡಬೇಕು. ಈ ಬೃಂಹಣ ಚಿಕಿತ್ಸೆಯಿಂದ ದೇಹಪುಷ್ಟಿ, ಶಕ್ತಿ ಉಂಟಾಗುತ್ತವೆ.
 
ತ್ರಿಕಟು, ತ್ರಿಫಲ, ಕಟುಕ ರೋಹಿಣಿ, [[ಬಜೆ]], [[ಬ್ರಾಹ್ಮಿ]], [[ಲವಣ]], [[ಜೀರಿಗೆ]], [[ವಾದಕ್ಕಿ]], [[ಚಿತ್ರಮೂಲ]], [[ಕೊತ್ತಂಬರಿ]], [[ಅರಿಸಿನ|ಅರಿಶಿಣ]], ಹೆಗ್ಗುಳ್ಳ, ನೆಲಗುಳ್ಳ, ಶಿಲಾಜಿತು ಎಂಬ ಔಷಧ ದ್ರವ್ಯಗಳೂ ಯವಧಾನ್ಯ, ಮಜ್ಜಿಗೆ, ಜೇನುತುಪ್ಪ ಮುಂತಾದ ಪದಾರ್ಥಗಳೂ ಲಂಘನಚಿಕಿತ್ಸೆಗೆ ಉಪಯುಕ್ತವಾದುವು. ಲಂಘನಚಿಕಿತ್ಸೆಯಿಂದ ಇಂದ್ರಿಯಗಳ ಶುದ್ಧಿ, ಮಲಮೂತ್ರಗಳ ಸರಿಯಾದ ವಿಸರ್ಜನೆ, ಶರೀರ ಲಾಘವ, [[ಹಸಿವು]] ಬಾಯಾರಿಕೆ ತೋರುವುವು. ಸರಿಯಾದ ಹೃದಯಕ್ರಿಯೆ, ಶುದ್ಧವಾಗಿ ತೇಗು ಬರುವುದು, ಉತ್ಸಾಹ ಉಂಟಾಗುವುದು, ತೂಕಡಿಕೆ ನಿವಾರಣೆಯಾಗುವುದು, ಹೃದ್ರೋಗ, ಕಾಮಾಲೆ, ಉಬ್ಬಸ, ಕಾಸ, ಗಳಗ್ರಹ ವ್ಯಾಧಿಗಳ ನಿವಾರಣೆಯೂ ಉಂಟಾಗುತ್ತವೆ. ಧಾರಣಾಶಕ್ತಿ, ಜ್ಞಾಪಕಶಕ್ತಿಗಳು ಉಂಟಾಗುತ್ತದೆ; ಮತ್ತು ಅಗ್ನಿದೀಪ್ತಿ ಉಂಟಾಗುತ್ತದೆ.
 
ಆಗಂತು ರೋಗಗಳಿಗೆ ಸದಸದ್ವಿವೇಕ, ಬುದ್ಧಿಯ ವಿರುದ್ಧ ಆಚರಣೆಯನ್ನು ತ್ಯಾಗ ಮಾಡುವುದು. ಇಂದ್ರಿಯಗಳ ವೈರಾಗ್ಯ, ದೇಶ ಕಾಲಗಳ, ಶಾಸ್ತ್ರ ಸ್ಮøತಿಗಳ, ಸಜ್ಜನರ ಆಚಾರಗಳನ್ನು ಅನುಸರಿಸುವುದು, [[ಗ್ರಹ|ಗ್ರಹಗಳ]] [[ಪೂಜೆ]], ಹಿರಿಯರು ಗುರುಗಳಲ್ಲಿ ಭಕ್ತಿ ಮತ್ತು ಪೂಜೆ--ಇವೇ ಮುಂತಾದ ರೀತಿಗಳಿಂದ ಮಾನಸಿಕ ಮತ್ತು ಆಗಂತುರೋಗಗಳನ್ನು ಚಿಕಿತ್ಸೆ ಮಾಡತಕ್ಕದ್ದು.
 
ಮೇಲೆ ಹೇಳಿದ ಚಿಕಿತ್ಸಾ ತತ್ತ್ವಗಳನ್ನು ಆರು ವಿಧಗಳಾಗಿ ವಿಂಗಡಿಸಿದೆ. 1. ಹೇತು ವಿಪರೀತ ಚಿಕಿತ್ಸೆ, 2. ವ್ಯಾಧಿ ವಿಪರೀತ ಚಿಕಿತ್ಸೆ, 3. ಹೇತು--ವ್ಯಾಧಿ ವಿಪರೀತ ಚಿಕಿತ್ಸೆ, 4. ಹೇತುತದರ್ಥಕಾರಿ ಚಿಕಿತ್ಸೆ, 5. ವ್ಯಾಧಿ ತದರ್ಥಕಾರಿ ಚಿಕಿತ್ಸೆ, 6. ಹೇತು-- ವ್ಯಾಧಿ ತದರ್ಥಕಾರಿ ಚಿಕಿತ್ಸೆ.<ref>http://veda-vijnana.blogspot.in/2013_11_01_archive.html</ref>
ಹೇತುವೆಂದರೆ ವ್ಯಾಧಿಗೆ ಕಾರಣೀಭೂತವಾದದ್ದು ಅಥವಾ ಮೂಲಭೂತವಾದದ್ದು. ಹಿತವಲ್ಲದ ಇಂದ್ರಿಯಗಳ ಸಂಘಟಣೆ, ಪ್ರಜ್ಞೆ ತಪ್ಪುವುದು ಮತ್ತು ಕಾಲಾದಿ ಪರಿಪಾಕಗಳಿಂದ ತ್ರಿದೋಷಗಳು ವ್ಯತ್ಯಾಸವಾಗಿ ವ್ಯಾಧಿಯನ್ನು ಉತ್ಪತ್ತಿಮಾಡುತ್ತವೆ. ಆದ್ದರಿಂದ ವ್ಯಾಧಿಗೆ ಮೂಲಭೂತವಾದದ್ದನ್ನು ಪತ್ತೆಮಾಡಿ ಅದಕ್ಕೆ ವ್ಯತಿರಿಕ್ತಗುಣಗಳುಳ್ಳ ಔಷಧ ದ್ರವ್ಯಗಳ ಪ್ರಯೋಗವೇ ಹೇತು ಅಥವಾ ವ್ಯಾಧಿ ವಿಪರೀತ ಚಿಕಿತ್ಸೆ. ವ್ಯಾಧಿಯ ಬರೇ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ಮಾಡಿದರೆ ಅದು ತದರ್ಥಕಾರಿ ಚಿಕಿತ್ಸೆ ಎನ್ನಿಸಿಕೊಳ್ಳುತ್ತದೆ. ಈ ಪ್ರಯೋಗಗಳಿಂದ ಶಾರೀರಕವಾದ, ಮಾನಸಿಕವಾದ ಮತ್ತು ಬಾಹ್ಯರೋಗಗಳನ್ನು ಗುಣಪಡಿಸಬಹುದು. ರೋಗದ ಪ್ರಾರಂಭದಲ್ಲೇ ಕಾರಣ ತಿಳಿಯದಿದ್ದರೆ ಆಮೇಲೆ ತ್ರಿದೋಷಗಳ ಚಯ, ಪ್ರಕೋಪ, ಪ್ರಶಮನಗಳನ್ನು ತಿಳಿದು, ವ್ಯಾಧಿಯ ಲಕ್ಷಣಗಳನ್ನು ಸರಿಯಾಗಿ ಅರಿತುಕೊಂಡು ಚಿಕಿತ್ಸೆ ಮಾಡಬೇಕು. ಆಯುರ್ವೇದದಲ್ಲಿ ಹೆಚ್ಚಾಗಿ ವ್ಯಾಧಿಗಳ ಲಕ್ಷಣಗಳನ್ನು ಅರಿತು ಚಿಕಿತ್ಸೆ ಮಾಡುವ ರೀತಿ ಹೇಳಿದೆ. ಆದರೆ ಪ್ರಯೋಗಶಾಲೆಯಲ್ಲಿ ಮಾಡುವ ಪರೀಕ್ಷೆಗಳ ಮೂಲಕ ವ್ಯಾಧಿ ಗೊತ್ತುಪಡಿಸಿ (ಹೇತುವನ್ನು ತಿಳಿದು) ಮಾಡುವ ಚಿಕಿತ್ಸಾಕ್ರಮ ಕಡಿಮೆ. ಪ್ರತಿ ರೋಗದ ಹೆಸರು, ಅದನ್ನು ತಿಳಿಯಲು ಹೇಳಿರುವ ಪೂರ್ವರೂಪ ಲಕ್ಷಣಗಳು, ವ್ಯಾಧಿಯ ಪೂರ್ವರೂಪ ಲಕ್ಷಣಗಳು, ವ್ಯಾಧಿಯ ನಿದಾನ, ಉಪಶಯ ಸಂಪ್ರಾಪ್ತಿಗಳನ್ನೂ ಅದಕ್ಕೆ ತಕ್ಕ ಪರಿಹಾರಗಳನ್ನೂ ಪಥ್ಯಾಪಥ್ಯಗಳನ್ನೂ ಅವುಗಳಿಂದ ಉಂಟಾಗಬಹುದಾದ ಅನ್ಯವಿಕಾರಗಳನ್ನೂ ಚೆನ್ನಾಗಿ ಅರಿತು ವ್ಯಾಧಿಯನ್ನು ಗುಣಪಡಿಸಬೇಕು.
 
ವೈದ್ಯ ರೋಗವನ್ನು ತನ್ನ ಪಂಚೇಂದ್ರಿಯಗಳ ಮೂಲಕ ದರ್ಶನ, ಸ್ಪರ್ಶನ, ಪ್ರಶ್ನೆ ಮುಂತಾದುವುಗಳಿಂದ ಗೊತ್ತುಮಾಡಿ ಚಿಕಿತ್ಸೆ ಮಾಡಬೇಕು. ಇವುಗಳ ಜೊತೆಗೆ ರೋಗಿಯ ನಾಡಿ, ಮಲಮೂತ್ರ ಪರೀಕ್ಷೆ, [[ನಾಲಿಗೆ|ನಾಲಗೆ]], ಶಬ್ದ, ರೂಪ, ದೃಷ್ಟಿಗಳ ಪರೀಕ್ಷೆ, ಸಮಸ್ಪರ್ಶನಗಳ ಮೂಲಕ ರೋಗವನ್ನು ಪತ್ತೆಮಾಡಿ ಅವುಗಳಿಗೆ ತಕ್ಕಂತೆ ಚಿಕಿತ್ಸೆ ಮಾಡತಕ್ಕದ್ದು.
 
ವಾತದೋಷದಿಂದ ಉತ್ಪತ್ತಿಯಾದ ರೋಗಗಳಿಗೆ ಸ್ನೇಹಗಳಿಂದ, ಮೃದುವಾದ ಔಷಧಗಳಿಂದ, ವಮನ ವಿರೇಚನಗಳಿಂದ, ಅಭ್ಯಂಗ ಸ್ನಾನದಿಂದ, ಸಿಹಿ ಹುಳಿ ಉಪ್ಪು ರಸಗಳಿಂದ ಉಷ್ಣವೀರ್ಯವುಳ್ಳ ದ್ರವ್ಯಗಳಿಂದ, ಚಿಕಿತ್ಸೆಯನ್ನೂ ಬೃಂಹಣ, ದೀಪನ, ಪಾಚನ ದ್ರವ್ಯಗಳ ಸೇವನೆಯನ್ನೂ ಅನುವಾಸನ ಬಸ್ತಿಯನ್ನೂ ಕೊಡಬೇಕು.