ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
 
==ಲಂಘನ ಚಿಕಿತ್ಸೆಗೆ ಅರ್ಹರು==
ಅತಿಯಾಗಿ ಸ್ಥೂಲರಾದವರು, ಬಲಿಷ್ಠರು, ಪಿತ್ತ ಕಫದೋಷದವರು, ಆಮದೋಷ, [[ಜ್ವರ]], ವಮನ, ಅತಿಸಾರ, ಹೃದ್ರೋಗ, ಮಲಬಂಧ, ಮೈಭಾರ, ಮೇಹರೋಗ, ಊರುಸ್ತಂಭ, ಕುಷ್ಠ, ವಿಸರ್ಪ, ವಿದ್ರಧಿ, ಪ್ಲೀಹ, ಶಿರಸ್ಸು, [[ಕಿವಿ]], [[ನೇತ್ರ]] ರೋಗಗಳಿಂದ ಪೀಡಿತರಾದವರು, ಅತಿಸ್ನಿಗ್ಧರು--ಲಂಘನ ಚಿಕಿತ್ಸೆಗೆ ಅರ್ಹರು. ಇದನ್ನು ಹೇಮಂತಋತುವಿನಲ್ಲಿ ಮಾಡಿದರೆ ಹೆಚ್ಚು ಲಾಭಕಾರಿಯಾಗುತ್ತದೆ.
 
ಬೃಂಹಣ ಚಿಕಿತ್ಸೆಗೆ ದೇವದಾರು, ತಗರ, ಚಂಗಲಕೋಷ್ಠ, ದಶಮೂಲ, ಬಲ, ಅತಿಬಲ ಮತ್ತು ವಿದಾರ್ಯಾದಿ ಔಷಧ ದ್ರವ್ಯಗಳನ್ನೂ ಮಾಂಸ, ಹಾಲು, ತುಪ್ಪ, ಮಧುರವಾದ ಜಿಡ್ಡಾದ ಪದಾರ್ಥಗಳು, ಅಭ್ಯಂಗಸ್ನಾನ, ಹೆಚ್ಚು ನಿದ್ರೆ ಬರಿಸುವ ವಿಧಾನಗಳನ್ನೂ, ಮಾನಸಿಕ ಮತ್ತು ಶಾರೀರಿಕ ಯೋಚನೆಗಳು ಇಲ್ಲದಂತೆ ಮಾಡುವ ವಿಧಾನಗಳನ್ನೂ ಮಾಡಬೇಕು. ಈ ಬೃಂಹಣ ಚಿಕಿತ್ಸೆಯಿಂದ ದೇಹಪುಷ್ಟಿ, ಶಕ್ತಿ ಉಂಟಾಗುತ್ತವೆ.
 
ತ್ರಿಕಟು, ತ್ರಿಫಲ, ಕಟುಕ ರೋಹಿಣಿ, [[ಬಜೆ]], [[ಬ್ರಾಹ್ಮಿ]], [[ಲವಣ]], [[ಜೀರಿಗೆ]], [[ವಾದಕ್ಕಿ]], [[ಚಿತ್ರಮೂಲ]], [[ಕೊತ್ತಂಬರಿ]], [[ಅರಿಸಿನ|ಅರಿಶಿಣ]], ಹೆಗ್ಗುಳ್ಳ, ನೆಲಗುಳ್ಳ, ಶಿಲಾಜಿತು ಎಂಬ ಔಷಧ ದ್ರವ್ಯಗಳೂ ಯವಧಾನ್ಯ, ಮಜ್ಜಿಗೆ, ಜೇನುತುಪ್ಪ ಮುಂತಾದ ಪದಾರ್ಥಗಳೂ ಲಂಘನಚಿಕಿತ್ಸೆಗೆ ಉಪಯುಕ್ತವಾದುವು. ಲಂಘನಚಿಕಿತ್ಸೆಯಿಂದ ಇಂದ್ರಿಯಗಳ ಶುದ್ಧಿ, ಮಲಮೂತ್ರಗಳ ಸರಿಯಾದ ವಿಸರ್ಜನೆ, ಶರೀರ ಲಾಘವ, ಹಸಿವು ಬಾಯಾರಿಕೆ ತೋರುವುವು. ಸರಿಯಾದ ಹೃದಯಕ್ರಿಯೆ, ಶುದ್ಧವಾಗಿ ತೇಗು ಬರುವುದು, ಉತ್ಸಾಹ ಉಂಟಾಗುವುದು, ತೂಕಡಿಕೆ ನಿವಾರಣೆಯಾಗುವುದು, ಹೃದ್ರೋಗ, ಕಾಮಾಲೆ, ಉಬ್ಬಸ, ಕಾಸ, ಗಳಗ್ರಹ ವ್ಯಾಧಿಗಳ ನಿವಾರಣೆಯೂ ಉಂಟಾಗುತ್ತವೆ. ಧಾರಣಾಶಕ್ತಿ, ಜ್ಞಾಪಕಶಕ್ತಿಗಳು ಉಂಟಾಗುತ್ತದೆ; ಮತ್ತು ಅಗ್ನಿದೀಪ್ತಿ ಉಂಟಾಗುತ್ತದೆ.
 
ಆಗಂತು ರೋಗಗಳಿಗೆ ಸದಸದ್ವಿವೇಕ, ಬುದ್ಧಿಯ ವಿರುದ್ಧ ಆಚರಣೆಯನ್ನು ತ್ಯಾಗ ಮಾಡುವುದು. ಇಂದ್ರಿಯಗಳ ವೈರಾಗ್ಯ, ದೇಶ ಕಾಲಗಳ, ಶಾಸ್ತ್ರ ಸ್ಮøತಿಗಳ, ಸಜ್ಜನರ ಆಚಾರಗಳನ್ನು ಅನುಸರಿಸುವುದು, ಗ್ರಹಗಳ ಪೂಜೆ, ಹಿರಿಯರು ಗುರುಗಳಲ್ಲಿ ಭಕ್ತಿ ಮತ್ತು ಪೂಜೆ--ಇವೇ ಮುಂತಾದ ರೀತಿಗಳಿಂದ ಮಾನಸಿಕ ಮತ್ತು ಆಗಂತುರೋಗಗಳನ್ನು ಚಿಕಿತ್ಸೆ ಮಾಡತಕ್ಕದ್ದು.