ವಚನ(ವ್ಯಾಕರಣ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
 
== ಆಧುನಿಕ ಕನ್ನಡದ ಬಹುವಚನ ರೂಪಗಳು ==
[[ಕೇಶಿರಾಜ -ಕವಿ,ಕಾಲ,ಕೃತಿ ಪರಿಚಯ|ಕೇಶಿರಾಜನ]] ‘ವಚನಪಲ್ಲಟ’ ತತ್ವವನ್ನು ಅಂಗೀಕರಿಸಿದರೆ ನಡುಗನ್ನಡದಲ್ಲಿ ಕುಮಾರವ್ಯಾಸ, ಚಾಮರಸ ಮುಂತಾದ ಕವಿಗಳು ಬಳಸಿದ ಅನೇಕ ಪ್ರಯೋಗಗಳನ್ನು ನಾವು ಸ್ವೀಕರಿಸಬೇಕಾಗುತ್ತದೆ. ಪ್ರಯೋಗ : “ಜಗಜಟ್ಟಿಗಳು ನುಗ್ಗಾಯಿತು, ಮುರಿದುದಮರರು, ಅಂಗನೆಯರೈದಿತು” ಎಂಬಲ್ಲಿ [[ಲಿಂಗ]], ವಚನ ಯಾವ ವ್ಯವಸ್ಥೆಯು ಇಲ್ಲದೆ ಇರುವುದು ಗಮನಾರ್ಹ. ಕನ್ನಡದಲ್ಲಿ ಹಾಗೂ ದ್ರಾವಿಡದಲ್ಲಿ ವಚನಗಳ ಸ್ವರೂಪ ಒಂದೇ ಬಗೆಯದು. ಸಂಸ್ಕøತದಲ್ಲಿ ವಚನಗಳು ಮೂರಾದರೆ, ಕನ್ನಡದಲ್ಲಿ ಎರಡು. [[ಸಂಸ್ಕೃತ|ಸಂಸ್ಕೃತದಲ್ಲಿ]] ವಚನ ಆಯಾ ಲಿಂಗ, ವಿಭಕ್ತಿಪ್ರತ್ಯಯಗಳಿಗೆ ಅನುಗೂಣವಾಗಿ ಭಿನ್ನ. ಆದರೆ ಕನ್ನಡದಲ್ಲಿ ನಾಮವಿಭಕ್ತಿ ಪೂರ್ವದಲ್ಲಿ ವಚನ ಬಂದರೂ ವಿಭಕ್ತಿ ಪ್ರತಯಯಗಳ ಸ್ವರೂಪ ಬೇರೆಯಾಗಿಲ್ಲ. ಕನ್ನಡದಲ್ಲಿ ಲಿಂಗಸೂಚನೆಯಲ್ಲಿ ಏಕವಚನ, ಬಹುವಚನಗಳ ಬೇರೆ ಬೇರೆ ಪ್ರತ್ಯಯಗಳಿವೆ. ಬಹುವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗಗಳೆಂಬ ಅಂತರವಿಲ್ಲ. ನಪುಂಸಕ ಲಿಂಗವು ಪ್ರತ್ಯಯ ವಿಶೇಷದಿಂದ ಬೇರೆಯಾಗಿರುವುದು ಸ್ಪಷ್ಟ. ಕನ್ನಡದಲ್ಲಿ ಅರ್, ಕಳ್, ಗಳ್, ಇವು ಬಹುವಚನದಲ್ಲಿ ಯಾವ ತಾರತಮ್ಯ ಇಲ್ಲದೆಯೂ ಪ್ರಯೋಗಗೊಳ್ಳುತ್ತದೆ. ಕೇಶಿರಾಜನು ಹೇಳುವ ಬಹುವಚನ ಪ್ರತ್ಯಯಗಳೆಲ್ಲವು ಇವತ್ತು ರೂಢಿಯಲ್ಲಿಲ್ಲ. ಅರ್, ಗಳ್, ಎಂಬವು ಮಾತ್ರ ಸಾರ್ವತ್ರಿಕ ರೂಪದಲ್ಲಿ ಸ್ವರಾಂತವಾಗಿ ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಉದಾ : ಹಳೆಗನ್ನಡದ ‘ಅರ್’ ಪ್ರತ್ಯಯಕ್ಕೆ ಹೊಸಗನ್ನಡದಲ್ಲಿ ‘ಅರ್’, ‘ಅರ’ ರೂಪವಿದೆ. ಅರಸಿಯರ್, ಅರಸಿಯರು. ಹಳೆಗನ್ನಡದ ‘ಗಳ್’ ಪ್ರತ್ಯಯಕ್ಕೆ ‘ಗಳು’ ರೂಪವಿದೆ. ಪುಸ್ತಕಗಳ್ - ಪುಸ್ತಕಗಳು, ಗಿಡಗಳ್-ಗಿಡಗಳು.
 
== ಉಲ್ಲೇಖ ==
"https://kn.wikipedia.org/wiki/ವಚನ(ವ್ಯಾಕರಣ)" ಇಂದ ಪಡೆಯಲ್ಪಟ್ಟಿದೆ