ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Main topics completed
ಚುNo edit summary
೫೧ ನೇ ಸಾಲು:
====ನಿಷ್ಪಕ್ಷಪಾತ ದನಿ====
 
'''ವಿಕಿಪೀಡಿಯ ವಿವಾದಗಳ ಬಗ್ಗೆ ವಿವರಗಳನ್ನು ಕೊಡುತ್ತದೆಯೇ ಹೊರತು ವಿವಾದಗಳಲ್ಲಿ ತೊಡಗಿಕೊಳ್ಳುವುದಿಲ್ಲ'''. ವಿಕಿಪೀಡಿಯ ಲೇಖನಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತಾ ವಿವಾದಗಳನ್ನು ವಿವರಿಸುವಾಗಲೂ ಕೂಡ ಒಂದು ತಟಸ್ಥ ದನಿ ಅಗತ್ಯವಾಗಿರುತ್ತದೆ. ಒಂದು ವಿಷಯವನ್ನು ಅಭಿಪ್ರಾಯಗಳ ಆಧಾರಕ್ಕಿಂತ ಸತ್ಯಮಾಹಿತಿಮೂಲಗಳ ಆಧಾರ ಮೇಲೆ ವಿವರಿಸಿದ್ದರೂ ಸಹ ಆ ಮಾಹಿತಿಮೂಲಗಳ ಆಯ್ಕೆ, ವಿಷಯದ ಪ್ರಸ್ತುತಿ ಮುಂತಾದವು ಸರಿಯಲ್ಲದ (ತಟಸ್ಥವಲ್ಲದ) ದನಿಯನ್ನು ಹೊರಡಿಸಬಹುದು. ತಟಸ್ಥ ಲೇಖನಗಳು ಎಂದಿಗೂ ಎಲ್ಲಾ ದೃಷ್ಟಿಯಲ್ಲೂ ನಿಖರವಾದ, ಪಕ್ಷಪಾತವಲ್ಲದ, ಸಮತೋಲಿತ ಮಾಹಿತಿಗಳನ್ನು ಒಳಗೊಂಡಿರಬೇಕು. ಯಾವುದೇ ದೃಷ್ಟಿಕೋನವನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ರೀತಿಯಲ್ಲಿ ಇರಬಾರದು. ವಿವಾದಾತ್ಮಕ ಮಾಹಿತಿಮೂಲಗಳಿಂದ ವಿಷಯವನ್ನು ನೇರವಾಗಿ ಉಲ್ಲೇಖಿಸುವುದರ ಬದಲು ಅವುಗಳ ಸಾರಾಂಶವನ್ನು ತಟಸ್ಥ ದನಿಯಲ್ಲಿ ವಿವರಿಸಬೇಕು.
 
====ಅಭಿರುಚಿಗಳ ಬಗ್ಗೆ ಅಭಿಪ್ರಾಯ ವಿವರಣೆ====
 
ಕಲೆ ಮುಂತಾದ ಸೃಜನಾತ್ಮಕ ವಿಷಯಗಳ (ಉದಾ:ಕಲಾವಿದರು, ಸಂಗೀತಕಾರರು, ಸಾಹಿತ್ಯ ಇತ್ಯಾದಿ) ಬಗೆಗಿನ ವಿಕಿಪೀಡಿಯ ಲೇಖನಗಳು ಭಾವೋದ್ರೇಕತೆ, ಉತ್ಪ್ರೇಕ್ಷೆ ಆಗುವ ಸಾಧ್ಯತೆ ಇರುತ್ತದೆ. ಇದು ವಿಶ್ವಕೋಶಕ್ಕೆ ತಕ್ಕುದಾದುದಲ್ಲ. ಇಂತಹ ವಿಷಯಗಳ ಬಗ್ಗೆ ಅಭಿಪ್ರಾಯಗಳು ವ್ಯಕ್ತಿನಿರ್ದಿಷ್ಟವಾಗಿರುತ್ತವೆ. ಜಗತ್ತಿನ ಶ್ರೇಷ್ಟ ಸಾಹಿತಿ ಯಾರು ಎಂಬುದಕ್ಕೆ ಎಲ್ಲರೂ ಒಪ್ಪುವಂತಹ ಒಂದು ವ್ಯಕ್ತಿ ಇರಲು ಸಾಧ್ಯವಿಲ್ಲ. ಆದರೆ ಒಬ್ಬ ಕಲಾವಿದನಿಗೆ ಅಥವಾ ಕಲಾವಸ್ತುವಿಗೆ ಸಾರ್ವಜನಿಕವಾಗಿ ಮತ್ತು ಪರಿಣಿತ ವರ್ಗದಲ್ಲಿ ಹೇಗೆ ಎಷ್ಟು ಮಾನ್ಯತೆ ಇದೆ, ಮೆಚ್ಚುಗೆ ಇದೆ ಎಂಬುದು ಗಮನಿಸಬೇಕಾದ ಅಂಶ. ಉದಾಹರಣೆಗೆ, "ಶಿವರಾಮ ಕಾರಂತರು ಕನ್ನಡ ಭಾಷೆಯ ಸಾಹಿತಿಗಳಲ್ಲಿ ಒಬ್ಬ ಶ್ರೇಷ್ಟ ಸಾಹಿತಿ ಎಂದು ಗುರುತಿಸಲ್ಪಡುತ್ತಾರೆ" ಎಂದು ಬರೆಯುವುದು ಒಪ್ಪಿತ. ಲೇಖನಗಳು ಸೃಜನಾತ್ಮಕ ಕೆಲಸಗಳ ಬಗ್ಗೆ ಸಾಮಾನ್ಯ ಅರ್ಥವಿವರಣೆಗಳ ಮೇಲ್ನೋಟವನ್ನು ಒಳಗೊಂಡಿರಬೇಕು. ಆ ವಿಷಯದ ಬಗ್ಗೆ ಪರಿಣಿತರ ವ್ಯಾಖ್ಯಾನಗಳನ್ನು ಹೊಂದಿರುವ ಮಾಹಿತಿಮೂಲಗಳನ್ನು ಉಲ್ಲೇಖಿಸುವುದು ಒಳ್ಳೆಯದು. ಸಾರ್ವಜನಿಕ ಹಾಗೂ ವಿದ್ವಾಂಸರ ವಿಮರ್ಶೆ ಅಭಿಪ್ರಾಯಗಳು ಕಲಾತ್ಮಕ/ಸೃಜನಾತ್ಮಕ ಕೆಲಸಗಳ ಬಗ್ಗೆ ಸಹಾಯವಾಗಬಲ್ಲ ನೋಟವನ್ನು ಒದಗಿಸುತ್ತವೆ.
 
 
====ಎಚ್ಚರವಹಿಸಬೇಕಾದ ಪದಗಳು====
 
ವಿಕಿಪೀಡಿಯದಲ್ಲಿ ಯಾವಯಾವ ರೀತಿಯ ಪದಗಳನ್ನು ಬಳಸಬಾರದು ಎಂಬುದಕ್ಕೆ ಯಾವುದೇ ನಿಯಮವಿಲ್ಲದಿದ್ದರೂ ಕೂಡ ತಟಸ್ಥತೆಯ ಕಾರಣದಿಂದ ಕೆಲವು ರೀತಿಯ ಪದಗಳನ್ನು ಬಳಸುವಾಗ ಎಚ್ಚರವಹಿಸಬೇಕಾಗುತ್ತದೆ. ಉದಾಹರಣೆಗೆ: "ರಾಮನು ಹಣ್ಣನ್ನು ತಿಂದಿಲ್ಲ ಎಂದು ಹೇಳಿದನು" ಎಂದು ಬರೆಯುವ ಬದಲು "ರಾಮನು ಹಣ್ಣನ್ನು ತಿಂದಿಲ್ಲ ಎಂದು ಸಾಧಿಸಿದನು" ಎಂದು ಬರೆಯುವುದರಿಂದ ವಿಷಯವು ಒಂದು ಕಡೆ ವಾಲುತ್ತದೆ. ಆತ ನಿಜವಾಗಿಯೂ ತಿಂದಿದ್ದಾನೆ ಎಂಬ ಅರ್ಥ ಹೊಮ್ಮಿಸಬಹುದು. ಹಾಗಾಗಿ ಆಕರ್ಷಣೀಯವಾಗುವಂತೆ ಮಾಡುವ, ಹೀಗಳೆಯುವ, ಅನಿಶ್ಚಿತೆಯ, ಕ್ಲೀಷೆಯುಳ್ಳ ಅಥವಾ ಒಂದು ದೃಷ್ಟಿಕೋನವನ್ನು ಅನುಮೋದಿಸುವ ಪದಗಳನ್ನು/ಅಭಿವ್ಯಕ್ತಿಯನ್ನು ಕಡಿಮೆಮಾಡಬೇಕು. (ಮುಖ್ಯವಾದ ಮಾಹಿತಿಮೂಲಗಳಿಂದ ಉಲ್ಲೇಖಿಸುವಾಗ ಅಂತಹ ಪದಗಳು ಅಲ್ಲಿ ಇದ್ದರೆ ಅವುಗಳ ಬಳಕೆಗೆ ಮಾಡಬಹುದು)
 
====ಮಾಹಿತಿಮೂಲಗಳಲ್ಲಿ ಪಕ್ಷಪಾತ====
 
ಪಕ್ಷಪಾತವಾಗಿ ಇರುವ ಮಾಹಿತಿಮೂಲಗಳ ಬಗೆಗಿನ ವಿವಾದದಲ್ಲಿ ಆ ಮಾಹಿತಿಮೂಲವು ಪಕ್ಷಪಾತವಾಗಿರುವ ಕಾರಣ ಬೇರೆ ಮೂಲಗಳಿಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ವಾದ ಸಾಮಾನ್ಯ. ಆದರೆ ಪಕ್ಷಪಾತವಾಗಿದೆ ಎಂಬ ಒಂದೇ ಕಾರಣದಿಂದ ಆ ಮೂಲವನ್ನು ನಿರಾಕರಿಸಲು/ತೆಗೆದುಹಾಕಲು ಬರುವುದಿಲ್ಲ. ಅದರಲ್ಲಿ ಸಂಬಂಧಪಟ್ಟ ವಿಷಯದ ಬಗೆಗಿನ ಅಭಿಪ್ರಾಯಕ್ಕೆ ಎಷ್ಟು ಒತ್ತು ಇದೆ ಮತ್ತು ಒಟ್ಟಾರೆ ಆ ಮೂಲ ಏನು ಹೇಳುತ್ತಿದೆ ಎಂಬುದನ್ನು ನೋಡಿ ಇತರ ಅಭಿಪ್ರಾಯಗಳನ್ನು ಹೊಂದಿರುವ ಮಾಹಿತಿಮೂಲಗಳನ್ನೂ ಸೇರಿಸುವುದರ ಮೂಲಕ ತಟಸ್ಥತೆಯನ್ನು ಸಾಧಿಸಬೇಕಾಗುತ್ತದೆ. ಇದರ ಅರ್ಥ, ಪಕ್ಷಪಾತವಾಗಿ ಇರುವ ಮಾಹಿತಿಮೂಲಗಳನ್ನು ಬಳಸಬಹುದು ಎಂದಲ್ಲ, ಬದಲಾಗಿ ಆ ಲೇಖನದ ಪ್ರಸ್ತುತಿಗೆ ಇದರಿಂದ ಹೆಚ್ಚಿನ ಸಹಾಯವಾಗುವಂತಿದ್ದರೆ ಬಳಸಿಕೊಳ್ಳಬಹುದು.
 
Line ೭೧ ⟶ ೬೬:
 
===ಅಮುಖ್ಯ ಸಿದ್ದಾಂತಗಳು ಮತ್ತು ಹುಸಿವಿಜ್ಞಾನ===
 
ಹುಸಿವಿಜ್ಞಾನದ (pseudoscience) ಸಿದ್ಧಾಂತಗಳು ಅದರ ಪ್ರಚಾರಕರಿಂದ ವಿಜ್ಞಾನವೆಂಬಂತೆ ಪ್ರಸ್ತುತಪಡಿಸಲ್ಪಡುತ್ತವೆ. ಅವು ವೈಜ್ಞಾನಿಕ ಕ್ರಮಗಳಿಂದ ವಿಫಲವಾಗಿರುತ್ತವೆ. ಒಂದು ವಿಷಯದ ಬಗ್ಗೆ ವೈಜ್ಞಾನಿಕ ಒಮ್ಮತವೇ ವಿಜ್ಞಾನಿಗಳ ಬಹುಸಂಖ್ಯಾತ ದೃಷ್ಟಿಕೋನವಾಗಿರುತ್ತದೆ. ಹಾಗಾಗಿ ಹುಸಿವಿಜ್ಞಾನದ ಬಗ್ಗೆ ಮಾತಾಡುವಾಗ, ನಾವು ಈ ವಿರುದ್ಧ ಅಭಿಪ್ರಾಯಗಳಿಗೆ ಸಮಾನ ಮಾನ್ಯತೆ ಕೊಡುವಂತೆ ವಿವರಿಸಬಾರದು. ಕೆಲವೊಮ್ಮೆ ಹುಸಿವೈಜ್ಞಾನಿಕ ಅಭಿಪ್ರಾಯಗಳು ಲೇಖನದಲ್ಲಿ ಮುಖ್ಯವಾದರೂ ಕೂಡ ಅವು ಮುಖ್ಯವಾಹಿನಿಯ ವೈಜ್ಞಾನಿಕ ಸಮುದಾಯದ ಅಭಿಪ್ರಾಯ ವಿವರಣೆಗಳನ್ನು ಕೆಳಗೆ ತಳ್ಳುವಂತಿರಬಾರದು. ಹುಸಿವಿಜ್ಞಾನದ ಅಭಿಪ್ರಾಯಗಳಿಗೆ ಅನಗತ್ಯ ಒತ್ತುಕೊಡುವಿಕೆ ಇರಬಾರದು. ಇಂತಹ ಹುಸಿವಿಜ್ಞಾನದ ಅಭಿಪ್ರಾಯಗಳಿಗೆ ವಿಜ್ಞಾನಿಗಳು ಯಾವ ರೀತಿ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಮುಖ್ಯವಾಗಿ ಉಲ್ಲೇಖಿಸುವುದರ ಮೂಲ ವಿವಿಧ ದೃಶ್ಟಿಕೋನಗಳನ್ನು ಸರಿಯಾಗಿ ವಿವರಿಸಿದಂತೆ ಆಗುತ್ತದೆ. ಇದು ಇನ್ನಿತರ ವಿಷಯಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಪುರಾವೆಗಳಿಲ್ಲದ, ನಂಬಲರ್ಹ ಮೂಲಗಳಿಲ್ಲದ ಐತಿಹಾಸಿಕ ಪಿತೂರಿಯ ಘಟನೆಗಳು. ('ಪೋಪ್ ಜಾನ್ ಪಾಲ್ ೧ ಕೊಲೆ', 'ಚಂದ್ರನಲ್ಲಿ ಮಾನವ ಇಳಿದದ್ದು ಸುಳ್ಳು' ಎನ್ನುವ ಅಭಿಪ್ರಾಯಗಳು ಇತ್ಯಾದಿ)
 
===ಧರ್ಮ===
 
ನಂಬಿಕೆ ಮತ್ತು ಸಂಪ್ರದಾಯಗಳ ವಿಷಯದಲ್ಲಿ, ವಿಕಿಪೀಡಿಯಾದ ಲೇಖನದ ಮಾಹಿತಿಯು ಕೇವಲ ಆ ನಂಬಿಕೆ ಸಂಪ್ರದಾಯಗಳನ್ನು ಹೊಂದಿರುವ ವ್ಯಕ್ತಿಗಳು ಅದರ ಬಗ್ಗೆ ಹೇಗೆ ಪ್ರೇರಣೆ ಹೊಂದಿದ್ದಾರೆ ಎಂಬುದನ್ನು ಮಾತ್ರವಲ್ಲದೇ ಆ ನಂಬಿಕೆಗಳು ಆಚರಣೆಗಳು ಹೇಗೆ ಬೆಳೆದು ಬಂದವು ಎಂಬುದರ ಬಗ್ಗೆ ಮಾಹಿತಿಯನ್ನು ಒಳಗೊಂಡಿರಬೆಕು. ಇತಿಹಾಸ ಮತ್ತು ಧರ್ಮದ ಕುರಿತ ಲೇಖನಗಳ ಮಾಹಿತಿಯನ್ನು ಆ ಮತದ ಪವಿತ್ರ ಗ್ರಂಥಗಳಿಂದ, ಪ್ರಾಗಿತಿಹಾಸ ಸಂಶೋಧನೆಗಳಿಂದ, ಇತಿಹಾಸ ಮತ್ತು ವೈಜ್ಞಾನಿಕ ಮೂಲಗಳಿಂದ ಪಡೆಯಬಹುದು.