"ವಿಕಿಪೀಡಿಯ:ತಟಸ್ಥ ದೃಷ್ಟಿಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
===ಧರ್ಮ===
 
ನಂಬಿಕೆ ಮತ್ತು ಸಂಪ್ರದಾಯಗಳ ವಿಷಯದಲ್ಲಿ, ವಿಕಿಪೀಡಿಯಾದ ಲೇಖನದ ಮಾಹಿತಿಯು ಕೇವಲ ಆ ನಂಬಿಕೆ ಸಂಪ್ರದಾಯಗಳನ್ನು ಹೊಂದಿರುವ ವ್ಯಕ್ತಿಗಳು ಅದರ ಬಗ್ಗೆ ಹೇಗೆ ಪ್ರೇರಣೆ ಹೊಂದಿದ್ದಾರೆ ಎಂಬುದನ್ನು ಮಾತ್ರವಲ್ಲದೇ ಆ ನಂಬಿಕೆಗಳು ಆಚರಣೆಗಳು ಹೇಗೆ ಬೆಳೆದು ಬಂದವು ಎಂಬುದರ ಬಗ್ಗೆ ಮಾಹಿತಿಯನ್ನು ಒಳಗೊಂಡಿರಬೆಕು. ಇತಿಹಾಸ ಮತ್ತು ಧರ್ಮದ ಕುರಿತ ಲೇಖನಗಳ ಮಾಹಿತಿಯನ್ನು ಆ ಮತದ ಪವಿತ್ರ ಗ್ರಂಥಗಳಿಂದ, ಪ್ರಾಗಿತಿಹಾಸ ಸಂಶೋಧನೆಗಳಿಂದ, ಇತಿಹಾಸ ಮತ್ತು ವೈಜ್ನಾನಿಕ ಮೂಲಗಳಿಂದ ಪಡೆಯಬಹುದು.
 
ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾಗುತ್ತದೆ ಎಂಬ ಕಾರಣಕ್ಕೆ ಕೆಲ ಮತಾನುಯಾಯಿಗಳು ತಮ್ಮ ಮತದ ಬಗೆಗಿನ ಇತಿಹಾಸದ ಸಂಶೋಧನೆಗಳು ಹೊರಹಾಕಿದ ಮಾಹಿತಿಯ ಬಗ್ಗೆ ವಿರೋಧವನ್ನು ಹೊಂದಿರಬಹುದು. ಅಂತಹ ಸಂದರ್ಭದಲ್ಲಿ ಅವರ ಅಭಿಪ್ರಾಯವನ್ನೂ ವಿಶ್ವಾಸಾರ್ಹ ಉಲ್ಲೇಖಗಳೊಂದಿಗೆ ಲೇಖನದಲ್ಲಿ ಅಳವಡಿಸಬೇಕು.
 
ಕೆಲವು ಪದಗಳು ಧಾರ್ಮಿಕ ಪಠ್ಯ ಮತ್ತು ಸಾಮಾನ್ಯ ಪಠ್ಯದಲ್ಲಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಹೊಮ್ಮಿಸುಬಹುದಾಗಿರುತ್ತವೆ. ಹಾಗಾಗಿ ಅಂತಹ ಪದಬಳಕೆಯ ಬಗ್ಗೆ ಎಚ್ಚರವಹಿಸಬೇಕು. ಉದಾ: ಮೂಲಭೂತವಾದ, ಪುರಾಣ ಇತ್ಯಾದಿ. ಹಾಗಿದ್ದರೂ ಕೂಡ ಲೇಖಕರು ಹೆಚ್ಚು ಪ್ರಚಲಿತದಲ್ಲಿರುವ ಪದಬಳಕೆಗಳನ್ನು ಮಾಡಲಬಹುದು.
 
 
{{under construction}}
೪,೫೦೪

edits

"https://kn.wikipedia.org/wiki/ವಿಶೇಷ:MobileDiff/733414" ಇಂದ ಪಡೆಯಲ್ಪಟ್ಟಿದೆ