ಅಟಾಟರ್ಕ್, ಕೆಮಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
ಅಟಾಟರ್ಕ್, ಕೆಮಾಲ್ (1880-1938). ಆಧುನಿಕ ತುರ್ಕಿಯ ನಿರ್ಮಾಪಕ, ಮೊದಲನೆಯ ರಾಷ್ಟ್ರಾಧ್ಯಕ್ಷ. 1934ರ ಮೊದಲಿಗೆ ಈತನನ್ನು ಮುಸ್ತಫ ಕೆಮಾಲ್, ಕೆಮಾಲ್ ಪಾಷ ಎಂದು ಕರೆಯುತ್ತಿದ್ದರು. ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ. ಸೈನ್ಯಕ್ಕೆ ಸೇರಿ 1908ರ ತುರ್ಕಿ ಯುವಕ ಕ್ರಾಂತಿಯಲ್ಲಿ ಭಾಗವಹಿಸಿದ. 1914-18ರ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ಗ್ಯಾಲಿಪೊಲಿ, ಮೆಸಪೊಟೆಯಾ ಮುಂತಾದ ಕಡೆಗಳಲ್ಲಿ ಹೋರಾಡಿ ಸಮರ್ಥ ಸೇನಾಧಿಪತಿಯೆಂದು ಹೆಸರು ಗಳಿಸಿದ. ತುರ್ಕಿ ಯುದ್ಧದಲ್ಲಿ ಸೋತ ಅನಂತರ ರಾಷ್ಟ್ರೀಯ ಪಕ್ಷವೊಂದನ್ನು ನಿರ್ಮಿಸಿ ತುರ್ಕಿಯ ಸ್ವಾತಂತ್ರ್ಯ ಸಾಧನೆಗಾಗಿ ಪಣತೊಟ್ಟು ನಿಂತು, 1921-22 ರಲ್ಲಿ ಅನಟೋಲಿಯವನ್ನು ಆಕ್ರಮಿಸಿದ್ದ ಗ್ರೀಕರನ್ನು ಹೊಡೆದೋಡಿಸಿ, ಸುಲ್ತಾನನ ಆಳ್ವಿಕೆಯನ್ನೇ ರದ್ದುಮಾಡಿ, 1923ರ ಲಾಸೇನ್ ಸಮ್ಮೇಳನದಲ್ಲಿ ಸ್ವತಂತ್ರ ತುರ್ಕಿ ರಾಜ್ಯಕ್ಕೆ ಮನ್ನಣೆ ಸಂಪಾದಿಸಿದ. 1923ರಲ್ಲಿ ಜನರು ಕೃತಜ್ಞತೆಯಿಂದ ಅವನನ್ನೇ ರಾಷ್ಟ್ರದ ಅಧ್ಯಕ್ಷನನ್ನಾಗಿ ಆರಿಸಿದರು. ತನ್ನ ಮರಣದವರೆಗೂ ಕೆಮಾಲ್ ಅಧ್ಯಕ್ಷನಾಗಿಯೇ ಮುಂದುವರಿದ. ಜೀವನದ ಎಲ್ಲ ರಂಗಗಳಲ್ಲೂ ತುರ್ಕಿಯ ಜನತೆ ಆಧುನಿಕ ಪಾಶ್ಚಾತ್ಯರಂತಾಗಬೇಕೆಂದು ನಿರ್ಣಯಿಸಿ ನಾನಾ ಸುಧಾರಣೆಗಳನ್ನು ಜಾರಿಗೆ ತಂದ. ಸಂಪ್ರದಾಯಬದ್ಧರಾದ ತುರ್ಕಿ ಜನರು ಅಷ್ಟೊಂದು ನವೀನ ರೀತಿ ನೀತಿಗಳನ್ನು ಅಂಗೀಕರಿಸಿದ್ದು ಸೋಜಿಗವಾದ ಸಂಗತಿಯಾದರೂ ಅದರಿಂದ ಅತ್ಯಲ್ಪಕಾಲದಲ್ಲೇ ದೇಶ ಮುಂದುವರಿದಂತಾಯಿತ.
==ಉಲ್ಲೇಖಗಳು==
*<ref>http://www.isteataturk.com/haber/print.php?haberno=19</ref>
*<ref>http://www.academia.edu/761586/Citizenship_and_Minorities_A_Historical_Overview_of_Turkey_s_Jewish_Minority</ref>
"https://kn.wikipedia.org/wiki/ಅಟಾಟರ್ಕ್,_ಕೆಮಾಲ್" ಇಂದ ಪಡೆಯಲ್ಪಟ್ಟಿದೆ