ಔಷಧಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
 
==ಇತಿಹಾಸ==
ಮದ್ದುಗಳ ವಿಷಯವಾಗಿ ಎಲ್ಲ ತೆರನ ತಿಳಿವಳಿಕೆಗಳನ್ನೂ ಒದಗಿಸುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಾಣವಿರುವ ಎಲ್ಲ ಬಗೆಗಳ ಜೀವಿಗಳ ಮೇಲೂ ರಾಸಾಯನಿಕ ವಸ್ತುಗಳ ಪ್ರಭಾವವನ್ನು ತಿಳಿಸುವ ವಿಜ್ಞಾನ ಎನ್ನಬಹುದು. ಕೆಲವೇಳೆ ಮದ್ದುಗಳ ಕೇವಲ ಮೈಯಲ್ಲಿನ ವರ್ತನೆಗೆ ಅಂದರೆ ಅವುಗಳ ಪ್ರಭಾವಗಳ ತಿಳಿವಳಿಕೆಗೆ ಇದನ್ನು ಮಿತಿಗೊಳಿಸುವುದುಂಟು. ಇದರಿಂದಲೇ ವೈದ್ಯವಿಜ್ಞಾನದಲ್ಲಿ ಇದರ ಹಿರಿಯ ಪಾತ್ರ ಗೊತ್ತಾಗುವುದು. ಬಳಸುವ ರೂಪದಲ್ಲಿ ಮದ್ದುಗಳನ್ನು ಒದಗಿಸುವು [[ಔಷಧಗಾರಿಕೆ]] (ಫಾರ್ಮಸಿ) [[ಔಷಧವಿಜ್ಞಾನ|ಔಷಧವಿಜ್ಞಾನದ]] ಒಂದು ವಿಭಾಗ. ಅಷ್ಟೇ ಅಲ್ಲದೆ, ಇದರಲ್ಲಿ ರೋಗಚಿಕಿತ್ಸೆವಿಜ್ಞಾನ (ತೆರಪ್ಯುಟಿಕ್ಸ್‌), ವಿಷವಿಜ್ಞಾನ (ಟಾಕ್ಸಿಕಾಲಜಿ) ಸೇರಿವೆ. ಒಂದು ರೀತಿಯಲ್ಲಿ ಪ್ರಯೋಗಾಲಯದಲ್ಲಿ ಪ್ರಾಣಿಗಳ ಮೇಲೆ ಪರೀಕ್ಷಿಸಿ ಮದ್ದುಗಳನ್ನು ಚಿಕಿತ್ಸೆಗಾಗಿ ಸೂಚಿಸುವ ವಿಜ್ಞಾನ ಎನ್ನಲೂಬಹುದು.
ಹುಟ್ಟು, ಮೂಲ: ರೋಗ ನಿವಾರಣಿಗಾಗಿನ ಚಿಕಿತ್ಸೆ ಮಾನವನ ಆದಿಯಿಂದಲೇ ಹುಟ್ಟಿರಬಹುದಾದರೂ [[ವಿಜ್ಞಾನ]]ದ ಅರಿವು ಹೆಚ್ಚಿ ಬಂದ ಕಳೆದ ಶತಮಾನದ ತನಕ ಬಹುಮಟ್ಟಿಗೆ ಕುರುಡು ನಂಬಿಕೆ. ಮಂತ್ರ, ತಂತ್ರ, ಧರ್ಮಗಳನ್ನು ನೆಚ್ಚಿಕೊಂಡಿದ್ದು, ಕೇವಲ ಮದ್ದನ್ನು ಸುಮ್ಮನೆ ಕೊಟ್ಟು ಒಪ್ಪುತಪ್ಪು ನೋಡುವುದರ ಮೇಲಿತ್ತು. ಯುರೋಪಿನಲ್ಲಿ ಪುರಾತನ ಗ್ರೀಕರಿಗಂತೂ ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಗ್ಯಾಲೆನನ (131-20) ತತ್ತ್ವಗಳೇ ವೇದವಾಕ್ಯಗಳಾಗಿದ್ದುವು. ಅವನ ನೂರಾರು ಬರೆಹಗಳಲ್ಲೂ ಅವನವೇ ಕಣ್ಣರಿಕೆಗಳೊಂದಿಗೆ ಎಷ್ಟೊ ಮದ್ದುಗಳನ್ನು ಸೂಚಿಸಿರುವುದರೊಂದಿಗೆ ಅವನ ಮೊಂಡು ವಾದಗಳೂ ತುಂಬಿದ್ದುವು. ಈ ಬರೆಹಗಳನ್ನು ಸಾವಿರಾರು ವರ್ಷಗಳ ತನಕ ಯಾರೂ ಎದುರಿಸಲಾರದೆ ಅವು ಅಧಿಕೃತಗೊಂಡು ಯಾರಾದರೂ ಪ್ರಯೋಗ ನಡೆಸಲೂ ಕಂಡದ್ದನ್ನು ಕಂಡಹಾಗೇ ಹೇಳಲೂ ಹಿಂಜರಿಯುತ್ತಿದ್ದರು. ಆದರೆ ಗ್ಯಾಲೆನನ ಯುಗದ ಎದುರು ಮೊದಲು ಎದೆಗಾರಿಕೆ ತೋರಿ ಕಟುವಾಗಿ ಟೀಕಿಸಿದವ ಪ್ಯಾರಸೆಲ್ಸಸ್ (1493-1541). ಉತ್ತರ ಯುರೋಪಿನಲ್ಲಿ ಅಲೆದಾಡುತ್ತಿದ್ದ ಈ ಬಾಯಿಬಡಕ ಅಲ್ಲಲ್ಲಿ ಕೀಟಲೆ ಎಬ್ಬಿಸಿ ತೊಡರುತ್ತಿದ್ದರೂ ತನ್ನ ಸಫಲ ಮದ್ದುಗಾರಿಕೆಯ ಕಾರಣದಿಂದ ಪಾರಾಗುತ್ತಿದ್ದ. ಮಿಶ್ರಣಗಳಲ್ಲಿ ಹತ್ತಾರು ಮದ್ದುಗಳನ್ನು ಗ್ಯಾಲೆನ್ ಬೆರೆಸುತ್ತಿದ್ದೆಡೆಯಲ್ಲಿ ಇವನು ಕೆಲವೇ ಕೆಲವು ಹೊಸವನ್ನು ಹಾಕಿ ಪರಿಣಾಮಕಾರಿ ಆಗುವುದನ್ನು ತೋರಿಸಿಕೊಟ್ಟ.
 
"https://kn.wikipedia.org/wiki/ಔಷಧಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ