ಔಷಧಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
 
== ಕೈಗಾರಿಕೆಯಲ್ಲಿ ==
ರಾಸಾಯನಿಕಗಳ ತಯಾರಿಕೆ ಸಂಸ್ಥೆಗಳ ಸಂಶೋಧನಾಲಯಗಳಲ್ಲೂ ಔಷಧಗಳ ಮುಖ್ಯವಾದ ಮೂಲಶೋಧನೆ ನಡೆವುದು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಂತೂ 40 ವರ್ಷಗಳಿಂದೀಚೆಗೆ ಔಷಧ ಕೈಗಾರಿಕೆಗಳಲ್ಲಿ ಸಂಶೋಧನೆ ಅಪಾರವಾಗಿ ನಡೆಯುತ್ತಿದೆ. ಕೈಗಾರಿಕೆಯ ಹಣಕಾಸು, ವಿಶ್ವವಿದ್ಯಾನಿಲಯಗಳು[[ವಿಶ್ವವಿದ್ಯಾನಿಲಯ]]ಗಳು, ಆಸ್ಪತ್ರೆಗಳು, ಸಂಶೋಧನೆ ಸಂಘಗಳ ಒಗ್ಗಟ್ಟಿನಿಂದ ಹೆಚ್ಚಿನ ಮುನ್ನಡೆಯಾಗಿ ಎಷ್ಟೊ ತೊಡಕುಗಳು ಬಗೆಹರಿದಿವೆ. ಸ್ವಲ್ಪಮದ್ದುಗಳು, ಜೀವಿ ವಿರೋಧಕಗಳು, ಕಾರ್ಟಿಸೋನ್ ತೆರನವು, ನೆಮ್ಮದಿಕಾರಿಗಳು (ಟ್ರಾಂಕ್ವಿಲೈಸರ್ಸ್), ಮೂತ್ರಕಾರಿಗಳು. ಸಿಹಿಮೂತ್ರರೋಧಕಗಳು, ರಕ್ತದ ಬದಲಿಗಳು, ಏಡಿಗಂತಿರೋಧಕಗಳೇ ಮುಂತಾದವು ಉದಾಹರಣೆಗಳು. ಔಷಧವಿಜ್ಞಾನದ ಮೂಲ ತಿಳಿವಳಿಕೆಯೂ ಅಪಾರವಾಗಿ ಹೆಚ್ಚಿದೆ.
 
ರೋಗಿಗಳ ಬಳಕೆಗೆ ಹೊಸ ಹೊಸ ಮದ್ದುಗಳನ್ನು ತಯಾರಿಸಿ ವೈದ್ಯನ ಕೈಗೆಕೊಡುವ ಮುನ್ನ ಅವು ವಿಷಕರವಲ್ಲವೆಂದು ಖಚಿತ ಮಾಡಿಕೊಳ್ಳಲು, ಪ್ರಾಣಿಗಳ ಮುಖ್ಯವಾದ ಎಲ್ಲ ಅಂಗಗಳು, ಮಂಡಲಗಳ ಮೇಲೂ ಪ್ರಭಾವವನ್ನು ತಿಳಿಯಲು ಪರೀಕ್ಷೆಗಳನ್ನು ಸಾಂಗವಾಗಿ ಮಾಡಿ ಮುಗಿಸಿರಬೇಕು. ಯಾವ ಮದ್ದನ್ನೇ ಆಗಲಿ ಮೊಟ್ಟಮೊದಲು ಪ್ರಯೋಗದ ಪ್ರಾಣಿಗಳಿಗೆ ಕೊಟ್ಟು ನೋಡಿದ ಮೆಲೆ ಮಾತ್ರವೇ ರೋಗಿಗೆ ಕೊಡುವುದು. ಬಳಸುವ ಮದ್ದಗಳ ಗುಣಮಟ್ಟ ಒಂದೇ ಸಮನಾಗಿ ಇರುವಂತೆ ನೋಡಿಕೊಳ್ಳಲು ತಯಾರಾದವನ್ನು ಮೇಲಿಂದ ಮೇಲೆ ಪರೀಕ್ಷಿಸುತ್ತಿರಲೇಬೇಕು. ಮದ್ದುಗಳಾದ ಅಚ್ಚರಾಸಾಯನಿಕ ವಸ್ತುಗಳನ್ನೇನೋ ರಾಸಾಯನಿಕ ಪರೀಕ್ಷೆಗಳಿಂದ ಶಿಷ್ಟೀಕರಿಸಬಹುದು. ಆದರೆ ಇನ್ಸುಲಿನ್, ಪ್ರಾಣಿಗಳು ಇಲ್ಲವೇ ಗಿಡಮರಗಳಿಂದ ಪಡೆದ ಕಚ್ಚ ಉತ್ಪನ್ನಗಳಾದ ಡಿಜಟ್ಯಾಲಿಸಿನಂಥವನ್ನು ಇಷ್ಟು ಸರಳವಾಗಿ ಪರೀಕ್ಷಿಸುವಂತಿಲ್ಲ. ಖಚಿತವಾಗಿ ಅಧಿಕೃತವಾಗಿ ಗೊತ್ತು ಪಡಿಸಿಟ್ಟುಕೊಂಡಿರುವ ಗುಣಮಟ್ಟವೊಂದಿಗೆ ಹೋಲಿಸಿನೋಡಿ ಒರೆಹಚ್ಚಿ ನಿರ್ಧರಿಸಬೇಕು. ಈ ಪರೀಕ್ಷೆಗಳನ್ನು ಯಾವುದಾದರೂ ಬದುಕಿರುವ ಪ್ರಾಣಿಯಲ್ಲಿ ಮಾಡಬೇಕು. ಇನ್ಸುಲಿನ್ನನ್ನು ಮೊಲದ ರಕ್ತದ ಸಕ್ಕರೆಮಟ್ಟ ಇಳಿಸುವುದರಿಂದಲೂ ಡಿಜಿಟ್ಯಾಲಿಸನ್ನು ಬೆಕ್ಕಿನ ಗುಂಡಿಗೆಯನ್ನು ನಿಲ್ಲಿಸುವುದರಿಂದಲೂ ನಿರ್ಧರಿಸುವುದು ವಾಡಿಕೆಯಲ್ಲಿವೆ. ಹೀಗೆ ಜೀವಿಗಳಲ್ಲಿ ಒರೆಹಚ್ಚಿ ನೋಡುವುದಕ್ಕೆ ಜೀವದೊರೆ (ಬಂiೆÆಆಸ್ಸೆ) ಎಂದಿದೆ. ಬಹುಪಾಲು ಜೀವಾತುಗಳಿಗೂ ಜೀವದೊರೆ ಹಚ್ಚಬೇಕಾಗುತ್ತದೆ.
"https://kn.wikipedia.org/wiki/ಔಷಧಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ