ಔಷಧಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಔಷಧವಾಗಿ ಬಳಸಬಹುದಾದ ಇಲ್ಲ ವಸ್ತುಗಳ ಗುಣ, ತಯಾರಿಕೆ, ವರ್ತನೆ, ಪ್ರಭಾವಗಳೇ ಮು...
 
No edit summary
೧೨ ನೇ ಸಾಲು:
 
== ಗುರಿ, ವಿಧಾನಗಳು ==
ಮದ್ದುಗಳಿಂದ ಮೈಮೇಲೆ ಆಗುವ ಪ್ರಬಾವಗಳನ್ನು ಚೆನ್ನಾಗಿ ತಿಳಿಯಬೇಕಾದರೆ ಮೊದಲು ಅಂಗಗಳ ನಿಜಗೆಲಸಗಳನ್ನು ತಿಳಿದುಕೊಂಡು ಅಳೆಯುವುದು ಗೊತ್ತಿರಬೇಕು. ಅಲ್ಲದೆ, ಪೆಟ್ಟು, ಗಾಯ, ರೋಗಗಳಿಂದ ಅಂಗರಚನೆ, ನಿಜಗೆಲಸಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿಸಿಕೊಡುವ ರೋಗವಿಜ್ಞಾನದ (ಪೆಥಾಲಜಿ) ಅರಿವು ಚೆನ್ನಾಗಿರಬೇಕು. ಇದನ್ನು ತಿಳಿಯಲು ಬದುಕಿರುವ ಪ್ರಾಣಿಗಳ ಅಂಗಗಳನ್ನು ಬರಿಗಣ್ಣಿನಿಂದ ನೋಡುವುದಲ್ಲದೆ ಊತಕಗಳು, ಜೀವಕಣಗಳನ್ನು ಸೂಕ್ಷ್ಮದರ್ಶಿಯ ಅಡಿಯಲ್ಲೂ ಮೈರಸಗಳು, ಮಲ, ಮೂತ್ರ, ಬೆವರೇ ಮುಂತಾದವನ್ನು ರಾಸಾಯನಿಕವಾಗೂ ಪರೀಕ್ಷಿಸಬೇಕಾಗಬಹುದು. ಮೈಯೊಳಗಿನ ನಿಜಗೆಲಸಗಳ ಮೇಲೆ ಮದ್ದುಗಳ ಪ್ರಭಾವ ಗೊತ್ತಾಗಬೇಕಾದರೆ ಜೀವರಸಾಯನವಿಜ್ಞಾನ ತಿಳಿದಿರಲೇಬೇಕು. ನಂಜುರೋಧಕಗಳು (ಆಣಟಿಸೆಪ್ಟಿಕ್ಸ್‌), ಜೀವನಿರೋಧಕ (ಆಂಟಿಬಂiೆÆಟಿಕ್) ಮದ್ದುಗಳ ಪ್ರಭಾವ ಕಾಣಬೇಕಾದರೆ ಏಕಾಣುಜೀವಿವಿಜ್ಞಾನದ (ಬ್ಯಾಕ್ಟೀರಿಯಾಲಜಿ[[ಬ್ಯಾಕ್ಟೀರಿಯಾ]]ಲಜಿ) ಕಲ್ಪನೆ, ವಿಧಾನಗಳ ತಿಳಿವಳಿಕೆ ಇರಲೇಬೇಕು. ಗಿಡಮೂಲಿಕೆ, ನಾರುಬೇರುಗಳಲ್ಲಿನ ಮದ್ದುಗಳನ್ನು ಪಡೆಯಲು ರಸಾಯನವಿಜ್ಞಾನ, ಸಸ್ಯವಿಜ್ಞಾನಗಳು ಗೊತ್ತಿರಬೇಕಾಗುತ್ತದೆ.
ಒಂದು ಮದ್ದಿನ ರಾಸಾಯನಿಕ ರಚನೆಗೂ ಮೈಯಲ್ಲಿ ಅದರ ವರ್ತನೆಗೂ ನಿಕಟ ಸಂಬಂಧ ಇರುವುದನ್ನು ಔಷಧವಿಜ್ಞಾನಪರಿಣತರು ಬಲುಬೇಗನೆ ಕಂಡುಕೊಂಡರು. ರಸಾಯನವಿಜ್ಞಾನಪಟುಗಳು ಮೂಲದವನ್ನು ಹೋಲುವ ಹೊಸ ಮದ್ದುಗಳನ್ನು ತಯಾರಿಸಿದಂತೆಲ್ಲ ಇದು ಇನ್ನಷ್ಟು ಖಚಿತವಾಗುತ್ತ ಬಂದಿದೆ. ಮದ್ದುಗಳಲ್ಲಿ ಗೊತ್ತಾದ ಪ್ರಭಾವಕ್ಕೆ ಕಾರಣವಾದ ರಾಸಾಯನಿಕ ರಚನೆಯ ಅಣ್ವಂಶ ತಿಳಿದರೆ, ಕೊಂಚಮಟ್ಟಿಗೆ ಬದಲಿಸಿ ಇನ್ನೂ ಒಳ್ಳೆಯ ನಿರಪಾಯಕರ ಮದ್ದುಗಳನ್ನು ಕೃತಕವಾಗಿ ತಯಾರಿಸಲು ಅನುಕೂಲ. ಬಳಕೆ ಮದ್ದುಗಳಲ್ಲಿ ಬಹುಪಾಲು ಇಂಗಾಲ ಪರಮಾಣುಗಳಿರುವುದರಿಂದ ಜೈವಿಕ ರಸಾಯನವಿಜ್ಞಾನದ ಪರಿಣತೆಯೂ ಇರಬೇಕು.
 
"https://kn.wikipedia.org/wiki/ಔಷಧಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ