ಕಾಲೇಜು ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಇತಿಹಾಸ==
ಉನ್ನತ ಪ್ರೌಢಶಾಲೆಯ (ಹೈಯರ್ ಸೆಕೆಂಡರಿ ಸ್ಕೂಲ್) ಅನಂತರದ ಶಿಕ್ಷಣ; ಸಾಮಾನ್ಯವಾಗಿ ಸಾಂಸ್ಕøತಿಕಸಾಂಸ್ಕೃತಿಕ ಶಿಕ್ಷಣಕ್ಕೆ ಮಾತ್ರ ಈ ಹೆಸರನ್ನು ಬಳಸುವುದು ಸಂಪ್ರದಾಯವಾಗಿದ್ದರೂ ಈಚೆಗೆ ಆ ಮಟ್ಟದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೂ ಬಳಸಲಾಗುತ್ತಿದೆ; ಸ್ನಾತಕೋತ್ತರ ಶಿಕ್ಷಣಕ್ಕೂ ಇದೇ ಹೆಸರಿದೆ. ಉನ್ನತ ಶಿಕ್ಷಣದ ಅಥವಾ ವಿಶ್ವವಿದ್ಯಾಲಯದ ಶಿಕ್ಷಣದ ಪ್ರಥಮ ಪದವಿಯ ಶಿಕ್ಷಣ ಇದರ ಮೊದಲ ಹಂತ; ಇದರ ಎರಡನೆಯ ಹಂತವೇ ಸ್ನಾತಕೋತ್ತರ ಶಿಕ್ಷಣ (ಡಾಕ್ಟರೇಟ್ ಮತ್ತು ಸಂಶೋಧನೆಯ ಭಾಗವನ್ನು ಒಳಗೊಂಡಂತೆ); ವಿಶ್ವವಿದ್ಯಾಲಯದ ಅಂಗಸಂಸ್ಥೆಯಲ್ಲಿ ವ್ಯವಸ್ಥೆಗೊಳಿಸಿರುವ ಯಾವುದೇ ರೀತಿಯ ಶಿಕ್ಷಣಕ್ಕೂ ಇದನ್ನು ಬಳಸುವುದೂ ಉಂಟು; ಸ್ವಯಮಾಧಿಕಾರ ಹೊಂದಿರುವ ವಿಶ್ವವಿದ್ಯಾಲಯದ ಯಾವುದೇ ಸಂಸ್ಥೆಯೊಂದು ವ್ಯವಸ್ಥೆಗೊಳಿಸಿರುವ ಶಿಕ್ಷಣವಿದು.ಸಾಮಾನ್ಯವಾಗಿ ಕಾಲೇಜು ಶಿಕ್ಷಣ ಹದಿನೆಂಟನೆಯ ವರ್ಷದಿಂದ ಆರಂಭವಾಗುತ್ತದೆ. ಅದುವರೆಗೆ 5 ವರ್ಷ ವಯಸ್ಸಿನಿಂದ ಹನ್ನೊಂದು-ಹನ್ನೆರಡು ವರ್ಷಗಳ ಪೂರ್ವಭಾವಿ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೊರಕಿರುತ್ತದೆ. ಪ್ರಾಚೀನ ಭಾರತದಲ್ಲಿ 16-18ನೆಯ ವಯಸ್ಸಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಿಕ್ಷಣವೀಯುತ್ತಿದ್ದ ಉನ್ನತ ಶಿಕ್ಷಣ ಸಂಸ್ಥೆಗಳೆಲ್ಲ ಕಾಲೇಜು ಮಟ್ಟದ ಶಿಕ್ಷಣವೀಯುತ್ತಿದ್ದುವೆಂದು ಭಾವಿಸುವುದುಂಟು. ಆ ಶಿಕ್ಷಣ 6-8 ವರ್ಷಗಳ ಕಾಲಾವಧಿಯ ವರೆಗೆ ನಡೆಯುತ್ತಿತ್ತು. ಇಂದು ವಿಶ್ವವಿದ್ಯಾಲಯದ ಇಡೀ ಶಿಕ್ಷಣಕ್ಕೆ ಈ ಹೆಸರನ್ನು ಬಳಸುವಾಗ ಈ ಕಾಲವಧಿ ಒಪ್ಪುವಂತೆಯೇ ಇರುವುದು ಸ್ಪಷ್ಟವಾಗುತ್ತದೆ.<ref>http://www.prajavani.net/news/article/2016/04/24/404246.html</ref>
 
==ಕಾಲೇಜು ಶಿಕ್ಷಣದ ಉದ್ದೇಶ==
ವಿಶ್ವವಿದ್ಯಾಲಯದ[[ವಿಶ್ವವಿದ್ಯಾಲಯ]]ದ ಅಥವಾ ಉನ್ನತ ಶಿಕ್ಷಣದ ಉದ್ದೇಶವೇ ಕಾಲೇಜು ಶಿಕ್ಷಣದ ಉದ್ದೇಶವೂ ಆಗಿದೆ, ಜ್ಞಾನ ಸಂಸ್ಕøತಿಗಳಸಂಸ್ಕೃತಿಗಳ ಪರಿಚಯ, ವಿವೇಚನೆ ಮತ್ತು ಸಂವರ್ಧನ ಇವೆಲ್ಲವನ್ನೂ ಅದು ಒಳಗೊಂಡಿದೆ. ಈ ಮೂರು ಉದ್ದೇಶಗಳಲ್ಲಿ ಕೇವಲ ಪ್ರಥಮ ಪದವಿಗೇ ಮೀಸಲಾಗಿರುವ ಕಾಲೇಜು ಶಿಕ್ಷಣದಲ್ಲಿ ಕೊನೆಯೆರಡು ಉದ್ದೇಶಗಳು ಪ್ರಧಾನವೆನಿಸುತ್ತವೆ. ಕಾಲೇಜಿಗೆ ಶಿಕ್ಷಣದಲ್ಲಿ ಕೊನೆಯೆರಡು ಉದ್ದೇಶಗಳು ಪ್ರಧಾನವೆನಿಸುತ್ತವೆ. ಕಾಲೇಜಿಗೆ ಬರುವ ವೇಳೆಗೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ವಿವೇಚಿಸುವ ಶಕ್ತಿ ಪಡೆದಿರುವುದರಿಂದ ಅಲ್ಲಿ ಬೋಧಿಸಿದ ಅಂಶಗಳನ್ನು ಕುರಿತು ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು ಗ್ರಹಿಸುವುದು ಸಾಧ್ಯ. ಸ್ನಾತಕೋತ್ತರ ಶಿಕ್ಷಣಕ್ಕೆ ಇದು ಅಗತ್ಯವೆನಿಸುವ ಪೂರ್ವ ಸಿದ್ಧತೆ. ಇದರ ಆಧಾರದ ಮೇಲೆ ಜ್ಞಾನ ಸಂಸ್ಕøತಿಗಳ ಸಂವರ್ಧನಕ್ಕೆ ನೆರವಾಗುವಂತೆ ಅಲ್ಲಿ ಸಂಶೋಧನೆ ನಡೆಸುವುದು ಸಾಧ್ಯವಾಗುತ್ತದೆ.
 
==ಪ್ರವೇಶ ನಿಯಮಗಳು==
ಎಲ್ಲ ದೇಶಗಳಲ್ಲೂ ಕಾಲೇಜು ಶಿಕ್ಷಣದ ಪ್ರವೇಶನಿಯಮಗಳು ಏಕರೀತಿಯಾಗಿಲ್ಲ. ಒಂದು ದೇಶದ ಎಲ್ಲ ಕಾಲೇಜುಗಳೂ ಒಂದೇ ರೀತಿಯ ನಿಯಮಗಳನ್ನು ರೂಪಿಸಿಲ್ಲ. ಅಮೆರಿಕದ ಸಂಯುಕ್ತ ಸಂಸ್ಥಾನದ ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ಕಾಲೇಜುಗಳಲ್ಲಿ ಈ ನಿಯಮಗಳು ಹೆಚ್ಚು ವೈವಿಧ್ಯವನ್ನು ತೋರುತ್ತವೆ. ಯೂರೋಪು[[ಯೂರೋಪ್]], ಇಂಗ್ಲೆಂಡು[[ಇಂಗ್ಲೆಂಡ್]] ಮತ್ತು ಭಾರತದ ಕಾಲೇಜುಗಳಲ್ಲೂ ವ್ಯತ್ಯಾಸಗಳಿದ್ದರೂ ಅಷ್ಟು ವೈಪರೀತ್ಯ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಕಾಲೇಜು ಶಿಕ್ಷಣಕ್ಕೆ ವಿದ್ಯಾರ್ಥಿಯೊಬ್ಬ 11-12 ವರ್ಷಗಳ ವರೆಗೆ ಆಗಲೆ ಶಾಲಾಶಿಕ್ಷಣ ಪಡೆದಿರಬೇಕು. ಎಂದರೆ ಮಾತೃಭಾಷೆ, ರಾಷ್ಟ್ರಭಾಷೆ, ವ್ಯಾವಹಾರಿಕಭಾಷೆ, ಗಣಿತ, ಸಮಾಜಪಾಠ, ವಿಜ್ಞಾನ ಮತ್ತು ಕೆಲವು ವೇಳೆ ಆಯ್ದ ವಿಷಯ-ಇವುಗಳಲ್ಲಿ ಶಿಕ್ಷಣ ಪಡೆದಿದ್ದು ಅಂಗೀಕೃತ ಸೆಕೆಂಡರಿ ಶಿಕ್ಷಣ ಅಥವಾ ಪ್ರೀ-ಯೂನಿವರ್ಸಿಟ್ ಅಥವಾ ಇಂಟರ್‍ಮಿಡಿಯೆಟ್ ಪರೀಕ್ಷಾ ಮಂಡಲಿ ನಡೆಸುವ ಪ್ರಿ-ಯೂನಿವರ್ಸಿಟಿ ಅಥವಾ ಹೈಯರ್ ಸೆಕೆಂಡರಿ ಶಾಲೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು. ಅಮೆರಿಕದ ಕೆಲವು ಕಾಲೇಜುಗಳು ವಿದ್ಯಾರ್ಥಿಗೆ 18 ವರ್ಷ ವಯಸ್ಸಾಗಿದ್ದು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರದಿದ್ದರೂ ಆತ ಕಾಲೇಜಿನ ಶಿಕ್ಷಣಕ್ಕೆ ಯೋಗ್ಯನಾಗಿರುವನೆಂದು ನಿರ್ಧರವಾದರೆ, ಅವನಿಗೆ ಪ್ರವೇಶಾವಕಾಶವನ್ನು ನೀಡುವುದುಂಟು.
 
ಶಿಕ್ಷಣಾಭಿವೃದ್ಧಿಗೆ ಸಂಬಂಧಿಸಿದಂತೆ ಮೇಲೆ ಸೂಚಿಸಿದ ನಿಯಮಗಳಂತೆ ಇತರ ನಿಯಮಗಳನ್ನೂ ರೂಪಿಸಿರುವುದುಂಟು. ಸೆಕೆಂಡರಿ ಶಾಲಾಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದುಕೊಂಡಿರುವ ಅಂಶಗಳ ಬಗ್ಗೆ ಕನಿಷ್ಟ ಸೇಕಡಾ ಪ್ರಮಾಣವನ್ನು ಸಮಗ್ರ ಅಥವಾ ಕೆಲವು ವಿಷಯಗಳಲ್ಲಿ ಮಾತ್ರ ಗೊತ್ತುಮಾಡಿರಬಹುದು. ಉದಾ: ಕೆಲವು ತಾಂತ್ರಿಕ ಅಥವಾ ವೈದ್ಯಕೀಯ ಕಾಲೇಜುಗಳು ಆಯ್ದುಕೊಂಡು ವಿಷಯಗಳಲ್ಲಿ ಕನಿಷ್ಟ. ಪಕ್ಷ ಸೇ. 45 ಅಂಕಗಳನ್ನು ಪಡೆದಿರಬೇಕೆಂದು ಪ್ರವೇಶನಿಯಮ ಮಾಡಿರುವುದುಂಟು, ಕೆಲವು ವೃತ್ತಿಶಿಕ್ಷಣದ ಕಾಲೇಜುಗಳು ನಿರ್ದಿಷ್ಟ ವಿಷಯಗಳನ್ನು ಅಧ್ಯಯನ ಮಾಡಿರುವವರನ್ನು ಮಾತ್ರ ಸೇರಿಸಿಕೊಳ್ಳುವುವು. ಉದಾ: ವೈದ್ಯಕೀಯ ಕಾಲೇಜು ಶಿಕ್ಷಣಕ್ಕೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಇತ್ಯಾದಿ ವಿಜ್ಞಾನ ವಿಭಾಗಗಳನ್ನು ಅಭ್ಯಾಸ ಮಾಡಿರುವುದುಂಟು. ಇತರ ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಗುಣಶೀಲಗಳಿಗೂ ಮಹತ್ತ್ವ ಕೊಟ್ಟು ಪ್ರವೇಶಾವಕಾಶದ ನಿಯಮಗಳನ್ನು ರೂಪಿಸುವುದುಂಟು: ಅದಕ್ಕಾಗಿ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ವಿದ್ಯಾರ್ಥಿಯ ಗುಣ, ವ್ಯಕ್ತಿತ್ವ, ಶಿಕ್ಷಣ ಕಾರ್ಯಗಳಲ್ಲೂ ಆಟಪಾಟಗಳಲ್ಲೂ ತೆಳೆದಿರುವ ಆಸಕ್ತಿ ಇತ್ಯಾದಿ ಅಂಶಗಳ ಬಗ್ಗೆ ಕೊಟ್ಟಿರುವ ಯೋಗ್ಯತಾಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಂಟು. ಇನ್ನು ಕೆಲವು ಕಾಲೇಜುಗಳು ಸೆಕೆಂಡರಿ ಶಾಲಾಪರೀಕ್ಷೆಯ ಜೊತೆಗೆ ತಮ್ಮವೇ ಆದ ಪ್ರವೇಶ ಪರೀಕ್ಷೆಗಳನ್ನೂ ನಡೆಸಿ ಅದರಲ್ಲಿ ವಿದ್ಯಾರ್ಥಿ ಪಡೆಯುವ ಫಲಿತಾಂಶವನ್ನು ಆಧಾರ ಮಾಡಿಕೊಳ್ಳುವುದುಂಟು. ಕೆಲವು ವೇಳೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಅಭಿರುಚಿ, ವ್ಯಕ್ತಿತ್ವ, ದೈಹಿಕ ಸ್ವರೂಪ, ಸಂವೇಗ ಜೀವನ (ಭಾವಜೀವನ) ಇತ್ಯಾದಿಗಳನ್ನು ಪರಿಶೀಲಿಸುವುದೂ ಉಂಟು. ಅದಕ್ಕಾಗಿ ಅಭಿರುಚಿ ಪರೀಕ್ಷಣ (ಆಪ್ಟಿಟ್ಯೂಡ್ ಟೆಸ್ಟ್), ಬುದ್ಧಿ ಪರೀಕ್ಷಣ, ಆಸಕ್ತಿ, ಪರೀಕ್ಷಣ, ವ್ಯಕ್ತಿತ್ವ ಪರೀಕ್ಷಣ-ಇತ್ಯಾದಿ ಅಳತೆಯ ಸಾಧನಗಳನ್ನು ಬಳಸುವುದು ಅಮೆರಿಕದಲ್ಲಿ ಹೆಚ್ಚು.
"https://kn.wikipedia.org/wiki/ಕಾಲೇಜು_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ