ಗಾಯತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
==ಗಾಯತ್ರೀ ದೇವಿ==
ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಈ ದೇವತೆಯ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯಯನ್ನು ಎಲ್ಲರು ಸ್ವೀಕರಿಸಿದ್ದಾರೆ.
 
ಯಾಗದೀಕ್ಷಾಕಾಲದಲ್ಲಿ ಬ್ರಹ್ಮ ತನ್ನ ಪತ್ನಿಯನ್ನು ಯಜ್ಞವಾಟಿಕೆಗೆ ಬರುವಂತೆ ಹೇಳಿಕಳುಹಿಸುತ್ತಾನೆ. ತನ್ನ ಒಡನಾಡಿಯರಿಗಾಗಿ ಕಾಯುತ್ತಿದ್ದ ಆಕೆ ಸಕಾಲಕ್ಕೆ ಬರದೆ ಮುಹೂರ್ತ ಮಿಂಚುತ್ತ ಬರಲು ಕುಪಿತನಾದ ಬ್ರಹ್ಮ ಬೇರೆ ಪತ್ನಿಯನ್ನು ಕರೆತರುವಂತೆ ಇಂದ್ರನಿಗೆ ಆಜ್ಞಾಪಿಸುತ್ತಾನೆ. ಇಂದ್ರ ಕೂಡಲೇ ಭೂಲೋಕಕ್ಕೆ ಹೋಗಿ ಒಬ್ಬ ಸುಂದರಿಯನ್ನು ಕರೆತರಲು ಆಕೆಗೆ ಗಾಯತ್ರೀ ಎಂದು ಹೆಸರಿಟ್ಟು ಗಾಂಧರ್ವ ವಿಧಿಯಿಂದ ಬ್ರಹ್ಮ ವಿವಾಹವಾಗುತ್ತಾನೆ. ಹೀಗೆಂದು ಒಂದು ಪೌರಾಣಿಕ ಕತೆ ಇದೆ.
 
ಕೆಂಪು ಬಿಳುಪು ಹಳದಿ ನೀಲ ಬಣ್ಣಗಳ ಕಾಂತಿಯಿಂದ ಕೂಡಿರುವವಳೂ ಉಜ್ವಲವಾದ ಮೂರು ಕಣ್ಣುಳ್ಳವಳೂ ಕೆಂಪು ವಸ್ತ್ರವನ್ನು ಧರಿಸಿರುವವಳೂ ವರದಾಭಯ ಹಸ್ತಗಳನ್ನುಳ್ಳವಳೂ ಶಂಖಚಕ್ರಧಾರಣಿಯೂ ಕೈಯಲ್ಲಿ ಕಪಾಲ ಅಂಕುಶ ಜಪಮಾಲೆ ಕಮಲಗಳನ್ನು ಹಿಡಿದಿರುವವಳೂ ಕುಮಾರಿಯೂ ಆಗಿರುವಂತೆ ಗಾಯತ್ರಿ ಸ್ವರೂಪವನ್ನು ಧ್ಯಾನಿಸಬೇಕು. ವೀರಶೈವ ಪಂಥದ ಕೆರೆಯ ಪದ್ಮರಸನ ದೀಕ್ಷಾಬೋಧೆ ಎಂಬ ಗ್ರಂಥದ ದ್ವಿತೀಯ ಸ್ಥಲದಲ್ಲಿ ಇನ್ನು ಕೇಳು ಗಾಯತ್ರಿಯ ನಿಜಮಂ ಸನ್ನುತ ಭೂತಿರುದ್ರಾಕ್ಷಿಗಳಿರಮಂ ನಿಟಿಲ ತ್ರಿಪುಂಡ್ರಾಂಕಿತಯುಕ್ತಾಂಗಿಯ ಜಟೆರುದ್ರಾಕ್ಷಭಸಿತ ಸರ್ವಾಂಗಿಯ ಅಕ್ಷಮಾಲೆ ಜಪಕರದ ಕಮಂಡಲ ನಿಕ್ಷೇಪಿನಿಸಿದಾಗಮಹೃನ್ಮಂಡಲ ಋಗ್ಯಜುಸ್ಸಾಮಂ ನಿಜಮೂರುತಿಯ ಭರ್ಗಭಕ್ತಿಯ ನಿಷ್ಠೆಯ ಮನದರ್ಥಿಯ ಇದು ಗಾಯತ್ರಿಯ ನಿಜದಾಕಾರಂ - ಎಂದು ಗಾಯತ್ರಿಯ ಸ್ವರೂಪದ ವಿವರಣೆ ಇದೆ. ಗಾಯತ್ರೀಯ ಅಕ್ಷರಗಳಲ್ಲಿ ಒಂದೊಂದು ಅಕ್ಷರವೂ ಒಂದೊಂದು ಶ್ಲೋಕದಲ್ಲಿ ರುವುದನ್ನು ಶ್ರೀಮದ್ವಾಲ್ಮೀಕಿ ರಾಮಾಯಣದಿಂದ ಉದ್ಧರಿಸಿ 24 ಶ್ಲೋಕಗಳುಳ್ಳ ಈ ಗ್ರಂಥ ಭಾಗಕ್ಕೆ ಗಾಯತ್ರೀರಾಮಾಯಣ ಎಂದು ಅಂಕಿತ ಮಾಡಿದ್ದಾರೆ. ಇದನ್ನು ಪ್ರತಿದಿನ ಪಠಿಸುವುದರಿಂದ ಸರ್ವಪಾಪಗಳೂ ನಶಿಸುತ್ತವೆ ಎಂದು ಫಲಶ್ರುತಿ.
 
;ಇನ್ನೂ ಹೆಚ್ಚಿನ ಅರ್ಥಕ್ಕೆ-> [[ಗಾಯತ್ರೀ ಪುಟ೨]]<- ಕ್ಲಿಕ್ ಮಾಡಿ
* [[ಸಂಧ್ಯಾವಂದನೆ ಮಂತ್ರ]] ದಲ್ಲಿ ಈ ಮಂತ್ರ ಪ್ರಧಾನವಾದುದು.
"https://kn.wikipedia.org/wiki/ಗಾಯತ್ರಿ" ಇಂದ ಪಡೆಯಲ್ಪಟ್ಟಿದೆ