ಬಾನುಲಿ ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
===ರೇಡಿಯೋದಲ್ಲಿ ಬಾನುಲಿ ನಾಟಕಗಳ ಇತಿಹಾಸ===
ಬಾನುಲಿ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ತೀರ ಹೊಸದು. ಗ್ರಂಥಸ್ಥ ಬಾನುಲಿ ನಾಟಕಗಳು ಕನ್ನಡದಲ್ಲಿ ಅತ್ಯಂತ ಕಡಿಮೆ. ನಮ್ಮ ದೇಶದಲ್ಲಿ [[ಆಕಾಶವಾಣಿ]] ಪ್ರಾರಂಭವಾದ ಸಂದರ್ಭದಲ್ಲಿ ಇತರ ಭಾಷೆಗಳಿಗೆ ಹೋಲಿಸಿ ನೋಡಿದಾಗ ಕನ್ನಡದಲ್ಲಿ ಬಾನುಲಿ ನಾಟಕಗಳ ಪ್ರಸಾರ ತೀರ ವಿರಳ. ತತ್ಪೂರ್ವದಲ್ಲಿ ಮೈಸೂರು ಆಕಾಶವಾಣಿ ಸ್ವತಂತ್ರವಾಗಿ ಪ್ರಸಾರ ಮಾಡುತ್ತಿತ್ತು.
ಪಾಶ್ಚಾತ್ಯ ಬಾನುಲಿ ನಾಟಕದ ಇತಿಹಾಸವನ್ನು ವಿವೇಚಿಸುವಾಗ ನಾವು ಮುಖ್ಯವಾಗಿ ವಾಯ್ಸ್ ಆಫ್ [[ಅಮೆರಿಕಾ]] ಹಾಗೂ ಬಿ.ಬಿ.ಸಿ ಪ್ರಸಾರಗಳನ್ನು ಗುರಿಯಾಗಿಟ್ಟು ಅವಲೋಕನ ಮಾಡಬಹುದಾಗಿದೆ. ಅರ್ಬೆಬರ್ಡ್ ಮ್ಯಾಕ್‍ಲೀಷ್‍ನ ಫಾಲ್ ಆಫ್ ದಿ ಸಿಟಿ ಎಂಬ ನಾಟಕದಿಂದ ಬಾನುಲಿ ನಾಟಕ ರೂಪ ತಾಳಿತು ಎಂದು ಹೇಳುತ್ತಾರೆ.ಈ ನಾಟಕ ಪ್ರಸಾರವಾದುದು 1937ರಲ್ಲಿ. ಈ ಬಾನುಲಿ ನಾಟಕ ತನ್ನ ವಿಶಿಷ್ಟತೆಯಿಂದ ಪ್ರಸಾರ ನಾಟಕ ಬೆಳೆಯಲು ಹೊಸ ಮಾರ್ಗವಾಯಿತು. ಅಲ್ಲದೇ ಪ್ರಸಾರ ನಾಟಕಕ್ಕೂ ರಂಗನಾಟಕಕ್ಕೂ ಇರುವ ಭೇದವನ್ನು ನಿಚ್ಚಳವಾಗಿ ತೋರಿಸಿಕೊಟ್ಟಿತು.ಬಿ.ಬಿ.ಸಿ ಯಿಂದ ಪ್ರಸಾರವಾದ ಟಾಯರಾನ್ ಗಥ್ರೀ ಅವರ 'ದಿ ಫ್ಲವರ್ಸ್ ಆರ್ ನಾಟ್ ಫಾರ್ ಯು ಟು ಪಿಕ್' ಎಂಬ ನಾಟಕದ ತಂತ್ರ ಚುರುಕಾದದ್ದು.. ಆರ್ಸನ್ ವೆಲ್ಸ್, ಫೆಲಿಕ್ಸಸ ಫೆಲ್‍ತನ್ , ನಾಲ್‍ಗೀಲ್ ಗುಡ್ ಮೊದಲಾದ ಶ್ರೇಷ್ಠ ದರ್ಜೆಯ ನಿರ್ದೇಶಕರನ್ನು ಇಲ್ಲಿ ಹೆಸರಿಸಬಹುದಾಗಿದೆ. ಸಾತ್ರ್ರ್, ಓನೀಲ್ , ಮಾಮ್, ಆಸ್ಬರ್ನ್ ಮೊದಲಾದ ಹೆಸರಾಂತ ರಂಗಭೂಮಿಯ ನಾಟಕಕಾರರ ಕೃತಿಗಳನ್ನು ಈ ನಿರ್ದೇಶಕರು ಪ್ರಸಾರಕ್ಕೆ ಸೂಕ್ತವಾಗುವ ರೀತಿ ಅಳವಡಿಸಿ ಬಿತ್ತರಿಸಿದ್ದಾರೆ<ref,[http://news.bbc.co.uk/2/hi/entertainment/6124558.stm The Archers airs 15,000th episode]</ref> 
 
===ರೇಡಿಯೋ ನಾಟಕಗಳ ಲಕ್ಷಣ===
ಸಂಗೀತರೂಪಕಗಳು, ಗೇಯನಾಟಕಗಳು ಬಾನುಲಿ ನಾಟಕಗಳಂತೆ ರೇಡಿಯೋದ ಪ್ರಕಾರದ ಮುಖ್ಯ ಅಂಗಗಳಾಗಿವೆ.ಭಾರತೀಯ ಹಬ್ಬಗಳನ್ನು ಕುರಿತು ಲೋಕಗೀತೆಗಳನ್ನು, ಲೋಕಕತೆಗಳನ್ನು ಸಂಗ್ರಹಿಸಿ ಇವುಗಳ ಮಹತ್ವಗಳನ್ನು ತಿಳಿಸಿ ಹೇಳುವ ಸಂಗೀತ ರೂಪಕಗಳು ಒಂದು ಪ್ರಕಾರವಾದರೆ ಯಾವ ವಾಚ್ಯಶಬ್ಧವೂ ಇಲ್ಲದೇ ಕೇವಲ ಗೀತಗಳ ಮೂಲಕವೆ ಹೆಣೆಯಲ್ಪಟ್ಟ ವಿಶೇಷ ಶುದ್ಧ ಸಂಗೀತ ನಾಟಕ ಗೇಯನಾಟಕವೆಂದು ಕರೆಯಲ್ಪಡುತ್ತದೆ. ಗೇಯನಾಟಕದ ಮೊದಲ ಪ್ರಯೋಗ ನಡೆದುದು ಕನ್ನಡದ ಮಟ್ಟಿಗಾದರೂ [[ಶಿವರಾಮ ಕಾರಂತ]]ರಿಂದ. ರಂಗಭೂಮಿಯ ಮೇಲೆ ಮೊದಲು ಯಶಸ್ವಿಯಾಗಿ ಪ್ರಯೋಗಿಸಿ ಆಮೇಲೆ ರೇಡಿಯೋದಲ್ಲಿ ಅದನ್ನು ಸಾದರಪಡಿಸಲಾಯಿತು. ಕಿಸಾಗೌತಮಿ, ಸೋಮಿಯ ಭಾಗ್ಯ, ಮದುವೆಗಿಂತ ಮಸಣವೇ ಲೇಸು ಯಶಸ್ವಿಯಾದುವು.ಕಾರಂತರ 'ನದೀ ದರ್ಶನ ಮಾತ್ರ' ಶಬ್ದ-ವಾದ್ಯಗಳಲ್ಲದೇ ಕೇವಲ ವಾದ್ಯ ಸಂಗೀತದಿಂದ ನಿರೂಪಿಸಲ್ಪಟ್ಟ ಸಾಂಕೇತಿಕ ಗೇಯನಾಟಕ.
"https://kn.wikipedia.org/wiki/ಬಾನುಲಿ_ನಾಟಕ" ಇಂದ ಪಡೆಯಲ್ಪಟ್ಟಿದೆ