ಎಸ್ಕಿಮೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
{{under construction}}
 
ಪೂರ್ವದಲ್ಲಿ [[ಗ್ರೀನ್‍ಲ್ಯಾಂಡ್|ಗ್ರೀನ್‍ಲ್ಯಾಂಡ್]] ಮತ್ತು ಲ್ಯಾಬ್ರಡಾರ್ಗಳಿಂದ ಹಿಡಿದು ಪಶ್ಚಿಮದಲ್ಲಿ ಬೇರಿಂಗ್ ಸಮುದ್ರದವರೆಗೂ ಬೇರಿಂಗ್ ಜಲಸಂಧಿಯ ಸಮೀಪದ [[ಸೈಬೀರಿಯಾ|ಸೈಬೀರಿಯನ್]] ಪ್ರದೇಶದಲ್ಲೂ ಇರುವ 9660 ಕಿಮೀ ಉತ್ತರ ಕರಾವಳಿಯುದ್ದಕ್ಕೂ ವಾಸಿಸುವ ಜನ<ref>Kaplan, Lawrence. [http://www.uaf.edu/anlc/resources/inuit-eskimo/ ಅಲಾಸ್ಕ ಮೂಲಭಾಷಾ ಕೇಂದ್ರ]</ref>,<ref>[http://www.oxforddictionaries.com/definition/english/Eskimo ಆಕ್ಸ್‍ಫರ್ಡ್ ನಿಘಂಟು]</ref>. ಹಡ್ಸನ್ ಕೊಲ್ಲಿ ಮತ್ತು ದಕ್ಷಿಣ [[ಅಲಾಸ್ಕ|ಅಲಾಸ್ಕದ]] ಮೂಲನಿವಾಸಿಗಳಾದ ಇವರು ಕಾಲಕ್ರಮದಲ್ಲಿ ಪುರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಹಬ್ಬಿದರು. ಪ್ರಪಂಚ ಜನಾಂಗಗಳ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದಿರುವ ಈ ಜನರ ಸಂಸ್ಕೃತಿ, ಭಾಷೆ ಮತ್ತು ಭೌತಲಕ್ಷಣಗಳು ಇತ್ತೀಚಿನವರೆಗೂ ಈ ವಿಸ್ತಾರ ಪ್ರದೇಶದ ಉದ್ದಕ್ಕೂ ಒಂದೇ ರೀತಿಯಾಗಿದ್ದುವು. ಇಷ್ಟೊಂದು ವಿಸ್ತಾರವಾದ ಭೂಪ್ರದೇಶವನ್ನು ಇವರು ಆವರಿಸಿಕೊಂಡಿದ್ದರೂ ಇವರ ಸಂಖ್ಯೆ ಅರುವತ್ತು ಸಾವಿರವನ್ನೂ ಮೀರಿಲ್ಲದಿರುವುದು ಆಶ್ಚರ್ಯಕರ. ಯಾವ ಕಾಲದಲ್ಲೂ ಇವರ ಸಂಖ್ಯೆ ಇದಕ್ಕಿಂತ ಹೆಚ್ಚಿರಲಿಲ್ಲವೆಂದು ಹೇಳಲಾಗಿದೆ. [[ಯುರೋಪ್|ಐರೋಪ್ಯರಿಂದ]] ಬಳುವಳಿಯಾಗಿ ಬಂದ ಸಿಡುಬು, ದಡಾರ, ಇನ್ ಪ್ಲುಯೆಂಜಗಳಿಂದ ಜನ ಒಟ್ಟೊಟ್ಟಿಗೆ ಸತ್ತರೂ ಹೀಗೆ ತೆರವಾದ ಜನಸಂಖ್ಯೆ ಮತ್ತೆ ಮತ್ತೆ ಕೂಡಿಕೊಂಡಿದೆ. ಈಚೆಗೆ ಇದು ಶೀಘ್ರವಾಗಿ ಬೆಳೆಯುತ್ತಿದೆ.
 
"https://kn.wikipedia.org/wiki/ಎಸ್ಕಿಮೊ" ಇಂದ ಪಡೆಯಲ್ಪಟ್ಟಿದೆ