ತೀ. ನಂ. ಶ್ರೀಕಂಠಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
 
==ನೌಕರಿ, ಹಲವಾರು ನಗರಗಳಲ್ಲಿ==
ಇಂಟರ್ಮೀಡಿಯೇಟ್ ಕಾಲೇಜ್ ಬೆಂಗಳೂರಿಗೆ ವರ್ಗ. ಮತ್ತೆ, ೧೯೫೭ ರಲ್ಲಿ ಮೈಸೂರು. ಮೈಸೂರು ಸಂವಿಧಾನ ಪರಿಷತ್ ನಲ್ಲಿ ಭಾಷಾಂತರಕಾರರಾಗಿ. ದಾವಣಗೆರೆ ಕಾಲೇಜ್ ನಲ್ಲಿ ಸೂಪೆರಿನ್ಟೆಂಡೆಂಟ್ ಆಗಿ, ಕೋಲಾರ ಕಾಲೇಜ್, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ. ಮೈಸೂರು ಮಹಾರಾಜ ಕಾಲೇಜ್ ಕನ್ನಡ ಪ್ರೊಫೆಸರ್ ಆಗಿ ನಿಯುಕ್ತರಾದರು.ಸಾಹಿತ್ಯೋಪಾಸನೆಗೆ ತಮ್ಮನ್ನು ತೆತ್ತುಕೊಂಡಿದ್ದರಿಂದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೂರನೇಯ ಸ್ಥಾನ ಮಾತ್ರ ದೊರೆಯಿತಾದರೂ ಅದರಿಂದ ಕಂದಾಯ ಇಲಾಖೆಯ ಪೋಬೆಷ್‍ನಲ್ ಹುದ್ದೆ ಸಿಕ್ಕಿ ಶ್ರೀರಂಗಪಟ್ಟಣಕ್ಕೆ ನೌಕರಿಯ ಮೇಲೆ ಹೋಗಬೇಕಾಯಿತು. ಆದರೆ ಎರಡೇ ತಿಂಗಳಲ್ಲಿ ಅದನ್ನು ತ್ಯಜಿಸಿ ಮೈಸೂರಿನ ಇಂಟರ್‍ಮಿಡಿಯೇಟ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಹಿಂದಕ್ಕೆ ಬಂದರು. 1929ರಲ್ಲಿ ಪರೀಕ್ಷೆಗೆ ಕುಳಿತು ಇಂಗ್ಲೀಷ್ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದರು, ಅಲ್ಲದೆ ತಮ್ಮ ಪ್ರೀತಿಯ ಮಾತೃ ಸಂಸ್ಥೆ ಮಹಾರಾಜ ಕಾಲೇಜಿಗೆ ವರ್ಗವೂ ಆಯಿತು. ಅದೇ ವರ್ಷ ತಮ್ಮ ತಂದೆಯನ್ನು ಕಳೆದುಕೊಂಡ ದೌರ್ಭಾಗ್ಯವೂ ಅವರದಾಯಿತು. ಅಷ್ಟರಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ ವ್ಯಾಸಂಗವೂ ಪ್ರಾರಂಭವಾದುದರಿಂದ ಅಧ್ಯಾಪಕ ವೃತ್ತಿಗೆ ಕನ್ನಡ ಎಂ.ಎ ಪರೀಕ್ಷೆಗೂ ವ್ಯಾಸಂಗ ಮಾಡಿ 1930ರಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಪದವಿ ಪ್ರದಾನಪ್ರಧಾನ ಸಮಾರಂಭದಲ್ಲಿ ಮೂರು ಸುವರ್ಣ ಪದಕಗಳು ಬಂದವು. 1936ರಲ್ಲಿ ಬಿ.ಎ ಪರೀಕ್ಷೆ ಇನ್ನು ಒಂದು ತಿಂಗಳಿದೆ ಎನ್ನುವಾಗ ತೀ.ನಂ.ಶ್ರೀ ಯವರಿಗೆ ಜಯಲಕ್ಷಿ ಅವರೊಂದಿಗೆ ಮದುವೆ ಆಯಿತು. ವಧು ತಾಲೂಕು ಕೇಂದ್ರ ತುರುವೇಕೆರೆಯವರು. ಬಾಲ್ಯ ವಿವಾಹವೆಂದೇ ಎನ್ನಬಹುದಾದ ಇದರಿಂದ ಅವರ ಓದು ಸಾಹಿತ್ಯಾಭ್ಯಾಸಿಗಳಿಗೆ ದಕ್ಕೆಯೇನುಧಕ್ಕೆಯೇನು ಆದಂತೆ ಕಾಣಲಿಲ್ಲ. ಅವರ ಹಿರಿಯ ಮಗಳು 1931ರಲ್ಲಿ ಹುಟ್ಟಿದಳು. 1932ರಲ್ಲಿ ಅವರ ಪೆತಮ ಕೃತಿ ‘ಓಲುಮೆ’ ಪ್ರಕಟವಾಯಿತು. 1936ರಲ್ಲಿ ಎರದನೇಯಎರಡನೇಯ ಮಗಳು ನಾಗರತ್ನನ, 1942ರಲ್ಲಿ ಮಗ ನಾಗಭೂಷಣ್ ಜನಿಸಿದರು. ಈ ಅವಧಿಯಲ್ಲೇ ಅವರಿಗೆ ಎರಡು ಗಂಡು ಮಕ್ಕಳು ಜನಿಸಿ ಶೈಶವದಲ್ಲಿ ತೀರಿಕೊಂಡಿದ್ದವು. ಇದ್ದ ಒಬ್ಬಳೆ ತಂಗಿ ಸಾವಿತ್ರಮ್ಮ ಗುಣ ಹೊಂದದೆ ಮಾನಸಿಕ ಅಸ್ವಸ್ಥತೆಯಿಂದ ನರಳುತಿದ್ದರು. 1943ರಲ್ಲಿ ತೀ.ನಂ.ಶ್ರೀ ಅವರಿಗೆ ಉಪ ಪ್ರಾಧ್ಯಾಪಕರಾಗಿ ಭಡ್ತಿ ದೊರೆತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ ಅವರ ಸೋದರತ್ತೆ ಲಕ್ಷೀದೇವಮ್ಮನವರು ತೀರಿಕೊಂಡರು. ಅನಂತರ ನಾಲ್ಕು ತಿಂಗಳಲ್ಲೆ ಹಿರಿಯ ಮಗಳು ವಿಶಾಲಾಕ್ಷಿ ತನ್ನ 12 ವಯಸ್ಸಿನಲ್ಲಿ ತೀರಿಕೊಂಡಳು ಹೀಗಾಗಿ ಅವರ ಬದುಕಿನ ತಕ್ಕಡಿ ಸುಖಕಿಂತಲೂ ದುಃಖದ ಕಡೆಗೆ ಹೆಚ್ಚು ತೂಗಿದಂತೆ ಕಾಣುತ್ತದೆ.
1943ರಲ್ಲಿ ಉಪಪ್ರಾಧ್ಯಾಪಕರಾಗಿ ದೊರೆತ ಬಡ್ತಿಯ ಜೊತೆಗೆ ಅವರಿಗೆ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿಗೆ ವರ್ಗವೂ ಆಯಿತು. ಮತ್ತೆ ಅವರು 1957ರ ವರೆಗೆ ಮೈಸೂರಿಗೆ ಹಿಂತಿರುಗುವುದಾಗಲಿಲ್ಲ. ಬೆಂಗಳೂರಿನಲ್ಲಿ ಪ್ರೋ. ಮೂರ್ತಿರಾವ್ ಮತ್ತು ಪೂ.ತಿ. ನರಸಿಂಹಾಚಾರ್ ಅವರುಗಳ ಜೊತೆ ಸಿಕ್ಕಿತು. ಮಾಸ್ತೀ ಅವರಂತಹ ಲೇಖಕರ ಹತ್ತಿರ ಸಂಪರ್ಕ, ಸ್ನೇಹಗಳು ದೊರೆತವು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳೇ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಉಂಟಾಯಿತು. ಈ ನಡುವೆ 1948ರ ನವೆಂಬರ್‍ನಿಂದ 1950ರ ಜನವರಿವರೆಗೆ ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಅವರು ಭಾಷಾಂತಕಾರರಾಗಿ ಕೆಲಸ ಮಾಡಿದರು. 1948 ಮತ್ತು 1950ರಲ್ಲಿ ಎರಡು ಸಲ ಕೆಲವೇ ತಿಂಗಳು ಕಾಲ ದಾವಣಗೆರೆಯ ಕಾಲೇಜಿನಲ್ಲಿ ಸೂಪರ್ ಇಂಟಿಂಡೆಮಟ್ ಆಗಿ ಕೆಲಸ ಮಾಡಿ ಬರಬೇಕಾಯಿತು. 1951ರಲ್ಲಿ ಕೆಲವು ತಿಂಗಳುಗಳ ಕಾಲ ಕೋಲಾರ ಕಾಲೇಜಿನ ಸೂಪರ್ ಇಂಟಿಂಡೆಮಟ್‍ಆಗಿ ಇದ್ದು ಬಂದರು. 1952ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ¸]ತೀನಂಶ್ರಿ ಅವರ ಸೇವೆಯನ್ನು ಎರವಲಾಗಿ ಪಡೆಯಿತು. ಕರ್ನಾಟಕ ವಿಶ್ವವಿದ್ಯಾನಿಲಯದ ಪಥಮ ಕನ್ನಡ ಪ್ರಾಧ್ಯಾಪಕರಾಗಿ ಅಲ್ಲಿಗೆ ಹೋದವರು ಕನ್ನಡ ಅಧ್ಯಯನಕ್ಕೆ ಬೇಕಾದ ತಳಹದಿಯನ್ನು ಹಾಕಿದರು. ಆಗ ಕನ್ನಡ ಎಂ.ಎ ಓದುವ ವಿದ್ಯಾರ್ಥಿಗಳ ಕೊರತೆ ಇದ್ದತಾದರು ಆ ಅವಧಿಯಲ್ಲಿ ಅವರ ಶಿಶ್ಯರಾಗಿದ್ದ ಕೆಲವರು ಈಗ ಭಾಷಾ ವಿಜ್ಞಾನಿಗಳಾಗಿದ್ದಾರೆ. ಪ್ರಸಿದ್ಧ ಲೇಖಕರೂ ಆಗಿದ್ದಾರೆ. ಧಾರವಾಡದ ಅವರ ಸೇವೆಯ ಅವಧಿ ಇನ್ನೂಂದು ಕಾರಣಕ್ಕೆ ಮುಖ್ಯವಾಯಿತು. ಪೂಣೆಯ ಡೆಕೆನ್ ಕಾಲೇಜಿನ ಭಾಷಾ ವಿಜ್ಞಾನ ಪೀಠದೊಂದಿಗೆ ಅಬರಿಗೆ ಸಂಪರ್ಕ ಬೆಳೆಯಿತು. ಆ ಸಂಸ್ಥೆ ನಡೆಯುತ್ತದ್ದ ಭಾಷಾ ಶಾಸ್ತ್ರದ ಬೇಸಿಗೆಯ ಶಾಲೆಯಲ್ಲಿ ಅಧ್ಯಾಪಕರಾಗಿ ಭಾಗವಹಿಸಿದರು. ಪ್ರಸಿದ್ಧರಾದ ಪ್ರಾಚ್ಯ ಮತ್ತು ಪಾಶ್ಚಾತ್ಯ ಭಾಷಾ ವಿಜ್ಞಾನಿಗಳಾದ ಡಾ. ಸುನೀತ್ ಕುಮಾರ್ ಚಟಾರ್ಜಿ, ಕ್ಯಾಲಿಫೂನಿಯಾ ವಿವಿ ನಿಲಯದ ಡಾ. ಎಂ.ಬಿ ಎಮೆನೊ ಮೊದಲಾದವರಪರಿಚಯ ಸ್ನೇಹಗಳು ಅಲ್ಲಿ ದೊರೆತವು.ಇದೇ ಸಂದರ್ಭದಲ್ಲಿ ಅಮೇರಿಕಾದ ರಾಟ್ ಫೆಲಾರ್ ಪ್ರತಿಷ್ಠಾಬದ ವೇತನದ ಮೇಲೆ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. 1955-56ರಲ್ಲಿ 8 ತಿಂಗಳ ಕಾಲ ಆಮೇರಿಕಾದ ಮಿಶಿಗನ್ ಮತ್ತು ಪೆನ್ಸಿಲ್ವೇನಿಯ ವಿವಿ ನಿಲಯಗಳಲ್ಲಿ ಅಧ್ಯಾಯನ ಮಾಡಿ ಬಿಡುವಿನ ವೇಳೆಯಲ್ಲಿ ಆಮೇರಿಕಾದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರು. ಒಂದು ತಿಂಗಳು ಇಂಗ್ಲೆಂಡಿನಲ್ಲಿ ಕಳೆದು, ಫ್ರಾನ್ಸ್, ಇಟಲಿ ಮೊದಲಾದ ಯುರೋಪಿನ ರಾಷ್ಟ್ರಗಳಲ್ಲಿ ಒಂದು ತಿಂಗಳು ಪ್ರವಾಸ ಮಾಡಿ ಸ್ವದೇಶಕ್ಕೆ ಮರಳಿದರು. ಧಾರವಾಡದಲ್ಲಿ ಅವರ ಸೇವೆಯ ಅವಧಿ ಮುಗಿದು 1957ರ ಜನವರಿಯಲ್ಲಿ ಶ್ರೀಕಂಠಯ್ಯ ನವರು ಮೈಸೂರಿನ ಮಹಾರಾಜ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಹಿಂದಿರುಗಿದರು. ಅವರು ಮತ್ತೆ ಮಹಾರಾಜ ಕಾಲೇಜಿಗೆ ಬಂದಿದ್ದರಿಂದ ಅಲ್ಲಿನ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳ ಮೈಯಲ್ಲಿ ನವಚೈತನ್ಯ ಹರಿಯಿತು. ಆಗ ತಾನೆ ಡಾ. ಕೆ.ವಿ ಪುಟ್ಟಣ್ಣಪ್ಪನವರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ಮೈಸೂರು ವಿವಿ ನಿಲಯದ ಉಪ ಕುಲಪತಿಯ ಸ್ಥಾನಕ್ಕೆರಿದರು. ಕನ್ನಡದ ಮುಖ್ಯಸ್ಥರ ಸ್ಥಾನ ಶ್ರೀಕಂಠಯ್ಯವನರಿಗೆ ತೆರವಾಗುತ್ತು. ತೀನಂಶ್ರೀ ಅವರು ವಿವಿ ನಿಲಯಕ್ಕೆ ಮರಳಿದುದರಿಂದ ಆದ ಸಂತೋಷವನ್ನು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಓಲಗದ ಸ್ವಾಗತದಲ್ಲಿ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಪಾಠ ಹೇಳಿತ್ತಾ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸುತ್ತಾ ಮೂರು ವರ್ಷಗಳು ಕಳೆದು ಕನ್ನಡ ನಿಘಂಟಿನ ಮೊದಲ ಪುಟಗಳ ಮಾದರಿ ಈ ಅವಧಿಯಲ್ಲಿ ಪ್ರಕಟವಾಯಿತು. ಅಷ್ಟರಲ್ಲಿ ಪದವಿ ತರಗತಿಗಳಿಂದ ಸ್ನಾತಕೊತ್ತರ ಅಧ್ಯಯನ ಸಂಶೋಧನ ವಿಭಾಗಗಳನ್ನು ಪ್ರತ್ಯೇಕಿಸುವ ಯೋಜನೆಯ ಅನ್ವಯ ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮೊದಲ ಪ್ರಾಧ್ಯಾಪಕರಾಗಿ ತೀನಂಶ್ರೀ ಅವರು ಮಹಾರಾಜ ಕಾಲೇಜಿನಲ್ಲಿ ಇದ್ದ ಸ್ನಾತಕೋತ್ತರ ವಿಭಾಗವನ್ನು ಮಾನಸ ಗಂಗೋತ್ರಿಗೆ ಸಾಗಿಸಿಕೊಂಡು ಹೋದರು. ಅಲ್ಲಿ ಕನ್ನಡ ಅಧ್ಯಯನ ಕೇಂದ್ರದ ತಳಹದಿಯನ್ನು ಭದ್ರ ಮಾಡಿ 62ನೇ ಮಾರ್ಚ್ ತಿಂಗಳ ಅಂತ್ಯದಲ್ಲಿ, ಮೂವತ್ನಾಕು ವರ್ಷಗಳ ಸೇವೆಯ ನಂತರ ತೀನಂಶ್ರೀ ನಿವೃತ್ತರಾದರು. ಆದರೆ ಅವರಿಗೆ ಬಿಡುವು ಸಿಕ್ಕಲಿಲ್ಲ. ಯುಜಿಸಿ ಪ್ರಾಧ್ಯಾಪಕರಾಗಿ ಅಧ್ಯಯನ ಕೇಂದ್ರದಲ್ಲಿ ಕೆಲಸವನ್ನು ಮುದುವರೆಸುವುದರ ಜೊತೆಗೆ ಕನ್ನಡ ನಿಘಂಟಿನ ಕೆಲೆಸದಲ್ಲಿ ತಮ್ಮ ಬಹು ಮಟ್ಟಿನ ವೇಳೆಯನ್ನು ಕಳೆದರು. 1958ರಲ್ಲಿ ಅವರು ನಿಘಂಟು ಸಮಿತಿಯ ಅಧ್ಯಕ್ಷರೂ ಆಗಿದ್ದರು. 1962ರಲ್ಲಿ, ತಾವು ನಿವೃತ್ತಿ ಹೊಂದಿದ ವರ್ಷ ಮೈಸೂರಿನಲ್ಲಿ ಸಿಐಟಿಬಿ ಮೂಲಕ ಮನೆಯೊಂದನ್ನು ಕೊಂಡು ಕೊಂಡರು.
 
==ಮೈಸೂರಿನ, ಓರಿಯೆಂಟಲ್ ರಿಸರ್ಚ್ ಶಾಖೆಯಲ್ಲಿ==
"https://kn.wikipedia.org/wiki/ತೀ._ನಂ._ಶ್ರೀಕಂಠಯ್ಯ" ಇಂದ ಪಡೆಯಲ್ಪಟ್ಟಿದೆ