ತೀ. ನಂ. ಶ್ರೀಕಂಠಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೫ ನೇ ಸಾಲು:
‘ನಂಟರು’ (ಮೊದಲ ಮುದ್ರಣ ೧೯೬೨) ತಡವಾಗಿ ಪ್ರಕಟವಾದ ಪ್ರಬಂಧಗಳ ಸಂಕಲನ. ತೀ.ನಂ.ಶ್ರೀ ಅವರು ‘ಪ್ರಬಂಧವೆನ್ನುವುದು ಮಂದಶೃತಿಯ ಭಾವಗೀತೆ’ ಎಂದು ತಿಳಿದಿದ್ದರು. ಇಲ್ಲಿನ ಪ್ರಬಂಧಗಳೆಲ್ಲ ಭಾವಗೀತೆಗಳಂತೆ ಮಿನುಗುವ ನುಡಿಚಿತ್ರಗಳಂತೆಯೇ ಇವೆ. ೧೯೭೦ರಲ್ಲಿ ಪ್ರಕಟವಾದ ‘ಬಿಡಿ ಮುತ್ತು’ ಅಮರ ಶತಕ ಮತ್ತು ಇತರ ಕೆಲವು ಪ್ರಸಿದ್ಧ ಸಂಸ್ಕೃತ ಸುಭಾಷಿತ ಸಂಕಲನಗಳಿಂದ ಆರಿಸಿದ ೨೧೫ ಮುಕ್ತಕಗಳ ಕನ್ನಡ ಅನುವಾದ. ಇಲ್ಲಿನ ಸುಂದರ ಸುಭಾಷಿತಗಳು ಕನ್ನಡಕ್ಕೆ ತೀ.ನಂ.ಶ್ರೀಯವರ ಒಂದು ವಿಶೇಷ ಕೊಡುಗೆ.
 
ತೀ.ನಂ.ಶ್ರೀ ಅವರಿಂದ ೧೯೪೨ರಲ್ಲಿ ಪ್ರಥಮ ಮುದ್ರಣಗೊಂಡ ‘ರಾಕ್ಷಸನ ಮುದ್ರಿಕೆ’ ವಿಶಾಖದತ್ತನ ಪ್ರಸಿದ್ಧವಾದ ಸಂಸ್ಕೃತ ನಾಟಕ ‘ಮುದ್ರಾರಾಕ್ಷಸ’ದ ರೂಪಾಂತರ. ಪ್ರೊ. ವೆಂಕಣ್ಣಯ್ಯನವರ ಸಲಹೆಯ ಮೇರೆಗೆ ಈ ಸುಂದರ ಕೃತಿಯನ್ನು ಕನ್ನಡಕ್ಕೆ ತಂದರು. ೧೯೩೯ರಲ್ಲಿ ‘ಕನ್ನಡ ಮಾಧ್ಯಮ ವ್ಯಾಕರಣ’ವನ್ನು ಪ್ರಕಟಿಸಿದರು. ಇದು ಹೊಸಗನ್ನಡ ಭಾಷೆಯ ಅಭ್ಯಾಸ ಮತ್ತು ಬೆಳವಣಿಗೆಗೆ ಪೂರಕವಾಗಿರಲೆಂದು ಉದ್ಧೇಶಿಸಿ ರಚಿತವಾದ ಗ್ರಂಥಗಳಲ್ಲಿ ಅತ್ಯಂತ ಜನಪ್ರಿಯ ಪುಸ್ತಕ. ೧೯೪೧ರಲ್ಲಿ ಪ್ರಕಟಿಸಿದ ‘ಹೆಣ್ಣು ಮಕ್ಕಳ ಪದಗಳು’ ತೀ.ನಂ.ಶ್ರೀ ಅವರು ಸಂಗ್ರಹಿಸಿದ ಜನಪದ ಗೀತೆಗಳ ಭಂಡಾರವಾಗಿದೆ. ೧೯೪೬ರಲ್ಲಿ ಪ್ರಕಟಿಸಿದ ‘ಹರಿಹರ ಕವಿಯ ನಂಬಿಯಣ್ಣ ರಗಳೆ’ ತೀನಂಶ್ರೀ ಅವರು ತಮ್ಮ ವಿದ್ವತ್ತು ಮತ್ತು ಗ್ರಂಥ ಸಂಪಾದನ ಶಾಸ್ತ್ರದ ಜ್ಞಾನಗಳನ್ನು ಧಾರೆಯೆರೆದು ಸಂಪಾದಿಸಿದ ಪ್ರಾಚೀನ ಕನ್ನಡ ಕಾವ್ಯ. ‘ರನ್ನ ಕವಿಯ ಗದಾಯುದ್ಧ ಸಂಗ್ರಹಂ’ ತೀ.ನಂ.ಶ್ರೀ ಸಂಪಾದಿಸಿದ ಇನ್ನೊಂದು ವಿದ್ವತ್ಪೂರ್ಣ ಕೃತಿ. ಅವರು ರಚಿಸಿದ ವಿಮರ್ಶಾ ಕೃತಿಗಳೆಂದರೆ ‘ಪಂಪ’, ‘ಕಾವ್ಯ ಸಮೀಕ್ಷೆ’, ‘ಸಮಾಲೋಕನ’ ಮತ್ತು ಕಾವ್ಯಾನುಭವ’. ಇಂಗ್ಲೀಷಿನಲ್ಲಿ ತೀ.ನಂ.ಶ್ರೀ ಅವರು ಬರೆದ ‘Imagination in Indian Poetics and Other Literary Papers’, ‘Affricates in Kannada Speech and Other Linguistic Papers’ ಅವರ ಬದುಕಿನ ಅವಧಿಯ ನಂತರದಲ್ಲಿ ಪ್ರಕಟಗೊಂಡಿವೆ.ಕಾವ್ಯ ಮೀಮಾಂಸೆ ಅಥವಾ ಭಾಷೆಯನ್ನು ಕುರಿತು ಅವರು ಬರೆಯಬಹುದಾಗಿದ್ದ ಇನ್ನೂ ಮಹತ್ವದ ಕೃತಿಗಳಿಗೆ ಬೇಕಾದ ಸಿದ್ದತೆ ಎಲ್ಲವೂ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳ ಹಸ್ತ ಪ್ರತಿಯಲ್ಲಿ ಉಳಿದುಹೋಗುವುದು ಅನಿವಾರ್ಯವಾಯಿತು. ತೀನಂಶ್ರೀ ಅವರನ್ನು ನೆನೆಯುವವರಿಗೆ ಮೂರು ಕ್ಷೇತ್ರಗಳಲ್ಲಿ ಅವರು ಅದ್ವಿತೀಯವಾಗಿ ನಿಲ್ಲುತ್ತಾರೆ. ಮೊದಲನೆಯದು ಅವರು ಕನ್ನಡದಲ್ಲಿ ಬರೆದು ಬಿಟ್ಟು ಹೋದ 'ಬಾರತೀಯ ಕಾವ್ಯ ಮೀಮಾಂಸೆ’ ಎಂಬ ಉದ್ಧಾಮ ಕೃತಿಯಲ್ಲಿ ಆ ವಿಷಯದಲ್ಲಿ ಅದನ್ನು ಮೀರಿಸುವಂತದ್ದು ಮುಂದೆ ಬಂದಿತೋ ಹೇಳಲಾಗುವುದಿಲ್ಲ. ಎರಡನೆಯದು ಅವರು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಭಾಷಾ ವಿಜ್ಞಾನದ ಅಭ್ಯಾಸಕ್ಕೆ ಮಾಡಿದ ಪೂರ್ವ ಸಿದ್ಧತೆ ಮತ್ತು ಕನ್ನಡ ನಿಘಂಟಿಗೆ ಅವರ ಪರಿಶ್ರಮದ ಕಾಣಿಕೆ.
*1935ರ ಸುಮಾರಿನಿಂದ ಪ್ರಾರಂಭಿಸಿ ಅವರು ಅಲ್ಲಿ ಇಲ್ಲಿ ಬರೆದು ಮಂಡಿಸಿದ ಏಳೆಂಟು ಇಂಗ್ಲೀಷ್ ಲೇಖನಗಳು, ಎಂಟು ಹತ್ತು ಕನ್ನಡ ಲೇಖನಗಳು ಮತ್ತು ಗ್ರಂಥ ರೂಪದಲ್ಲಿ ಬಂದ’ ಕನ್ನಡ ಮಾಧ್ಯಮ ವ್ಯಾಕರಣ ಇವಿಷ್ಟರಿಂದಲೇ ಭಾಷಾಶಾಸ್ತ್ರದ ಅಭ್ಯಾಸಕ್ಕೆ ಅವರು ಒದಗಿಸಿದ ಪೂರ್ವ ಸಿದ್ಧತೆಯನ್ನು ನಿರ್ಣಯಿಸ ಬರುವುದಿಲ್ಲ. ಇದಲ್ಲದೇ ಭಾರತೀಯ ಭಾಷೆಗಳಿಗೆ ಶೀಘ್ರ ಲಿಪಿ, ತಾರೂ(ಟೆಲಿಗ್ರಾಫ್ ಯೋಜನೆ), ಏಕರೂಪದ ಲಿಪಿ ತತ್ವ ಇವುಗಳ ಆವಿಷ್ಕಾರಕ್ಕಾಗ ಭಾರತ ಸರ್ಕಾರದವರು ಹಾಕಿದ ಬೃಹತ್ ಯೋಜನೆಯ ಅಂಗವಾಗಿ ಕನ್ನಡದ ಧ್ವನಿಮಾ, ಆಕೃತಿಮಾಗಳ ಆಗಮನ ಸಂಖ್ಯಾ ಸಾಮರ್ಥ್ಯ ಯೋಜನೆಗೆ ಪುಣೆಯ ಡೆಕ್ಕನ್ ಕಾಲೇಜಿನ ಎಂ.ಆರ್ ರಂಗನಾಥ್ ಅವರನ್ನು ಒಪ್ಪಿಸಿ ಅದಕ್ಕೆ ಮಾರ್ಗದರ್ಶನವನ್ನು ಕೊಟ್ಟರು. ಎಂಟುನೂರು ಪುಟಗಳ ಒಂದು ಲಕ್ಷಕ್ಕೂ ಮಿಕ್ಕ ಪದಗಳಿಂದ ಕೂಡಿದ ಈ ಕೃತಿಪ್ರಕಟವಾದದಂದು ತೀನಂಶ್ರೀ ಅವರ ದೊಡ್ಡದೊಂದು ಕನಸು ನನಸಾಗಿ ಕನ್ನಡಿಗರಿಗೆ ದೊರೆಯಲಿದೆ. ಅವರು ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡಿದಾಗ ಕನ್ನಡವನ್ನು ಆಡಳಿತ ಭಾಷೆಯಾಗಿ ಅಣಿಗೊಳಿಸುವ ಸಾಹಸಕ್ಕೆ ಸಾಕಷ್ಟು ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟಿರಬೇಕು.ತೀ.ನಂ.ಶ್ರೀ ಅವರ ಪ್ರತಿಭೆ, ವಿದ್ವತ್ತುಗಳು, ಅವರ ಆಸಕ್ತಿಯ ಪರಧೀಯೊಳಗೆ ಬರುವ ವಿಷಯಗಳು ಮತ್ತು ಜೀವಿತಾವಧಿಯಲ್ಲಿ ಅವರಿಗಿದ್ದ ಪ್ರಸಿದ್ಧಿಗಳನ್ನು ಪರಿಗಣಿಸಿದರೆ ಅವರು ಬರೆದ ಗ್ರಂಥಗಳ ಸಂಖ್ಯೆ ಕಡಿಮೆ ಎಂದೇ ಎಲ್ಲರ ಅಭಿಪ್ರಾಯ. ಅವರ ಹೆಸರಿನಲ್ಲಿ ಪ್ರಖಟವಾಗಿರುವ ಕೃತಿಗಳ ಸಂಖ್ಯೆ ಹದಿನಾಲ್ಕು ಮಾತ್ರ. ಅವುಗಳಲ್ಲಿ ಮೂರು ಅವರ ಮರಣ ನಂತರ ಪ್ರಕಟವಾದವು. ಇವಲ್ಲದೆ ಇಂಗ್ಲಿಷ್‍ನಲ್ಲಿ ಬರೆದ ಬಾಷೆಭಾಷೆ, ವ್ಯಾಕರಣ ಮತ್ತು ಸಾಹಿತ್ಯಗಳನ್ನು ಕುರಿತು ಬರೆದ ಸುಮಾರು ಹತ್ತೋಂಬತ್ತು ಲೇಖನಗಳು ಗ್ರಂಥ ರೂಪದಲ್ಲಿ ಬರೆದ ವಿವಿಧ ಕಡೆ ಚದುರಿಹೋಗಿವೆ. ಅಲ್ಲದೆ ಭಾಷಾಶಾತ್ರ ಕುರಿತ ಅವರ ಲೇಖನಗಳ ಸಂಗ್ರಹ ಅಚ್ಚೆಗೆ ಸಿದ್ದವಾಗಿದೆ ಎಂದು ತಿಳಿದುಬಂದಿದೆ. ಏಳೆಂಟು ಕನ್ನಡ ಲೇಖನಗಳು ಈಗ ಪ್ರಕಟವಾಗಿರುವ ಯಾವ ಸಂಗ್ರಹದಲ್ಲಿಯೂ ಸೇರದೆ ಉಳಿದುಕೊಂಡಿವೆ. ಗ್ರಂಥರೂಪದಲ್ಲಿ ಪ್ರಕಟವಾಗಿರುವ ಅವರ ಕೃತಿಗಳನ್ನು ಸ್ಥೂಲವಾಗಿ ಸೃಜನಾ, ಶಾಸ್ತ್ರ, ಸಂಪಾದನೆ ಮತ್ತು ವಿಮರ್ಶೆ ಎಂದು ನಾಲ್ಕು ವಿಧವಾಗಿ ಪರಿಶೀಲಿಸಬಹುದು. ಈ ವಿಭಾಗ ಕಾಲಾನುಕ್ರಮವಾಗಿ ಕಾಣದಿರಬಹುದು ಮತ್ತು ಶಾಸ್ತ್ರದೂಳಗೆ ವಿಮರ್ಶೆ, ವಿಮರ್ಶೆಯೊಳಗೆ ಶಾಸ್ರ್ತ ಬೆರೆಯಬಹುದು. ಸೃಜನ ‘ಒಲುಮೆ’ ಇದು ತೀ.ನಂ.ಶ್ರೀಯವರ ಮೊಟ್ಟ ಮೊದಲ ಕೃತಿ.
==ತೀನಂಶ್ರೀ ಕೊಡುಗೆಗಳು==
 
1940 ರಲ್ಲಿ ಭಾರತದ ಸಂವಿಧಾನ ಪರಿಷತ್ತಿನ ಅಧ್ಯಕ್ಷರು ಕರೆದಿದ್ದ ಭಾಷಾ ವಿಜ್ಞಾನಿಗಳ ಸಭೆಯ ಪ್ರತಿನಿಧಿಯಾಗಿ ಅವರು ಭಾರತ ದೇಶದ ಮುಖ್ಯಸ್ಥರಿಗೆ ಸೂಚಿಸಿದ ‘ರಾಷ್ಟ್ರಪತಿ' ಎಂಬ ಹೆಸರು ಅಂಗೀಕೃತವಾಯಿತು. 1957ರಲ್ಲಿ ದೆಹಲಿಯಲ್ಲಿ ನಡೆದ ಪ್ರಾಚ್ಯ ಸಮ್ಮೇಳನದ ದ್ರಾವಿಡ ಸಂಸ್ಕøತಿ ಗೋಷ್ಠಿಯ ಅಧ್ಯಕ್ಷರಾಗಿ, ಗದಗಿನಲ್ಲಿ ನಡೆದ ನಲ್ವತ್ಮೂರನೆಯ ಸಾಹಿತ್ಯ ಸಮ್ಮೇಳನದ ಭಾಷಾ ಬಾಂಧವ್ಯ ಗೋಷ್ಠಿಯ ಅಧ್ಯಕ್ಷರಾಗಿ, 1958 ರಲ್ಲಿ ಮೈಸೂರಿನಲ್ಲಿ ನಡೆದ ಭಾಷಾಶಾಸ್ತ್ರದ ಬೇಸಿಗೆ ಶಾಲೆಯ ಸ್ಥಳೀಯ ನಿರ್ದೇಶಕರಾಗಿ 1960ರಲ್ಲಿ ಅಖಿಲ ಭಾರತ ಭಾಷಾ ವಿಜ್ಞಾನಿಗಳ ಸಂಘದ ಅಧ್ಯಕ್ಷರಾಗಿದ್ದ ಅವರು ಭಾಷಾಶಾಸ್ತ್ರದ ಅಧ್ಯಯನ ಮತ್ತು ಬೆಳವಣಿಗೆಗೆ ಚಾಲನೆಯನ್ನು ಕೊಟ್ಟರು. 1965 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸ್ಥಾನಕ್ಕೆ ಅವರಿಗೆ ಬಂದ ಆಹ್ವಾನ ಅವರ ವಿದ್ವತ್ತಿಗೆ ಸಂದ ಪುರಸ್ಕಾರವಾದರೂ ಅವರು ಅದನ್ನು ನಿರಾಕರಿಸಿದದು ಕನ್ನಡಕ್ಕಾಗಿ ಅವರು ಮಾಡಬೇಕಾಗಿದ್ದ ಕೆಲಸಕ್ಕೆ ಕೊಟ್ಟ ಆದ್ಯತೆಯೇ ಸರಿ. ಭಾಷೆಗಾಗಿ ಭಾಷಾಶಾಸ್ತ್ರಕ್ಕಾಗಿ ಅವರು ಮಾಡಿದ ದುಡಿಮೆಯನ್ನು ಕನ್ನಡದ ನಿಘಂಟಿಗಾಗಿ ಅವರು ಪಟ್ಟ ಪರಿಶ್ರಮದಿಂದ ಪ್ರತ್ಯೇಕಿಸುವಂತಿಲ್ಲ. ತಮ್ಮ ಕೊನೆಯ ವರ್ಷಗಳ ಬಹು ಮಟ್ಟಿನ ಸಮಯವನ್ನು ವಿಘಂಟು ರಚನೆಯ ಸಿದ್ಧತೆಗಾಗಿ ಮೀಸಲಿರಿಸಿದರು. ಕನ್ನಡ ಭಾಷಾ ಶಾಸ್ತ್ರದ ಪರಿಭಾಷೆ, ನಿರೂಪಣಾ ವಿಧಾನಗಳಿಗೆ ಹೇಗೋ ಹಾಗೆಯೇ ನಿಘಂಟಿನ ರಚನಾ ವಿಧಾನ, ಅರ್ಥ ವಿವರಣೆ, ಚಿಹ್ನೆಗಳು ಇವುಗಳಿಗೆಲ್ಲಾ ತೀನಂಶ್ರೀ ಅವರ ವಿದ್ವತ್ತು ವಿಫಲವಾದ ಕೊಡುಗೆಯನ್ನು ಕೊಟ್ಟಿದೆ. ಮೂರನೆಯದು ಅವರು ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿ ಸಂಪಾದಿಸಿದ್ದ ಜನಾನುರಾಗ, ಜನಪ್ರೀಯತೆಗೆ ಸುಲಭವಾಗಿ ಅಂಟುವ ಪೊಳ್ಳುತನಕ್ಕೆ ಅವಕಾಶ ಮಾಡಿ ಕೊಡದೇ ಖ್ಯಾತರಾಗಿದ್ದರು ಅವರು. ಮೈಸೂರು ವಿ.ವಿ ನಿಲಯದಲ್ಲಿ ಅವರು ಪ್ರಾಧ್ಯಾಪಕರಾಗಿದ್ದಾಗ ಛಂದಸ್ಸು, ಕಾವ್ಯಮೀಮಾಂಸೆ ಮತ್ತು ಭಾಷಾಶಾಸ್ತ್ರ ಮೂರನ್ನೂ ಅವರ ಬಾಯಲ್ಲಿಯೇ ಕೇಳಬೇಕು ಎಂದು ವಿದ್ಯಾರ್ಥಿಗಳು ಆಸೆ ಪಡುವಂತಹ ಸ್ಥಿತಿ ಇತ್ತು. ಮೂರು ವಿಷಯಗಳಲ್ಲೂ ಅವರ ವಿದ್ವತ್ತು ಅದ್ವಿತೀಯವಾಗಿತ್ತು. ಅವರ ಬೋಧನಾ ಕಲೆಯು ಇದಕ್ಕೆ ಕಾರಣವಾಗಿತ್ತು. ತೀನಂಶ್ರೀಯವರ ವಿದ್ವತ್ತು ಬಹುಶುತೃತ್ವಗಳನ್ನು ಬಲ್ಲವರೆಲ್ಲರೂ ಇವರು ಹೆಚ್ಚು ಬರೆಯದೇ ಇದ್ದುದಕ್ಕೆ ವಿಷಾದಿಸುವವರೇ. ಆಗಿನ ಅಧ್ಯಾಪಕರಲ್ಲಿ ಬಹುಜನರ ಪ್ರತಿಭೆ ಬರವಣೆಗೆಯಲ್ಲಿ ಹೊರಹೊಮ್ಮದೇ ಇದ್ದುದಕ್ಕೆ ಅಧೈರ್ಯ ಅಥವಾ ಆತ್ಮ ವಿಶ್ವಾಸದ ಅಭಾವ ಕಾರಣವಿರಬಹುದೇ ಎಂದು ಪ್ರೋ. ಮೂರ್ತಿರಾಯರು ಶಂಕೆ ಪಡುತ್ತಾರೆ. ತೀನಂಶ್ರೀಯವರಲ್ಲಿ ಕ್ರಮಶ್ರದ್ಧೆ, ಕರ್ಮಶ್ರದ್ಧೆಗಳ ಹೋರಾಟ ನಡೆದು ಕ್ರಮಶ್ರದ್ಧೆಯ ಕೈ ಸ್ವಲ್ಪ ಮೇಲಾಯಿತೆನೋ ಎಂದು ಅನುಮಾನ ಪಡುತ್ತಾರೆ. ‘ಕಂ ಪಾಂಡಿತ್ಯಂ ಪರಿಚ್ಚೇದಃ’ ಎಂಬ ಸಂಸ್ಕøತದ ಹೇಳಿಕೆಯನ್ನು ತೀನಂಶ್ರೀ ಮತ್ತೆ ಮತ್ತೆ ನೆನಪಿಸಿತ್ತಿದ್ದರು. ಪರಿಚ್ಛೇದ, ನಿಷ್ಕøಷ್ಠತೆಗಳ ಶೋಧನೆಯಲ್ಲಿ, ಸಂಶಯ ನಿವಾರಣೆಗಾಗಿ ಅವರು ಹಲವಿ ವರ್ಷಗಳ ವರೆಗೆ ಕಾಯ್ದದ್ದುಂಟು. ತರಗತಿಗಳಿಗೆ ಸಿದ್ಧತೆ ಇಲ್ಲದೇ ಅವರು ಸಾಮಾನ್ಯವಾಗಿ ಹೋಗುತ್ತಿರಲಿಲ್ಲ. ಸಾರ್ವಜನಿಕ ಭಾಷಣೆಗಳಿಗೆ ತಯಾರಾಗದೇ ಹೋಗುವುದು ಶೋತೃಗಳಿಗೆ ಮಾಡಿದ ಅವಮಾನ ಎಂಬ ನಿಷ್ಟುರತೆ ಅವರು. ಮನೆಯಲ್ಲಿದ್ದು ಇಲ್ಲ ಎನಿಸಿಕೊಳ್ಳುವ ಅಸೌಜನ್ಯ ಅಸಾಮಾಜಿಕ ನಡವಳಿಕೆ ಅವರಲ್ಲಿರಲಿಲ್ಲ. ನಿರಂತರ ಓದು. ಸಹೃದಯ ಗೋಷ್ಠಿ ನಡು ನಡುವೆ ಒಪ್ಪಿಕೊಳ್ಳುತ್ತಿದ್ದ ಉಪನ್ಯಾಸ ಕಾರ್ಯಕ್ರಮಗಳು ಅಧ್ಯಾಪಕ ವೃತ್ತಿಯಲ್ಲಿ ಅವರಿಗಿದ್ದ ಗೌರವಾದರ- ಇವೆಲ್ಲ ಸೇರಿ ಅವರು ಹೆಚ್ಚು ಬರೆಯದಂತಾಗಿರಬೇಕು. ಸಾರ್ವಜನಿಕ ಭಾಷಣ ಮತ್ತು ತರಗತಿಯ ಪಾಠಗಳಲ್ಲಿ ಅವರ ಅಭಿಪ್ರಾಯ, ಅಲೋಚನೆಗಳು ಅಭಿವ್ಯಕ್ತಿ ಪಡೆದು ಆ ಮೂಲಕವೂ ಅವರಿಗೆ ತೃಪ್ತಿ ಸಿಗುತ್ತಿರಬಹುದು ಎಂದು ಅವರ ಮಗ ಪ್ರೋ, ಪಿ.ಎಸ್ ನಾಗಭೂಷಣ ಭಾವಿಸುತ್ತಾರೆ. ಬರೆಯಲಾಗದೇ ಇದ್ದುದಕ್ಕೆ ಅವರಲ್ಲಿ ಕೊರಗು ಇದ್ದಿತು.
==ಮರಣ==
೧೯೬೬ರ ಆಗಸ್ಟ್ ತಿಂಗಳಲ್ಲಿ ಶಿಕ್ಷಣ ಸಚಿವಾಲಯದ ವತಿಯಿಂದ ದೆಹಲಿಯಲ್ಲಿ ತಂತ್ರಜ್ಞಾನ ಪರಿಭಾಷೆಯ ತಜ್ಞರುಗಳ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಲವು ಸ್ಥಳಗಳಿಗೆ ಭೇಟಿಕೊಟ್ಟು ರಾಂಚಿಯಲ್ಲಿರುವ ಮಗಳ ಮನೆ ಮತ್ತು ಕಲ್ಕತ್ತೆಯಲ್ಲಿದ್ದ ಮಗನ ಮನೆಗೆ ಭೇಟಿಕೊಟ್ಟರು. ಅದೇ ಸಂದರ್ಭದಲ್ಲಿ ೧೯೬೬ ರಲ್ಲಿ ಸೆಪ್ಟೆಂಬರ್ ೭ ರಂದು, ಕಲ್ಕತ್ತಾದಲ್ಲಿ ಹೃದಯಾಘಾತದಿಂದ ನಿಧನರಾದರು..
"https://kn.wikipedia.org/wiki/ತೀ._ನಂ._ಶ್ರೀಕಂಠಯ್ಯ" ಇಂದ ಪಡೆಯಲ್ಪಟ್ಟಿದೆ