ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೪ ನೇ ಸಾಲು:
*ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಅದರಲ್ಲೂ ಮುಖ್ಯವಾಗಿ ಹೆಚ್ಚುತ್ತಿದ್ದ ಪ್ರತಿಭಟನೆಯ ವಿರುದ್ಧ, ನಿರರ್ಥಕತೆಯನ್ನೂ ಈ ೫೬೫ ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಬರಿಯ ಮೂರು, [[ಕಾಶ್ಮೀರ]], [[ಹೈದರಾಬಾದು]] ಹಾಗೂ [[ಜುನಾಘಢ]], ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು.
*ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ [[ಪಾಕಿಸ್ತಾನ|ಪಾಕಿಸ್ತಾನದಿಂದ]] ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ ೮೦ [[ಹಿಂದೂ|ಹಿಂದೂಗಳಾಗಿದ್ದರು]]. ಪಟೇಲರು ಮುತ್ಸದ್ದಿತನದೊಡನೆ, ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ, ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. *ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ ([[ಆರ್ಜೀ ಹುಕುಮತ್]]) ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.
*ಮುಂದೆ ನಡೆದ ಜನಮತಗಣನೆಯಲ್ಲಿ[[ಜನಮತಗಣನೆ]]ಯಲ್ಲಿ ಶೇಕಡಾ ೯೯.೫ ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ [[ಕರ್ನಾಟಕ]], [[ಮಹಾರಾಷ್ಟ್ರ]] ಮತ್ತು [[ಆಂಧ್ರ ಪ್ರದೇಶ|ಆಂಧ್ರ]]ದ ಭಾಗಗಳನ್ನೊಳಗೊಂಡ [[ಹೈದರಾಬಾದ್]] ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ [[ನಿಜಾಮ]] ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ ೮೦ ಹಿಂದೂಗಳಾಗಿದ್ದರು.
*ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ, ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.[[ಕಾಸೀಂ ರಜ್ವಿ|ಕಾಸೀಂ ರಜ್ವಿಯಂಬ]] ಮತಾಂಧ ಮತ್ತು ಉಗ್ರವಾದಿಯ ಮುಂದಾಳುತ್ವದಲ್ಲಿ ಸಾವಿರಾರು ಜನ ರಜಾಕಾರರು, ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು.
*ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. [[ಸ್ವಾಮಿ ರಮಾನಂದತೀರ್ಥ|ಸ್ವಾಮಿ ರಮಾನಂದತೀರ್ಥರ]] ನೇತೃತ್ವದಲ್ಲಿ [[ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ]] ನೆಡೆಯಿತು. [[ಕರ್ನಾಟಕ|ಕರ್ನಾಟಕದ]] ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು, ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
೯೫ ನೇ ಸಾಲು:
*ಜುನಾಘಡ ಭಾರತದ ಭಾಗವಾದ ಮೇಲೆ , ಅಲ್ಲಿಯ ಬಹಾವುದ್ದೀನ್ ಕಾಲೇಜಿನಲ್ಲಿ ಮಾತನಾಡುತ್ತಾ ಪಟೇಲರು ಹೇಳುತ್ತಾರೆ: " ಹೈದರಾಬಾದು ಎಚ್ಚರಿಕೆಯಿಂದಿಲ್ಲದಿದ್ದರೆ, ಜುನಾಘಡದ ಗತಿಯೇ ಅದಕ್ಕೂ ಆದೀತು. [[ಪಾಕಿಸ್ತಾನ]] [[ಕಾಶ್ಮೀರ|ಕಾಶ್ಮೀರವನ್ನು]] ಜುನಾಘಡದ ವಿರುದ್ಧ ದಾಳವಾಗಿ ಉಪಯೋಗಿಸಲು ನೋಡಿದೆ. ಜನಾಭಿಪ್ರಾಯದ ತಳಹದಿಯ ಮೇಲೆ ಈ ವಿಷಯವನ್ನು ಬಗೆಹರಿಸಲು ನಾವು ಪಾಕಿಸ್ತಾನಕ್ಕೆ ಸೂಚಿಸಿದಾಗ, ಕಾಶ್ಮೀರಕ್ಕೆ ಈ ನೀತಿಯನ್ನು ಅನುಸರಿಸುವಂತೆ ಅವರಿಂದ ತಕ್ಷಣದ ಪ್ರತಿಕ್ರಿಯೆ ಬಂತು. ನೀವು ಹೈದರಾಬಾದಿನಲ್ಲಿ ಈ ನೀತಿಗೆ ಒಪ್ಪಿದರೆ ನಾವು ಕಾಶ್ಮೀರದಲ್ಲಿ ಒಪ್ಪಬಹುದು ಎಂದು ಅದಕ್ಕೆ ನಾವು ಜವಾಬು ಕೊಟ್ಟೆವು.”
*ಭಾರತವನ್ನು ಒಟ್ಟುಗೂಡಿಸುವುದು ಸುಲಭದಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ [[ಅಟ್ಟೋವನ್ ಬಿಸ್ಮಾರ್ಕ್|ಬಿಸ್ಮಾರ್ಕ್]] ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.
*[[ಭಾರತದ ಸಂವಿಧಾನ|ಭಾರತದ ಸಂವಿಧಾನದಲ್ಲಿ]] ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು.
 
==ಗೌರವ,ಪ್ರಶಸ್ತಿ==