"ಚೀನಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚೀನೀ ಪರಂಪರೆಯು [[ಕ್ಸಿಯಾ ಸಾಮ್ರಾಜ್ಯ|ಕ್ಸಿಯಾ]]ವನ್ನು ಪ್ರಥಮ [[ಸಾಮ್ರಾಜ್ಯ|ಸಾಮ್ರಾಜ್ಯವನ್ನಾಗಿ]] ಹೆಸರಿಸಿದರೂ, [[ಹೆನಾನ್‌]] ಪ್ರಾಂತ್ಯದ [[ಎರ್ಲಿಟೌ ಸಂಸ್ಕೃತಿ|ಎರ್ಲಿಟೌ]] ಎಂಬಲ್ಲಿ ೧೯೫೯<ref>[http://www.nga.gov/ ನ್ಯಾಷನಲ್‌ ಗ್ಯಾಲರಿ ಆಫ್‌ ಆರ್ಟ್]ನಿಂದ [http://www.nga.gov/exhibitions/chbro_bron.shtm "ಕಂಚಿನ ಯುಗದ ಚೀನಾ"]</ref>ರಲ್ಲಿ ನಡೆದ ವೈಜ್ಞಾನಿಕ ಉತ್ಖನನದಲ್ಲಿ [[ಕಂಚಿನ-ಯುಗ|ಕಂಚಿನ ಯುಗ]]ದ ನಿವೇಶನಗಳು ಪತ್ತೆಯಾಗುವವರೆಗೂ ಇದನ್ನು ಮಿಥ್ಯವೆಂದೇ ಪರಿಗಣಿಸಲಾಗಿತ್ತು. ಪ್ರಾಕ್ತನಶಾಸ್ತ್ರಜ್ಞರು ಈಗಾಗಲೇ ಕ್ಸಿಯಾಗಳದ್ದೆಂದು ಪ್ರಾಚೀನ ಚಾರಿತ್ರಿಕ ಉಲ್ಲೇಖಗಳಲ್ಲಿರುವ ನಗರ ಪ್ರದೇಶಗಳು, ಕಂಚಿನ ಸಾಧನಗಳು, ಮತ್ತು ಸಮಾಧಿಗಳನ್ನು ಹೊರತೆಗೆದಿದ್ದರೂ, ಆ ಕಾಲದ ಲಿಖಿತ ದಾಖಲೆಗಳಿಲ್ಲದೇ ನಿಜಕ್ಕೂ ಕ್ಸಿಯಾಗಳದ್ದೇ ಎಂದು ಸಿದ್ಧಪಡಿಸಲು ಅಸಾಧ್ಯ.
 
[[ಚಿತ್ರ:Terracotta pmorgan.jpg|thumb|left|ಕ್ವಿನ್‌ ಸಾಮ್ರಾಜ್ಯದ ಯೋಧರ ಸಹಜ ಗಾತ್ರದ ಮೃಣ್ಮಯ ಪ್ರತಿಮೆಗಳಲ್ಲಿ ಕೆಲವು, ca. ಕ್ರಿ. ಪೂ. 210 BCE.]]
ಪೂರ್ವ ಚೀನಾದ [[ಹಳದಿ ನದಿ|ಹಳದಿ ನದಿಯ]] ಉದ್ದಕ್ಕೂ ನೆಲೆಗೊಂಡಿದ್ದ, ಸ್ವಲ್ಪ ಮಟ್ಟಿಗೆ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುತ್ತಿದ್ದ ಕ್ರಿ. ಪೂ. ೧೮ರಿಂದ ೧೨ನೇ ಶತಮಾನ BCE ಕಾಲದ [[ಷಾಂಗ್‌ ಸಾಮ್ರಾಜ್ಯ|ಷಾಂಗ್‌]] ಸಾಮ್ರಾಜ್ಯವು ಎರಡನೆಯದು. ನೆರೆಹೊರೆಯ ಶಕ್ತಿಶಾಲಿ ರಾಜ್ಯಗಳು ತಮ್ಮ ಕೇಂದ್ರೀಕೃತ ಆಡಳಿತವನ್ನು ನಾಶಪಡಿಸುವವರೆಗೆ, [[ಝೌ ಸಾಮ್ರಾಜ್ಯ|ಝೌ]]ಗಳು ಪಶ್ಚಿಮ ದಿಕ್ಕಿನಿಂದ ಇವರ ಮೇಲೆ ಆಕ್ರಮಣ ಮಾಡಿ, ಕ್ರಿ. ಪೂ. ೧೨ರಿಂದ ೫ನೇ ಶತಮಾನ BCEವರೆಗೂವರೆಗೂ ಇವರನ್ನು ಆಳಿದ್ದರು. ಅನೇಕ ನೆರೆಹೊರೆಯ ರಾಜ್ಯಗಳು, [[ವಸಂತ ಮತ್ತು ಶರತ್ಕಾಲಾವಧಿ|ವಸಂತ ಮತ್ತು ಶರತ್ಕಾಲ]]ಗಳಲ್ಲಿ ನಿರಂತರವಾಗಿ ಪರಸ್ಪರ ಯುದ್ಧಗಳನ್ನು ಮಾಡುತ್ತಿದ್ದರೂ, ಕೆಲವೊಮ್ಮೆ ಮಾತ್ರ ಝೌ ಚಕ್ರವರ್ತಿಯನ್ನು ಎದುರಿಸಿ ನಿಲ್ಲಲು ಪ್ರಯತ್ನಿಸುತ್ತಿದ್ದವು.
 
ಕ್ರಿ. ಪೂ. ೨೨೧ BCEನಲ್ಲಿರಲ್ಲಿ [[ಚಕ್ರವರ್ತಿ|ಚಕ್ರವರ್ತಿಯ]] ಅಧಿಕಾರ ಸ್ಥಾಪಿಸಲ್ಪಟ್ಟು, ಚೀನೀ ಭಾಷೆಯು ಬಲವಂತವಾಗಿ ಅಧಿಕೃತ ಭಾಷೆಯೆಂದು ಹೇರಲ್ಪಟ್ಟಾಗ, ಪ್ರಥಮ ಏಕೀಕೃತ ಚೀನಿ ಆಡಳಿತವು, [[ಕ್ವಿನ್‌ ಸಾಮ್ರಾಜ್ಯ|ಕ್ವಿನ್‌ ಸಾಮ್ರಾಜ್ಯದಿಂದ]] ಸ್ಥಾಪಿಸಲ್ಪಟ್ಟಿತು. ಈ ಆಡಳಿತವು ತನ್ನ [[ಲೀಗಲಿಸಂ (ತತ್ವಶಾಸ್ತ್ರ)|ಲೀಗಲಿಸ್ಟ್‌‌ ನೀತಿ]]ಗಳಿಗೆ ವ್ಯಕ್ತವಾದ ತಕ್ಷಣದ ವ್ಯಾಪಕ ಪ್ರತಿಭಟನೆಗಳಿಂದಾಗಿ, ಹೆಚ್ಚುದಿನ ಇರಲಿಲ್ಲ.
 
ಮುಂದಿನ ಸಾಮ್ರಾಜ್ಯವೆಂದರೆ ಕ್ರಿ. ಪೂ. ೨೦೬ BCEರಿಂದರಿಂದ ಕ್ರಿ. ಶ. ೨೨೦ CEವರೆಗೆವರೆಗೆ ಚೀನಾವನ್ನು ಆಳಿದ, ಹಾಗೂ ಇವತ್ತಿನವರೆಗೂ ತನ್ನ ಜನಾಂಗದವರು ಉಳಿಸಿಕೊಂಡು ಬಂದಿರುವ [[ಹ್ಯಾನ್‌ ಚೀನೀಯರು|ಹ್ಯಾನ್‌ ಸಂಸ್ಕೃತಿ]]ಯನ್ನು ಸೃಷ್ಟಿಸಿದ [[ಹ್ಯಾನ್‌ ಸಾಮ್ರಾಜ್ಯ]]. ಹ್ಯಾನ್‌ ಸಾಮ್ರಾಜ್ಯವು [[ಕೊರಿಯಾ]], [[ವಿಯೆಟ್ನಾಂ]], [[ಮಂಗೋಲಿಯಾ]] ಮತ್ತು ಮಧ್ಯ ಏಷ್ಯಾಗಳನ್ನೊಳಗೊಂಡಂತೆ ಸೇನಾ ಕಾರ್ಯಾಚರಣೆಯನ್ನು ನಡೆಸಿ, ತನ್ನ [[ಹ್ಯಾನ್‌ ಸಾಮ್ರಾಜ್ಯದ ಇತಿಹಾಸ|ಅಧಿಪತ್ಯವನ್ನು ಗಣನೀಯವಾಗಿ ವಿಸ್ತರಿಸಿಕೊಂಡಿತು]] ಹಾಗೂ [[ಮಧ್ಯ ಏಷ್ಯಾ|ಮಧ್ಯ ಏಷ್ಯಾದಲ್ಲಿ]] [[ರೇಷ್ಮೆಯ ಹೆದ್ದಾರಿ|ರೇಷ್ಮೆಯ ಹೆದ್ದಾರಿಯನ್ನು]] ಸ್ಥಾಪಿಸಲು ಸಹಾ ನೆರವಾಯಿತು.
 
 
[[ಹ್ಯಾನ್‌ ಸಾಮ್ರಾಜ್ಯದ ಅಂತ್ಯ|ಹ್ಯಾನ್‌ ಸಾಮ್ರಾಜ್ಯದ ಕುಸಿತ]]ದ ನಂತರ, [[ಮೂರು ಸಾಮ್ರಾಜ್ಯಗಳು]] ಎಂದು ಕರೆಯಲಾದ ವೀರಯುಗವನ್ನೂ ಒಳಗೊಂಡಂತೆ, ಮತ್ತೊಂದು ಒಕ್ಕೂಟ-ರಹಿತ ಕಾಲಾವಧಿಯು ಮುಂದುವರೆಯಿತು. ಈ ಅವಧಿಯ ಸ್ವತಂತ್ರ ಚೀನೀ ರಾಜ್ಯಗಳು, ಚೀನೀ ಬರವಣಿಗೆಯ ವ್ಯವಸ್ಥೆಯನ್ನು ಜಪಾನ್‌ನಲ್ಲಿ ಪರಿಚಯಿಸುವುದರೊಂದಿಗೆ, ಆ ದೇಶದ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನೂ ಬೆಳೆಸಿಕೊಂಡವು. ಕ್ರಿ. ಶ. ೫೮೦ CEರಲ್ಲಿರಲ್ಲಿ [[ಸೂಯಿ ಸಾಮ್ರಾಜ್ಯ|ಸೂಯಿ]]ಗಳ ಆಡಳಿತದಲ್ಲಿ ಚೀನಾ ಮತ್ತೆ ಏಕೀಕರಣಗೊಂಡಿತು. ಆದರೆ [[ಗೊರ್ಗೋಯೋ-ಸೂಯಿ ಯುದ್ಧಗಳು|ಗೋಗುರ್ಯೋ-ಸೂಯಿ ಕದನ]]ಗಳ (೫೯೮–೬೧೪) ಸೋಲಿನ ನಂತರ ಕಂಗೆಟ್ಟಿದ್ದ ಸೂಯಿ ಸಾಮ್ರಾಜ್ಯವು ಹೆಚ್ಚು ಕಾಲ ನಡೆಯಲಿಲ್ಲ.
[[ಚಿತ್ರ:Museum für Ostasiatische Kunst Dahlem Berlin Mai 2006 043.jpg|thumb|left|ಸಾಂಗ್‌ ಸಾಮ್ರಾಜ್ಯದ 10-11ನೇ ಶತಮಾನ ಕಾಲದ ಝೆಜಿಯಾಂಗ್‌ ಪ್ರಾಂತ್ಯದ ಲಾಂಗ್‌ಕ್ವುಆನ್‌ ಸುಟ್ಟ ಜೇಡಿಮಣ್ಣಿನ ಪಾತ್ರೆಗಳು. ]]
[[ಚಿತ್ರ:Leshan Buddha Statue View.JPG|thumb|left|ಟಾಂಗ್‌ ಸಾಮ್ರಾಜ್ಯ ಅವಧಿಯ 9ನೇ ಶತಮಾನದ ಆರಂಭದಲ್ಲಿ ಪೂರ್ಣಗೊಳಿಸಿದ ಲೆಷನ್‌‌ ಬೃಹತ್‌ ಬುದ್ಧ 71 m (233 ft) ಎತ್ತರದ ಪ್ರತಿಮೆ]]
 
==== ಕಲೆ, ಪಾಂಡಿತ್ಯ, ಮತ್ತು ಸಾಹಿತ್ಯ ====
[[ಚಿತ್ರ:mifu01.jpg|thumb|ಮಿ ಫು ರ ಚೀನೀ ಅಲಂಕೃತ ಲಿಪಿರಚನೆ, ಸಾಂಗ್‌ ಸಾಮ್ರಾಜ್ಯ, ca. ಕ್ರಿ. ಶ.1100 CE]][[ಚಿತ್ರ:Bamboo book - binding - UCR.jpg|thumb|ಸುನ್‌ ಟ್ಜುನ ಯುದ್ಧ ಕಲೆ, ಒಂದು ಕ್ವಿಯಾನ್‌ಲಾಂಗ್‌ ಸಾಮ್ರಾಜ್ಯದ ವಂಶಾವಳಿ ಪುಸ್ತಕದ 20ನೇ ಶತಮಾನದ ಮರುಮುದ್ರಿತ ಪ್ರತಿ. ]]ಚೀನೀ ಇತಿಹಾಸದಾದ್ಯಂತ ಚೀನೀ ಲಿಪಿಗಳು ಅನೇಕ ವೈವಿಧ್ಯತೆ ಮತ್ತು ಶೈಲಿಗಳನ್ನು ಹೊಂದಿದ್ದವು. [[ದೈವವಾಣಿ ಎಲುಬುಗಳು|ದೈವವಾಣಿಗಳಿರುವ ಎಲುಬು]]ಗಳಿಂದ ಹಿಡಿದು ಕ್ವಿಂಗ್‌ ಶಾಸನಗಳವರೆಗೆ ಸಾವಿರಾರು ಪ್ರಾಚೀನ ಲಿಖಿತ ದಾಖಲೆಗಳು ಈಗಲೂ ಲಭ್ಯವಿದೆ. ಲಿಖಿತ ಪ್ರಾಮುಖ್ಯತೆಯು ಚೀನಾದಲ್ಲಿ ಸಾಂಸ್ಕೃತಿಕ ಪರಿಷ್ಕರಣೆಯ ಸಾಮಾನ್ಯ ಗ್ರಹಿಕೆಯನ್ನೇ ಪ್ರಭಾವಿಸಿತು. ಉದಾಹರಣೆಗೆ [[ಚೀನಾದ ಅಲಂಕೃತ ಲಿಪಿರಚನೆ|ಅಲಂಕೃತ ಲಿಪಿರಚನೆ]]ಯು ಚಿತ್ರಕಲೆ ಅಥವಾ ನಾಟಕ ಕಲೆಗಿಂತ ಉನ್ನತವಾದುದು ಎಂಬ ಅಭಿಮತವಿದ್ದದ್ದು. ಮಹಾಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ (ಪ್ರಮುಖವಾಗಿ [[ಕನ್‌ಫ್ಯೂಷಿಯನ್‌|ಕನ್‌ಫ್ಯೂಷಿಯಸ್‌ ಮತ,]] [[ಟಾವೋಯಿಸ್ಟ್‌|ಟಾವೋ ತತ್ವ,]] ಮತ್ತು [[ಬೌದ್ಧ ಧರ್ಮೀಯ|ಬೌದ್ಧ ಧರ್ಮ]]ದವು) ಹಸ್ತಪ್ರತಿಗಳು [[ಕುಂಚ ಶಾಯಿ|ಕುಂಚ ಶಾಯಿಯಲ್ಲಿ]] ಹಸ್ತಲಿಖಿತವಾದವು. ಅಲಂಕೃತ ಲಿಪಿರಚನೆಯು ಮುಂದೆ ವ್ಯಾಪಾರೀಕೃತಗೊಂಡು, ಶ್ರೇಷ್ಠ ಕಲಾವಿದರ ಕೃತಿಗಳು ಉತ್ಕೃಷ್ಠ ಮೌಲ್ಯ ಹೊಂದಿದವು. [[ಚೀನಾದ ಸಾಹಿತ್ಯ|ಚೀನೀ ಸಾಹಿತ್ಯ]]ವು ದೀರ್ಘ ಇತಿಹಾಸ ಹೊಂದಿದೆ; ಚೀನೀ ಭಾಷೆಯಲ್ಲಿನ ಪ್ರಾಚೀನ ಮಹಾಕೃತಿ, ''[[I ಚಿಂಗ್‌|ಐ ಚಿಂಗ್‌]]'' ಅಥವಾ "ಪರಿವರ್ತನೆಗಳ ಗ್ರಂಥ"ವು ಕ್ರಿ. ಪೂ. ೧೦೦೦ BCEಯಷ್ಟುದಷ್ಟು ಹಳೆಯದು. [[ರಾಜ್ಯಗಳ ಸಂಘರ್ಷದ ಅವಧಿ|ರಾಜ್ಯಗಳ ಸಂಘರ್ಷದ ಅವಧಿಯಲ್ಲಿ]] ಉಚ್ಛ್ರಾಯ ಸ್ಥಿತಿ ತಲುಪಿದ ತತ್ವಶಾಸ್ತ್ರವು ಕನ್‌ಫ್ಯೂಷಿಯಸ್‌ನ ''[[ಅನಾಲೆಕ್ಟ್ಸ್‌]]'' ಮತ್ತು [[ಲಾವೋಜಿ|ಲಾವೋಜಿನ]] ''[[ಟಾವೋ ಟೆ ಚಿಂಗ್‌]]'' ನಂತಹ ಗಮನಾರ್ಹ ಕೃತಿಗಳನ್ನು ನೀಡಿತು. (ವಿವರಗಳಿಗಾಗಿ ನೋಡಿ: [[ಚೀನೀ ಸಾಂಪ್ರದಾಯಿಕ ಗ್ರಂಥಗಳು|ಚೀನೀ ಮಹಾಕೃತಿಗಳು]].) [[ಸಿಮಾ ಕ್ವಿಯಾನ್‌|ಸಿಮಾ ಕ್ವಿಯಾನ್‌ನ]] ಮೂಲಾವಸ್ಥೆಯ ಕ್ರಿ. ಪೂ. ೧೦೯ BCEಯಿಂದರಿಂದ ಕ್ರಿ. ಪೂ. ೯೧ BCEವರೆಗೆರವರೆಗೆ ರಚಿತವಾದ ''[[ಐತಿಹಾಸಿಕ ದಾಖಲೆಗಳು|ಇತಿಹಾಸಕಾರನ ದಾಖಲೆಗಳು]]'' ಇಂದ ಮೊದಲುಗೊಂಡು, ರಾಜವಂಶೀಯ ಇತಿಹಾಸಗಳು ಆಗ್ಗಾಗ್ಗೆ ರಚಿತವಾದವು. ಟಾಂಗ್‌ ಸಾಮ್ರಾಜ್ಯದ ಅವಧಿಯಲ್ಲಿ [[ಚೀನಾದ ಕವಿತ್ವ|ಕವಿತ್ವ]] ವಿಕಾಸಗೊಂಡಿದ್ದರೆ, ಚೀನೀ ಸಾಹಿತ್ಯದ [[ನಾಲ್ಕು ಶ್ರೇಷ್ಟ ಸಾಂಪ್ರದಾಯಿಕ ಗ್ರಂಥಗಳು|ನಾಲ್ಕು ಶ್ರೇಷ್ಠ ಸಾಂಪ್ರದಾಯಿಕ ಕಾದಂಬರಿ]]ಗಳು ಮಿಂಗ್‌ ಹಾಗೂ ಕ್ವಿಂಗ್‌ ಸಾಮ್ರಾಜ್ಯಗಳ ಅವಧಿಯಲ್ಲಿ ರಚಿತವಾದವು. [[ಸಾಂಗ್‌ ಸಾಮ್ರಾಜ್ಯ|ಸಾಂಗ್‌ ಅಧಿಪತ್ಯ]]ದ ಅವಧಿಯಲ್ಲಿ [[ಚಲಿಸಬಲ್ಲ ಅಚ್ಚು|ಚಲಿಸಬಲ್ಲ ಅಚ್ಚುಗಳ]] ಮಾದರಿಯ [[ಮುದ್ರಣ|ಮುದ್ರಣ ಅಚ್ಚು]]ಗಳನ್ನು ಅಭಿವೃದ್ಧಿಪಡಿಸಲಾಯಿತು. ಪ್ರಭುತ್ವದಿಂದ ಪ್ರಾಯೋಜಿತವಾಗಿ ಪಂಡಿತರುಗಳನ್ನು ಒಳಗೊಂಡ ಪರಿಷತ್ತುಗಳನ್ನು ಸ್ಥಾಪಿಸಿ, ಮುದ್ರಿತ ಹಾಗೂ ಹಸ್ತಪ್ರತಿಗಳ ರೂಪದಲ್ಲಿರುವ ಮೇರುಕೃತಿಗಳ ಬಗ್ಗೆ ವ್ಯಾಖ್ಯಾನಗಳನ್ನು ಬರೆಸಲಾಗುತ್ತಿತ್ತು. ಇಂತಹಾ ಚರ್ಚೆಗಳಲ್ಲಿ ಪ್ರಭುತ್ವವೂ ಆಗಿಂದ್ದಾಗ್ಗೆ ಭಾಗವಹಿಸುತ್ತಿತ್ತು. ಸಾಂಗ್‌ ಸಾಮ್ರಾಜ್ಯದ ಅವಧಿಯು ಅಧಿಕಾಂಶ ವೈಜ್ಞಾನಿಕ ಸಾಹಿತ್ಯ ರಚನೆಯಾದ ಅವಧಿಯೂ ಆಗಿತ್ತು. [[ಸು ಸಾಂಗ್‌]] ರಚಿತ ''ಕ್ಸಿನ್‌ ಇಕ್ಸಿಯಾಂಗ್‌ ಫಾಯೋ'' ಮತ್ತು [[ಷೆನ್‌ ಕುವೋ|ಷೆನ್‌ ಕುಓ]] ರಚಿತ ''[[ಕನಸಿನ ಹೊಳೆಯ ಪ್ರಬಂಧಗಳು]]'' ಮುಂತಾದ ಕೃತಿಗಳ ರಚನೆಯಾಯಿತು. ಇತಿಹಾಸ ಶಾಸ್ತ್ರಕ್ಕೆ ಹಾಗೂ ಬೃಹತ್‌ ವಿಶ್ವಕೋಶಗಳಿಗೆ ಸಂಬಂಧಿಸಿದಂತೆ ವಿಪುಲ ಕೃತಿಗಳು, ಹೆಸರಿಸಬೇಕೆಂದರೆ, ಕ್ರಿ. ಶ. ೧೦೮೪ CEನಲ್ಲಿನಲ್ಲಿ ರಚಿತವಾದ [[ಸಿಮಾ ಗುವಾಂಗ್‌|ಸಿಮಾ ಗುವಾಂಗ್‌ನ]] ''[[ಝಿಝಿ ಟಾಂಗ್‌ಜಿಯನ್‌|ಝಿಝಿ ಟಾಂಗ್‌ಜಿಯಾನ್‌]]'' ಅಥವಾ ''[[ಸಾಂಗ್‌ ಕಾಲದ ನಾಲ್ಕು ಶ್ರೇಷ್ಟ ಗ್ರಂಥಗಳು|ಸಾಂಗ್‌ನ ನಾಲ್ಕು ಉತ್ಕೃಷ್ಠ ಗ್ರಂಥಗಳು]]'' ೧೧ನೇ ಶತಮಾನದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಕಲನ ಮತ್ತು ಸಂಪಾದನೆಯಾದವು. ಶತಮಾನಗಳ ಕಾಲ ಚೀನಾದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಸಾಮ್ರಾಜ್ಯಶಾಹಿ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶನದ ಮೂಲಕ ಮಾತ್ರವೇ ತರಲು ಸಾಧ್ಯವಿತ್ತು. ಇದು ಅರ್ಹತಾಶಾಹಿಯ ನಿರ್ಮಾಣಕ್ಕೆ ನಾಂದಿಯಾಯಿತು. ಆದರೆ ಇಲ್ಲಿ ಯಶಸ್ಸು ಪರೀಕ್ಷೆಗೆ ತಯಾರಿ ನಡೆಸಲು ಸಮರ್ಥರಾಗಿದ್ದ ಪುರುಷರಿಗೆ ಮಾತ್ರ ಸಾಧ್ಯವಿತ್ತು. ಸಾಮ್ರಾಜ್ಯಶಾಹಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪ್ರಬಂಧಗಳನ್ನು ಬರೆದು ಕನ್‌ಫ್ಯೂಷಿಯಸ್‌ ಮೇರುಕೃತಿಗಳ ಬಗ್ಗೆ ತಮಗಿರುವ ಪ್ರೌಢಿಮೆಯನ್ನು ತೋರಿಸಬೇಕಿತ್ತು. ಉನ್ನತ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ''ಜಿನ್ಷಿ '' ಗಳೆಂದು ಹೆಸರಾದ ಗಣ್ಯ ಪಂಡಿತ-ಅಧಿಕಾರಿಗಳ ಪದವಿ ಹೊಂದಿರುತ್ತಿದ್ದರು. ಇದು ಉನ್ನತವಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಾನವಾಗಿತ್ತು. ಚೀನೀ ತತ್ವಶಾಸ್ತ್ರಜ್ಞರು, ಲೇಖಕರು ಮತ್ತು ಕವಿಗಳು ವಿಶೇಷ ಗೌರವವನ್ನು ಹೊಂದಿರುತ್ತಿದ್ದುದಲ್ಲದೇ, ಸಾಮ್ರಾಜ್ಯದ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಬೆಳೆಸುವ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುತ್ತಿದ್ದರು. ಕೆಲ ಮೇರುಕೃತಿಗಳನ್ನು ರಚಿಸಿದ ಪಂಡಿತೋತ್ತಮರು, ತಮ್ಮ ಕೃತಿಗಳಲ್ಲಿ ಧೈರ್ಯವಾಗಿ ಸಾಮಾನ್ಯ ಜನಜೀವನದ ಬಗ್ಗೆ ನೈಜ ಚಿತ್ರಣ ನೀಡಿ, ಆಗ್ಗಾಗ್ಗೆ ಅಧಿಕಾರಸ್ಥರ ಅಸಮಾಧಾನಕ್ಕೆ ಗುರಿಯಾಗುತ್ತಿದ್ದರು. ಚೀನೀಯರು [[ಗುಝೆಂಗ್‌|ಝೆಂಗ್‌]] (ಚಲಿಸಬಲ್ಲ ಮರದ ಪಟ್ಟಿಯುಳ್ಳ ಜಿದರ್‌), [[ಗುಕ್ವಿನ್‌|ಕ್ವಿನ್‌]] (ಮರದ ಪಟ್ಟಿಯಿಲ್ಲದ ಜಿದರ್‌), [[ಷೆಂಗ್‌ (ವಾದ್ಯ)|ಷೆಂಗ್‌]] (ನಿರ್ಬಂಧವಿಲ್ಲದ ಮೌತ್‌ ಆರ್ಗನ್‌), ಮತ್ತು [[ಕ್ಸಿಯಾವೋ (ಕೊಳಲು)|ಕ್ಸಿಯಾವೋ]] (ಲಂಬ ಕೊಳಲು)ಗಳಂತಹಾ ಅನೇಕ [[ಸಂಗೀತ ವಾದ್ಯ|ಸಂಗೀತ ಸಾಧನ]]ಗಳನ್ನು ಆವಿಷ್ಕಾರಗಳನ್ನು ಮಾಡಿದ್ದರು, ಮತ್ತು ಇನ್ನಿತರ ಸಾಧನಗಳನ್ನು ಅನುಸರಿಸಿ ತಮ್ಮದೇ ಆದ ಸಾಧನಗಳನ್ನು, ಅಂದರೆ [[ಎರ್‌ಹೂ]] (ತಾರಸ್ಥಾಯಿಯ ಪಿಟೀಲು ಅಥವಾ ಬಗ್ಗಿದ ಲೂಟ್‌ ವಾದ್ಯ ) ಮತ್ತು [[ಪಿಪಾ]] (ಪೇರ್‌ಹಣ್ಣಿನ-ಆಕೃತಿಯ ಅರೆ ತೆರೆದ ಲೂಟ್‌ ವಾದ್ಯ) ಮದರಿಯ ಸಂಗೀತ ವಾದ್ಯಗಳನ್ನು ಅಭಿವೃದ್ಧಿಗೊಳಿಸಿದರು. ಈ ವಾದ್ಯಗಳು ಮುಂದೆ [[ಪೂರ್ವ ಏಷ್ಯಾ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಾದ್ಯಂತ]], ಅದರಲ್ಲೂ ವಿಶೇಷವಾಗಿ ಜಪಾನ್‌, ಕೊರಿಯಾ, ಮತ್ತು ವಿಯೆಟ್ನಾಂಗಳೆಡೆಗೆ ಪಸರಿಸಿದವು.
 
== ಜನಸಾಂದ್ರತೆ ==
 
 
ಅನೇಕ ಇತಿಹಾಸಕಾರರು ಅಭಿಪ್ರಾಯ ಪಡುವ ಪ್ರಕಾರ, ಸುಮಾರು ಕ್ರಿ. ಶ. ೧೦೦೦ CE.<ref>[http://athleticscholarships.net/history-of-soccer.htm ಆರಿಜಿನ್ಸ್‌ ಆಫ್‌ ದ ಗ್ರೇಟ್‌ ಗೇಮ್‌]. ೨೦೦೦. Athleticscholarships.net. ಭೇಟಿ ನೀಡಿದ್ದು ೨೩ ಏಪ್ರಿಲ್‌ ೨೦೦೬.</ref>ರ ಕಾಲದಲ್ಲಿ ಈ ಕ್ರೀಡೆಯ ಒಂದು ಮಾದರಿ ಕಾಣಿಸಿಕೊಂಡಿತ್ತು, ಇದರಿಂದ [[ಸಾಂಘಿಕ ಫುಟ್‌ಬಾಲ್‌]] ವು ಚೀನಾದಲ್ಲೇ ಉಗಮವಾಗಿತ್ತು. ಇನ್ನಿತರ ಜನಪ್ರಿಯ ಕ್ರೀಡೆಗಳೆಂದರೆ [[ಚೀನಾದ ಮಾರ್ಷಲ್‌ ಆರ್ಟ್ಸ್|ಮಾರ್ಷಲ್‌ ಆರ್ಟ್ಸ್]], [[ಟೇಬಲ್‌ ಟೆನಿಸ್‌]], [[ಬ್ಯಾಡ್ಮಿಂಟನ್‌]], ಹಾಗೂ ಇತ್ತೀಚೆಗೆ [[ಗಾಲ್ಫ್‌]].[[ಬ್ಯಾಸ್ಕೆಟ್ ಬಾಲ್‌|ಬ್ಯಾಸ್ಕೆಟ್‌ಬಾಲ್‌]] ಈಗ ನಗರಪ್ರದೇಶಗಳ ಯುವಜನರಲ್ಲಿ ಜನಪ್ರಿಯಗೊಳ್ಳುತ್ತಿದೆ.
 
 
 
== ವಿಜ್ಞಾನ ಮತ್ತು ತಂತ್ರಜ್ಞಾನ ==
[[ಚಿತ್ರ:ChineseCrossbow.JPG|thumb|ಪ್ರಾಚೀನ ಚೀನಾದ ಹಸ್ತ ಚಾಲಿತ ಅಡ್ಡಬಿಲ್ಲಿನ ಉಳಿಕೆಗಳು, ಕ್ರಿ. ಪೂ. 2ನೇ ಶತಮಾನ BCE.]]
[[ಪ್ರಾಚೀನ ಚೀನಾ]] ದ ತಾಂತ್ರಿಕ ಸಾಧನೆಗಳೆಂದರೆ [[ಕಾಗದ]] ([[ಪೇಪಿರಸ್‌]] ಅಲ್ಲ) ಮತ್ತು [[ಕಾಗದ ತಯಾರಿಕೆ]], [[ಮರದ ಅಚ್ಚಿನ ಮುದ್ರಣ]] ಮತ್ತು [[ಚಲಿಸಬಲ್ಲ ಅಚ್ಚು]] [[ಪೂರ್ವ ಏಷ್ಯಾದಲ್ಲಿನ ಮುದ್ರಣ ಇತಿಹಾಸ|ಮುದ್ರಣ]], ಪ್ರಾಚೀನ ಸೂಜಿಗಲ್ಲು ಮತ್ತು ಸೂಜಿ [[ದಿಕ್ಸೂಚಿ]], [[ಗನ್‌ಪೌಡರ್‌|ಗನ್‌ ಪೌಡರ್‌]], [[ಶೌಚ ಕಾಗದ]], ಪ್ರಾಚೀನ [[ಭೂಕಂಪನ ಶೋಧಕ|ಭೂಕಂಪನ]] ಶೋಧಕಗಳು, [[ಬೆಂಕಿಕಡ್ಡಿ|ಬೆಂಕಿ ಪೊಟ್ಟಣ]], [[ಪ್ರಾಣಿ ದೊಡ್ಡಿಗಳು|ಪ್ರಾಣಿ ದೊಡ್ಡಿ]]ಗಳು, ಡಬಲ್‌ ಆಕ್ಷನ್‌ [[ಪಿಸ್ಟನ್‌ ಪಂಪ್‌]], [[ಬ್ಲಾಸ್ಟ್‌ ಫರ್ನೇಸ್‌]] ಮತ್ತು [[ಕಬ್ಬಿಣದ ಎರಕ]], [[ಕಬ್ಬಿಣ]] [[ನೇಗಿಲು]], ಬಹು-ಕೊಳವೆಯ [[ನೇಗಿಲ ಸಾಲು]], [[ತೂಗು ಸೇತುವೆ]] , ಇಂಧನವಾಗಿ [[ನೈಸರ್ಗಿಕ ಅನಿಲ]], [[ದಕ್ಷಿಣ ಮುಖೀಯ ಸಾರೋಟು|ದಕ್ಷಿಣ ಮುಖೀಯ ಸಾರೋಟು/ರಥ]] ಕ್ಕಾಗಿ [[ವ್ಯತ್ಯಾಸಕ (ಯಾಂತ್ರಿಕ ಸಾಧನ)|ವ್ಯತ್ಯಾಸಕ ಗೇರು]], [[ಹೈಡ್ರಾಲಿಕ್‌]] ಶಕ್ತಿಚಾಲಿತ [[ಖಗೋಳ ವಲಯ ಗೋಳ]], ಹೈಡ್ರಾಲಿಕ್‌-ಶಕ್ತಿ ಚಾಲಿತ [[ಹಗುರ ಸುತ್ತಿಗೆ]], ಯಾಂತ್ರಿಕ [[ಸರಪಣಿ ಚಾಲನೆ]] , ಯಾಂತ್ರಿಕ [[ಬೆಲ್ಟ್‌‌ (ಯಾಂತ್ರಿಕ)|ಬೆಲ್ಟ್‌ ಡ್ರೈವ್‌]], ಉಬ್ಬು ಛಾಯಾ ಭೂಪಟ‌, [[ಪ್ರೊಪೆಲ್ಲರ್‌]], [[ಅಡ್ಡಬಿಲ್ಲು]] , [[ಫಿರಂಗಿ]], [[ರಾಕೆಟ್‌]], [[ಬಹುಹಂತದ ರಾಕೆಟ್‌|ಬಹು ಹಂತದ ರಾಕೆಟ್‌]] ಇತ್ಯಾದಿ. ಚೀನೀ [[ಖಗೋಳಶಾಸ್ತ್ರ|ಖಗೋಳಶಾಸ್ತ್ರಜ್ಞರು]] [[ಮಹಾನವ್ಯ]](ಸೂಪರ್‌ನೋವಾ)ವನ್ನು ದಾಖಲಿಸಿದವರಲ್ಲಿ ಮೊದಲಿಗರು. ಖಗೋಳಶಾಸ್ತ್ರಜ್ಞ [[ಶೆನ್‌ ಕುವೋ|ಶೆನ್‌ ಕುವೋನ]] (೧೦೩೧–೧೦೯೫) ಏಕಾಂಗಿ ಸಾಧನೆಯೇ ಪ್ರಭಾವ ಬೀರುವಂತಹದ್ದು, ಸೂರ್ಯ ಮತ್ತು ಚಂದ್ರರಿರುವುದು ವರ್ತುಲಾಕಾರದಲ್ಲಿ ಎಂಬ ಸಿದ್ಧಾಂತ ಮಂಡಿಸಿ , ತನ್ನ ಉತ್ತಮಪಡಿಸಿದ ದೂರದರ್ಶಕ ನಳಿಕೆಯ ಸಹಾಯದಿಂದ [[ಧೃವ|ಧೃವ ನಕ್ಷತ್ರ]]ದ ಸ್ಥಾನವನ್ನು ಸರಿಪಡಿಸಿದುದಲ್ಲದೇ , [[ವಾಸ್ತವವಾದ ಉತ್ತರ|ವಾಸ್ತವವಾದ ಉತ್ತರದಿಕ್ಕು]] ಎಂಬ ಕಲ್ಪನೆಯನ್ನು ಕಂಡುಹಿಡಿದು, [[ಗ್ರಹಗಳ ಚಲನೆ|ಗ್ರಹಗಳ ಚಲನೆಗಳ]] ಬಗ್ಗೆ ಹಿಮ್ಮುಖ ಚಲನೆಯಂತಹಾ ಗ್ರಂಥ ಬರೆದು, ಹಾಗೂ [[ಕಕ್ಷೆ|ಕಕ್ಷೆಗಳಲ್ಲಿ]] ನಡೆಯುವ ಗ್ರಹಗಳ ಪಥವನ್ನು ತಿರುಗುತ್ತಿರುವ [[ವಿಲ್ಲೋ]] ಎಲೆಯ ಆಕೃತಿಯಲ್ಲಿರುವ ಬಿಂದುಗಳೊಂದಿಗೆ ಹೋಲಿಕೆ ಮಾಡಿದ್ದನು. ಪುರಾವೆಗಳೊಂದಿಗೆ [[ಭೂರೂಪಶಾಸ್ತ್ರ|ಭೂರೂಪಶಾಸ್ತ್ರದಲ್ಲಿ]] ಭೂರಚನೆಯಾಗುವುದನ್ನು ಮತ್ತು [[ಭೂಹವಾಗುಣ ಇತಿಹಾಸ ಶಾಸ್ತ್ರ|ಭೂಹವಾಗುಣ ಇತಿಹಾಸಶಾಸ್ತ್ರ]]ದಲ್ಲಿ [[ಹವಾಗುಣ ಬದಲಾವಣೆ|ಹವಾಗುಣ ಬದಲಾವಣೆಯನ್ನು]] ಕುರಿತು ತನ್ನದೇ ಆದ [[ಭೂವೈಜ್ಞಾನಿಕ|ಭೂರಚನಾ ಶಾಸ್ತ್ರದ]] ಸಿದ್ಧಾಂತಗಳನ್ನು ಮಂಡಿಸಿದನು. ಇನ್ನಿತರ ಪ್ರಮುಖ ಖಗೋಳಶಾಸ್ತ್ರಜ್ಞರೆಂದರೆ [[ಗ್ಯಾನ್‌ ಡೆ|ಗಾನ್‌ ಡೇ]], [[ಷಿ ಷೆನ್|ಷಿ ಷೆನ್‌]], [[ಝ್ಯಾಂಗ್‌ ಹೆಂಗ್‌]], [[ಯಿ ಕ್ಸಿಂಗ್‌]], [[ಝ್ಯಾಂಗ್‌ ಸಿಕ್ಸುನ್‌|ಝ್ಯಾಂಗ್‌ ಸಿಕ್ಸಂ]], [[ಸು ಸಾಂಗ್‌]], [[ಗುವೋ ಷೌಜಿಂಗ್‌|ಗುವೋ ಶೌಜಿಂಗ್‌]], ಮತ್ತು [[ಕ್ಸು ಗುವಾಂಗ್‌ಕ್ವಿ]]. [[ಚೀನಾದ ಗಣಿತಶಾಸ್ತ್ರ|ಚೀನೀಯ ಗಣಿತಶಾಸ್ತ್ರವು]] [[ಗ್ರೀಕರ ಗಣಿತಶಾಸ್ತ್ರ|ಗ್ರೀಕ್‌ ಗಣಿತಶಾಸ್ತ್ರ]]ದಿಂದ ಪ್ರತ್ಯೇಕವಾಗಿ ವಿಕಸನಗೊಂಡಿರುವುದರಿಂದ [[ಗಣಿತಶಾಸ್ತ್ರದ ಇತಿಹಾಸ|ಗಣಿತಶಾಸ್ತ್ರದ ಇತಿಹಾಸದಲ್ಲಿ]] ಬಹಳ ಆಸಕ್ತಿದಾಯಕವಾಗಿದೆ. [[ಸಾಂಗ್‌ ಯಿಂಗ್‌‌ಕ್ಸಿಂಗ್‌|ಸಾಂಗ್‌ ಯಿಂಗ್‌ಕ್ಸಿಂಗ್‌]] (೧೫೮೭–೧೬೬೬) ರಚಿತ ''ಟಿಯಾಗಾಂಗ್‌ ಕಯ್‌ವು'' [[ವಿಶ್ವಕೋಶ|ವಿಶ್ವಕೋಶದಂತೆ]] ಚೀನೀಯರು ತಮ್ಮ ತಾಂತ್ರಿಕ ಸಾಧನೆಗಳೆಲ್ಲವನ್ನೂ ದಾಖಲಿಸುವಲ್ಲಿ ತುಂಬ ಉತ್ಸುಕತೆ ಹೊಂದಿದ್ದರು.
 
೬,೨೬೧

edits

"https://kn.wikipedia.org/wiki/ವಿಶೇಷ:MobileDiff/727507" ಇಂದ ಪಡೆಯಲ್ಪಟ್ಟಿದೆ