ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
template added
೪೨ ನೇ ಸಾಲು:
 
====='ಸಮಾನ ಊರ್ಜಿತತ್ವ'ವು ತಪ್ಪು ಸಮತೋಲನ ಉಂಟುಮಾಡಬಲ್ಲುದು=====
ಎಲ್ಲಾ ದೃಷ್ಟಿಕೋನಗಳಿಗೆ ಪ್ರಾಮುಖ್ಯತೆ ಕೊಡಬೇಕಾದ್ದು ಮುಖ್ಯವಾದರೂ ಕೂಡ, ಮುಖ್ಯವಾಹಿನಿಯಲ್ಲಿ ಒಪ್ಪಿತವಾದ ದೃಷ್ಟಿಕೋನಗಳ ಜೊತೆ ಬೇರೆ ಎಲ್ಲಾ ಚಿಕ್ಕ ಚಿಕ್ಕ ದೃಷ್ಟಿಕೋನಗಳನ್ನು ಅಥವಾ ವಿಶೇಷ/ವಿಭಿನ್ನ ದೃಶಷ್ಟಿಕೋನಗಳನ್ನೂ ಸಮಾನ ಊರ್ಜಿತತೆಯಿಂದ ಪ್ರಸ್ತುತಪಡಿಸಬೇಕೆಂದು ವಿಕಿಪೀಡಿಯ ನೀತಿನಿಯಮಗಳು ಹೇಳುವುದಿಲ್ಲ. ಜಗತ್ತಿನಲ್ಲಿ ಹಲವಾರು ರೀತಿಯ ನಂಬಿಕೆಗಳು ಇರುತ್ತವೆ. ಉದಾಹರಣೆ: ಭೂಮಿ ಚಪ್ಪಟೆಯಾಗಿದೆ, ಚಂದ್ರನ ಮೇಲೆ ಮಾನವ ಕಾಲಿಟ್ಟಿದ್ದು ಸುಳ್ಳುಕತೆ ಇತ್ಯಾದಿ. ಪಿತೂರಿಯ ಸಿದ್ಧಾಂತಗಳು, ಹುಸಿವಿಜ್ಞಾನ, ಊಹಾಪೋಹದ ಇತಿಹಾಸ, ಮೇಲ್ನೋಟಕ್ಕೆ ಸರಿಯೆನಿಸುವ ಆದರೆ ಪ್ರಸ್ತುತ ಒಪ್ಪಿತವಲ್ಲದ ಸಿದ್ಧಾಂತಗಳನ್ನು ಹಾಕಬಾರದು. ವಿಶ್ವಕೋಶದ ಸಂಪಾದಕರಾಗಿ ನಾವು ಇಂತಹ ಮಾಹಿತಿಗಳನ್ನು ಹಾಕದೇ ಬಿಡುವುದರಿಂದ ಇಂತಹವುಗಳಿಗೆ ಮಾನ್ಯತೆ ದೊರೆಯುವುದನ್ನು ತಪ್ಪಿಸಬಹುದು. ಇಲ್ಲದಿದ್ದಲ್ಲಿ ಅವಶ್ಯಕತೆ ಇದ್ದಾಗ ಸರಿಯಾದ ರೀತಿಯಲ್ಲಿ, ಸಾಂದರ್ಭಿಕವಾಗಿ ವಿವರಿಸಬಹುದು.
 
====ಒಳ್ಳೆಯ ಸಂಶೋಧನೆ====
ಅಧಿಕೃತ,ನಂಬಲರ್ಹ ಮೂಲಗಳ ಆಧಾರದಲ್ಲಿ ಮಾಡುವ ಒಳ್ಳೆಯ ನಿಷ್ಪಕ್ಷವಾದ ಸಂಶೋಧನೆಯು ತಟಸ್ಥ ದೃಷ್ಟಿಕೋನವನ್ನು ಸಾಧಿಸಲು ಸಹಾಯಕಾರಿ. ಗಣ್ಯ ಪುಸ್ತಕಗಳು, ಪತ್ರಿಕೆ ಲೇಖನಗಳು ಮತ್ತು ವಿಶ್ವಾಸಾರ್ಹ ಆನ್ ಲೈನ್ ಮೂಲಗಳನ್ನು ಬಳಸಿಕೊಳ್ಳಬೇಕು. ಅಂತಹ ಉತ್ತಮ ಗುಣಮಟ್ಟದ ಮೂಲಗಳನ್ನು ಹುಡುಕಲು ಸಹಾಯ ಬೇಕಾದಲ್ಲಿ ಆಯಾ ಪುಟದ ಚರ್ಚೆಪುಟದಲ್ಲಿ ಇತರ ಸಂಪಾದಕರನ್ನು ಕೇಳಬಹುದು ಅಥವಾ [[:w:Wikipedia:Reference_desk|Reference Desk]]ನಲ್ಲಿ ಕೇಳಬಹುದು.