"ಐರೋಪ್ಯ ಪರಮಾಣು ಶಕ್ತಿ ಸಮುದಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: '''ಐರೋಪ್ಯ ಪರಮಾಣು ಶಕ್ತಿ ಸಮುದಾಯ''': ಐರೋಪ್ಯ ಆರ್ಥಿಕ ಸಂಘಟನೆ ಉದ್ದೇಶದಿಂದ ಸ್...)
 
'''ಐರೋಪ್ಯ ಪರಮಾಣು ಶಕ್ತಿ ಸಮುದಾಯ''': ಐರೋಪ್ಯ ಆರ್ಥಿಕ ಸಂಘಟನೆ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಗಳಲ್ಲಿ ಒಂದು. ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಆರ್ಥಿಕ ಸಹಕಾರ ಮತ್ತು ಸಂಘಟನೆಯ ಮೂಲಕ ಉತ್ಪಾದನೆಯನ್ನೂ, ಅಂತಾರಾಷ್ಟ್ರೀಯ ವ್ಯಾಪಾರವನ್ನೂ ಹೆಚ್ಚಿಸಿ ತನ್ಮೂಲಕ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದು ಸಾಧ್ಯವೆಂಬ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ದೊರಕಿತು. ಬೆಲ್ಜಿಯಂ, ನೆದರ್ರ್ಲೆಂಡ್ಸ್‌ ಮತ್ತು ಲಕ್ಸೆಂಬರ್ಗ್ ಸೇರಿ ಸ್ಥಾಪಿಸಿದ ಬೆನೆಲಕ್ಸ್‌ (1949), ಮತ್ತು ಫ್ರಾನ್ಸ್‌, ಪಶ್ಚಿಮ [[ಜರ್ಮನಿ]], [[ಇಟಲಿ]], ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ನೆದರ್ಲೆಂಡ್ಸ್‌ ಕೂಡಿ ರಚಿಸಿದ ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ (1952) ಇವು ಐರೋಪ್ಯ ಆರ್ಥಿಕ ಸಂಘಟನೆಯ ಪ್ರಾರಂಭದ ಯತ್ನಗಳಲ್ಲಿ ಮುಖ್ಯವಾದುವು. ಇವುಗಳ ಕಾರ್ಯ ಚಟುವಟಿಕೆಗಳಿಂದ ಲಭ್ಯವಾದ ಅನುಭವವನ್ನಾಧರಿಸಿ ಉನ್ನತಮಟ್ಟದ ಆರ್ಥಿಕ ಸಂಘಟನೆಗಾಗಿ ಪ್ರಯತ್ನ ಪ್ರಾರಂಭವಾಯಿತು.http://www.kanaja.in/%E0%B2%AF%E0%B3%81%E0%B2%B0%E0%B3%8B%E0%B2%AA%E0%B3%8D-%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF-%E0%B2%B5%E0%B2%BF%E0%B2%B5%E0%B2%BF%E0%B2%A7-%E0%B2%86%E0%B2%AF-40/
 
==ಐರೋಪ್ಯ ರಾಷ್ಟ್ರಗಳ ವಿದೇಶೀ ವ್ಯವಹಾರ==
"https://kn.wikipedia.org/wiki/ವಿಶೇಷ:MobileDiff/721716" ಇಂದ ಪಡೆಯಲ್ಪಟ್ಟಿದೆ