ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
ಲೇಖನವನ್ನು ಪರಿಷ್ಕರಿಸಲಾಗಿದೆ.
೧ ನೇ ಸಾಲು:
'''ಆಕಾಶವಾಣಿ''' ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಈ ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ 'ಆಕಾಶದಿಂದ ಬರುವ ದನಿ' ಎಂದರ್ಥ. ಕೆಲವರು [[ರವೀಂದ್ರನಾಥ ಠಾಗೋರ್]] ಅವರು ೧೯೩೦ ರಲ್ಲಿ ರೇಡಿಯೋ ಪದಕ್ಕೆ 'ಆಕಾಶವಾಣಿ' ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು ೧೯೨೦ ರಲ್ಲಿ ಕನ್ನಡದ ಬರಹಗಾರರಾದ [[ನಾ. ಕಸ್ತೂರಿ]]ಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ.
[[ಚಿತ್ರ:Vittal vihar.jpg|thumb|ವಿಠಲ ವಿಹಾರ]]
[[ಚಿತ್ರ:Radio go.jpg|thumb|ಡಾ.ಎಂ.ವಿ.ಗೋಪಾಲಸ್ವಾಮಿ]]
 
==ಮೈಸೂರು ಆಕಾಶವಾಣಿಯ ಇತಿಹಾಸ==
Line ೧೧ ⟶ ೧೨:
 
=== ದೇಶದ ಮೊದಲ ಬಾನುಲಿ ರೇಡಿಯೋ ===
[[ಚಿತ್ರ:Radio go.jpg|thumb|ಡಾ.ಎಂ.ವಿ.ಗೋಪಾಲಸ್ವಾಮಿ]]
* ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ರೇಡಿಯೋ ಕೇ೦ದ್ರವೊಂದನ್ನು ಸ್ಥಾಪಿಸಿದರು. ಆಗ ೧೯೩೫ ರ ಸಮಯ. ಕಾಲೇಜಿನ ಕಾರ್ಯಗಳನ್ನು ಮುಗಿಸಿದ ನಂತರದ ಸಮಯವನ್ನು ಸದುಪಯೋಗ ಮಾಡಲು ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಆಸೆ ಹುಟ್ಟಿತು.
* ಡಾ.ಎಂ.ವಿ.ಗೋಪಾಲ ಸ್ವಾಮಿಯವರು ಲಂಡನ್ ಗೆ ಹೋಗಿದ್ದ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಕೆಯ ಟಾಲ್ ಎಂಬ ಟ್ರಾನ್ಸ್ ಮೀಟರ್ ತಂದು ಕೆಆರ್ಎಸ್ ರಸ್ತೆಯಲ್ಲಿರುವ ತಮ್ಮ ಮನೆ ವಿಠಲ ವಿಹಾರದಲ್ಲಿ ಸ್ಥಾಪಿಸುತ್ತಾರೆ. ಈ ಪ್ರೇಷಕದಿಂದ ೧೯೩೫ ಸೆಪ್ಟೆಂಬರ್ ೧೦ ರಂದು ರೇಡಿಯೋದ ಮೊದಲ ಅಲೆ ಪ್ರಸಾರವಾಗುತ್ತದೆ. ಇದನ್ನು ಕೇಳಲು ಸ್ವತ: ಮೈಸೂರಿನ ಮಹಾರಾಜರು ಕಾಲೇಜಿನ ಅಸೆಂಬ್ಲಿ ಹಾಲಿನಲ್ಲಿ ಹಾಜರಿದ್ದರು.
೨೧ ನೇ ಸಾಲು:
 
=== ಆಕಾಶವಾಣಿ ರಾಮರಾಯರು. ===
* ರೇಡಿಯೊ ಎಂಬ ಒಂದು ಅದ್ಭುತವು ಜನತೆಯ ಮುಂದೆ ಬಂದಾಗ ಅದಕ್ಕೆ ‘ಆಕಾಶದಿಂದ ಬರುವ ವಾಣಿ’, ‘ಆಕಾಶವಾಣಿ ’ಎಂಬ ಹೆಸರಿನಿಂದ ಕರೆದು ಪೂರ್ತಿ ವಿವರಗಳನ್ನೊಳಗೊಂಡ ಪುಸ್ತಕವೊಂದು ೧೯೩೨ ಅಚ್ಚಾದಾಗ ವಿಸ್ಮಯ ಹಾಗೂ ಬೆರಗಿನಿಂದ ಜನತೆ ಅದನ್ನು ಸ್ವೀಕರಿಸಿದರು. ಇದನ್ನು ಬರೆದವರು "ಆಕಾಶವಾಣಿ ರಾಮರಾಯರು" ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು.
* ಆದರೆ ಪುಸ್ತಕದಲ್ಲಿ ಲೇಖನದಲ್ಲಿ ತಮ್ಮ ಹೆಸರನ್ನು ಬಯಲು ಮಾಡಲಿಲ್ಲ. ಕಾರಣ, ಸರಕಾರಿ ನೌಕರರಾಗಿದ್ದುಕೊಂಡು ಬ್ರಿಟಿಷ್ ಸರಕಾರದ ಮೇಲಿನ ಅಂಜಿಕೆ ಕಾರಣವಾಗಿತ್ತು. 1932ರಲ್ಲಿ ರಾಮರಾಯರು ಬರೆದ ಆಕಾಶವಾಣಿ ಪುಸ್ತಕ ೧೫ -೨೦ ಪುಟಗಳನ್ನೊಳಗೊಂಡಿದೆ. ಮುಖಪುಟದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ಮೇಲಿನ ಭಾಗದಲ್ಲಿ ಬರೆಯಲಾಗಿದೆ. ಸುತ್ತಲೂ ಕಪ್ಪು ಗೆರೆಗಳ ಬಾರ್ಡರ್ ನಾಲ್ಕೂ ಬದಿಗಳಲ್ಲದೇ "ಆಲ್ ಕೋಪಿರೈಟ್ ರಿಸರ್ವ್" ಎಂದು ಬರೆದಿದೆ.
* ೧೯೩೨ ರಲ್ಲಿ ರಾಮರಾಯರ ಪುಸ್ತಕ ಅಚ್ಚಾಗಿ ೧೯೪೩ ರ ಹೊತ್ತಿಗೆ ಬಹಳ ಸಮಯವೇ ಸಂದು ಹೋಗಿತ್ತು.ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಯೊಂದು ಹೀಗೆ ಹೇಳುತ್ತದೆ. the name akashavani was taken from an article by can unknown writer ಹೆಸರು ಹಾಕದೆ ಬರೆದ ರಾಮರಾಯರೇ ಆಕಾಶವಾಣಿ ಪದದ ಜನಕ ಎಂದು ಸ್ಪಷ್ಟವಾಗಿ ಹೇಳಿತು.
* ೧೯೪೧ ಹಾಗೂ ೧೯೪೫ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯು ಇದೇ ಆಕಾಶವಾಣಿ ಲೇಖನವನ್ನು ಕನ್ನಡ ಸಾಹಿತ್ಯ ಕೃತಿಗಳು ಎಂಬ ಶಾಲಾ ಪಠ್ಯಪುಸ್ತಕದಲ್ಲಿ ರಾಮರಾಯರ ಹೆಸರು ಹುದ್ದೆಗಳೊಂದಿಗೆ ಪ್ರಕಟಿಸಿತು. ಇದರ ಪ್ರತಿಯು ಅವಗಾಹನೆಗೆ ಲಭ್ಯವಿರುತ್ತದೆ.
* 1945ರಲ್ಲಿ ಈ ಲೇಖನ ರಾಮರಾಯರ ಹೆಸರು ಹುದ್ದೆಗಳೊಂದಿಗೆ (ಹೊಸಬೆಟ್ಟು ರಾಮರಾಯರು, ಜಿಲ್ಲಾ ಶಿಕ್ಷಣಾಧಿಕಾರಿ) ಕನ್ನಡದ ಸಾಹಿತ್ಯ ಕೃತಿಗಳು ಎಂಬ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಲು ಮದ್ರಾಸಿನ ಪಠ್ಯಪುಸ್ತಕ ಸಮಿತಿಯಿಂದ ಶಿಫಾರಸು ದೊರಕಿತು. ಹೊಸಬೆಟ್ಟು ರಾಮರಾಯರಿಂದ ಸೃಷ್ಟಿಗೊಂಡ ಈ ಹೆಸರು ರೇಡಿಯೊದ ಜೊತೆಗೆ ಖಾಯಂ ಆಗಿ ಉಪಯೋಗ ವಾಗಲು ತೊಡಗಿದ್ದಲ್ಲದೇ ಸರ್ವರಿಗೂ ಈ ಹೊಸ ಹೆಸರು ಪರಿಚಯವಾಯಿತು.
* ಮುಂದೆ ಇದೇ ಪದವನ್ನು ಮೈಸೂರಿನಲ್ಲಿ ಗೋಪಾಲಸ್ವಾಮಿಯವರ ರೇಡಿಯೊ ಕೇಂದ್ರಕ್ಕೆ ೧೯೪೩ ರಲ್ಲಿ ನಾ.ಕಸ್ತೂರಿಯವರು ಸೂಚಿಸಿದರು.೧೯೩೨ ರಲ್ಲಿ ಜನಿಸಿದ ಆಕಾಶವಾಣಿ ಪದವನ್ನು ೧೧ ವರ್ಷದ ಬಳಿಕ ಮೈಸೂರಿನ ಓರ್ವರು ಪುಸ್ತಕದ ಮರು ಮುದ್ರಣ ಮಾಡಿದರು. ಈ ಪುಸ್ತಕದ ಹಿಂಭಾಗ ಅಥವಾ ಮುಂಭಾಗದಲ್ಲಿ ರಾಮರಾಯರ ಹೆಸರು ಇತ್ತು. ಈ ಮೂಲಕ ೧೯೪೧ -೧೯೪೩ ರ ವರ್ಷಗಳ ನಂತರ ೧೯೩೨ ರ ಅಜ್ಞಾತ ಜನಕ ಯಾರೆಂಬ ಸತ್ಯವು ಹೊರಗೆ ಬಿತ್ತು.
* ೧೯೩೨ ರ ಕಿರುಪುಸ್ತಕದ ಮುಖಪುಟವನ್ನು ಆಕರ್ಷಕವಾಗಿ ಮುದ್ರಿಸಲಾಗಿತ್ತು. ನಾಲ್ಕು ಕಡೆಗಳ ಬದಿಯಲ್ಲಿ ಕಪ್ಪುರೇಖೆಗಳು. ಮೇಲ್ಬಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ , ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ‘ಆ ’ಮತ್ತು ‘ಣಿ’ ದೊಡ್ಡದಾಗಿ ಒಳಗಿನ ಅಕ್ಷರಗಳು ಕಿರಿದಾಗುತ್ತಾ ಬಲ ಭಾಗದಲ್ಲಿ ಕೆಳಗಿನಿಂದ ಒಂದು ರೇಡಿಯೊದ ಚಿತ್ರಣವನ್ನು ಕೈಯಲ್ಲಿ ಬಿಡಿಸಲಾಗಿತ್ತು.
 
==ನೋಡಿ==
ರೇಡಿಯೋ ಕಲಾವಿದರು:ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು.:1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.:[[http://www.prajavani.net/news/article/2016/10/09/443930.html]]
 
==ಉಲ್ಲೇಖ==
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ