ಕಾಲೇಜು ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಇತಿಹಾಸ==
ಉನ್ನತ ಪ್ರೌಢಶಾಲೆಯ (ಹೈಯರ್ ಸೆಕೆಂಡರಿ ಸ್ಕೂಲ್) ಅನಂತರದ ಶಿಕ್ಷಣ; ಸಾಮಾನ್ಯವಾಗಿ ಸಾಂಸ್ಕøತಿಕ ಶಿಕ್ಷಣಕ್ಕೆ ಮಾತ್ರ ಈ ಹೆಸರನ್ನು ಬಳಸುವುದು ಸಂಪ್ರದಾಯವಾಗಿದ್ದರೂ ಈಚೆಗೆ ಆ ಮಟ್ಟದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೂ ಬಳಸಲಾಗುತ್ತಿದೆ; ಸ್ನಾತಕೋತ್ತರ ಶಿಕ್ಷಣಕ್ಕೂ ಇದೇ ಹೆಸರಿದೆ. ಉನ್ನತ ಶಿಕ್ಷಣದ ಅಥವಾ ವಿಶ್ವವಿದ್ಯಾಲಯದ ಶಿಕ್ಷಣದ ಪ್ರಥಮ ಪದವಿಯ ಶಿಕ್ಷಣ ಇದರ ಮೊದಲ ಹಂತ; ಇದರ ಎರಡನೆಯ ಹಂತವೇ ಸ್ನಾತಕೋತ್ತರ ಶಿಕ್ಷಣ (ಡಾಕ್ಟರೇಟ್ ಮತ್ತು ಸಂಶೋಧನೆಯ ಭಾಗವನ್ನು ಒಳಗೊಂಡಂತೆ); ವಿಶ್ವವಿದ್ಯಾಲಯದ ಅಂಗಸಂಸ್ಥೆಯಲ್ಲಿ ವ್ಯವಸ್ಥೆಗೊಳಿಸಿರುವ ಯಾವುದೇ ರೀತಿಯ ಶಿಕ್ಷಣಕ್ಕೂ ಇದನ್ನು ಬಳಸುವುದೂ ಉಂಟು; ಸ್ವಯಮಾಧಿಕಾರ ಹೊಂದಿರುವ ವಿಶ್ವವಿದ್ಯಾಲಯದ ಯಾವುದೇ ಸಂಸ್ಥೆಯೊಂದು ವ್ಯವಸ್ಥೆಗೊಳಿಸಿರುವ ಶಿಕ್ಷಣವಿದು.ಸಾಮಾನ್ಯವಾಗಿ ಕಾಲೇಜು ಶಿಕ್ಷಣ ಹದಿನೆಂಟನೆಯ ವರ್ಷದಿಂದ ಆರಂಭವಾಗುತ್ತದೆ. ಅದುವರೆಗೆ 5 ವರ್ಷ ವಯಸ್ಸಿನಿಂದ ಹನ್ನೊಂದು-ಹನ್ನೆರಡು ವರ್ಷಗಳ ಪೂರ್ವಭಾವಿ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೊರಕಿರುತ್ತದೆ. ಪ್ರಾಚೀನ ಭಾರತದಲ್ಲಿ 16-18ನೆಯ ವಯಸ್ಸಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಿಕ್ಷಣವೀಯುತ್ತಿದ್ದ ಉನ್ನತ ಶಿಕ್ಷಣ ಸಂಸ್ಥೆಗಳೆಲ್ಲ ಕಾಲೇಜು ಮಟ್ಟದ ಶಿಕ್ಷಣವೀಯುತ್ತಿದ್ದುವೆಂದು ಭಾವಿಸುವುದುಂಟು. ಆ ಶಿಕ್ಷಣ 6-8 ವರ್ಷಗಳ ಕಾಲಾವಧಿಯ ವರೆಗೆ ನಡೆಯುತ್ತಿತ್ತು. ಇಂದು ವಿಶ್ವವಿದ್ಯಾಲಯದ ಇಡೀ ಶಿಕ್ಷಣಕ್ಕೆ ಈ ಹೆಸರನ್ನು ಬಳಸುವಾಗ ಈ ಕಾಲವಧಿ ಒಪ್ಪುವಂತೆಯೇ ಇರುವುದು ಸ್ಪಷ್ಟವಾಗುತ್ತದೆ.<ref>http://www.prajavani.net/news/article/2016/04/24/404246.html</ref>
 
==ಕಾಲೇಜು ಶಿಕ್ಷಣದ ಉದ್ದೇಶ==
"https://kn.wikipedia.org/wiki/ಕಾಲೇಜು_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ