ಗೃಹಾಲಂಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
ಅಡುಗೆಮನೆಯಲ್ಲಿ ಸಾರಿಸಿದ ನೆಲದ ಮೇಲೆ ಬಣ್ಣಬಣ್ಣದ ಮಣೆಗಳನ್ನು ಹಾಕಿ ಹಸಿರು ಕುಡಿಬಾಳೆಯನ್ನಿಟ್ಟು ಅದರ ಸುತ್ತಲೂ ಕಲಾಪೂರ್ಣವಾದ ರಂಗವಲ್ಲಿಯನ್ನಿಕ್ಕಿ, ಹಬ್ಬಹರಿದಿನಗಳಲ್ಲಿ, ಅತಿಥಿ ಅಭ್ಯಾಗತರು ಬಂದಾಗ ಉಣಬಡಿಸುವುದು ಭಾರತೀಯ [[ಗೃಹಿಣಿ]]ಗೆ ಸಂತಸದ ಸುಗ್ಗಿ.
 
ದೇವರಮನೆಯಲ್ಲಿ ಜಗಲಿಯ ಮೇಲೆ ಮಂಟಪವನ್ನಿಟ್ಟು ಅದರಲ್ಲಿ ಆರಾಧ್ಯ ದೇವತೆಯ ಮೂರ್ತಿಯನ್ನಿರಿಸುವರು. ಮಂಟಪದ ಎರಡೂ ಬದಿಗೆ ಅಂದಚೆಂದದ ನಂದಾದೀವಿಗೆಗಳು; ಸುತ್ತಲೂ [[ರಂಗವಲ್ಲಿ]], ಗಂಟೆಜಾಗಟೆ, ಪಂಚಾರತಿ, ಬಗೆಬಗೆಯ ದೀಪಸ್ತಂಭಗಳು, ಬಣ್ಣ ಬಣ್ಣದ ಹೂಗಳಿಂದ ದೇವರಮನೆ ಕಲಾಪೂರ್ಣವಾಗಿ ಕಂಗೊಳಿಸುವುದು.<ref>Pile, J., 2003, Interior Design, 3rd edn, Pearson, New Jersey, USA</ref>
 
ಇಂದಿನ ಗೃಹಿಣಿ ಹಳೆಯ ಪದ್ಧತಿ ಹೊಸಪದ್ಧತಿಗಳಲ್ಲಿಯ ಒಳ್ಳೆಯದನ್ನು, ಕಲಾಪೂರ್ಣವಾದುದನ್ನು ಆಯ್ದುಕೊಂಡು ಗೃಹಾಲಂಕಾರ ಮಾಡುವುದು ವಾಡಿಕೆಯಾಗಿದೆ. ಕಸದಲ್ಲಿಯೂ ರಸವನ್ನು ತೆಗೆಯಬಲ್ಲ ಕುಶಲ ಕಲೆಗಾರ್ತಿಯಾದ ಅವಳು ಮನೆಯನ್ನು ಸೊಬಗಿನ ಬೀಡನ್ನಾಗಿ ಮಾಡುವಳು. ಇತ್ತೀಚೆಗೆ ಬಣ್ಣಗಳ ಭಾವಗಳನ್ನರಿತು ಬೇರೆ ಬೇರೆ ಕೋಣೆಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚುತ್ತಾರೆ. ಪಡಸಾಲೆಗೆ ಕೆನೆಬಣ್ಣವಾದರೆ ಊಟದ ಮನೆಗೆ ತಿಳಿಗುಲಾಬಿ, ಮಲಗುವ ಕೋಣೆಗೆ ತಿಳಿಹಳದಿ, ಅಡುಗೆಯ ಮನೆಗೆ ತಿಳಿಹಸಿರು ಇಲ್ಲವೆ ತಿಳಿನೀಲಿ, ಬಣ್ಣಗಳನ್ನು ಹಚ್ಚುವದರಲ್ಲಿಯೂ ಗೃಹಾಲಂಕರಣ ಕಲೆ ಅಡಗಿದೆ. ಮನೆಯ ಆಕರ್ಷಣೆಗೆ ಬಣ್ಣವೇ ಆಧಾರ. ಕೋಣೆ ಸಣ್ಣದಿದ್ದರೂ ತಿಳಿಬಣ್ಣ ಹಚ್ಚಿದರೆ ನೋಡಲಿಕ್ಕೆ ವಿಶಾಲವಾಗಿ ಕಾಣುವುದು. ಬಣ್ಣಗಳ ಪರಿಣಾಮ ವಾತಾವರಣದ ಮೇಲೆ ಆಗುತ್ತದೆ. ದಟ್ಟ ಬಣ್ಣಗಳು ಉತ್ಸಾಹದಾಯಕವಾಗಿ ವರ್ಣರಂಜಿತವಾಗಿ ಕಾಣಿಸುತ್ತವೆ. ತಿಳಿ ಬಣ್ಣಗಳು ಶಾಂತಿದಾಯಕವಾಗಿ, ಉಲ್ಲಾಸದಾಯಕವಾಗಿ ತೋರುತ್ತವೆ. ನೆಲಕ್ಕೆ ಸಿಮೆಂಟ್ ಕಾಂಕ್ರೀಟ್ ಇಲ್ಲವೆ ಮೊ¸óÁಯಿಕ್ ಮಾಡಿಸುವುದು ರೂಢಿಯಾಗಿದೆ. ಮೇಲ್ಚಾವಣಿಗೆ ಬಿಳಿ ಇಲ್ಲವೆ ತಿಳಿಬಣ್ಣಗಳನ್ನು ಉಪಯೋಗಿಸುವರು.
==ಶ್ಯಲಿ==
ಹುಸಿಯಲ್ಲಿ ಕೆಲವು ಖುರ್ಚಿಗಳನ್ನಿಡುವರು<ref>Brief History of Interior Design (2007) Retrieved December 7, 2012, from www.interior-design-school.net</ref>. ಪಕ್ಕದ ಟೀಪಾಯಿಯ ಮೇಲೆ ಓದುವ ಪತ್ರಿಕೆಗಳನ್ನು ಜೋಡಿಸಿಡುವರು. ಪಡಸಾಲೆಯಲ್ಲಿ ಸೋಫಾಸೆಟ್, ದಿವಾನ, ರೇಡಿಯೊ, ಟಿವಿ ಅಲಂಕಾರದ ಕಲಾಕುಶಲ ವಸ್ತುಗಳ ಕಪಾಟು, ಪುಸ್ತಕಗಳ ಕಪಾಟು ಇವನ್ನು ಕಾಣಬಹುದು. ಹಿಂದಿನಂತೆ ಹತ್ತಾರು ಚಿತ್ರಗಳನ್ನು ಸದಾ ಕಾಲವೂ ತೂಗುಹಾಕುವ ಬದಲು ಒಂದೆರಡು ನಿಸರ್ಗ ಸೌಂದರ್ಯದ ವರ್ಣಚಿತ್ರಗಳನ್ನು ಗೋಡೆಗೆ ಹಾಕಿದ್ದು ಮಾಸಕ್ಕೊ ಪಕ್ಷಕ್ಕೊ ಒಮ್ಮೆ ಅವನ್ನು ಬದಲಿಸುವರು. ನೆಲಕ್ಕೆ ಚಾಪೆ ಇಲ್ಲವೆ ರತ್ನಗಂಬಳಿ ಹಾಸುವರು. ಹೂದಾನಿಗಳಲ್ಲಿ ಜಪಾನಿ ಪದ್ಧತಿಯಂತೆ ಹೂಗಳನ್ನಲಂಕರಿಸಿ ಪಡಸಾಲೆಯ ನಡುವಿನಲ್ಲೊ ಮೂಲೆಯೊಂದರಲ್ಲೊ ಇಡುವುದು ಗೃಹಾಲಂಕರಣದ ಮುಖ್ಯ ಅಂಗವಾಗಿದೆ. ಹೂಗಳಲ್ಲಿ ಮನವನ್ನರಳಿಸುವ ಶಕ್ತಿ ಇದೆ. ಅವುಗಳ ಬಣ್ಣ ಪಡಸಾಲೆಯ ಒಟ್ಟಂದದ ಬಣ್ಣಕ್ಕೆ ಹೊಂದಿಕೆಯಾಗುವಂತಿದ್ದರೆ ಬಹು ಚೆನ್ನು.
 
ಆಧುನಿಕ ಗೃಹಾಲಂಕಾರ ಕಲೆಯಲ್ಲಿ ಬಾಗಿಲು, ಕಿಟಕಿಗಳಿಗೆ ಪರದೆಯನ್ನು ಹಾಕುವುದು ಮುಖ್ಯವಾಗಿದೆ. ಕಿಟಕಿಗಳ ಮೂಲಕ ಚೆನ್ನಾಗಿ ಗಾಳಿ, ಬೆಳಕು ಬರುವಂತೆ ಅಲ್ಲಿನ ಪರದೆಗಳು ತೆಳ್ಳಗಿರಬೇಕು. ತಿಳಿಬಣ್ಣದವಾಗಿರಬೇಕು. ಬಾಗಿಲು ಪರದೆಗಳು ದಪ್ಪಬಟ್ಟೆಯವಿರಬೇಕು. ದಟ್ಟಬಣ್ಣದವಿರಬೇಕು. ಗೋಡೆಯ ಬಣ್ಣಕ್ಕೆ ಹೊಂದಿಕೆಯಾಗುವಂತಿರಬೇಕು. ವರ್ಣಗಳ ಸಾಮರಸ್ಯದಂತೆ ಅನೇಕ ವೇಳೆ ವರ್ಣಭಿನ್ನತೆಯೂ ಕಣ್ಣಿಗೆ ಹಿತವಾಗಬಲ್ಲದು. ಕುರ್ಚಿ, ದಿವಾನಗಳ ಹಾಗೂ ದಿಂಬುಗಳ ಹೊದಿಕೆಗಳು ಒಂದೇ ಬಣ್ಣದವಿರಬೇಕು. ಅವುಗಳ ಮೇಲೆ ಕಲಾಪೂರ್ಣವಾದ ಕಸೂತಿಕೆಲಸ, ಇಲ್ಲವೆ ಬಣ್ಣದ ಚಿತ್ರಗಳು ಇದ್ದರೆ ಒಳ್ಳೆಯದು.
೩೩ ನೇ ಸಾಲು:
ಗೃಹಾಲಂಕರಣ ವಿದ್ಯೆ ಈಗ ಒಂದು ಶಾಸ್ತ್ರವಾಗಿ ಬೆಳೆದಿದೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿದು ಡಿಪ್ಲೊಮ ಮತ್ತು ಪದವಿ ಪರೀಕ್ಷೆಗಳ ಪಠ್ಯವಾಗಿದೆ. (ಎಸ್.ಎಚ್.ಎಂ.)
==ಉಲ್ಲೇಖನಗಳು==
*<ref>Pile, J., 2003, Interior Design, 3rd edn, Pearson, New Jersey, USA</ref>
*<ref>Brief History of Interior Design (2007) Retrieved December 7, 2012, from www.interior-design-school.net</ref>
*Pauline C. Metcalf (2010). [[Syrie Maugham: Staging the Glamorous Interiors]]. Acanthus PressLlc. Retrieved 2013-02-07.
*[["Industrial Design Industry Report"]]. ibisworld.com. July 17, 2008.
{{reflist}}
"https://kn.wikipedia.org/wiki/ಗೃಹಾಲಂಕರಣ" ಇಂದ ಪಡೆಯಲ್ಪಟ್ಟಿದೆ