ಆನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಆನ್ ಳ ಚಿತ್ರಪಟ '''ಆನ್''' (1665 - 1714). ಇಂಗ್ಲೆಂ...
( ಯಾವುದೇ ವ್ಯತ್ಯಾಸವಿಲ್ಲ )

೧೭:೧೭, ೨೧ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ

ಆನ್ (1665 - 1714). ಇಂಗ್ಲೆಂಡ್, ಸ್ಕಾಟ್ಲೆಂಡ್, ಐರ್ಲೆಂಡುಗಳ ರಾಣಿ (1702 - 07). ಅನಂತರ ಬ್ರಿಟನ್ನಿನ ರಾಣಿ (1707-14). ಸ್ಟೂಅರ್ಟ್ ಆಳರಸರಲ್ಲಿ ಕೊನೆಯವಳು. ಜೇಮ್ಸ್ IIನ ಮಗಳು. ಡೆನ್ಮಾರ್ಕಿನ ರಾಜಪುತ್ರ ಜಾರ್ಜ್‍ನನ್ನು ಮದುವೆಯಾದಳು (1683). ಮೈದುನ ವಿಲಿಯಂ ಆಫ್ ಆರೆಂಜ್ ಇಂಗ್ಲೆಂಡ್‍ನ ಮೇಲೆ ದಾಳಿ ಮಾಡಿದಾಗ ತಂದೆಯ ಪಕ್ಷ ಬಿಟ್ಟು ವಿಲಿಯಂನ ಕಡೆ ಸೇರಿದಳು. ಈಕೆ ರಾಣಿಯಾದ ಪ್ರಾರಂಭದಲ್ಲಿ ಆಡಳಿತ ಸಂಸದೀಯ ಮಾದರಿಯಲ್ಲಿ ರೂಪುಗೊಳ್ಳುತ್ತಿತ್ತು. ಅಲ್ಲದೆ ಸ್ಪೇನಿನ ಗಾದಿಗಾಗಿ ದೊಡ್ಡ ಯುದ್ಧ ನಡೆಯುತ್ತಿತ್ತು (1712 - 13). ಸೇನಾಪತಿ ಮಾರಲ್ ಬರೊ ಡ್ಯೂಕ್ ಅನೇಕ ವಿಜಯಗಳನ್ನು ಸಾಧಿಸಿದನಾದರೂ ಯುದ್ಧಗಳಿಗಾದ ಅಪಾರ ವ್ಯಯದ ಬಗ್ಗೆ ವಿಗ್ಗರಿಗೂ ಟೋರಿಗಳಿಗೂ ಘರ್ಷಣೆ ಮೊದಲಾಯಿತು. ಮಕ್ಕಳಾರೂ ಉಳಿಯದ ಕಾರಣ ಆಕ್ಟ್ ಆಫ್ ಸೆಟ್ಲ್‍ಮೆಂಟ್‍ನ(1701)ರೀತ್ಯ ಜಾರ್ಜ್I ಗೆ ಪಟ್ಟವಾಯಿತು. ವೈಯಕ್ತಿಕವಾಗಿ ಆಕೆ ಅಷ್ಟು ಸಮರ್ಥಳಲ್ಲದಿದ್ದರೂ ಪ್ರಸಿದ್ಧ ಸಾಹಿತಿ ಎಡಿಸನ್‍ನಂಥ ಮೇಧಾವಿಗಳ ಬರಹಗಳಿಂದಲೂ ಶಿಲ್ಪ ಕೃತಿಗಳಿಂದಲೂ ರಾಜ್ಯವಿಸ್ತರಣೆ ಮತ್ತು ಆಡಳಿತಕ್ರಮ ಪರಿಷ್ಕರಣದಿಂದಲೂ ಪತ್ರಿಕಾಸ್ವಾತಂತ್ರ್ಯ ಚಳುವಳಿಯಿಂದಲೂ ಆಕೆಯ ಆಡಳಿತಾವಧಿ ಮುಖ್ಯವಾದುದಾಯಿತು. [೧] [೨] [೩]

  1. www.historic-uk.com › History Magazine › History UK › History of Britain
  2. www.historyextra.com/feature/kings-queens/kings-and-queens-profile-queen-anne
  3. https://www.britannica.com/biography/Anne-queen-of-Great-Britain-and-Ireland
ಆನ್ ಳ ಚಿತ್ರಪಟ
"https://kn.wikipedia.org/w/index.php?title=ಆನ್&oldid=720624" ಇಂದ ಪಡೆಯಲ್ಪಟ್ಟಿದೆ