ವ್ಯಾಯಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
==ಹನ್ನೊಂದನೆಯ ಕಾರಣ==
*ಬೊಜ್ಜು ಮತ್ತು ಡೊಳ್ಳು ಹೊಟ್ಟೆ ಕರಗಲು ಓಟದ ವ್ಯಾಯಾಮ ವೊಂದೇ ದಾರಿ. ಕನಿಷ್ಟ ದಿನ ತಪ್ಪದೆ ಅರ್ಧ ಗಂಟೆ ಓಡಿದರೆ ದೇಹದ ಬೊಜ್ಜೂ ಕರಗುವುದು, ಮುಂದೆಬಂದಿರುವ ಡೊಳ್ಳೂ ಕರಗಿ ಆರೋಗ್ಯ ಸೌದರ್ಯ ಹೆಚ್ಚುವುದು. (ಗೌರವಕ್ಕಾಗಿ ಡೊಳ್ಳು ಹೊಟ್ಟೆಯನ್ನೇ ಬಯಸುವವರಿಗೆ ಮದ್ದಿಲ್ಲ!)<ref>[http://greatist.com/fitness/30-convincing-reasons-start-running-now Benefits of Running: 30 Convincing Reasons to Start Now | Greatist]</ref>
==ಈಜು==
*ಯಾವ ವಿಧದ ಸ್ಟ್ರೋಕ್‌ಗಳಲ್ಲಿ ಈಜುತ್ತಾರೆ ಎಂಬುದನ್ನು ಅವಲಂಬಿಸಿ ಇಷ್ಟರ ಪ್ರಮಾಣದ ಕ್ಯಾಲೊರಿಯನ್ನು ಕರಗಿಸಿಕೊಳ್ಳಬಹುದು. ಹತ್ತು ನಿಮಿಷದ ಈ ರೀತಿಯ ಈಜಿನಿಂದ ಇಷ್ಟು ಕ್ಯಾಲೊರಿ ಕರಗುತ್ತದೆ ಎಂಬ ಲೆಕ್ಕ ಇದೆ.
ಆಟವಾಗಿ ಆರಂಭಗೊಂಡ ಈಜು ಹವ್ಯಾಸವಾಗಿ, ವ್ಯಾಯಾಮವಾಗಿ ಕ್ರೀಡೆಯಾಗಿ ಪ್ರಸಿದ್ಧಿಗೊಂಡು ಸಾಕಷ್ಟು ವರ್ಷಗಳೇ ಸಂದಿವೆ. ಈಜು ಫಿಟ್‌ನೆಸ್‌ಗೆ ಹೇಳಿಮಾಡಿಸಿದ ವ್ಯಾಯಾಮ. ಈಜಿಗೆ ದೇಹವನ್ನು ಗಟ್ಟಿಮುಟ್ಟು ಮಾಡುವ ಶಕ್ತಿಯೂ ಇದೆ. ಈಜಿನಿಂದ ಏನೇನು ಪ್ರಯೋಜನವಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ...
*'''ಈಜುವ ಬಹೂಪಯೋಗ:'''
* ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈಜು ಸಹಕಾರಿ.
 
* ತಾಜಾತನ, ಹುರುಪು ತುಂಬುತ್ತದೆ ಈಜು.
 
* ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
 
* ಈಜುವುದರಿಂದ ದೇಹದ ದುರ್ಗಂಧ ಕ್ರಮೇಣ ಕಮ್ಮಿಯಾಗುವುದು.
 
* ಸ್ನಾಯುಗಳನ್ನು ಗಟ್ಟಿಗೊಳಿಸಿ, ಮೂಳೆಗಳ ಸಾಂದ್ರತೆ ಹೆಚ್ಚಿಸುತ್ತದೆ.
 
* ನೀರಿನಲ್ಲಿ ಬಾಲ್ ಪಾಯಿಂಟ್ ವ್ಯಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುವುದು.
 
* ಮಹಿಳೆಯರಲ್ಲಿ ಟೈಪ್ 2 ಡಯಾಬಿಟಿಸ್‌ ಬರುವ ಸಾಧ್ಯತೆಯನ್ನು 30%ರಷ್ಟು ತಡೆಯುತ್ತದೆ.
 
* ದೇಹದಲ್ಲಿ ರಕ್ತ ಸಂಚಲನ ಚುರುಕುಗೊಳ್ಳುತ್ತದೆ.
 
*'''ಈಜಿನಿಂದ ಲಾಭ:'''
* ಮಕ್ಕಳಿಗೆ: ಮಕ್ಕಳಿಗೆ ಉತ್ತೇಜನಕಾರಿಯಾಗಿರುತ್ತದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿರುತ್ತದೆ.
 
* ಅಸ್ತಮಾ ಇರುವವರಿಗೆ: ಈಜುವುದು ಶ್ವಾಸಕೋಶದ ಘನ ಅಳತೆ ಹಿಗ್ಗುವಂತೆ ಮಾಡುತ್ತದೆ. ಇದು ಅಸ್ತಮಾ ಇರುವವರಿಗೆ ಉತ್ತಮ ವ್ಯಾಯಾಮವಾಗಿದೆ.
 
* ರೋಗಿಗಳಿಗೆ: ಈಜುವುದು ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಿಡುವುದರಿಂದ ರೋಗಿಗಳಿಗೆ ಉತ್ತಮ ವ್ಯಾಯಾಮವೂ ಆಗುತ್ತದೆ.
 
* ಗರ್ಭಿಣಿಯರಿಗೆ: ಈಜುವುದು ಮಗುವಿಗೆ ಹೃದಯ ಹಾಗೂ ಸ್ನಾಯುವಿನ ಬೆಳವಣಿಗೆಗೆ ಸಹಕರಿಸುತ್ತದೆ ಹಾಗೂ ಮಗುವಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ.
 
* ಹಿರಿಯ ನಾಗರಿಕರಿಗೆ: ಈಜುವುದು ಮೂಳೆಯನ್ನು ಗಟ್ಟಿಗೊಳಿಸುತ್ತದೆ ಹಾಗೂ ಹೃದಯ ಕಾಯಿಲೆಯನ್ನೂ ತಡೆಯುವುದರಿಂದ ದೀರ್ಘಕಾಲ ಬಾಳುವುದಕ್ಕೂ ಸಹಕಾರಿಯಾಗಿದೆ.
 
* ಸಂಗೀತಗಾರರಿಗೆ: ಈಜುವುದು ಶ್ವಾಸಕೋಶಕ್ಕೆ ವ್ಯಾಯಾಮವಾಗುವುದರಿಂದ ಸಂಗೀತಗಾರರಿಗೂ ಸಹಾಯ ಮಾಡುತ್ತದೆ.
 
*'''ಗಾಯಗೊಳ್ಳುವುದು ವಿರಳ:'''
ಟ್ರೈಅಥ್ಲೀಟ್‌ಗಳು ಗಾಯಗೊಂಡ 10 ಪ್ರಕರಣಗಳ ಮೇಲೆ ನಡೆದ ಅಧ್ಯಯನದಿಂದ, ಈಜಿನಲ್ಲಿ ಗಾಯಗೊಳ್ಳುವವರ ಸಂಖ್ಯೆ ಕಡಿಮೆ ಎಂಬುದು ತಿಳಿದು ಬಂದಿದೆ. ಇದರಲ್ಲಿ 50% ಬೈಸೈಕಲ್‌ನಿಂದ, 43% ಓಟದಿಂದ ಹಾಗೂ ಕೇವಲ 7% ಈಜಿನಿಂದ ಗಾಯಗಳಾಗುತ್ತವೆ ಎಂಬ ಫಲಿತಾಂಶ ದೊರೆತಿದೆ.
 
*ಈಜಿನಿಂದ ಒತ್ತಡ ನಿವಾರಣೆ
20ನಿಮಿಷದ ಈಜಿನ ನಂತರ ಮೆದುಳು ಎಂಡಾರ್ಫಿನ್ ಹಾರ್ಮೋನನ್ನು ಬಿಡುಗಡೆಗೊಳಿಸುತ್ತದೆ. ಇದು ಮನಸ್ಸನ್ನು ಒತ್ತಡದಿಂದ ದೂರವುಳಿಸುವ ಅಂಶವಾಗಿದೆ
 
*'''ಕಾಲು ನೋವಿಗೆ.'''
ಮೊಣಕಾಲು ಅಥವಾ ಕೈ ನೋವು ಇರುವವರು, ಹೃದಯ ಸಂಬಂಧಿ ತೊಂದರೆ ಇರುವವರು ಕೂಡ ಆಳ ಕಡಿಮೆ ಇರುವ ಕೊಳದಲ್ಲಿ ನೀರಿನಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು
 
*'''ಸ್ಟ್ರೋಕ್‌ಗಳು'''
*ಯಾವ ವಿಧದ ಸ್ಟ್ರೋಕ್‌ಗಳಲ್ಲಿ ಈಜುತ್ತಾರೆ ಎಂಬುದನ್ನು ಅವಲಂಬಿಸಿ ಇಷ್ಟರ ಪ್ರಮಾಣದ ಕ್ಯಾಲೊರಿಯನ್ನು ಕರಗಿಸಿಕೊಳ್ಳಬಹುದು. ಹತ್ತು ನಿಮಿಷದ ಈ ರೀತಿಯ ಈಜಿನಿಂದ ಇಷ್ಟು ಕ್ಯಾಲೊರಿ ಕರಗುತ್ತದೆ
 
* ಈಜುವುದರಿಂದ ದೇಹದಲ್ಲಿ ಕ್ಯಾಲೊರಿ ಕರಗಿ ತೂಕ ನಿಯಂತ್ರಣ ಸಾಧ್ಯವಾಗುತ್ತದೆ
 
* ಎಷ್ಟು ವೇಗದಲ್ಲಿ ಈಜುತ್ತೀರೋ, ಅಷ್ಟು ಕ್ಯಾಲೊರಿ ಕರಗಿಸಿಕೊಳ್ಳಬಹುದು. 20 ನಿಮಿಷದಿಂದ ಒಂದು ಗಂಟೆಯವರೆಗೆ ಈಜಿದರೆ ಸುಮಾರು 511 ಕ್ಯಾಲೊರಿ ಕರಗುತ್ತದೆ
 
* ಕ್ಯಾಲೊರಿ ಕಡಿಮೆ ಮಾಡಿಕೊಳ್ಳಬೇಕು ಎಂದರೆ ಈಜಿದರಷ್ಟೇ ಸಾಲದು. ಆಹಾರದ ಮೇಲೂ ನಿಯಂತ್ರಣ ಇರಬೇಕು. ದಿನಕ್ಕೆ 5-6 ಸಲ ಅತ್ಯಲ್ಪ ಪ್ರಮಾಣದ ಆಹಾರ ಸೇವನೆ ಮಾಡಬೇಕು
 
* ಈಜಿಪ್ಟ್‌ನಲ್ಲಿ ಸಿಕ್ಕ ರೇಖಾಚಿತ್ರ ಹಾಗೂ ಚಿತ್ರಕಲೆಗಳಲ್ಲಿ ಈಜುವ ದೃಶ್ಯಗಳು ಕಂಡುಬಂದಿದ್ದು, ಕ್ರಿ.ಪೂ 2500ರಲ್ಲೇ ಈಜುವ ಅಭ್ಯಾಸ ಇದ್ದದ್ದು ತಿಳಿದುಬಂದಿದೆ
 
* ಈಜಿನಲ್ಲಿಯೂ ಸ್ಪರ್ಧೆ ಏರ್ಪಡಿಸಬಹುದು ಎಂಬ ಕಲ್ಪನೆ ಮೊದಲು ಹುಟ್ಟಿದ್ದು ಇಂಗ್ಲೆಂಡಿನಲ್ಲಿ. 1830ರಲ್ಲಿ ಮೊದಲ ಈಜಿನ ಸ್ಪರ್ಧೆ ನಡೆಯಿತು
 
* ಅಮೆರಿಕದಲ್ಲಿ ಈಜು ನಾಲ್ಕನೇ ಪ್ರಸಿದ್ಧ ಕ್ರೀಡೆ
 
*1828ರಲ್ಲಿ ಮೊದಲ ಕೃತಕ ಈಜುಕೊಳ ನಿರ್ಮಾಣವಾದುದು ಇಂಗ್ಲೆಂಡಿನಲ್ಲಿ. ಅದರ ಹೆಸರು ಸೇಂಟ್‌ ಜಾರ್ಜ್‌ ಬಾತ್‌
<ref>[http://www.prajavani.net/news/article/2016/10/18/445578.htmlಈಜು ನೀಡುವ ಆರೋಗ್ಯ;18 Oct, 2016]</ref>
 
==ನೋಡಿ==
*[[ಯೋಗ]]
"https://kn.wikipedia.org/wiki/ವ್ಯಾಯಾಮ" ಇಂದ ಪಡೆಯಲ್ಪಟ್ಟಿದೆ