ಆಸ್ಟ್ರೇಲಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೯ ನೇ ಸಾಲು:
*ಮಧ್ಯದ ತಗ್ಗು ಬಯಲುಗಳು,
*ಪಶ್ಚಿಮದ ಪೀಠಭೂಮಿ.
*ಪೂರ್ವದ ಎತ್ತರ ಪ್ರದೇಶಗಳು ಖಂಡದ ಪೂರ್ವದಲ್ಲಿ ಉತ್ತರದ ಯಾರ್ಕ್ ಭೂಶಿರದಿಂದ ದಕ್ಷಿಣದಲ್ಲಿನ ಮರೆ ನದಿಯ ಉಗಮಸ್ಥಾನದವರೆಗೂ ಹರಡಿವೆ. ಪರ್ವತ ಭಾಗವೇ ಗ್ರೇಟ್ ಡಿವೈಡಿಂಗ್ ರೇಂಜ್ ಎಂಬುದು. ಇದರಲ್ಲಿ ಕೊಸಿಯುಸ್ಕೊ (2,234ಮೀ) ಅತ್ಯಂತ ಎತ್ತರದ ಶಿಖರ. ಭೂವಿಜ್ಞಾನದ ದೃಷ್ಟಿಯಿಂದ ಈ ಪರ್ವತಗಳು ಪ್ರಿ-ಕೇಂಬ್ರಿಯನ್ನಿಂದ ಕಾರ್ಬೋನಿಫೆರಸ್ ವರೆಗಿನ ಕಾಲದ ವಿವಿಧ ಶಿಲೆಗಳಿಂದ ಉಂಟಾಗಿವೆ; ಅವುಗಳ ಪಕ್ಕದಲ್ಲಿ ಈಚಿನ ಭೂನಿಕ್ಷೇಪಗಳಿವೆ. ಕಾರ್ಬೋನಿಫೆರಸ್ ಕಾಲದಲ್ಲಿ ಟಾಸ್ಮನ್ ಭೂಸ್ತರಾವನತಗಳು ಅಲ್ಪ ಪ್ರಮಾಣದಲ್ಲಿ ಪಕ್ಷೀಕೃತ ರೂಪವನ್ನು ಹೊಂದಿದುವು. ಅನಂತರ ನದಿಗಳಿಂದಾದ ಸವೆತದಿಂದ ಇಕ್ಕಟ್ಟಾದ ತೀರಪ್ರದೇಶ ಪರ್ವತಗಳ ತುಂಡುಭಾಗಗಳು ಸಮಮಟ್ಟವಾದುವು. ಮರೆ-ಡಾರ್ಲಿಂಗ್ ನದಿಗಳ ಉಪನದಿಗಳ ಉಗಮ ಗ್ರೇಟ್ ಡಿವೈಡಿಂಗ್ ರೇಂಜ್ನಲ್ಲಿ ಅವು ಪ್ರಧಾನ ನದಿಯನ್ನು ಸಮಕೋನದಲ್ಲಿ ಸೇರಿಕೊಳ್ಳುತ್ತವೆ. ಮರೆ ನದಿ ಮೆಲ್ಬರ್ನ್ ತಗ್ಗು ಬಯಲಿನ ಮುಖಾಂತರ ಹರಿದು, ಟಾಸ್ಮೇನಿಯ ಜಲಸಂಧಿಯನ್ನು ತಲಪುತ್ತದೆ.

*[[ಆಸ್ಟ್ರೇಲಿಯಾದ ಹವಳದ ದಿಬ್ಬಗಳು]]
*ಪೂರ್ವದ ತೀರಪ್ರದೇಶದ ಆಚೆ ದಕ್ಷಿಣೋತ್ತರವಾಗಿ ಹಬ್ಬಿದ ಹವಳದ್ವೀಪ ಸಮುದಾಯಗಳಿವೆ. ಇವನ್ನು ದಿ ಗ್ರೇಟ್ ಬ್ಯಾರಿಯರ್ ರೀಫ್ ಎಂದು ಕರೆಯುತ್ತಾರೆ. ಇವು ಸಮುದ್ರತೀರಕ್ಕೆ 16 ಕಿಮೀಗಳಿಂದ 241 ಕಿಮೀಗಳ ಸಮಾನಾಂತರದಲ್ಲಿ 2.011 ಕಿಮೀ ಉದ್ದ ಹರಡಿವೆ. ಆಸ್ಟ್ರೇಲಿಯಾದ ಸಾಹಿತ್ಯಿಕ ಪರಂಪರೆಗೆ ಸ್ಫೂರ್ತಿ ಈ ಹವಳದ ದಿಬ್ಬಗಳು. ಜಗತ್ತಿನ ನೈಸರ್ಗಿಕ ಅದ್ಭುತಗಳಲ್ಲಿ ಕ್ವೀನ್ಸ್‌ಲ್ಯಾಂಡ್‌ ಕರಾವಳಿಯ ಹವಳದ ದಿಬ್ಬಗಳೂ ಸೇರಿವೆ. ವಿಶ್ವದ ಅತ್ಯಂತ ದೊಡ್ಡ ಹವಳ ದಿಬ್ಬದ ವ್ಯವಸ್ಥೆ ಇದು. ಅತಿ ವೈವಿಧ್ಯಮಯ ಜೀವಸಂಕುಲಕ್ಕೆ ಆಶ್ರಯ ನೀಡಿರುವ ಪ್ರಮುಖ ಭೌಗೋಳಿಕ ವಲಯವಿದು. ಮಾತ್ರವಲ್ಲ, ದೇಶದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ರಚನೆಯ ಮೇಲೂ ದಟ್ಟ ಪ್ರಭಾವ ಬೀರಿರುವಂಥಹವು. ಆಸ್ಟ್ರೇಲಿಯಾದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿರುವ ‘ದಿ ಗ್ರೇಟ್‌ ಬ್ಯಾರಿಯರ್‌ ರೀಫ್‌’ಗೆ ಇರುವುದು ಬರೋಬ್ಬರಿ ಎರಡು ಕೋಟಿ ಐವತ್ತು ಲಕ್ಷ ವರ್ಷಗಳ ಬೃಹತ್‌ ಇತಿಹಾಸ. 1,400 ಮೈಲು ದೂರದ 3.44 ಲಕ್ಷ ಚದರ ಕಿಮೀ ವ್ಯಾಪ್ತಿಯ ಪ್ರದೇಶದವರೆಗೆ ಲೆಕ್ಕವಿಲ್ಲದಷ್ಟು ಅಚ್ಚರಿಗಳನ್ನು ಸಲಹಿಕೊಂಡು ವ್ಯಾಪಿಸಿರುವ ಈ ಹವಳದ ದಿಬ್ಬಗಳ ಸಾವು ಸಮೀಪಿಸುತ್ತಿದೆಯೇ ಎಂಬ ಸಂಶಯ ಮೂಡಿದೆ.<ref>[http://www.prajavani.net/news/article/2016/10/17/445381.html ‘ತೀವ್ರ ನಿಗಾ ಘಟಕ’ದಲ್ಲಿ ಅಮೂಲ್ಯ ಹವಳದ ದಿಬ್ಬಗಳು!]</ref>
 
*ಮಧ್ಯದ ತಗ್ಗು ಬಯಲುಗಳು ಉತ್ತರದ ಕಾರ್ಪೆಂಟೇರಿಯ ಕೊಲ್ಲಿಯಿಂದ ದಕ್ಷಿಣದ ತೀರದವರೆಗೂ ಹರಡಿವೆ. ಇವು ಸಾಮಾನ್ಯವಾಗಿ ತಗ್ಗಾಗಿವೆ. ಉತ್ತರದ ಬರ್ಕ್ಲಿ ಡೌನ್ಸ್ (610ಮೀ), ಗ್ರೇ ಮತ್ತು ಫ್ಲ್ಯಾಂಡರ್ ಬೆಟ್ಟ ಸಾಲುಗಳ ವಿನಾ ಉಳಿದ ತಗ್ಗು ಬಯಲು ವರ್ಮಿಯನ್ ಶಿಲಾಸ್ತರಗಳಿಂದ ಕೂಡಿದೆ. ಈ ರೀತಿಯ ವೈವಿಧ್ಯಪೂರ್ಣ ಸಂಚಯನಗಳು ಗ್ರೇಟ್ ಡಿವೈಡಿಂಗ್ ರೇಂಜ್ನ ಪೂರ್ವ ಪಾಶರ್ವದಲ್ಲಿರುವ ಮರಳುಶಿಲೆ, ಜೇಡಿಪದರಶಿಲೆ ಮತ್ತು ಕಲ್ಲಿದ್ದಲಿನ ಸ್ತರಗಳನ್ನು ನಿರ್ಮಿಸಿವೆ. ಭೂರಚನಾಶಾಸ್ತ್ರ ದೃಷ್ಟಿಯಿಂದ ಇಲ್ಲಿನ ಭೂರಚನೆ ಏಕ ರೀತಿಯ ತರಂಗಿತ ಭೂಲಕ್ಷಣಗಳನ್ನು ಹೊಂದಿದೆ.
"https://kn.wikipedia.org/wiki/ಆಸ್ಟ್ರೇಲಿಯ" ಇಂದ ಪಡೆಯಲ್ಪಟ್ಟಿದೆ