ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೮ ನೇ ಸಾಲು:
*ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ. ಇದನ್ನು ೧೪ ನೇ ಶತಮಾನದಲ್ಲಿ [[ವಿಜಯನಗರ]] ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ [[ವಿದ್ಯಾರಣ್ಯ]]ರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. [[ವಿಜಯನಗರ]] ಕಾಲದಲ್ಲಿ ಕಟ್ಟಿಸಿದ್ದಾದರೂ ಈ ದೇವಾಲಯ ಇನ್ನೂ ಹಿಂದಿನ [[ಹೊಯ್ಸಳ]] ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ.
*ವಿಜಯನಗರದ ಕಾಲದ ಶಿಲ್ಪಕಲೆ ಮತ್ತು [[ಹೊಯ್ಸಳ]] ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ.ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ.
*ಶೃಂಗೇರಿಯ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಎರಡು ಪ್ರಮುಖ ದೇವಾಲಯಗಳಿವೆ. ಮೊದಲನೆಯದು, ಋಷ್ಯಶೃಂಗರ ತಂದೆಯವರಾದ, ವಿಭಾಂಡಕ ಮಹರ್ಷಿಗಳು, ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಕಡೆಗೆ, ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿದೆ. ಇದಕ್ಕೆ ಮಲಹಾನಿಕರೇಶ್ವರ ಎಂಬ ಹೆಸರಿದ್ದು, ಈ ಸ್ಥಳದಲ್ಲಿ ಒಂದು ದೇವಸ್ಥಾನವನ್ನುದೇವಾಲಯವನ್ನು ಕಟ್ಟಿಸಿದ್ದಾರೆಕಟ್ಟಲಾಗಿದೆ. ಎರಡನೆಯದು, ಶೃಂಗೇರಿಯಿಂದ ೧೦ ಕಿ. ಮೀ. ದೂರದಲ್ಲಿರುವ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ [[ಋಶ್ಯಶೃಂಗರ ಆತ್ಮಜ್ಯೋತಿ,]]ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ
*ಶೃಂಗೇರಿಗೆ ೧೦ ಕಿ. ಮೀ. ಗಳ ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ [[ಋಶ್ಯಶೃಂಗರ ಆತ್ಮಜ್ಯೋತಿ,]]ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶೃಂಗೇರಿ ತಾಲೂಕು [[ಕೊಪ್ಪ]], ನರಸಿಂಹರಾಜಪುರನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.
*ಇದು ಜಿಲ್ಲಾ ಕೇಂದ್ರವಾದ [[ಚಿಕ್ಕಮಗಳೂರು |ಚಿಕ್ಕಮಗಳೂರಿನಂದ]] ೮೯ ಕಿ ಮೀ ಗಳ ದೂರದಲ್ಲಿದೆ. ಬೀರೂರು ಮತ್ತು ಶಿವಮೊಗ್ಗದ ರೈಲ್ವೆ ಸ್ಥಾನಕದಿಂದ ಶೃಂಗೇರಿ ಸುಮಾರು ೯೬ ಕಿ.ಮೀ.ದೂರದಲ್ಲಿದೆ. ರಸ್ತೆಯಲ್ಲಿ ಪ್ರಯಾಣ ಮಾಡಿದರೆ, ಮಂಗಳೂರು ಇಲ್ಲಿಗೆ ೧೦೭ ಕಿ.ಮೀ.ದೂರದಲ್ಲಿದೆ. ೩೨೦ ಕಿ. ಮೀ. ದೂರದ ಬೆಂಗಳೂರಿಗೆ ಹಗಲು-ರಾತ್ರಿಗಳ ಬಸ್ ಸೌಲಭ್ಯವಿದ್ದು,ಕಾಡು, ಕಣಿವೆ, ಗಿರಿಗಳಮಧ್ಯೆ, ನಿಸರ್ಗದ ರುದ್ರರಮಣೀಯತೆಯನ್ನು, ಪ್ರಯಾಣಿಸುವಾಗ ನೋಡಿ ಅನುಭವಿಸಬಹುದಾಗಿದೆ.
*ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. [[ಅಡಿಕೆ]] ಹಾಗು [[ಭತ್ತ]] ಇಲ್ಲಿನ ಮುಖ್ಯ ಬೆಳೆಗಳಾಗಿವೆ. [[ಕಾಫಿ]] , [[ಬಾಳೆ]] ,[[ವೆನಿಲ್ಲಾ]], [[ವೀಳ್ಯದೆಲೆ]], [[ಕರಿಮೆಣಸು]] ಮತ್ತು [[ಏಲಕ್ಕಿ]]ಯನ್ನು [[ಅಡಿಕೆ|ಅಡಿಕೆಯೊಂದಿಗೆ]] ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
"https://kn.wikipedia.org/wiki/ಶೃಂಗೇರಿ" ಇಂದ ಪಡೆಯಲ್ಪಟ್ಟಿದೆ