ಅಹಿಂಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
'''ಅಹಿಂಸೆ''' ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಭಾರತೀಯ ಧರ್ಮಗಳಲ್ಲಿ ([[ಹಿಂದೂ_ಧರ್ಮ|ಹಿಂದೂಧರ್ಮ]], [[ಬೌದ್ಧಧರ್ಮ|ಬೌದ್ಧಧರ್ಮ]] ಮತ್ತು ವಿಶೇಷವಾಗಿ [[ಜೈನ_ಧರ್ಮ|ಜೈನಧರ್ಮ]])ಈ ತತ್ವವು ಒಂದು ಪ್ರಧಾನ ಪಾತ್ರವಹಿಸುತ್ತದೆ.
 
[[ಯೇಸು ಕ್ರಿಸ್ತ|ಯೇಸು]], [[ಬುದ್ಧ]], [[ಬಸವ]], [[ಗಾಂಧಿ]] ಮತ್ತು [[ಅಂಬೇಡ್ಕರ್]] ಮೊದಲಾದ ಸಮಾಜ ಸುಧಾರಕರು ಅಹಿಂಸೆಗೆ ಹೆಚ್ಚು ಒತ್ತುಕೊಟ್ಟಿರುವುದನ್ನು ನಾವು ಕಾಣಬಹುದಾಗಿದೆ. ಅಹಿಂಸೆಯೇ ಪರಮ ಧರ್ಮ ಎನ್ನುತ್ತದೆ ಮಾನವನ ತಿಳಿವಳಿಕೆ. ಹೇಳುವುದು ಸುಲಭ; ಹೇಳಿದಂತೆ ಬಾಳುವುದು ಕಡುಕಷ್ಟ. ಹಿಂಸೆ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ, ಮನಸ್ಸಿಗೂ ಅನ್ವಯಿಸಿದ್ದು. ದೈಹಿಕ ಹಿಂಸೆ ಕಣ್ಣಿಗೆ ಕಾಣುವುದು. ಮಾನಸಿಕ ಹಿಂಸೆ ಕಣ್ಣಿಗೆ ಕಾಣದ್ದು. ದೈಹಿಕ ಹಿಂಸೆಯ ಕ್ರೌರ್ಯ ಶಾಬ್ದಿಕ ಅಬ್ಬರದ್ದು. ಮಾನಸಿಕ ಹಿಂಸೆಯ ನೋವು ರಣಮೌನದ್ದು. ಜಗತ್ತಿನಲ್ಲಿ ಎಲ್ಲ ಧರ್ಮಗಳು ಹಿಂಸೆಯನ್ನು ವಿರೋಧಿಸಿವೆ; ಜೀವದಯೆಯನ್ನು ಪ್ರತಿಪಾದಿಸಿವೆ.
 
ವಚನ ಧರ್ಮದಲ್ಲಿಯೂ [[ಬಸವಣ್ಣ]]ನವರು ದಯೆಯೇ ಧರ್ಮದ ಮೂಲವಯ್ಯಾ ಎಂದರು. ದಯೆಯನ್ನು ಜೀವನಧರ್ಮವಾಗಿ ಬಾಳಿದ ಶರಣ ದಸರಯ್ಯ. ದಸರಯ್ಯನೂ ಒಬ್ಬ ವಚನಕಾರ. [[ಅಹಿಂಸೆ]]ಯನ್ನು ಅದರ ಪರಾಕಾಷ್ಠೆಯಲ್ಲಿ ಬದುಕಿದ್ದ ಶರಣ; ತರುಲತೆ ಸ್ಥಾವರ ಜೀವಂಗಳೆಲ್ಲ ದೇವರ ಕಾರುಣ್ಯದಿಂದೊಗೆದವು ಎಂದು ಭಾವಿಸಿದ್ದವನು. ಒಮ್ಮೆ ಅವನು ಪೂಜೆಗೆ ಹೂವು ಕೀಳುತ್ತಿದ್ದಾಗ ಒಂದು ಹೂವಿನಗಿಡ ‘ನನ್ನ ಹೂವು ಕೀಳುತ್ತೀಯಲ್ಲ. ನನಗೆ ನೋವಾಗುವುದಿಲ್ಲವೆ’ ಎಂದು ಕೇಳಿದಂತಾಗುತ್ತದೆ. ಅಂದಿನಿಂದ ಅವನು ಗಿಡದಿಂದ ಹೂವು ಕಿತ್ತು ತರುವುದನ್ನು ಬಿಟ್ಟ. ಗಿಡದಿಂದ ಬಿದ್ದ ಹೂವುಗಳನ್ನು ಮಾತ್ರ ಆರಿಸಿ ತಂದು ದೇವರಿಗೆ ಅರ್ಪಿಸುತ್ತಿದ್ದ.
[[ವರ್ಗ:ಸಮಾಜ]]
"https://kn.wikipedia.org/wiki/ಅಹಿಂಸೆ" ಇಂದ ಪಡೆಯಲ್ಪಟ್ಟಿದೆ