ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
== ’ಆಲ್ಫ್ರೆಡ್ ನೊಬೆಲ್’ ರ ಇಚ್ಛಾಪಾಲನೆ ==
'ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ' ಯನ್ನು ನೀಡುವ ಪ್ರಕ್ರಿಯೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ’[[ಆಲ್ಫ್ರೆಡ್ ನೊಬೆಲ್]]’ ರ ಇಚ್ಛೆಯಂತೆ '[[ಸ್ವೀಡನ್ ದೇಶದ ಸಾಹಿತ್ಯ ಅಕಾಡೆಮಿ]],’ ನಿರ್ಧರಿಸುತ್ತಿದೆ. ಈ ಪ್ರಶಸ್ತಿಯನ್ನು ’ಒಂದು ಆದರ್ಶವಾದಿ ದೃಷ್ಟಿಕೋನದಿಂದ ನಿರ್ಧರಿಸಲ್ಪಟ್ಟ, ಅತಿ ಶ್ರೇಷ್ಠ ಕೃತಿಗೆ,'The most outstanding work in an ideal direction,' ಕೊಡಬೇಕೆನ್ನುವುದು ’ನೋಬೆಲ್ ಮಹಾಶಯ’ ರ ಧ್ಯೇಯವಾಗಿತ್ತು.
ಪ್ರಾರಂಭದಲ್ಲಿ ’ಸ್ವೀಡಿಷ್ ಅಕಾಡೆಮಿ’ ಯ ಸದ್ಯರಿಗೆ ತಾವೇಕೆ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂಬ ಭಾವನೆಯಿತ್ತು. ಆದರೆ, ’ಕಾರ್ಲ್ ಡೇವಿಡ್ ವಿರ್ಸೆನ್’ ಎಂಬ ಕಾರ್ಯದರ್ಶಿಗೆ, ಇಂಥ ಸುವರ್ಣಸಂಧಿಯನ್ನೇಕೆ ಹಾಳುಮಾಡಿಕೊಳ್ಳಬೇಕೆಂಬ ಅನಿಸಿಕೆಯಾಯಿತು. ತಮಗೆ ಇದರಿಂದ ಜಾಗತಿಕ ಮನ್ನಣೆ, ಅಧಿಕಾರ, ಹಾಗೂ ಪ್ರಚಾರ ಸಿಗುವ ಅವಕಾಶ, ಸುಸಂಧಿಗಳಿದ್ದವು. ಅವನು ತನ್ನ ಅನುಚರರಿಗೆ ಇದರಬಗ್ಗೆ ತಿಳಿಯಹೇಳಿ ಒಪ್ಪಿಸಿದ್ದಲ್ಲದೆ, ತನ್ನ ’ವಿಲುನಾಮೆ’ ಯಲ್ಲಿದ್ದ ’ಆದರ್ಶ ವಾದಿ ದೃಷ್ಟಿಕೋನ’ಎಂದರೆ, ’ಉನ್ನತ ಮಟ್ಟದ ನೈತಿಕ ಆದರ್ಶ'ವೆಂದು ಅನುಸಂಧಾನ ಮಾಡಿಕೊಂಡು ದೇಶ, ಚರ್ಚ್ ಮತ್ತು ಕುಟುಂಬ ವ್ಯವಸ್ಥೆಯನ್ನು ವಿಮರ್ಶಾತೀತವೆಂದು ಪರಿಗಣಿಸುವ ಧಾರ್ಮಿಕ ಆದರ್ಶವಾದಿ ಕೃತಿಕಾರರಿಗೆ ಮಾತ್ರ ಬಹುಮಾನ ದೊರಕುವಂತೆ ನೋಡಿಕೊಂಡ. ಆದಕಾರಣ, ’ಲಿಯೊ ಟಾಲ್ ಷ್ಟಾಯ್’ ’ಹೆನ್ರಿಕ್ ಇಬ್ಸನ್’ ಮತ್ತು ’ಎಮಿಲಿ ಜೋಲಾ’ ರಂತಹ ಶ್ರೇಷ್ಠಮಟ್ಟದ ಸಾಹಿತಿಗಳಿಗೆ ನೋಬೆಲ್ ಪ್ರಶಸ್ತಿ ಸಿಗಲಿಲ್ಲ. ಇದು ೧೯೦೧ ರಿಂದ ೧೯೧೨ ರ ವರೆಗಿನ ಮೊದಲ ಘಟ್ಟವಾಗಿತ್ತು.<ref>[https://www.britannica.com/topic/Nobel-Prize Nobel Prize]</ref>
 
== ಎರಡನೆಯ ಘಟ್ಟ ==
ಮೊದಲನೆಯ ಮಹಾಯುದ್ಧದ ಅಲಿಪ್ತ ನೀತಿಯ ಘಟ್ಟವೆಂದು ಗುರುತಿಸಲಾಗಿದೆ. ದೊಡ್ಡ ರಾಷ್ಟ್ರಗಳೆಲ್ಲಾ ಎರಡು ಬಣಗಳಾಗಿ ಯುದ್ಧದಲ್ಲಿ ನಿರತರಾದಾಗ ನೊಬೆಲ್ ಸಮಿತಿ ಯಾವ ಬಣಕ್ಕೂ ಸೇರದ ಸಣ್ಣ ರಾಷ್ಟ್ರಗಳ ಸಾಹಿತಿಗಳಿಗೆ ಹಾಗೂ (ವಿಜ್ಞಾನಿಗಳಿಗೆ) ನೊಬೆಲ್ ಪ್ರಶಸ್ತಿಯನ್ನು ಕೊಟ್ಟಿತು. ನಾರ್ವೆ ದೇಶದ ’ನಟ್ ಹ್ಯಾಮ್ಸನ್’ ಮುಂತಾದವರಿಗೆ ಈ ಸಮಯದಲ್ಲಿ ’ನೊಬೆಲ್ ಪ್ರಶಸ್ತಿ’ ದೊರೆಯುವಂತಾಯಿತು.