ಅಬ್ರಹಮ್ ಲಿಂಕನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೭ ನೇ ಸಾಲು:
*ಲಿಂಕನ್ ಅವರ ಈ ಧೋರಣೆಯಿಂದ ಕಳವಳಗೊಂಡ ದಕ್ಷಿಣದ ಏಳು ರಾಜ್ಯಗಳು, ಅಮೆರಿಕ ಸಂಯುಕ್ತ ಒಕ್ಕೂಟದಿಂದ ಹೊರಬಂದು ಪ್ರತ್ಯೇಕ ಒಕ್ಕೂಟ ರಚಿಸಿಕೊಳ್ಳುವ ಘೋಷಣೆ ಮಾಡಿದವು. ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಅಂತರ್ಯುದ್ಧ ಪ್ರಾರಂಭವಾಯಿತು. ಅದು ಅಮೆರಿಕ ಎದುರಿಸಿದ ಸಂಕಷ್ಟದ ದಿನಗಳು. ಏಳರ ಜೊತೆಗೆ ಮತ್ತೂ ನಾಲ್ಕು ರಾಜ್ಯಗಳು ಸೇರಿ ಪ್ರತ್ಯೇಕತೆಯ ಕೂಗು ಗಟ್ಟಿಯಾಯಿತು. ಅಮೆರಿಕದ ವಿಭಜನೆಯನ್ನು ತಪ್ಪಿಸಿ ರಾಷ್ಟ್ರದ ಏಕತೆಯನ್ನು ಪುನರ್ ಸ್ಥಾಪಿಸುವ ಹೊಣೆಗಾರಿಕೆ ಲಿಂಕನ್ ಮೇಲಿತ್ತು.
 
*ಅಧಿಕಾರದ ಆರಂಭದ ದಿನಗಳಲ್ಲಿ ಗುಲಾಮಗಿರಿ ಇದ್ದ ಪ್ರಾಂತ್ಯಗಳಲ್ಲಿ ಅದನ್ನು ಮುಂದುವರಿಯಲು ಬಿಟ್ಟು, ಇತರ ಪ್ರಾಂತ್ಯಗಳಿಗೆ ಹರಡದಂತೆ ನೋಡಿಕೊಳ್ಳುವ ನಿಲುವನ್ನು ಲಿಂಕನ್ ತಳೆದಿದ್ದರಾದರೂ, 1863ರ ಹೊತ್ತಿಗೆ, ಅಂತರ್ಯುದ್ಧದ ರಣತಂತ್ರದ ಭಾಗವಾಗಿ, ಗುಲಾಮಗಿರಿಯನ್ನು ಸಂಪೂರ್ಣವಾಗಿ ಅಳಿಸಿಹಾಕುವ ಐತಿಹಾಸಿಕ ‘ಗುಲಾಮಗಿರಿ ವಿಮೋಚನಾ ಮಸೂದೆ’ಯನ್ನು ಸಂಸತ್ತಿನಲ್ಲಿ ಮಂಡಿಸಿದರು.
 
*ಮಸೂದೆ ಜಾರಿಗೆ ಅಗತ್ಯವಿದ್ದ, ಎರಡೂ ಸಂಸದೀಯ ಮನೆಗಳ ಒಪ್ಪಿಗೆ ದೊರೆಯದಿದ್ದಾಗ, ಲಿಂಕನ್ ‘ನಾನು ಅಮೆರಿಕದ ಅಧ್ಯಕ್ಷ. ಸಂವಿಧಾನದ ಅನ್ವಯ ಪರಮಾಧಿಕಾರವಿದೆ. ಗುಲಾಮಗಿರಿ ಅಂತ್ಯಗೊಳಿಸುವ ಈ ಮಸೂದೆ ಅಸಂಖ್ಯ ಗುಲಾಮರ ಭವಿಷ್ಯವನ್ನಷ್ಟೇ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯವನ್ನೂ ನಿರ್ಧರಿಸುತ್ತದೆ. ಈ ಮಸೂದೆ ಎಲ್ಲರ ಸಹಮತದಿಂದ ಅಂಗೀಕಾರವಾಯಿತು ಎಂದು ಇತಿಹಾಸ ನೆನಪಿಟ್ಟುಕೊಳ್ಳಲಿ ಎಂಬ ಇಚ್ಛೆ ನನ್ನದು. ನೀವೆಲ್ಲರೂ ಸಹಮತದಿಂದ ಇದನ್ನು ಅನುಮೋದಿಸುತ್ತೀರಿ ಎಂದು ನಂಬಿದ್ದೇನೆ’ ಎಂಬ ಮಹತ್ವದ ಭಾಷಣ ಮಾಡಿದರು.
"https://kn.wikipedia.org/wiki/ಅಬ್ರಹಮ್_ಲಿಂಕನ್" ಇಂದ ಪಡೆಯಲ್ಪಟ್ಟಿದೆ