ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಮೈಸೂರು ಪ್ರಜೆಗಳ ಕಣ್ಣಲ್ಲಿ ದಸರಾ: ಮೈಸೂರ ದಸರಾದಲ್ಲಿ ಕುಸ್ತಿ+++
೪೯ ನೇ ಸಾಲು:
*‘ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಳಿಯಾಳ ಮುಂತಾದ ಪ್ರದೇಶಗಳನ್ನು ಕುಸ್ತಿಯ ನಾಡು ಎಂದೇ ಕರೆಯುವವರು ಇದ್ದಾರೆ. ಗರಡಿ ಮನೆಗಳು ಕಡಿಮೆಯಾಗಿದ್ದರೂ ಕುಸ್ತಿಗೆ ಉತ್ತರ ಕರ್ನಾಟಕದಲ್ಲಿ ಧಕ್ಕೆಯಾಗಲಿಲ್ಲ. ಆಡುವ ವಾತಾವರಣ, ಶೈಲಿ ಇತ್ಯಾದಿಗಳಲ್ಲಿ ಸ್ವಲ್ಪ ಆಧುನಿಕ ಸ್ಪರ್ಶ ಲಭಿಸಿದ್ದರೂ ಕುಸ್ತಿಯ ಕುರಿತ ಪ್ರೀತಿ ಇಲ್ಲಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ’ ಎನ್ನುತ್ತಾರೆ ಹಳಿಯಾಳ ಮೂಲದವರಾದ, ಆಳ್ವಾಸ್ ಕಾಲೇಜಿನ ಕುಸ್ತಿ ಕೋಚ್‌ ತುಕಾರಾಮ ಗೌಡ.
 
*‘ಕುಸ್ತಿಗೆ ರಾಜ್ಯದ ಬೇರೆ ಯಾವ ಭಾಗದಲ್ಲೂ ಇಲ್ಲದಷ್ಟು ಸೌಲಭ್ಯ ಉತ್ತರ ಕರ್ನಾಟಕದಲ್ಲಿ ಇದೆ ಎನ್ನಬಹುದು. ಈ ಭಾಗದ ಕ್ರೀಡಾನಿಲಯಗಳಲ್ಲಿ ತಲಾ 25 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಸ್ತಿಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಹಬ್ಬ, ಜಾತ್ರೆಯ ಸಂದರ್ಭದ ಕುಸ್ತಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವುದಕ್ಕಾಗಿ ವರ್ಷವಿಡೀ ಅಭ್ಯಾಸ ನಡೆಯುತ್ತಿರುತ್ತದೆ. ಆದ್ದರಿಂದ ಜಾತ್ರೆಗಳಿಗೆ ಕುಸ್ತಿ ಉಳಿಸುವುದರಲ್ಲಿ ಪ್ರಮುಖ ಪಾತ್ರವಿದೆ’ ಎಂಬುದು ಅವರ ಅಭಿಪ್ರಾಯ.
 
*ಮಣ್ಣಿನಲ್ಲಿ ಆಡುವ ಜಂಗೀ ಕಾಟಾ ನಿಕಾಲಿ ಕುಸ್ತಿ ಈಗ ಕಡಿಮೆಯಾಗುತ್ತಿದೆ. ರಾಷ್ಟ್ರೀಯ – ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮತ್ತು ಆ ಮೂಲಕ ಜೀವನಕ್ಕೆ ದಾರಿ ಕಂಡುಕೊಳ್ಳುವ ಉದ್ದೇಶದಿಂದ ಕುಸ್ತಿಪಟುಗಳು ಪಾಯಿಂಟ್ ಕುಸ್ತಿಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪಾಲಕರು ಕೂಡ ಮಕ್ಕಳು ಪಾಯಿಂಟ್‌ ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಬಯುಸುತ್ತಿದ್ದಾರೆ. ಆದರೆ ಉತ್ಸವಗಳಲ್ಲಿ ಇನ್ನೂ ಮಣ್ಣಿನ ಕುಸ್ತಿ ಜೀವಂತವಾಗಿದೆ. ಆದ್ದರಿಂದ ಕುಸ್ತಿಗೆ ಧಕ್ಕೆಯಾಗುವ ಯಾವುದೇ ಆತಂಕ ಇಲ್ಲ.
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ