ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎ಮೈಸೂರು ಪ್ರಜೆಗಳ ಕಣ್ಣಲ್ಲಿ ದಸರಾ: ಮೈಸೂರ ದಸರಾದಲ್ಲಿ ಕುಸ್ತಿ+++
೨೬ ನೇ ಸಾಲು:
*ದಸರಾ ಹಳೆಯ ಮೈಸೂರಿಗರಿಗೆ ಇಂದಿಗೂ ನಾಡಹಬ್ಬ. ಇದೊಂದು ಸಂಭ್ರಮದ ಸಂದರ್ಭ. ರಾಜರ ಆಳ್ವಿಕೆಯ ಕಾಲದ ನೆನಪಿನಲ್ಲಿ ಈಗಿನ ಆಚರಣೆಗಳನ್ನು ನೋಡುವ ಹಿರಿಯ ತಲೆಗಳಿಗೆ ಆಗಿನ ದಿನಗಳೇ ಚಂದ ಎಂಬ ಹಳಹಳಿಕೆ. ಮೈಸೂರು ನಗರದಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ, ದಸರೆಯ ದಿನಗಳಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದ ಮಂಡ್ಯ, ಚಾಮರಾಜನಗರ ಜಿಲ್ಲೆಯ ಗ್ರಾಮೀಣರಿಗೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ನೆನಪನ್ನೇ ಪ್ರಧಾನವಾಗಿ ಉಳಿಸಿದೆ.
*ಈಗಿನ ಚಾಮುಂಡೇಶ್ವರಿ ಮೆರವಣಿಗೆ ಹಿರಿಯ ತಲೆಗಳಿಗೆ ಮಹಾರಾಜರು ಅಂಬಾರಿಯ ಮೇಲೆ ಸಾಗುತ್ತಿದ್ದ ಅಂದಿನ ದೃಶ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ.
*ದಸರಾ ಅಂದ್ರೆ ಜಂಬೂ ಸವಾರಿ, ಅದ್ದೂರಿ ಮೆರವಣಿಗೆ, ಆಮೇಲೆ ಚಾಮುಂಡಿ ಬೆಟ್ಟ, ಅಲ್ಲಿನ ಜಾತ್ರೆ, ತೇರು, ಕೆ.ಆರ್.ಎಸ್. ಡ್ಯಾಮ್ ಎಲ್ಲಾ ನೆನಪಾಗುತ್ತವೆ. ಈಗಿನ ದಸರಾ ಪರವಾಗಿಲ್ಲ. ಮಹಾರಾಜರು ದಸರಾ ನಡೆಸುತ್ತಿದ್ದಾಗ ಜಂಬೂ ಸವಾರಿ ಅರಮನೆಯಿಂದ ಬನ್ನಿಮಂಟಪಕ್ಕೆ ಹೋಗಿ ಮತ್ತೆ ಅಲ್ಲಿಂದ ವಾಪಸ್ಸು ಬರುತ್ತಿತ್ತು.
*ಅಂಬಾರಿ ಮೇಲೆ ಮಹಾರಾಜರು ಕುಳಿತಿರುತ್ತಿದ್ದರು. ಅವರ ಹಿಂದೆ ಮಂತ್ರಿ ಕುಳಿತಿರುತ್ತಿದ್ದರು. ಅವರು ದೇವರ ರೀತಿ ಇದ್ರು, ಜನ ಅವರಿಗೆ ಕೈ ಮುಗಿಯುತ್ತಿದ್ದರು. ಅವರೂ ನಮಗೆ ನಮ್ಮತ್ತ ಕೈ ಬೀಸುತ್ತಿದ್ದರು. ಈಗ ಅಂಬಾರಿ ಮೇಲೆ ಮಹಾರಾಜರು ಇಲ್ಲ, ಚಾಮುಂಡಿ ದೇವಿ ವಿಗ್ರಹ ಇರುತ್ತೆ. ಈಗಿನ ಮೆರವಣಿಗೆಗಿಂತ ಆಗಿನ ಮೆರವಣಿಗೆಯೇ ಚೆನ್ನಾಗಿತ್ತು. ರಾಜರ ಕಾಲದಲ್ಲಿ ಅರಮನೆಯ ಆವರಣದಲ್ಲಿ ಮೈಸೂರಿನ ಪ್ರತಿಷ್ಠಿತ ವ್ಯಕ್ತಿಗಳಿಗೆ ಸುಖಾಸೀನಗಳ ವ್ಯವಸ್ಥೆ ಮಾಡಿ ದರ್ಬಾರು ನಡೆಸುತ್ತಿದ್ದರು; ಅದರಲ್ಲಿ ವೈಭವವಿತ್ತು. *ಸಂಗೀತ, ಕಲೆ, ನೃತ್ಯ ಇವುಗಳಿಗೆ ರಾಜಾಶ್ರಯದಲ್ಲಿದ್ದವರಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿತ್ತು. ಈಗ ರಾಜಾಶ್ರಯ ಇಲ್ಲ, ಎಲ್ಲವು ಸರ್ಕಾರದ ಆಣತಿಯಂತೆ ನಡೆಯುತ್ತಿದೆ.. ಈಗ ಜನಜಂಗುಳಿ. ವಯಸ್ಸಾದವರು ಅಲ್ಲಿಗೆ ಹೋಗಿ ದಸರಾ ನೋಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೇ ಟಿ.ವಿ.ಯಲ್ಲಿ ವೀಕ್ಷಿಸುವುದೇ ಸರಿ..’ ಅಂತ ಅವರಿಗೆ ಅನಿಸಿದೆ.
*ಜಂಬೂ ಸವಾರಿ ನೋಡಲು ಸಂತಸವಾಗುತ್ತದೆ. ಮತ್ತು ಆ ಜನರ ಗುಂಪಿನಲ್ಲಿ ಹರ ಸಾಹಸ ಮಾಡಿ ವೀಕ್ಷಿಸುವುದು ಖುಷಿ ನೀಡಿದೆ. ಹಿಂದೆ ಒಮ್ಮೆ ತಳ್ಳುವ ಗಾಡಿಯ ಮೇಲೆ ನಿಂತು ದಸರಾ ವೀಕ್ಷಣೆ ಮಾಡಿದ್ದ ಅವರಿಗೆ ವಸ್ತು ಪ್ರದರ್ಶನಕ್ಕೂ ಭೇಟಿ ಕಡ್ಡಾಯ. ಆದರೆ ಅಲ್ಲಿಗೆ ಕುಟುಂಬದವರೆಲ್ಲಾ ಹೋಗಿ ಸುತ್ತಾಡಿ ವಿವಿಧ ಆಟಗಳನ್ನು ಆಡುವ ಉಮೇದು. ಆದರೆ ಕೊಳ್ಳುವುದಕ್ಕೆ ಹೋದರೆ ಎಲ್ಲವೂ ದುಬಾರಿ’ ಎಂಬ ಆಸಮಾಧಾನ.
*ಗಂಜಾಂ ವ್ಯಾಪಾರಿ ಮಂಜುನಾಥ್ ಅವರಿಗೆ ‘ದಸರಾ ಅಂದ್ರೆ ಮಹಾರಾಜರ ನೆನಪಾಗುತ್ತದೆ. ಆದರೂ ಈಗಿನ ಅಂಬಾರಿ ಮೆರವಣಿಗೆ ಆಕರ್ಷಕವಾಗಿದೆ. ನಮ್ಮ ತಂದೆ ಹೇಳುತ್ತಿದ್ದ ದಸರಾಗೂ ಇಂದಿನ ದಸರಾಗೂ ವ್ಯತ್ಯಾಸ ಇದೆ. ಜಾನಪದ ಕಲಾ ಮೇಳಗಳು ಖುಷಿ ಕೊಡುತ್ತವೆ. ಅಂದಿನ ದಸರಾ ಸೊಗಡು ಈಗ ಇಲ್ಲ. ಎಂಟ್ಹತ್ತು ಬಾರಿ, ಮಕ್ಕಳು ಮರಿ ಕಟ್ಟಿಕೊಂಡು ದಸರಾ ನೋಡಿದ್ದೀನಿ. ಮೈಸೂರು ಹೊಸದೇನಲ್ಲ. ಆದರೆ ದಸರಾ ಸಂದರ್ಭದ ಮೈಸೂರು ಅಂದರೆ ನಾಡಿನ ಪರಂಪರೆಯನ್ನು ಬಿಂಬಿಸುವ ಕೇಂದ್ರವಾಗಿ ಬದಲಾಗುತ್ತದೆ.’ ಎಂಬ ಸಮಾಧಾನ.
*ಮಲ್ಲೇಗೌಡನಕೊಪ್ಪಲು ಗೃಹಿಣಿ ಮಂಜುಳಾ ಮರೀಗೌಡರಿಗೆ ‘ದಸರಾ ಅಂದರೆ ಚಿನ್ನದ ಅಂಬಾರಿನೇ ನೆನಪಾಗೋದು. ಈಗಿನ ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಮೆರಗು ಪಡೆದುಕೊಂಡಿವೆ. ಸರ್ಕಾರ ನಾಡಹಬ್ಬಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿರುವುದರಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಹಿಂದೆ ಮಹಾರಾಜರೇ ಅಂಬಾರಿ ಏರಿ ರಾಜಬೀದಿಯಲ್ಲಿ ಸಾಗುತ್ತಿದ್ದುದರಿಂದ ಉತ್ಸವ ಕಳೆಗಟ್ಟುತ್ತಿತ್ತಂತೆ...’
೩೪ ನೇ ಸಾಲು:
*೧೯೫೫ ರಲ್ಲಿ ದಸರಾ ನೋಡುವ ಸೌಭಾಗ್ಯ ಪಡೆದಿದ್ದ ಚಾಮರಾಜನಗರ ಜಿಲ್ಲೆ ಅರಳೀಕಟ್ಟೆಯ ರೈತ ಬಸಪ್ಪ ಅವರಿಗೆ ‘ಆಗ ಜಯಚಾಮರಾಜೇಂದ್ರ ಒಡೆಯರ್ ರಾಜ ಪೋಷಾಕು ತೊಟ್ಟು ಆನೆಯ ಅಂಬಾರಿಯನ್ನೇರಿ ಸಾರೋಟಿನಲ್ಲಿ ಹೋಗುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದಾಗಿತ್ತು. ಈಗ ಸರ್ಕಾರವೇ ದಸರಾ ನಡೆಸುವುದರಿಂದ ಅಂದಿನ ವೈಭವ ಕೊಡಲು ಸಾಧ್ಯವಿಲ್ಲ. ಆಗ ಜನರೂ ಇಂತಹ ದೊಡ್ಡ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿದ್ದರು. ಗತಕಾಲದ ವೈಭವವನ್ನು ಬಿಂಬಿಸುವ ಉತ್ಸವ ಇದಾಗಿದೆ. ಇಲ್ಲಿ ಪ್ರಜಾರಾಜ್ಯದ ವೈಖರಿ ಎದ್ದು ಕಾಣುತ್ತಿದೆ. ಸರ್ಕಾರ ಜನಪ್ರತಿನಿಧಿಗಳೊಂದಿಗೆ ತನ್ನದೇ ಆದ ರೀತಿಯಲ್ಲಿ ಆಚರಿಸುತ್ತಿದೆ ಎಂಬ ವಿಶ್ವಾಸ.
*ನಮ್ಮ ತಂದೆಯವರು ಅವರ ಸ್ನೇಹಿತರ ಜೊತೆ ದಸರಾ ವೀಕ್ಷಿಸಲು ಹೋಗುತ್ತಿದ್ದರು. ಬಂದು ಅಲ್ಲಿ ನಡೆದ ಘಟನಾವಳಿಗಳನ್ನು ಹಂಚಿ ಕೊಳ್ಳುತ್ತಿದ್ದರು. ಈಗಿನ ದಸರಾ ಆಚರಣೆ ಯಲ್ಲಿ ಅಷ್ಟೇನೂ ಸ್ವಾರಸ್ಯವಿಲ್ಲ. ಎಲ್ಲರಲ್ಲಿಯೂ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ’ ಎನ್ನುವುದು ಕಳೆದ ಇಪ್ಪತ್ತು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ಕೊಡುತ್ತಿರುವ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರಿನ ರೈತ ವಿ.ಕೆ. ಗಿರೀಶರ ಅಭಿಪ್ರಾಯ.
*ಈಗಿನದು ಅಧಿಕಾರಿಗಳ ದಸರಾ’ ಎಂಬುದು ಗುಂಡ್ಲುಪೇಟೆಯ ಎ.ಜಿ.ಸುರೇಶ್ ಅವರ ಆಕ್ಷೇಪ. ಅವರಿಗೆ ‘ಜಂಬೂ ಸವಾರಿ ಮೊದಲಿಗೆ ನೆನಪಿಗೆ ಬರುತ್ತದೆ. ಆದರೀಗ ಮಹಾರಾಜರು ಆ ಅಂಬಾರಿ ಮೇಲೆ ಇರುವುದಿಲ್ಲವಲ್ಲ ಎನ್ನುವ ಕೊರಗು. ಈಗಿನ ದಸರಾ ಕೇವಲ ತೋರಿಕೆ ಮತ್ತು ರಾಜಕೀಯ ಮಿಶ್ರಿತ.
==ಮೈಸೂರ ದಸರಾದಲ್ಲಿ ಕುಸ್ತಿ==
*10 Oct, 2016,
*ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಅಖಾಡಗಳು ಖಾಲಿ; ಕುಸ್ತಿ ತರಬೇತುದಾರರು ತಮ್ಮೂರಿನಲ್ಲಿರುವುದಿಲ್ಲ. ಯಾಕೆಂದರೆ ಅವರೆಲ್ಲರೂ ಮೈಸೂರಿನಲ್ಲಿ ಬೀಡುಬಿಟ್ಟಿರುತ್ತಾರೆ. ತಮ್ಮ ಶಿಷ್ಯಂದಿರ ಸ್ಪರ್ಧೆ ಇರಲಿ, ಇಲ್ಲದಿರಲಿ; ಅವರು ದಸರಾ ಕುಸ್ತಿಯ ಸೊಬಗು ಸವಿಯುವ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಕುಸ್ತಿ ಮೇಲಿನ ಪ್ರೀತಿ ಇದಕ್ಕೆ ಒಂದು ಕಾರಣವಾದರೆ, ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ.
 
*ದಸರಾ ಕುಸ್ತಿಯಂತೆ ಉತ್ತರ ಕರ್ನಾಟಕದಲ್ಲಿ ಹಬ್ಬ–ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ಇದೆ. ಜಾತ್ರೆಗಳಿಗೆ ಇಲ್ಲಿ ಕುಸ್ತಿಗಳು ಕಳೆಗಟ್ಟುತ್ತವೆ. ದಶಕಗಳ ಹಿಂದೆ ಥಿಯೇಟರ್‌ ಕುಸ್ತಿ (ಟಿಕೆಟ್‌ ಇರಿಸಿ ಆಡಿಸುವ ಸ್ಪರ್ಧೆ) ನಡೆಯುತ್ತಿದ್ದ ಈ ಭಾಗದಲ್ಲಿ ನಂತರ ಕುಸ್ತಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಂಗೀ ಕಾಟಾ ನಿಕಾಲಿಯಲ್ಲಿನ ‘ಡಾವ್‌’ಗಳ ಸವಿಯುಂಡ ಜನರು ಪಾಯಿಂಟ್ ಕುಸ್ತಿಯ ಪಟ್ಟುಗಳಿಗೂ ಮಾರುಹೋಗಿದ್ದಾರೆ. ಮಣ್ಣಿನಲ್ಲಿ ನಡೆಯುತ್ತಿದ್ದ ‘ಮಟ್ಟಿ ಕುಸ್ತಿ’ ನಿಧಾನಕ್ಕೆ ಮ್ಯಾಟ್‌ ಮೇಲೇರಿದೆ. ಫ್ರೀ ಸ್ಟೈಲ್‌ ಕುಸ್ತಿಯಿಂದ ಗ್ರೀಕೊ ರೋಮನ್‌ ಶೈಲಿಗೂ ಪದಾರ್ಪಣೆಯಾಗಿದೆ. ಇದ್ಯಾವುದೂ ಕುಸ್ತಿ ಮೇಲಿನ ಮೋಹಕ್ಕೆ ಧಕ್ಕೆ ತರಲಿಲ್ಲ. ಮೈಯನ್ನು ಕಟ್ಟುಮಸ್ತಾಗಿಸಲು, ಹೆಸರು ಗಳಿಸಲು ಮತ್ತು ಊರ ಜನರ ಪ್ರೀತಿಗೆ ಪಾತ್ರರಾಗಲು ಕುಸ್ತಿ ಆಡುತ್ತಿದ್ದವರು ಈಗ ಪಾಯಿಂಟ್‌ ಕುಸ್ತಿಯ ಬೆನ್ನುಹತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ಕುಸ್ತಿ ಜೀವನೋಪಾಯ ಮಾರ್ಗವಾಗಿಯೂ ಮಾರ್ಪಟ್ಟಿದೆ. ಈ ಕ್ರೀಡೆಯ ಬಗ್ಗೆ ಕಾಳಜಿ ವಹಿಸಲು ಇದು ಕೂಡ ಒಂದು ಕಾರಣವಾಗಿದೆ.
 
*1950ರ ಅವಧಿಯಲ್ಲೇ ಚಿನ್ನದ ಸಾಧನೆ ಮಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ತರಬೇತಿ ಕೇಂದ್ರ, ಬೆಳಗಾವಿ, ಬಾಗಲಕೋಟೆ, ಗದಗ, ಹಳಿಯಾಳದಲ್ಲಿ ಕುಸ್ತಿ ತರಬೇತಿಯನ್ನೂ ನೀಡುತ್ತಿರುವ ಕ್ರೀಡಾನಿಲಯಗಳು ಮುಂತಾದ ಸಂಸ್ಥೆಗಳು ಕೂಡ ಇಲ್ಲಿನ ಕುಸ್ತಿ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
 
*ಧಾರವಾಡ, ಹಳಿಯಾಳ, ಬಾಗಲಕೋಟೆ, ಬೆಳಗಾವಿ ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌.ಐ.ಎಸ್‌) ತರಬೇತಿ ಪಡೆದ ಕೋಚ್‌ಗಳು ಕುಸ್ತಿ ತರಬೇತಿ ನೀಡುತ್ತಿದ್ದರೆ ಅನುಭವದಿಂದ ಪಡೆದ ವಿದ್ಯೆಯನ್ನು ಧಾರೆ ಎರೆಯುವ ನೂರಾರು ಕೋಚ್‌ಗಳು ಕುಸ್ತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ.
 
*ಜಾತ್ರೆ, ಉತ್ಸವಗಳಲ್ಲಿ ಕುಸ್ತಿ: ಜಾತ್ರೆ ಮತ್ತು ಉತ್ಸವಗಳು ಉತ್ತರ ಕರ್ನಾಟಕ ಕುಸ್ತಿಯ ಪ್ರಮುಖ ಪ್ರೇರಣೆಗಳು. ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ ಮುಂತಾದವುಗಳಲ್ಲಿ ಕುಸ್ತಿಯದ್ದೇ ಜಾತ್ರೆ ನಡೆಯುತ್ತದೆ. ಊರ ದೇವರ ಜಾತ್ರೆಗಳಲ್ಲಿ ಕುಸ್ತಿ ಅವಿಭಾಜ್ಯ ಅಂಗವಾಗಿರುತ್ತದೆ. ಅದನ್ನು ನೋಡಲು ಸೇರುವ ಜನರು ಸಾವಿರಾರು. ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಾದಾಮಿ, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ, ಸಂಕೇಶ್ವರ, ಗೋಕಾಕ ಮುಂತಾದ ಕಡೆಗಳಲ್ಲಿ ಜಾತ್ರೆಯ ಸಂದರ್ಭ ನಡೆಯುವ ಕುಸ್ತಿ ನೋಡಲು ಜನರು ಮುಗಿ ಬೀಳುತ್ತಾರೆ. ಹಳಿಯಾಳದಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‌ಷಿಪ್‌ನಂಥ ವಾರ್ಷಿಕ ಕುಸ್ತಿ ಸಂಪ್ರದಾಯ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿಗೆ ಚೇತನ ತುಂಬುತ್ತಿವೆ.
 
*‘ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಳಿಯಾಳ ಮುಂತಾದ ಪ್ರದೇಶಗಳನ್ನು ಕುಸ್ತಿಯ ನಾಡು ಎಂದೇ ಕರೆಯುವವರು ಇದ್ದಾರೆ. ಗರಡಿ ಮನೆಗಳು ಕಡಿಮೆಯಾಗಿದ್ದರೂ ಕುಸ್ತಿಗೆ ಉತ್ತರ ಕರ್ನಾಟಕದಲ್ಲಿ ಧಕ್ಕೆಯಾಗಲಿಲ್ಲ. ಆಡುವ ವಾತಾವರಣ, ಶೈಲಿ ಇತ್ಯಾದಿಗಳಲ್ಲಿ ಸ್ವಲ್ಪ ಆಧುನಿಕ ಸ್ಪರ್ಶ ಲಭಿಸಿದ್ದರೂ ಕುಸ್ತಿಯ ಕುರಿತ ಪ್ರೀತಿ ಇಲ್ಲಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ’ ಎನ್ನುತ್ತಾರೆ ಹಳಿಯಾಳ ಮೂಲದವರಾದ, ಆಳ್ವಾಸ್ ಕಾಲೇಜಿನ ಕುಸ್ತಿ ಕೋಚ್‌ ತುಕಾರಾಮ ಗೌಡ.
 
‘ಕುಸ್ತಿಗೆ ರಾಜ್ಯದ ಬೇರೆ ಯಾವ ಭಾಗದಲ್ಲೂ ಇಲ್ಲದಷ್ಟು ಸೌಲಭ್ಯ ಉತ್ತರ ಕರ್ನಾಟಕದಲ್ಲಿ ಇದೆ ಎನ್ನಬಹುದು. ಈ ಭಾಗದ ಕ್ರೀಡಾನಿಲಯಗಳಲ್ಲಿ ತಲಾ 25 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಸ್ತಿಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಹಬ್ಬ, ಜಾತ್ರೆಯ ಸಂದರ್ಭದ ಕುಸ್ತಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವುದಕ್ಕಾಗಿ ವರ್ಷವಿಡೀ ಅಭ್ಯಾಸ ನಡೆಯುತ್ತಿರುತ್ತದೆ. ಆದ್ದರಿಂದ ಜಾತ್ರೆಗಳಿಗೆ ಕುಸ್ತಿ ಉಳಿಸುವುದರಲ್ಲಿ ಪ್ರಮುಖ ಪಾತ್ರವಿದೆ’ ಎಂಬುದು ಅವರ ಅಭಿಪ್ರಾಯ.
 
*ಮಣ್ಣಿನಲ್ಲಿ ಆಡುವ ಜಂಗೀ ಕಾಟಾ ನಿಕಾಲಿ ಕುಸ್ತಿ ಈಗ ಕಡಿಮೆಯಾಗುತ್ತಿದೆ. ರಾಷ್ಟ್ರೀಯ – ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮತ್ತು ಆ ಮೂಲಕ ಜೀವನಕ್ಕೆ ದಾರಿ ಕಂಡುಕೊಳ್ಳುವ ಉದ್ದೇಶದಿಂದ ಕುಸ್ತಿಪಟುಗಳು ಪಾಯಿಂಟ್ ಕುಸ್ತಿಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪಾಲಕರು ಕೂಡ ಮಕ್ಕಳು ಪಾಯಿಂಟ್‌ ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಬಯುಸುತ್ತಿದ್ದಾರೆ. ಆದರೆ ಉತ್ಸವಗಳಲ್ಲಿ ಇನ್ನೂ ಮಣ್ಣಿನ ಕುಸ್ತಿ ಜೀವಂತವಾಗಿದೆ. ಆದ್ದರಿಂದ ಕುಸ್ತಿಗೆ ಧಕ್ಕೆಯಾಗುವ ಯಾವುದೇ ಆತಂಕ ಇಲ್ಲ.
[http://www.prajavani.net/news/article/2016/10/10/444113.html –ತುಕಾರಾಮ ಗೌಡ, ಕುಸ್ತಿ ಕೋಚ್‌;ಕುಸ್ತಿಯ ಜಾತ್ರೆ, ಅಖಾಡದಲ್ಲೇ ಹಬ್ಬ
;ವಿಕ್ರಂ ;10 Oct, 2016]
 
==‘ಮಹಾರಾಜರ ಕಾಲವೇ ಚೆನ್ನ’==
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ