ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
==ವೃತ್ತಿ ಜೀವನ==
೧೯೭೨ರಲ್ಲಿ ತೆರೆಗೆ ಬಂದ ಮಲಯಾಳಂ ಚಿತ್ರ '''ನಿರ್ತನಸಾಲ'''ದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಲಯಾಳಂನ '''ನಿರ್ಮಾಲ್ಯಂ'''(೧೯೭೩). ಪ್ರಖ್ಯಾತ ಸಾಹಿತಿ '''[[ಎಂ.ಟಿ.ವಾಸುದೇವನ್ ನಾಯರ್]]''' ಅವರು ತಮ್ಮ ಕಿರುಗಥೆಯನ್ನು ಆಧರಿಸಿ ನಿರ್ಮಿಸಿ ನಿರ್ದೇಶಿಸಿದ ಈ ಹೊಸ ಅಲೆಯ ಚಿತ್ರದಲ್ಲಿ ಸುಮಿತ್ರಾ ನೀಡಿದ ಉತ್ತಮ ನೈಜ ಅಭಿನಯ ಚಿತ್ರಪಂಡಿತರ ಗಮನ ಸೆಳೆಯಿತು. ಈ ಚಿತ್ರ ೧೯೭೩ನೇ ಸಾಲಿನ ಅತ್ತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿತ್ತು<ref name="B. VIJAYAKUMAR">{{cite web|title=ನಿರ್ಮಾಲ್ಯಂ-೧೯೭೩|url=http://www.thehindu.com/features/metroplus/nirmalyam-1973/article2482063.ece|publisher=ದಿ ಹಿಂದು}}</ref>. ಸುಮಿತ್ರಾ ಅಭಿನಯದ ಮೊದಲ ತಮಿಳು ಚಿತ್ರ '''ಅವಳುಂ ಪೆಣ್ ದಾನೆ'''(೧೯೭೪). ಕೆಟ್ಟ ಸನ್ನಿವೇಶಕ್ಕೆ ಸಿಲುಕಿ ವೇಶ್ಯೆಯಾಗುವ ಯುವತಿಯೊಬ್ಬಳು ಸಹೃದಯಿ ನಾಯಕನನ್ನು ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಮಾಜದಲ್ಲಿನ ಕುತ್ಸಿತ ಮನೋಭಾವ ಜನರ ಕುಹಕದ ಮಾತುಗಳಿಗೆ ಬೇಸತ್ತು ಬಲಿಯಾಗುವ ದುರಂತ ಕಥಾನಕವಿದ್ದ ಈ ಚಿತ್ರದಲ್ಲಿ ವೇಶ್ಯೆಯಾಗಿ ಅವಿಸ್ಮರಣೀಯ ಅಭಿನಯ ನೀಡಿದ ಸುಮಿತ್ರಾ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದರು. '''[[ಶಿವಾಜಿ ಗಣೇಶನ್]]''' ನಾಯಕರಾಗಿ ಅಭಿನಯಿಸಿದ '''ಅಣ್ಣನ್ ಒರು ಕೋಯಿಲ್'''(೧೯೭೭) ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗಿ ಆಘಾತದಿಂದ ತನ್ನ ಹಳೆಯ ನೆನಪುಗಳನ್ನು ಕಳೆದುಕೊಂಡ ಹುಡುಗಿಯಾಗಿ, '''[[ರಜನೀಕಾಂತ್]]''' ಮತ್ತು '''[[ಶಿವಕುಮಾರ್]]''' ಅವರೊಂದಿಗಿನ '''ಭುವನ ಒರು ಕೇಳ್ವಿಕುರಿ'''(೧೯೭೭) ಎಂಬ ಸಾಮಾಜಿಕ ಚಿತ್ರದಲ್ಲಿ ಲಂಪಟನೊಬ್ಬನಿಂದ ಅನ್ಯಾಯಕ್ಕೊಳಗಾಗಿ, ನಾಯಕನ ನೆರವಿನಿಂದ ಹೊಸ ಜೀವನ ಕಂಡುಕೊಳ್ಳುವ ಹುಡುಗಿಯಾಗಿ ಸುಮಿತ್ರಾ ಅವರ ಅಭಿನಯ ಅಮೋಘ. ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು. ಆ ನಂತರದಲ್ಲಿ '''ಇವಳ್ ಒರು ಸೀತೈ'''(೧೯೭೮), '''ವಟತುಕ್ಕುಳ್ ಚದುರಂ'''(೧೯೭೮), '''ಮಚ್ಚಾನೈ ಪಾರ್ತೆಂಗಳ'''(೧೯೭೮) ಮುಂತಾದ ಚಿತ್ರಗಳಲ್ಲಿ ಪ್ರಭಾವಶಾಲಿ ಪಾತ್ರಗಳನ್ನು ಶಕ್ತವಾಗಿ ನಿರ್ವಹಿಸಿದ ಸುಮಿತ್ರಾ '''[[ಕೆ.ಬಾಲಚಂದರ್]]''' ಅವರ '''[[ಕಮಲ್ ಹಾಸನ್]]''' ನಾಯಕರಾಗಿ ಅಭಿನಯಿಸಿದ '''ನಿಳಲ್ ನಿಜಮಾಗಿರದು'''(೧೯೭೮) ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಶ್ಲಾಘನೀಯ ಅಭಿನಯ ನೀಡಿದ್ದಾರೆ.
 
ಪ್ರತಿಭಾವಂತ ನಟ '''[[ಶಿವಕುಮಾರ್]]''' ಅವರೊಂದಿಗೆ '''ಕಣ್ಣನ್ ಒರು ಕೈ ಕುಳಂದೈ'''(೧೯೭೮), '''ಚಿಟ್ಟುಕುರುವಿ'''(೧೯೭೮), '''ಕಡವುಳ್ ಅಮೈತ್ತ್ ಮೇಡೈ'''(೧೯೭೯), '''ಮುದಲ್ ಇರವು'''(೧೯೭೯) ಮತ್ತು '''ಮಂಜಳ್ ನಿಲಾ'''(೧೯೮೨) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಪ್ರಬುದ್ಧ ಅಭಿನಯ ನೀಡಿದ ಸುಮಿತ್ರಾ ಮಲಯಾಳಂನ ಮೇರುನಟ '''[[ಪ್ರೇಮ್ ನಜೀರ್]]''' ಅವರೊಂದಿಗೆ '''ದುರ್ಗಾ'''(೧೯೭೪), '''ನೀಲಪೊಣ್ಣ್ಮಾನ್'''(೧೯೭೫), '''ಕಡಮಟ್ಟತಾಚನ್'''(೧೯೮೪) ಮತ್ತು '''ಸನ್ನಾಹಂ'''(೧೯೮೫) ಮುಂತಾದ ಮಲಯಾಳಂ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡೀದ್ದಾರೆ.
 
'''ಅವಳುಂ ಪೆಣ್ ದಾನೆ''' ಚಿತ್ರದ ಕನ್ನಡ ಅವತರಣಿಕೆಯಾದ '''[[ಮುಗಿಯದ ಕಥೆ]]'''(೧೯೭೬) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ '''[[ವಿಷ್ಣುವರ್ಧನ್]]''' ಅವರೊಂದಿಗೆ '''[[ಮಕ್ಕಳ ಸೈನ್ಯ]]'''(೧೯೮೦) ಮತ್ತು ''[['ಸತ್ಯಂ ಶಿವಂ ಸುಂದರಂ]]'''(೧೯೮೮) ಚಿತ್ರದಲ್ಲಿ ಅಪೂರ್ವ ಅಭಿನಯ ನಿಡಿದ್ದಾರೆ. ೧೯೮೦ರ ದಶಕದ ಮಧ್ಯದಿಂದ ಪೋಷಕ ಪಾತ್ರಗಳಿಗೆ ಸೀಮಿತರಾದ ಸುಮಿತ್ರಾ '''[[ರಾಮಾಚಾರಿ]]''' ಚಿತ್ರದಲ್ಲಿ ನಾಯಕನ ತಾಯಿಯಾಗಿ ನೀಡಿದ ಹೃದಯಸ್ಪರ್ಶಿ ಅಭಿನಯ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿತ್ತು. '''ಕರ್ಣ'''(೧೯೮೬) ಮತ್ತು '''ಒಂದಾಗಿ ಬಾಳು'''(೧೯೮೯) ಚಿತ್ರದಲ್ಲಿ ನಾಯಕನ ವಾತ್ಸಲ್ಯಮಯಿ ಅತ್ತಿಗೆಯಾಗಿ
ಪ್ರಶಂಸನೀಯ ಅಭಿನಯ ನೀಡಿದ್ದಾರೆ.
 
ಸುಮಿತ್ರಾ ದಕ್ಷಿಣ ಭಾರತದ ಪ್ರಖ್ಯಾತ ನಟರಾದ '''ಶಿವಾಜಿ ಗಣೇಶನ್''', '''ಪ್ರೇಮ್ ನಜೀರ್''', '''ಮಧು''', '''[[ರಜನೀಕಾಂತ್]]''', '''[[ಕಮಲ್ ಹಾಸನ್]]''', '''[[ವಿಷ್ಣುವರ್ಧನ್]]''', '''[[ರಾಜೇಶ್]]''', '''ಶಿವಕುಮಾರ್''', '''ವಿಜಯಕುಮಾರ್''', '''ಸುಕುಮಾರನ್''' ಮತ್ತು '''ಎಂ.ಜಿ.ಸೋಮನ್''' ಮುಂತಾದವರೊಂದಿಗೆ ನಟಿಸಿದ್ದಾರೆ.
"https://kn.wikipedia.org/wiki/ಸುಮಿತ್ರಾ" ಇಂದ ಪಡೆಯಲ್ಪಟ್ಟಿದೆ