ಬ್ರಹ್ಮಪುತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
*ಯಾರ್ಲುಂಗ್ ಝಾಂಗ್ಬೊ (ಬ್ರಹ್ಮಪುತ್ರ ನದಿಗೆ ಟಿಬೇಟ್ ಹೆಸರು) ನದಿಯ ಉಪ ನದಿಯಾದ ಕ್ಸಿಯಾಬ್ಕುಗೆ ಟಿಬೇಟಿನ ಕ್ಸಿಗಝೆ ಎಂಬಲ್ಲಿ ಜಲ ವಿದ್ಯುತ್ ಯೋಜನೆಯನ್ನು ಚೀನಾ ಆರಂಭಿಸಿದೆ. ಇದಕ್ಕೆ ರೂ.4900 ಕೋಟಿ ವೆಚ್ಚವಾಗುವ ಅಂದಾಜು ಇದೆ ಎಂದು ಯೋಜನೆಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥ ಝಾಂಗ್ ಯೂನಬಾವೊ ತಿಳಿಸಿದ್ದಾರೆ. ಕ್ಸಿಗಝೆಯು ಸಿಕ್ಕಿಂಗೆ ಸನಿಹದಲ್ಲಿದೆ. ಕ್ಸಿಗಝೆಯಿಂದ ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯುತ್ತದೆ. ಭಾರೀ ವೆಚ್ಚದ ಲಾಲ್ಹೊ ಜಲವಿದ್ಯುತ್‌ ಯೋಜನೆ 2014ರ ಜೂನ್‌ ನಲ್ಲಿ ಆರಂಭಗೊಂಡಿದ್ದು 2019ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
 
*ಕಳೆದ ವರ್ಷ ಚೀನಾವು ಟಿಬೆಟ್‌ನ ಅತ್ಯಂತ ದೊಡ್ಡ ಝಾಮ್‌ ಜಲವಿದ್ಯುತ್‌ ಯೋಜನೆಯನ್ನು ಬ್ರಹ್ಮಪುತ್ರ ನದಿ ಮೂಲಕ ಕಾರ್ಯಾರಂಭಗೊಳಿಸಿತ್ತು. ಈ ಯೋಜನೆಗೆ ರೂ.9900 ಕೋಟಿ ವೆಚ್ಚ ತಗುಲಿದೆ ಎನ್ನಲಾಗಿದೆ. ಭಾರತದ ಆತಂಕವನ್ನು ನಿರಾಕರಿಸಿರುವ ಚೀನಾ, ನೀರಿನ ಹರಿವಿಗೆ ಅಡ್ಡಿಯಾಗದ ರೀತಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದೆ.<ref>[http://www.prajavani.net/news/article/2016/10/02/442178.html ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ: ಭಾರತ ಆತಂಕ]</ref>
 
===ಭಾರತದಲ್ಲಿ ಬ್ರಹ್ಮಪುತ್ರ===
೩೧ ನೇ ಸಾಲು:
===ಬಾಂಗ್ಲಾದೇಶದಲ್ಲಿ ಜಮುನಾ===
[[Image:Bangladesh LOC 1996 map.jpg|left|240px|thumb|ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ಮತ್ತು ಇತರ ನದಿಗಳನ್ನು ತೋರಿಸುವ ಒಂದು ನಕ್ಷೆ.]]
ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ಎರಡು ಶಾಖೆಗಳಾಗಿ ಒಡೆದು ಹಿರಿದಾದ ಶಾಖೆಯು ಜಮುನಾ ಎಂಬ ಹೆಸರನ್ನು ಹೊಂದಿ ನೇರ ದಕ್ಷಿಣಕ್ಕೆ ಹರಿದು ಮುಂದೆ ಗಂಗಾ ನದಿಯನ್ನು ಕೂಡುತ್ತದೆ. ಕಿರಿಯ ಶಾಖೆಯು ಬ್ರಹ್ಮಪುತ್ರ ಎಂಬ ಹೆಸರಿನಿಂದ ಆಗ್ನೇಯಕ್ಕೆ ಹರಿದು ಮೇಘನಾ ನದಿಯನ್ನು ಸೇರುತ್ತದೆ. ಮುಂದೆ ಚಾಂದ್ ಪುರದ ಬಳಿ ಈ ಎರಡೂ ಒಗ್ಗೂಡಿ [[ಬಂಗಾಳ ಆಖಾತ|ಬಂಗಾಳ ಆಖಾತವನ್ನು]] ತಲುಪುತ್ತವೆ. ಹೀಗೆ ಹಲವು ನದಿಗಳ ಸಂಗಮಗಳುಂಟಾಗಿ ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ವಿಶ್ವದಲ್ಲಿ ಅತಿ ಹಿರಿದಾದ ಮುಖಜಭೂಮಿ ಸೃಷ್ಟಿಯಾಗಿದೆ. ಇದಕ್ಕೆ [[ಗಂಗಾ ಡೆಲ್ಟಾ]] ಎಂಬ ಹೆಸರು.
 
==ಸಾಗಾಣಿಕೆ ಮತ್ತು ನೌಕಾಯಾನ==
"https://kn.wikipedia.org/wiki/ಬ್ರಹ್ಮಪುತ್ರ" ಇಂದ ಪಡೆಯಲ್ಪಟ್ಟಿದೆ