ಅಂಜನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
| name = ಅಂಜನಾ
| image =
| image_size =
| caption =
| birth_name =
| birth_date =
| birth_place =
| occupation = ಚಲನಚಿತ್ರ ನಟಿ
| years_active = ೧೯೯೦-೧೯೯೭
| domesticpartner =
| website =
}}
 
'''ಅಂಜನಾ''' ಕನ್ನಡದ ಜನಪ್ರಿಯ ಚಲನಚಿತ್ರ ನಟಿ. ೧೯೯೦ರ ದಶಕದಲ್ಲಿ ಸಕ್ರಿಯರಾಗಿದ್ದ ಅಂಜನಾ '''[[ಅಜಗಜಾಂತರ]]'''(೧೯೯೧), '''[[ಒಂದು ಸಿನಿಮಾ ಕಥೆ]]'''(೧೯೯೨), '''[[ಲೂಟಿ ಗ್ಯಾಂಗ್]]'''(೧೯೯೪) ಮತ್ತು '''[[ಬಂಗಾರದ ಕಳಶ]]'''(೧೯೯೫) ಚಿತ್ರಗಳಲ್ಲಿನ ಸ್ಮರಣೀಯ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.
<ref>{{cite web|title=ಈ ಜನ ಅಂಜನಾ|url=http://www.udayavani.com/kannada/news/weekly-supplement/128153/these-people-anjana|publisher=ಉದಯವಾಣಿ}}</ref>
==ವೃತ್ತಿಜೀವನ==
==ಅಂಜನಾ ನಟಿಸಿದ ಚಿತ್ರಗಳು==
'''[[ಶಬರಿಮಲೈ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'''(೧೯೯೦) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ '''[[ಶಶಿಕುಮಾರ್]]''' ಮತ್ತು '''[[ಮಾಲಾಶ್ರೀ]]''' ಅಭಿನಯದ '''[[ಪೋಲಿಸ್‍ನ ಹೆಂಡ್ತಿ]]'''(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದ್ದಾರೆ. ಪ್ರಸಿದ್ಧ ನಟ ನಿರ್ದೇಶಕ '''[[ಕಾಶಿನಾಥ್]]''' ನಿರ್ದೇಶನದ
'''[[ಅಜಗಜಾಂತರ]]'''(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ನೀಡಿದ ಅಮೋಘ ಅಭಿನಯ ಚಿತ್ರರಸಿಕರ ಮನಸೂರೆಗೊಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶ ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ '''ಜುದಾಯಿ'''(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ '''[[ಶ್ರೀದೇವಿ]]''' ನಿರ್ವಹಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ<ref name=ರಾಜೇಂದ್ರ>{{cite web|title=ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್|url=http://kannada.filmibeat.com/tv/25-comedy-darbar-on-kasthuri-tv-by-kashinath-aid0052.html|publisher=ಕನ್ನಡ ಫಿಲ್ಮಿ ಬಿಟ್}}</ref>.
 
'''[[ಅನಂತ್ ನಾಗ್]]''' ಅಭಿನಯದ '''[[ಒಂದು ಸಿನಿಮಾ ಕಥೆ]]'''(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ '''[[ಟೈಗರ್ ಪ್ರಭಾಕರ್]]''' ಅವರೊಂದಿಗೆ '''[[ಕಿಲಾಡಿ ತಾತ]]'''(೧೯೯೦) ಮತ್ತು '''[[ಸೆಂಟ್ರಲ್ ರೌಡಿ]]'''(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. '''[[ಸುನಿಲ್ ಕುಮಾರ್ ದೇಸಾಯಿ]]''' ಅವರ ನಿರ್ದೇಶನದ '''[[ನಿಷ್ಕರ್ಷ]]''' ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. '''[[ದೇವರಾಜ್‌]]''' ಅಭಿನಯದ '''[[ರೋಷಗಾರ]]'''(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, '''[[ಲೂಟಿ ಗ್ಯಾಂಗ್]]'''(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ '''[[ಅಂಬರೀಶ್]]''' ಅವರೊಂದಿಗೆ '''[[ಮೇಘ ಮಂದಾರ]]'''(೧೯೯೨) ಮತ್ತು '''[[ಮೈಸೂರು ಜಾಣ]]'''(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. '''[[ವಿಷ್ಣುವರ್ಧನ್]]''' ಮತ್ತು '''[[ಸಿತಾರ]]''' ಅಭಿನಯದ '''[[ಬಂಗಾರದ ಕಳಶ]]'''(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ.
 
'''[[ವಿಷ್ಣುವರ್ಧನ್]]''', '''[[ಅಂಬರೀಶ್]]''', '''[[ಅನಂತ್ ನಾಗ್]]''', '''[[ಟೈಗರ್ ಪ್ರಭಾಕರ್]]''', '''[[ಕಾಶಿನಾಥ್]]''' ಮತ್ತು '''[[ದೇವರಾಜ್‌]]'''ರಂತಹ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜನಾ '''[[ಭಾರ್ಗವ]]''', '''[[ಕೆ.ವಿ.ಜಯರಾಂ]]''', '''[[ಓಂ ಸಾಯಿಪ್ರಕಾಶ್]]''', '''[[ಎ ಟಿ ರಘು|ಎ.ಟಿ.ರಘು]]''' ಮತ್ತು '''[[ಫಣಿ ರಾಮಚಂದ್ರ]]''' ಮುಂತಾದ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
 
==ಅಂಜನಾ ನಟಿಸಿದಅಭಿನಯದ ಚಿತ್ರಗಳು==
{| class="wikitable sortable"
|-
Line ೨೭ ⟶ ೪೯:
| ೧೯೯೨ || ''[[ನನ್ನ ತಂಗಿ]]'' || ಕನ್ನಡ || || [[ಪೆರಾಲ]] || [[ದೇವರಾಜ್‌]], [[ಸೌಂದರ್ಯ]]
|-
| ೧೯೯೨ || ''[[ಮೇಘ ಮಂದಾರ]]'' || ಕನ್ನಡ || ಸ್ನೇಹಾ || [[ಕೆ.ವಿ.ಜಯರಾಂ]] || [[ಅಂಬರೀಶ್]], [[ಮಾಲಾಶ್ರೀ]]
|-
| ೧೯೯೨ || ''[[ಮೈಸೂರು ಜಾಣ]]'' || ಕನ್ನಡ || || [[ಎ.ಟಿ.ರಘು]] || [[ಅಂಬರೀಶ್]], [[ವಿನಯಾ ಪ್ರಸಾದ್]]
"https://kn.wikipedia.org/wiki/ಅಂಜನಾ" ಇಂದ ಪಡೆಯಲ್ಪಟ್ಟಿದೆ