ಉಮಾ ಶಿವಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಚಲನ ಚಿತ್ರ → ಚಲನಚಿತ್ರ using AWB
ಚು Wikipedia python library
 
೧ ನೇ ಸಾಲು:
(೧೯೪೨-೨೫, ಜೂನ್, ೨೦೧೩)
 
[[ಚಿತ್ರ:7e.jpg|thumb|right|200px| 'ಉಮಾ ಶಿವಕುಮಾರ್']]
 
[[ಕನ್ನಡ]] ಚಲನಚಿತ್ರ ರಂಗದ ಹಿರಿಯ ಅಭಿನೇತ್ರಿ '''ಉಮಾ ಶಿವಕುಮಾರ್''', ಸುಮಾರು ೧೭೦ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯ ಪಾತ್ರದಲ್ಲೂ ಅತ್ಯುತ್ತಮ ವಾಗಿ ಕಾಣಿಸಿಕೊಂಡಿದ್ದಾರೆ. ಪ್ರಮುಖವಾಗಿ ಅವರಿಗೆ 'ಗಯ್ಯಾಳಿ ಪಾತ್ರ' ತುಂಬಾ ಚೆನ್ನಾಗಿ ಒಪ್ಪುತ್ತಿತ್ತು. ೬೦ ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ 'ಬಜಾರಿಯಾ ಪಾತ್ರ'ದಲ್ಲಿ ಕಾಣಿಸಿಕೊಂದು ಮನೆಯ ಮಾತಾಗಿದ್ದ ಉಮಾ ಶಿವಕುಮಾರ್, 'ಬಡ್ಡಿ ಬಂಗಾರಮ್ಮ' (೧೯೮೪)ಎಂಬ ಚಿತ್ರದ ನಂತರ ಬಹಳ ಪ್ರಸಿದ್ಧರಾದರು. " ಬಂಗಾರದಂತ ನನ್ನ ಪಿಂಗಾಣಿ ಪಾತ್ರೆ ಒಡೆದುಹಾಕಿಬಿಟ್ಟೆಯಲ್ಲೊ ನಿನ್ನ ಕೈ ಸೇದೋಗ; ಏನೋ ಶೇಷ, ನಿನ್ನ ನಮಸ್ಕಾರಕ್ಕೆ ಬೆಂಕಿ ಹಾಕ.ಎಲ್ಲೋ ಬಡ್ಡಿ ದುಡ್ಡು.ಎಲ್ಲಾ ಖರ್ಚಾಗೋಯ್ತ. ನಸುಗುನ್ನಿ. ನಿನ್ನ ಕತ್ತಿನಲ್ಲಿರುವ ತಾಳಿ ಬಿಚ್ಛಿಡು." " ಕೊಡು ತಾಳೀನ, ಮಾನ ಮರ್ಯಾದೆ ಇಲ್ಲದವನು ಯಾಕೆ ನನ್ನತ್ರ ಸಾಲ ತಗೊಂಡೆ." ಈ ತರಹದ ಸಂಭಾಷಣೆಯ ಪಾತ್ರಗಳು ಅವರಿಗೆ ಬಲು ಪ್ರಿಯ. ಹೆಚ್ಚಾಗಿ ಅವರ ಪಾತ್ರಗಳು, ಜಗಳ ಗಂಟಿ ಅತ್ತೆ, ಬಾಯಿಬಡಕ ತಾಯಿ, ಗಂಡುಬೀರಿ ಬಜಾರಿ ಹೆಂಗಸಿನ ಪಾತ್ರಗಳಾಗಿರುತ್ತಿದ್ದವು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 'ಬಡ್ಡಿ ಬಂಗಾರಮ್ಮ ಬ್ಯೂಟಿ ಪಾರ್ಲರ್', ನಡೆಸುತ್ತಿದ್ದ ಹಿರಿಯ ನಟಿ 'ಉಮಾ ಶಿವಕುಮಾರ್', ಕಳೆದ ಎರಡು ದಶಕ ಗಳಿಂದ ಚಿತ್ರರಂಗದಿಂದ ದೂರವಿದ್ದರು.
==ಪರಿವಾರ==
Line ೧೫ ⟶ ೧೩:
* ನೆನಪಿನ ನೆರಳು
* ಮನೆಯೇ ಮಂತ್ರಾಲಯ
 
==ನಿಧನ==
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ೭೧ ವರ್ಷ ಪ್ರಾಯದ ಉಮಾ ಶಿವಕುಮಾರ್ ರವರು ಸನ್. ೨೦೧೩ ರ, ಜೂನ್, ೨೫ (ಮಂಗಳವಾರ) ದಂದು, ಬೆಂಗಳೂರಿನ ಚಾಮರಾಜಪೇಟೆಯ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು.
 
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
"https://kn.wikipedia.org/wiki/ಉಮಾ_ಶಿವಕುಮಾರ್" ಇಂದ ಪಡೆಯಲ್ಪಟ್ಟಿದೆ