ಉತ್ತರಾಯಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಕಾಲ using HotCat
ಚು Wikipedia python library
೧ ನೇ ಸಾಲು:
[[Image:Earth-lighting-summer-solstice KN.png|right|thumb|250px|ದಕ್ಷಿಣಾಯನ]]
೧.[[ಭೂಮಿ|ಭೂಮಿಯ]] [[ಉತ್ತರ ಗೋಲಾರ್ಧ]]ದ ಅತಿ ಉದ್ದದ ದಿನ ಹಾಗೂ ಅತಿ ಸಣ್ಣ ರಾತ್ರಿ ಅಥವಾ [[ದಕ್ಷಿಣ ಗೋಲಾರ್ಧ]]ದ ಅತಿ ಚಿಕ್ಕ ದಿನ ಹಾಗೂ ಅತಿ ಉದ್ದದ ರಾತ್ರಿ ಪ್ರಮಾಣದ ಕಾಲವನ್ನು ಹೊಂದಿದ ದಿನ. ಭೂಮಿಯ [[ಮಕರಸಂಕ್ರಾಂತಿವೃತ್ತ]]ದ ಮೇಲೆ ಸೂರ್ಯನು ನೇರವಾಗಿ ಪ್ರಕಾಶಿಸಲಾರಂಭಿಸುವ ಕಾಲ; ಪ್ರತಿ ವರ್ಷ [[ಡಿಸೆಂಬರ್ ೨೨]]ರ ಸುಮಾರಿಗೆ ಉತ್ತರಾಯಣವಾಗುತ್ತದೆ. (ಬಲಗಡೆಯ ಚಿತ್ರ ಇದಕ್ಕೆ ವಿರುದ್ಧವಾದ ಜೂನ್ ೨೨ ರ ದಕ್ಷಿಣಾಯನವನ್ನು ತೋರುತ್ತಿದೆ.)
 
೨.ಹಿಂದೂ [[ಪಂಚಾಂಗ]]ದ ಪ್ರಕಾರ ಪ್ರತಿ ಸಂವತ್ಸರ(ವರ್ಷ)ವನ್ನು ಸೂರ್ಯನ ಸಂಚಲನವನ್ನು ಅನುಸರಿಸಿ,ಎರಡು ಅಯನಗಳಾಗಿ ವಿಂಗಡಿಸಲಾಗಿದೆ.(೧)ಉತ್ತರಾಯಣ.(೨)ದಕ್ಷಿಣಾಯನ. ಸೂರ್ಯನು ಉತ್ತರಧ್ರುವರೇಖೆಯಲ್ಲಿ ಕಾಣಿಸುವ ಕಾಲ-ಉತ್ತರಾಯಣ. ಇದು ಹಿಂದೆ [[ಮಕರಸಂಕ್ರಾಂತಿ]]ಯಿಂದ [[ಕಟಕಸಂಕ್ರಾಂತಿ]]ಯವರೆಗೆ ಅಥವಾ ಸಾಮಾನ್ಯವಾಗಿ ಪುಷ್ಯಮಾಸದಿಂದ ಆಷಾಢಮಾಸದವರೆಗೆ ೬ ತಿಂಗಳ ಕಾಲದ ಅವಧಿಗೆ ಹೊಂದುತ್ತಿತ್ತು. ಆದರೆ, ಭೂಮಿಯ [[ಧ್ರುವಚಲನೆ]] ಅಥವಾ [[ವಕ್ರಾಯನ]]ದ ಪರಿಣಾಮವಾಗಿ, ಉತ್ತರಾಯಣವೂ, ಸೂರ್ಯನ ಮಕರ [[ಸಂಕ್ರಮಣ]]ವೂ ಈಗ ಬೇರೆ ಬೇರೆ ದಿನಗಳಂದು ನಡೆಯುತ್ತವೆ. ಆದರೂ, ಉತ್ತರಾಯಣ [[ಪುಣ್ಯಕಾಲ]]ವನ್ನು ಈ ಹಿಂದಿನಂತೆಯೇ [[ಮಕರ ಸಂಕ್ರಾಂತಿ]]ಯಂದೇ ಆಚರಿಸಲಾಗುತ್ತಿದೆ. ಉತ್ತರಾಯಣದ ೬ ತಿಂಗಳ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆಂದೂ,ಈ ಕಾಲದಲ್ಲಿ ಸಾಯುವವರು ನೇರ ಸ್ವರ್ಗಕ್ಕೆ ಹೋಗುತ್ತಾರೆಂದೂ ನಂಬಿಕೆ ಇದೆ.
 
[[ಮಹಾಭಾರತ]]ದಲ್ಲಿ [[ಭೀಷ್ಮ]]ನು ಶರಶಯ್ಯೆಯ ಮೇಲೆ ಮಲಗಿದ್ದಾಗಲೂ,'ಇಚ್ಛಾಮರಣ'ದ ವರವನ್ನು ಪಡೆದಿದ್ದ ಕಾರಣ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು, ಉತ್ತರಾಯಣ ಪುಣ್ಯಕಾಲ ಬಂದ ನಂತರ ದೇಹತ್ಯಾಗ ಮಾಡಿದನೆಂಬ ವಿಚಾರ ಕಾಣಸಿಗುತ್ತದೆ.
==ಹಿಂದೂ ಪಂಚಾಂಗ ಮತ್ತು ನಂಬಿಕೆಗಳಲ್ಲಿ==
ಮಕರ ಮೊದಲಾಗಿ ಆರು ರಾಶಿಗಳಲ್ಲಿ ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸುವ ಕಾಲ. ಪ್ರಾಚೀನ ಸಂಪ್ರದಾಯದ ಪ್ರಕಾರ ಇದು ಸಾಮಾನ್ಯವಾಗಿ ಜನವರಿ 13 ಅಥವಾ 14ನೆಯ ದಿವಸ ತೊಡಗಿ ಜುಲೈ 16 ಅಥವಾ 17ನೆಯ ದಿವಸ ಕೊನೆಗೊಳ್ಳುತ್ತಿತ್ತು. [[ಚಾಂದ್ರಮಾನ]]ದಲ್ಲಾದರೋ ಉತ್ತರಾಯಣಾರಂಭ ಪುಷ್ಯಮಾಸದಲ್ಲಿ ಮತ್ತು ಅಂತ್ಯ [[ಆಷಾಢಮಾಸ]]ದಲ್ಲಿ. ಶಿಶಿರ, ವಸಂತ, ಗ್ರೀಷ್ಮ ಋತುಗಳು ಉತ್ತರಾಯಣ ಕಾಲದಲ್ಲಿ ಬರುತ್ತವೆ. ಇವು ನಿರಯನ ಉತ್ತರಾಯಣದ ಪ್ರಾರಂಭ ಮತ್ತು ಮುಗಿಯುವ ಕಾಲಗಳು. ಅಯನಾಂಶದ ಕಾರಣದಿಂದ ಇದು ಕಾಲಕಾಲಕ್ಕೆ ಬದಲಾಗುತ್ತದೆ. ಆದರೂ ಸಾಯನ ಉತ್ತರಾಯಣಕಾಲ ಕರ್ಮಾಚರಣೆಗೆ ಗ್ರಾಹ್ಯವಾಗಿರುವುದಿಲ್ಲ. ಒಮ್ಮೆ ಉತ್ತರಾಯಣ ಪ್ರಾರಂಭಕಾಲ ಮಾಘಶುಕ್ಲ ಸಪ್ತಮೀ ದಿವಸ ಇದ್ದ ಕಾರಣದಿಂದ ಅಂದು ಅದರ ದ್ಯೋತಕವಾಗಿ ಸೂರ್ಯಮಂಡಲದಿಂದ ಕೂಡಿದ ರಥದಲ್ಲಿ ಭಗವಂತನನ್ನು ಸೂರ್ಯೋದಯ ಕಾಲಕ್ಕೆ ಸರಿಯಾಗಿ ರಥಾರೋಹಣ ಮಾಡಿಸುವುದು ಇಂದಿಗೂ ಆಚರಣೆಯಲ್ಲಿದೆ. ಉತ್ತರಾಯಣ ಆರಂಭ ಕಾಲದಲ್ಲಿ ವೈದಿಕರು ಸ್ನಾನ, ತರ್ಪಣ ಮೊದಲಾದುವನ್ನು ಮಾಡುವುದಿದೆ. ಸೂರ್ಯ ಅಸ್ತನಾಗುವುದಕ್ಕೆ ಸ್ವಲ್ಪಕಾಲ ಮೊದಲು [[ಮಕರರಾಶಿ]]ಯನ್ನು ಪ್ರವೇಶಿಸಿದರೆ ಆ ದಿವಸದಲ್ಲೂ ಸಾಯಂಕಾಲಾನಂತರ ಪ್ರವೇಶಿಸಿದರೆ ಮಾರನೆಯ ದಿವಸದ ಹಗಲಿನಲ್ಲೂ ಮಕರ ಸಂಕ್ರಮಣ ಪುಣ್ಯಕಾಲವಾಗುತ್ತದೆ. ಇದರ ಅವಧಿ ಪ್ರವೇಶಕಾಲದಿಂದ ಮುಂದೆ ಎಂಟು ಗಂಟೆಗಳವರೆಗೆ. ಕೆಲವರು ಹನ್ನೆರಡು ಗಂಟೆ ಕಾಲದವರೆಗೂ ಇರುತ್ತದೆಂದೂ ಅಭಿಪ್ರಾಯಪಡುತ್ತಾರೆ. ಇದನ್ನು [[ಮಕರಸಂಕ್ರಾಂತಿ]] ಎಂದೂ ಕರೆಯುತ್ತಾರೆ. ಈ ದಿವಸ ತಿಲದಾನ ಮಾಡುವುದು ವಿಶೇಷ. ಅದಕ್ಕಾಗಿಯೇ ಇಂದಿಗೂ ಮಕರಸಂಕ್ರಾಂತಿಯಂದು ಎಳ್ಳಿಗೆ ಬೆಲ್ಲ ಮೊದಲಾದವನ್ನು ಕೂಡಿಸಿ ಎಲ್ಲರಿಗೂ ತಿನ್ನಲು ಕೊಡುತ್ತಾರೆ. ಇಷ್ಟೇ ಅಲ್ಲ. ಸಂಕ್ರಾಂತಿ ಪೀಡಾಪರಿಹಾರಕ್ಕಾಗಿ ಸಂಜೆ ಮಕ್ಕಳನ್ನು ಹಸೆಮಣೆಯಮೇಲೆ ಕುಳ್ಳಿರಿಸಿ ಎಲಚಿಹಣ್ಣಿನೊಡನೆ ಎಳ್ಳನ್ನು ತಲೆಯಮೇಲೆ ಸುರಿಯುತ್ತಾರೆ. ಕೆಲವು ಪ್ರದೇಶಗಳಲ್ಲಿ, ಹಸುಗಳನ್ನು ತೊಳೆದು ಬಣ್ಣ ಮೊದಲಾದುವುಗಳಿಂದ ಶೃಂಗರಿಸಿ ಕಿಚ್ಚು ಹಾಯಿಸುತ್ತಾರೆ. ಸಂಕ್ರಾಂತಿ ಎಂಬುದು ಒಂದು ದೇವತೆ. ಅದಕ್ಕೆ ಎಂಟು ಬಾಹುಗಳೂ ನಾಲ್ಕು ತಲೆಗಳೂ ಇವೆಯೆಂದು ಪ್ರತೀತಿ. (ಕೆಲವರು ಮೂರು ತಲೆಗಳೆಂದೂ ಮತ್ತೆ ಕೆಲವರು ಎರಡು ತಲೆಗಳೆಂದೂ ಹೇಳುತ್ತಾರೆ.) ಈ ದೇವತೆ ಬೃಹದಾಕಾರದಿಂದ ಕೂಡಿ ನೋಡಲು ಭಯಂಕರಳಾಗಿರುತ್ತಾಳೆ. ಇವಳು ಪ್ರಪಂಚದ ಯಾವ ಭಾಗದಲ್ಲಿ ಸಂಕ್ರಾಂತಿಯಂದು ಗೋಚರಿಸುತ್ತಾಳೋ ಆ ಭಾಗಕ್ಕೆ ತೊಂದರೆಯೆಂದೂ ಇವಳ ವಾಹನ ಇವಳು ಧರಿಸಿರುವ ಪದಾರ್ಥಗಳಿಂದ ಎಲ್ಲಕ್ಕೂ ಹಾನಿಯುಂಟಾಗುತ್ತದೆಂದೂ ಶಾಸ್ತ್ರ ಹೇಳುತ್ತದೆ. ಈ ಫಲಗಳನ್ನು ಯುಗಾದಿಯ ದಿನದಂದು ಕೇಳಿ ತಿಳಿದುಕೊಳ್ಳುವ ರೂಢಿ ಇದೆ. ಉತ್ತರಾಯಣದ ಆರು ತಿಂಗಳ ಅವಧಿಯನ್ನು ದೇವತೆಗಳಿಗೆ ಒಂದು ಹಗಲಿಗೆ ಸಮಾನವೆಂದು ಜ್ಯೋತಿಶ್ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಮದುವೆ, ಮುಂಜಿ, ದೇವಪ್ರತಿಷ್ಠೆ ಮೊದಲಾದ ಕಾರ್ಯಗಳನ್ನು ವಿಶೇಷವಾಗಿ ಮಾಡಲು ಈ ಅವಧಿ ಪ್ರಶಸ್ತ ಈ ಕಾಲವನ್ನು ಅಗ್ನಿ, ಜ್ಯೋತಿಸ್ಸು, ಅಹಸ್ಸು, ಶುಕ್ಲ ಎಂದೂ ಇದರಲ್ಲಿ ಮೃತರಾದ ಯೋಗಿಗಳಿಗೆ ಪುನರಾವೃತ್ತಿ ಇಲ್ಲವೆಂದೂ ಶ್ರೀ ಭಗವದ್ಗೀತೆ ಸಾರುತ್ತಿದೆ. ಇದಕ್ಕಾಗಿಯೇ ಭೀಷ್ಮ ಯುದ್ಧದಲ್ಲಿ ಬಾಣಗಳಿಗೆ ತುತ್ತಾಗಿಬಿದ್ದರೂ ಇಚ್ಛಾಮರಣಿಯಾದ ಕಾರಣ ಪ್ರಾಣೋತ್ಕ್ರಮಣಕ್ಕಾಗಿ ಉತ್ತರಾಯಣವನ್ನೇ ನಿರೀಕ್ಷಿಸುತ್ತ ಅರ್ಜುನಕೃತ ಶರಶಯ್ಯೆಯಲ್ಲಿ ಮಲಗಿದ್ದನೆಂದು ಮಹಾಭಾರತದಲ್ಲಿದೆ.
 
==ಖಗೋಳಶಾಸ್ತ್ರದಲ್ಲಿ==
[[File:Uttarayana.ogv|thumb|left|Illustration of the movement of the Sun north and south of the Equator, caused by axial tilt of the Earth.]]
"https://kn.wikipedia.org/wiki/ಉತ್ತರಾಯಣ" ಇಂದ ಪಡೆಯಲ್ಪಟ್ಟಿದೆ