ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೨೭ ನೇ ಸಾಲು:
ಮುಂದೆ ಹೇಳುತ್ತಾರೆ:ದೇವನೊಂದಿಗೆ ಇತರರನ್ನು ಸಹಭಾಗಿಗಳಾಗಿಸುವು ದೆಂದರೆ ಅವರನ್ನು ದೇವನಿಗೆ ಸಮಾನರೆಂದು ಪರಿಗಣಿಸಿದಂತಾಗುವುದು. ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ? ಆದುದರಿಂದಲೇ ಪ್ರವಾದಿವರ್ಯರು ಬಹುದೇವಾರಾಧನೆಯಿಂದ ಜನರನ್ನು ತಡೆದರು. ಇತರ ಧರ್ಮಗಳಲ್ಲಿ ಬಹುದೇವಾರಾಧನೆಯ ಶಿಕ್ಷಣ ಮತ್ತು ಅನುಮತಿಯಿರುವು ದರಿಂದ ನಮ್ಮಂಥವರು ಅನೇಕ ತರದ ನಷ್ಟಗಳಿಗೆ ಗುರಿಯಾಗಿದ್ದಾರೆ. ಬಹುದೇವಾರಾಧನೆಯ ಎಲ್ಲ ದಾರಿಗಳನ್ನು ಮುಚ್ಚುವ ಮೂಲಕ '''[[ಅಲ್ಲಾಹ್]]''' ಮನುಷ್ಯನಿಗೆ ಹಿರಿಮೆ ಮತ್ತು ಔನ್ನತ್ಯವನ್ನು ನೀಡಿದೆಯಲ್ಲದೆ ನೀಚತೆ ಮತ್ತದರ ಪರಿಣಾಮಗಳಿಂದ ಅವನನ್ನು ರಕ್ಷಿಸಿದೆ." <ref>ಅಡಿಯಾರ್ ರ ಪುಸ್ತಕ "ನಾನ್ ಕಾದಲಿಕ್ಕುಂ '''[[ಇಸ್ಲಾಂ]]'''"(ನಾನು ಪ್ರೀತಿಸುವ ಇಸ್ಲಾಂ )ಪುಟ 39.ಅನುವಾದಕರು:ಇಬ್ರಾಹೀಂ ಸಯೀದ್ </ref>
}}
 
===ಪ್ರವಾದಿತ್ವದ ಮೇಲಿನ ವಿಶ್ವಾಸ===
ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಎರಡೆನೆಯದು '''[[ಪ್ರವಾದಿ]]'''ತ್ವದ ಮೇಲಿನ ವಿಶ್ವಾಸವಾಗಿದೆ. ಮನುಷ್ಯ ಇತಿಹಾಸದ ಆರಂಭ ಕಾಲದಿಂದಲೂ '''[[ಅಲ್ಲಾಹ]]'''ನು ಕೆಲವು ಚುನಾಯಿತ ವ್ಯಕ್ತಿಗಳನ್ನು ಮಾನವರ ಮಾರ್ಗದರ್ಶನಕ್ಕಾಗಿ ನಿಯೋಜಿಸುತ್ತಿದ್ದನು. ಇವರನ್ನೇ '''[[ಪ್ರವಾದಿ]]''' ಗಳೆಂದು ಕರೆಯಲಾಯಿತು. ಈ ಎಲ್ಲ '''[[ಪ್ರವಾದಿ]]'''ಗಳ ಮೇಲೆ ವಿಶ್ವಾಸವಿಡುವುದು ಪ್ರತಿಯೊಬ್ಬ [[ಮುಸ್ಲಿಮ್|ಮುಸ್ಲಿಮ]]ನ ಮೇಲೆ ಕಡ್ಡಾಯವಾಗಿದೆ. ಇವರ ಪೈಕಿ ಯಾವುದಾದರೊಂದು '''[[ಪ್ರವಾದಿ]]'''ಯನ್ನು ನಿರಾಕರಿಸಿದರೆ ಅವನು ಮುಸ್ಲಿಮನಾಗಲು ಸಾಧ್ಯವಿಲ್ಲ. ಮನುಷ್ಯ ಪ್ರಕ್ರತಿಯನ್ನು ಗ್ರಹಿಸಲು ಮತ್ತವರ ಅವಶ್ಯಕತೆಗಳನ್ನರಿಯಲು ದೇವಚರರಿಗೋ ಅಥವಾ ಮನುಷ್ಯೇತರ ಇತರ ಜೀವಿಗಳಿಗೋ ಸಾಧ್ಯವಿಲ್ಲ. ಆದರಿಂದಲೇ ಅಲ್ಲಾಹನು ಮಾನವರನ್ನೇ ಮಾನವಸುಧಾರಕರಾಗಿ ನೇಮಿಸಿದನು. ಮನುಷ್ಯರಾಗಿದ್ದರೂ '''[[ಪ್ರವಾದಿ]]'''ಗಳು ಶ್ರೇಷ್ಠ ಸ್ವಭಾವದವರಾಗಿದ್ದರು. ಉತ್ತಮ ಚಾರಿತ್ರ್ಯದ ಉತ್ತುಂಗಕ್ಕೇರಿದವರಾಗಿದ್ದರು. ಇತರರಂತೆ ಅವರೂ ಆಹಾರವನ್ನು ಸೇವಿಸುತ್ತಿದ್ದರು .ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರು. ವೈವಾಹಿಕ ಜೀವನ ನಡೆಸುತ್ತಿದ್ದರು. ಸಾರ್ವಜನಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತರರಿಗೆ ನೀಡದ ಪ್ರತ್ಯೇಕತೆಯೊಂದನ್ನು
Line ೭೦ ⟶ ೬೯:
* [[ಈದ್-ಉಲ್-ಫಿತರ್]] ([[ರಂಜಾನ್]])
* [[ಈದ್-ಉಲ್-ಅದಾ]] ([[ಬಕ್ರೀದ್]])
 
== ಜಿಹಾದ್ ==
'''[[ಇಸ್ಲಾಮ್]]''' ಧರ್ಮದಲ್ಲಿ '''[[ಜಿಹಾದ್]]''' ಅಂದರೆ ಹೋರಾಡು ಎಂದರ್ಥ. ತನ್ನ ಕಾಮನೆಗಳ ವಿರುದ್ಧ ಹೋರಾಡುವುದು ಒಂದು '''[[ಜಿಹಾದ್]]''' ಆಗಿದೆ. ಈಗಿರುವಂತೆ ಭಯೋತ್ಪಾದನಾ ಕೃತ್ಯಗಳಿಗೂ ಜಿಹಾದಿಗೆ ಯಾವುದೆ ಸಂಬಂಧವಿಲ್ಲ. '''[[ಜಿಹಾದ್]]''' ಎಂಬ ಪದವು ಬಹಳ ಗಾಢವಾದ ಅರ್ಥವನ್ನು ಹೊಂದಿದೆ.
==ಇಸ್ಲಾಂ ತುಳಿದು ಬಂದ ಹಾದಿ==
ಸರಿಸುಮಾರು ೧೪೫೦ ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸವು ಅತ್ಯದ್ಭುತ ತಿರುವನ್ನು ಕಂಡಿತು. ತನ್ನ ಬಾಲ್ಯದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವru ತನ್ನ ೪೦ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿ ಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಈ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆಯನ್ನನುಭವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿ ಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು. ಈ ಕ್ರಾಂತಿಯ ಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ ಹ. ಆದಮ್ (ಅ)ರಿಂದ ಹಿಡಿದು ಮಾನವ ಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಈ ಮಹಾನ್ ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆ ಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತು ನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. [[ಆಡಮ್]] ಎಂದು ನಾಮಾಂಕಿತರಾದ ಹ.ಆದಂ, ನೋಹಾ ಎಂದು ಕರೆಯಲ್ಪಡುವ ಹ.ನೂಹ್, ಅಬ್ರಹಾಂ ಎಂದು ಪ್ರಸಿದ್ಧರಾದ ಹ.ಇಬ್ರಾಹೀಂ, ಡೇವಿಡ್ ಎಂದು ಪ್ರಖ್ಯಾತ ರಾದ ಹ.ದಾವೂದ್, ಮೋಸೆಸ್ ಎಂದು ನಾಮಪಡೆದ ಹ.ಮೂಸಾ, ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟ ಹ. [[ಈಸಾ]] ಈ ಏಲ್ಲಾ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯಗಳ ಮುಂದಿಟ್ಟಿದ್ದರು.
 
ನಲ್ವತ್ತು ವರ್ಷಗಳ ಕಾಲ ಪ್ರತಿಯೊಂದು ನಿಮಿಷವನ್ನೂ ತನ್ನದೇ ಸಮಾಜದಲ್ಲಿ ಅವರು ಕಳೆದಿದ್ದರು. ತನ್ನ ಉತ್ತಮ ಗುಣನಡತೆ ಮತ್ತು ಪಾವನ, ಪರಿಶುದ್ಧ ಸ್ವಭಾವದಿಂದಾಗಿ ಬಾಲ್ಯದಿಂದಲೇ ಸಮಾಜದ ಪ್ರತಿ ಯೊಬ್ಬ ಸದಸ್ಯನ ಕಣ್ಮಣಿಯಾಗಿದ್ದ ಇವರ ಪ್ರಾಮಾಣಿಕತೆ ಮತ್ತು ಸತ್ಯವಂತಿಕೆ ಜನಜನಿತವಾಗಿತ್ತು, ಆದ್ದರಿಂದಲೇ ಇಡೀ ಜನಾಂಗವೇ ಅವರನ್ನು'[[ಅಲ್ ಅಮೀನ್]]' ಅರ್ಥಾತ್ ಪ್ರಾಮಾಣಿಕ ಮತ್ತು '[[ಅಸ್ಸಾದಿಕ್]]' ಅರ್ಥಾತ್ ಸತ್ಯವಂತ ಎಂಬ ಬಿರುದಿನಿಂದ ಕರೆಯುತ್ತಿತ್ತು. ಎಂದೂ ಯಾರನ್ನೂ ದುಃಖಿಸದ ಇವರು ಸ್ವಯಂ ಇತರರಿಗಾಗಿ ದುಃಖವನ್ನು ಸಹಿಸುತ್ತಿದ್ದರು. ಅವರು ಮೂರ್ತಿಪೂಜಕರ ಜನಾಂಗದಲ್ಲಿದ್ದರು. ಆದರೆ ಅವರೆಂದೂ ಮೂರ್ತಿಪೂಜೆ ಮಾಡಿದವರಲ್ಲ. ವಿಗ್ರಹಾರಾಧನೆಯನ್ನು ಅವರು ದ್ವೇಷಿಸುತ್ತಿದ್ದರು. ಯಾವ ವಸ್ತುವೂ ಪೂಜಾರ್ಹವಲ್ಲವೆಂದು ಅವರ ಅಂತರಾತ್ಮವೇ ಹೇಳುತ್ತಿತ್ತು. ದೇವನು ಕೇವಲ ಒಬ್ಬನೇ ಆಗಿರಲು ಸಾಧ್ಯ ಎಂದು ಅವರ ಮನಸ್ಸು ಸ್ವಯಂ ಸಾಕ್ಷ್ಯವಹಿಸುತ್ತಿತ್ತು. ಆ ಅಜ್ಞಾನಿ ಜನಾಂಗದ ಮಧ್ಯೆ ಅವರು ಕಲ್ಲಿನ ರಾಶಿಯಲ್ಲಿರುವ ವಜ್ರದಂತೆ ಮಿನುಗುತ್ತಿದ್ದರು ಅಥವಾ ಗಾಢ ಅಂಧಕಾರದಲ್ಲಿ ಅವರೊಂದು ಪ್ರಾಕಾಶಮಾನ ದೀಪವಾಗಿದ್ದರು.
 
ನಲವತ್ತನೇ ವಯಸ್ಸಿನಲ್ಲಿ ಅವರು ತನ್ನ ಸುತ್ತಲಿರುವ ಅಂಧಕಾರವನ್ನು ಕಂಡು ಗಾಬರಿಗೊಳ್ಳುತ್ತಾರೆ. ಅಜ್ಞಾನ, ಅನೀತಿ, ದುರ್ನಡತೆ, ಅಶಿಸ್ತು, ಬಹುದೇವ ವಿಶ್ವಾಸ ಮತ್ತು ವಿಗ್ರಹಾರಾಧನೆಯ ಒಂದು ಭಯಂಕರ ಸಮುದ್ರವು ಅವರನ್ನು ಸುತ್ತುವರಿದಿತ್ತು. ಈ ಉಸಿರು ಕಟ್ಟುವ ವಾತಾವರಣದಿಂದ ಅವರು ಹೊರ ಬರ ಬಯಸುತ್ತಿದ್ದರು ಮಾತ್ರವಲ್ಲ ತನ್ನಸುತ್ತ ಕವಿದಿರುವ ಅಂಧಕಾರವನ್ನು ದೂರೀಕರಿಸುವ ಜ್ಯೋತಿಯೊಂದನ್ನು ಶೋಧಿಸುತ್ತಿದ್ದರು. ಈ ಕೆಟ್ಟು ಹೋದ ವಿಶ್ವವನ್ನು ಅಳಿಸಿ ಒಂದು ಹೊಸ ವಿಶ್ವವನ್ನು ಕಟ್ಟಿ ಬೆಳೆಸ ಬಯಸುತ್ತಿದ್ದರು. ಅದಕ್ಕಾಗಿ ಅವರು ಜನವಾಸ ದಿಂದ ದೂರ ಮಕ್ಕಾನಗರಿಯ ಹೊರ ಭಾಗದ ಲ್ಲಿದ್ದ ಒಂದು ಬೆಟ್ಟದ ಗವಿಯಲ್ಲಿ ಏಕಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ದಿನಕಳೆಯ ತೊಡಗಿದರು. ಅಲ್ಲಿ ಉಪವಾಸವಿದ್ದು ತಮ್ಮ ಆತ್ಮ, ಮನಸ್ಸು ಮತ್ತು ಮಸ್ತಿಷ್ಕವನ್ನು ಇನ್ನಷ್ಟು ಶುದ್ಧವೂ ಪಾವನವೂ ಆಗಿ ಮಾರ್ಪಡಿಸುತ್ತಿದ್ದರು. ಧ್ಯಾನ ಚಿಂತನೆಗಳಲ್ಲಿ ನಿರತ ರಾಗುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಅವರ ಬಳಿ ದೇವಚರರಾದ'[[ಜಿಬ್ರೀಲ್]]' ಬಂದು ತಾವು ಸ್ರಷ್ಟಿಕರ್ತನ ಕಡೆಯಿಂದ ಆತನ ಸಂದೇಶವಾಹಕರಾಗಿದ್ದೀರೆಂದು ಹೇಳಿ ಅವರಿಗೆ ದೇವನಿದರ್ಶನಗಳನ್ನು ನೀಡಿದರು. ಹೀಗೆ ಅವರು ಗುಹೆಯ ಏಕಾಂತದಿಂದ ಹೊರ ಬರುತ್ತಾರೆ.ಮತ್ತು ತಮ್ಮ ಜನಾಂಗದ ಮುಂದೆ ಹೋಗಿ "ಈ ವಿಗ್ರಹಗಳು ಯಾವ ಕೆಲಸಕ್ಕೂ ಬರಲಾರವು. ಇವುಗಳನ್ನು ಬಿಟ್ಟು ಬಿಡಿ. ಈ ಭೂಮಿ, ಈ ಸೂರ್ಯ, ಈ ನಕ್ಷತ್ರಗಳು, ಈ ಭೂಮಿ-ಆಕಾಶಗಳಲ್ಲಿರುವ ಎಲ್ಲ ಶಕ್ತಿಗಳು ಒಬ್ಬ ದೇವನ ಸ್ರಷ್ಟಿಗಳು. ಅವನೇ ನಿಮ್ಮ ಸ್ರಷ್ಟಿಕರ್ತನು, ಪರಿಪಾಲಕನು, ಅನ್ನದಾತನು, ಜೀವನ ಮರಣಗಳನ್ನು ನೀಡುವವನು. ಎಲ್ಲವನ್ನೂ ತೊರೆದು ಆತನನ್ನೇ ಪೂಜಿಸಿರಿ. ಎಲ್ಲರನ್ನೂ ಬಿಟ್ಟು ಅವನಲ್ಲೇ ನಿಮ್ಮ ಅಗತ್ಯಗಳನ್ನು ಬೇಡಿರಿ. ನೀವು ಮಾಡುತ್ತಿರುವ ಈ ಕಳ್ಳತನ,ಲೂಟಿ ,ಮದ್ಯಪಾನ, ಜೂಜಾಟ ,ವ್ಯಭಿಚಾರ ಎಲ್ಲವೂ ಮಹಾಪಾಪಗಳಾಗಿವೆ, ಅವುಗಳನ್ನು ತೊರೆಯಿರಿ" ಎಂದು ಹೇಳುತ್ತಾರೆ. <ref>ಸಯ್ಯದ್ ಅಬುಲ್ ಆಲಾಮೌದೂದಿಯವರ ಪುಸ್ತಕ'ಇಸ್ಲಾಂ ಧರ್ಮ' ಅನುವಾದಕರು:ಇಬ್ರಾಹೀಂ ಸಯೀದ್</ref> . ಸತ್ಯಪಥದ ಸಂದೇಶವಾಹಕರಾಗಿ ಕಾರ್ಯರಂಗಕ್ಕಿಳಿದ ಈ ಪ್ರವಾದಿಯನ್ನು ಕುಟುಂಬ ಸಮೇತ ಇಡೀ ಸಮುದಾಯವೇ ಪ್ರತಿರೋಧಿಸಿತು. ಈ ಪ್ರತಿರೋಧವೇ ಕ್ರಮೇಣ ದ್ವೇಷ ಮತ್ತು ಹಿಂಸೆಯ ರೂಪ ತಾಳಿತು. ಪ್ರವಾದಿ ಮತ್ತು ಅವರ ಅನುಯಾಯಿಗಳೂ ಸಮಾಜದ ಹಿಂಸೆ ಮತ್ತು ಅತಿಕ್ರಮಣಕ್ಕೆ ಗುರಿಯಾದರು. ಹಿಂಸೆಯು ಅತಿರೇಕಕ್ಕೆ ತಲುಪಿದಾಗ ಅವರಪೈಕಿ ಕೆಲವರು ಪ್ರವಾದಿಯವರ ಆದೇಶದ ಮೇರೆಗೆ ಸಮುದ್ರದಾಚಿನ ದೇಶವಾದ ಅಬಿಸೀನಿಯಾಕ್ಕೆ ವಲಸೆ ಹೋಗುತ್ತಾರೆ ಆದರೆ ಶತ್ರುಗಳು ಅಲ್ಲೂ ಇವರನ್ನು ಹಿಂಬಾಲಿಸಿ ಕೊಂಡು ಹೋಗುತ್ತಾರೆ. ಕ್ರೈಸ್ತ ಧರ್ಮಾನುಯಾಯಿಯಾದ ಅಲ್ಲಿಯ ಅರಸ ನಜ್ಜಾಶಿಯ ಮುಂದೆ ಮುಸಲ್ಮಾನರ ವಿರುದ್ಧ ದೂರನ್ನು ನೀಡಿ ಇವರನ್ನು ನಮಗೆ ಹಿಂತಿರುಗಿಸಬೇಕೆಂದು ವಿನಂತಿಸುತ್ತಾರೆ.
 
ಆಗ ಸ್ತ್ರೀ-ಪುರುಷರನ್ನೊಳಗೊಂಡ ಸರಿಸುಮಾರು ನೂರು ಜನರ ತಂಡವನ್ನು ಪ್ರತಿನಿಧಿಸುತ್ತಾ ಪ್ರವಾದಿ ಯವರ ಪ್ರೀತಿಯ ಚಿಕ್ಕಪ್ಪರಾದ ಅಬೂತಾಲಿಬರ ಮಗನಾದ ಹ.ಜಾಫರ್(ರ)ರಾಜನ ಮುಂದೆ ಒಂದು ಭಾಷಣ ಮಾಡುತ್ತಾರೆ. ಅವರು ಹೇಳಿದರು,
{{Quote|
Line ೮೯ ⟶ ೮೪:
ಪವಿತ್ರ [[ಕುರ್ಆನ್]]:ಅಧ್ಯಾಯ 2,ಸೂಕ್ತ 22
}}
 
== ಪ್ರಸಿದ್ಧ ವ್ಯಕ್ತಿಗಳು ಕಂಡಂತೆ==
===ಅಣ್ಣಾದೊರೈ===
Line ೧೨೧ ⟶ ೧೧೫:
}}
ಅದೇ ಪ್ರಕಾರ
 
ಅದೇ ಪ್ರಕಾರ
{{Quote|
Line ೧೨೭ ⟶ ೧೨೦:
}}
ಎಂದೂ ಬರ್ನಾಡ್ ಷಾ ಹೇಳಿರುತ್ತಾನೆ.
 
== ಉಲ್ಲೇಖಗಳು ==
{{Reflist|colwidth=30em}}
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ