ಆರ್ಥಿಕ ರಕ್ಷಣಾ ನೀತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Wikipedia python library |
ಚು Wikipedia python library |
||
೧೪ ನೇ ಸಾಲು:
ಉತ್ತರ ಭಾಗದ ರಾಜ್ಯಗಳು ಅಂತರ್ಯುದ್ಧದಲ್ಲಿ ಜಯಗಳಿಸುವುದರೊಂದಿಗೆ, ಡೆಮೊಕ್ರಾಟ್ ವಿರುದ್ಧ ರಿಪಬ್ಲಿಕನ್ರ ಪ್ರಾಬಲ್ಯ ಖಚಿತವಾಗಿತ್ತು. ಇಪ್ಪತ್ತನೆಯ ಶತಮಾನದ ಆರಂಭದ ವರೆಗೂ, ರಿಪಬ್ಲಿಕನ್ನರು ಅಮೆರಿಕನ್ ರಾಜಕೀಯ ರಂಗದ ಮೇಲೆ ತಮ್ಮ ಬಿಗಿ ಹಿಡಿತ ಸಾಧಿಸಿದ್ದರು. ರಿಪಬ್ಲಿಕನ್ ಪಕ್ಷದ ಆಳ್ವಿಕೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ನಿಲುವನ್ನು ರಾಷ್ಟ್ರಾಧ್ಯಕ್ಷ ವಿಲಿಯಮ್ ಕಿನ್ಲೇ ವಿವರಿಸಿದ್ದು ಹೀಗೆ:
:"ಮುಕ್ತ ವ್ಯಾಪಾರದಡಿ, ವರ್ತಕರು ಮಾಲೀಕರು ಹಾಗೂ ತಯಾರಕರು ಜೀತದಾಳುಗಳಾಗಿರುತ್ತಾರೆ. ರಕ್ಷಣೆಯೆಂಬುದು ಪ್ರಕೃತಿಯ ನಿಯಮ, ಸ್ವಯಂ-ಸಂರಕ್ಷಣೆಯೂ ಒಂದು ನಿಯಮ, ಆತ್ಮವಿಕಾಸದ, ಹಾಗೂ ಮಾನವ ಕುಲಕ್ಕೆ ಅತ್ಯುತ್ತಮ ನೀತಿಯನ್ನು ತಮ್ಮದಾಗಿಸಿಕೊಳ್ಳುವ ಒಂದು ಯೋಜನೆ. ರಕ್ಷಣೆ ಅನೈತಿಕ ಎಂದು ಭಾವಿಸಲಾಗಿದೆ... ಜನಸಂಖ್ಯೆ ಹೆಚ್ಚಾಗಿ, ರಕ್ಷಣಾ ನೀತಿಯು 63,000,000 [U.S. ಜನಸಂಖ್ಯೆ] ಜನರಿಗೆ ಅನುಕೂಲ ಮಾಡಿದರೆ, ಈ 63,000,000 ಜನರ ಪ್ರಭಾವವು ಉಳಿದ ಭಾಗದ ಜನರನ್ನು ಉದ್ಧಾರ ಮಾಡಬಲ್ಲವು. ಎಲ್ಲೆಡೆಯೂ ಮಾನವ ಕುಲದ ಉದ್ಧಾರ ಮಾಡದೆ ನಾವು ಪ್ರಗತಿಪಥದಲ್ಲಿ ಹೆಜ್ಜೆ ಹಾಕಲು ಸಾಧ್ಯವಾಗದು. 'ಅತಿ ಅಗ್ಗ ಬೆಲೆಗೆ ಅದೆಲ್ಲಿ ಸಿಗುತ್ತೋ ಕೊಂಡುಕೊಳ್ಳಿ' ಎಂದು ಹೇಳಬಹುದು... ಉಳಿದೆಲ್ಲಕ್ಕೂ ಅನ್ವಯಿಸುವಂತೆ, ದುಡಿಮೆಗೂ ಸಹ ಅನ್ವಯಿಸುತ್ತದೆ. ಅದಕ್ಕಿಂತಲೂ ಇನ್ನೂ ಸಾವಿರ ಪಟ್ಟು ಉತ್ತಮ ಸೂತ್ರವಾಕ್ಯವನ್ನು ಹೇಳುವೆ; ಅದು ರಕ್ಷಣಾ ನೀತಿಯ ಸೂತ್ರವಾಕ್ಯ: 'ಸುಲಭವಾಗಿ ಪಾವತಿ ಮಾಡುವಲ್ಲಿ ಕೊಂಡುಕೊಳ್ಳಿ.' ಭೂಮಿ ಮೇಲಿನ ಆ ಜಾಗವೇ ದುಡಿಮೆಗೆ ಅತ್ಯುತ್ತಮ ಪ್ರತಿಫಲ ಲಭಿಸುವ ಜಾಗವಾಗಿದೆ." <ref> ಬೋಸ್ಟನ್ (MA)ನಲ್ಲಿ 4 ಅಕ್ಟೋಬರ್ 1892ರಂದು ವಿಲಿಯಮ್ ಮೆಕಿನ್ಲೇ ಭಾಷಣ; ವಿಲಿಯಮ್ ಮೆಕಿನ್ಲೇ ಪೇಪರ್ಸ್ (ಲೈಬ್ರೆರಿ ಆಫ್ ಕಾಂಗ್ರೆಸ್)</ref>
ದಕ್ಷಿಣದ ಡೆಮೊಕ್ರಾಟ್ಗಳು ಹಂತ-ಹಂತವಾಗಿ ತಮ್ಮ ಪಕ್ಷವನ್ನು ಕಟ್ಟಿ ದೃಢಗೊಳಿಸಿದರು. ಅವರು ನಾರ್ದರ್ನ್ ಪ್ರೊಗ್ರೆಸಿವ್ಸ್ ಪಕ್ಷದೊಂದಿಗೆ ಮಿತೃತ್ವ ಬೆಳೆಸಿಕೊಂಡರು. ಅವರ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಎರಡೂ ಪಕ್ಷಗಳು ಕುದುರಿಕೊಂಡಿದ್ದ ಸಾಂಸ್ಥಿಕ ದತ್ತಿಗಳ ವಿರೋಧಿಗಳಾಗಿದ್ದರು. ರಿಪಬ್ಲಿಕನ್ ಪಕ್ಷದಲ್ಲಿ ಭ್ರಷ್ಟಾಚಾರ ನೆಲೆಯೂರಿತ್ತು. ಒಂದೇ ಎದುರಾಳಿಯನ್ನು ಎದುರಿಸಲು ಅನುಕೂಲಕರವಾದ ಈ ಜೊತೆಗೂಡುವಿಕೆಯು ಡೆಮೊಕ್ರಾಟಿಕ್ ಪಾರ್ಟಿಗೆ ಅಗತ್ಯ ಚೇತರಿಕೆ ನೀಡಿತು. ಇದರಿಂದಾಗಿ ದೆಮೊಕ್ರಾಟಿಕ್ ಪಕ್ಷವು ಅಧಿಕಾರಕಕ್ಕೆ ಮರಳಿತು. ರಿಪಬ್ಲಿಕನ್ನರ ಪ್ರಾಬಲ್ಯವನ್ನು ದುರ್ಬಲಗೊಳಿಸಲು, ನಾರ್ದರ್ನ್ ಪ್ರೊಗ್ರೆಸಿವ್ಸ್ ಮುಕ್ತ ವ್ಯಾಪಾರಕ್ಕಾಗಿ ಆಗ್ರಹ ಪಡಿಸಿದರು - ಇದರ ಕುರಿತು ವುಡ್ರೊ ವಿಲ್ಸನ್ ಕಾಂಗ್ರೆಸ್ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಒಪ್ಪಿಕೊಂಡರು. 1920ರ ದಶಕದಲ್ಲಿ ರಿಪಬ್ಲಿಕನ್ನರ ಪುನರುತ್ಥಾನದ ಕ್ಷಿಪ್ರ ಯತ್ನವು ಅವರಿಗೆ ತೀವ್ರ ಹಾನಿಯೊಡ್ಡಿತು. ವುಡ್ರೊ ವಿಲ್ಸನ್ರ ಸೈದ್ಧಾಂತಿಕ ಶಿಷ್ಯ {{Citation needed|date=January 2010}} ಫ್ರ್ಯಾಂಕ್ಲಿನ್ ರೂಸ್ವೆಲ್ಟ್ ಹಿಂದಿನ ರಿಪಬ್ಲಿಕನ್ ರಾಷ್ಟ್ರಾಧ್ಯಕ್ಷ ಹರ್ಬರ್ಟ್ ಹೂವರ್ನ ಆರ್ಥಿಕ ರಕ್ಷಣಾ ನೀತಿಗಳಿಗೆ ಇದೊಂದು 'ಗ್ರೇಟ್ ಡಿಪ್ರೆಷನ್' ಎಂದು ಟೀಕಿಸಿದರು. {{Citation needed|date=January 2010}}
ಪಕ್ಷದ ದಕ್ಷಿಣ-ಭಾಗದಲ್ಲಿರುವ ಬಣದ ಕೃಪಾಕಟಾಕ್ಷ ಪಡೆಯಲು, ಡೆಮೊಕ್ರಾಟಿಕ್ ಪಾರ್ಟಿ ಮುಕ್ತ ವ್ಯಾಪಾರದ ಪರ ಹಲವು ನಿರ್ಧಾರಗಳನ್ನು ಕೈಗೊಂಡಿದ್ದುಂಟು. ಪಕ್ಷದ ಶ್ರಮಿಕ-ಪರ ಗುಂಪುಗಳಿಂದ ಹೆಚ್ಚಾಗುತ್ತಿರುವ ಸಂಯಮದ ಕರೆಗಳ ನಡುವೆ ಬಹಳ ಎಚ್ಚರಿಕೆಯಿಂದ ನಡೆದುಹೋಗುತ್ತಿತ್ತು. ಎರಡನೆಯ ಮಹಾಯುದ್ಧ ನಂತರದ(ಅಲೈಸ್) ಮುಕ್ತ ವ್ಯಾಪಾರವು, ಮೈತ್ರಿಕೂಟಕ್ಕಿರುವ ಧ್ಯೇಯವಾಗಿತ್ತು. ಇದರತ್ತ ಹಂತ-ಹಂತವಾಗಿ ಸಾಗಲು ಹಲವು ಸುತ್ತುಗಳ ಚರ್ಚೆಗಳು ಮತ್ತು ಒಪ್ಪಂದಗಳು ನಡೆದವು. ಗ್ರೇಟ್ ಡಿಪ್ರೆಷನ್ಗೆ ಕಾರಣರಾಗಿ, ಎಲ್ಲರಿಂದಲೂ ತೀವ್ರ ಟೀಕೆಗೊಳಗಾದ ರಿಪಬ್ಲಿಕನ್ನರು ಹಂತ-ಹಂತವಾಗಿ ಮುಕ್ತ ವಹಿವಾಟಿನ ಪರ ವಹಿಸುವವರಾದರು. ಇಂದಿಗೂ ಸಹ ರಿಪಬ್ಲಿಕನ್ ಪಕ್ಷವು ಮುಕ್ತ ವಹಿವಾಟಿನ ಪರ ವಹಿಸುತ್ತಿದೆ.
Line ೩೯ ⟶ ೩೮:
=== ದೇಶೀಯ ತೆರಿಗೆ ನೀತಿಗಳು ವಿದೇಶೀ ಸಾಮಗ್ರಿಗಳ ಪರವಾಗಿರಬಹುದು ===
ಸ್ವದೇಶದ ಮಾರುಕಟ್ಟೆಗಳಲ್ಲಿ ವಿದೇಶಿ ಸರಕುಗಳಿಗೆ ಯಾವುದೇ ಸುಂಕ ಅಥವಾ ಇತರೆ ತೆರಿಗೆಗಳಿಲ್ಲದೆ ಮಾರಾಟಕ್ಕೆ ಅವಕಾಶ ನೀಡಿದರೆ, ಸ್ವದೇಶೀ ಸರಕುಗಳು ಪೈಪೊಟಿ ಪರಿಸ್ಥಿತಿಯನ್ನು ಎದುರಿಸುತ್ತವೆ. ಇದು ಒಂದು ರೀತಿಯ ಹಿಮ್ಮೊಗವಾದ ಆರ್ಥಿಕ ರಕ್ಷಣಾ ನೀತಿ ಎಂದು ಆರ್ಥಿಕ ರಕ್ಷಣಾ ನೀತಿಯ ಸಮರ್ಥಕರು ನಂಬಿದ್ದಾರೆ. ವಿದೇಶೀ ಉತ್ಪಾದನೆಗಳ ಮೇಲೆ ಆದಾಯ ಸುಂಕಗಳನ್ನು ರದ್ದುಗೊಳಿಸುವುದರ ಮೂಲಕ, ಸರ್ಕಾರಗಳು ಆದಾಯಕ್ಕಾಗಿ ಇಡಿಯಾಗಿ ದೇಶೀಯ ತೆರಿಗೆಯನ್ನು ಅವಲಂಬಿಸಬೇಕಾಗುವುದು. ಇದು ದೇಶೀಯ ಉತ್ಪಾದನೆಯ ಮೇಲೆ ಅಸಮತುಲನಾತ್ಮಕ ಪ್ರಭಾವ ಬೀರುತ್ತದೆ. [[ಪಾಲ್ ಕ್ರೇಗ್ ರಾಬರ್ಟ್ಸ್]] ಟಿಪ್ಪಣಿಯ ಪ್ರಕಾರ, 'US ಉತ್ಪಾದನೆಗಳ ವಿರುದ್ಧ ವಿದೇಶೀ ತಾರತಮ್ಯಕ್ಕೆ US ತೆರಿಗೆ ವ್ಯವಸ್ಥೆಯೇ ಕಾರಣವಾಗಿದೆ. ಇದು ವಿದೇಶೀ ಸರಕು ಮತ್ತು ಸೇವೆಗಳ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ; ಆದರೆ US ಉತ್ಪಾದಕರ ಮೇಲೆ ಭಾರೀ ತೆರಿಗೆ ವಿಧಿಸುತ್ತದೆ. ಸರಕುಗಳ ಮಾರಾಟ ಅಥವಾ ಸೇವೆ USನಲ್ಲೇ ಆಗಲಿ ಅಥವಾ ವಿದೇಶಗಳಿಗೆ ರಫ್ತಾಗಲಿ ಯಾವುದೇ ವ್ಯತ್ಯಾಸವಾಗದು.' <ref>{{cite web|url=http://www.vdare.com/roberts/050726_behind.htm |title=US Falling Behind Across the Board |author=Paul Craig Roberts |publisher=VDARE.com |date=July 26, 2005 |accessdate=2008-10-08|archiveurl=https://archive.is/cpBj|archivedate=2012-09-14}}</ref>
ಈ ಹಿಮ್ಮೊಗ ಆರ್ಥಿಕ ರಕ್ಷಣಾ ನೀತಿಯು, [[VAT (ಮೌಲ್ಯವರ್ಧಿತ ತೆರಿಗೆ)]] ವ್ಯವಸ್ಥೆಯಲ್ಲಿ ಭಾಗವಹಿಸಿದ USನಂತಹ ದೇಶಗಳಿಗೆ ಅನನುಕೂಲಕರ ಸ್ಥಿತಿ ತಂದೊಡ್ಡುತ್ತದೆಯೆಂದು ಆರ್ಥಿಕ ರಕ್ಷಣಾ ನೀತಿ ಸಮರ್ಥಕರು ವಾದಿಸುತ್ತಾರೆ. ದೇಶೀಯ ಅಥವಾ ವಿದೇಶೀಯ ಸರಕು ಅಥವಾ ಸೇವೆಯಾಗಲಿ, ಇವುಗಳ ಮೇಲಿನ ತೆರಿಗೆಯ ಮೂಲಕ ಆದಾಯ ಗಳಿಸುತ್ತದೆ. ವ್ಯಾಟ್ನಲ್ಲಿ ಭಾಗವಹಿಸುವ ದೇಶದೊಂದಿಗೆ ವಹಿವಾಟು ನಡೆಸುವ ವ್ಯಾಟ್-ರಹಿತ ದೇಶವು, ಅನನುಕೂಲಕರ ಸ್ಥಿತಿಯಲ್ಲಿರುತ್ತದೆ; ಎಂದು ಆರ್ಥಿಕ ರಕ್ಷಣಾ ನೀತಿಯ ಸಮರ್ಥಕರು ವಾದಿಸುತ್ತಾರೆ. ಹಾಗಾಗಿ, ವ್ಯಾಟ್ ವಿಧಿಸುವ ದೇಶದಲ್ಲಿ, ವ್ಯಾಟ್-ರಹಿತ ದೇಶದ ಉತ್ಪನ್ನದ ಅಂತಿಮ ಮಾರಾಟ ಬೆಲೆಯು, ತನ್ನ ಮೂಲ ದೇಶದ ತೆರಿಗೆಯನ್ನಷ್ಟೇ ಅಲ್ಲ, ಮಾರಾಟ ಮಾಡಲಾದ ದೇಶದಲ್ಲಿಯೂ ಸಹ ತೆರಿಗೆ ಹೊರೆ ಈ ಉತ್ಪನ್ನದ ಮೇಲಿರುತ್ತದೆ. ವಿಲೋಮವಾಗಿ, ವ್ಯಾಟ್ ವಿಧಿಸದ ದೇಶದಲ್ಲಿ, ವ್ಯಾಟ್ ವಿಧಿಸುವ ದೇಶದ ಉತ್ಪನ್ನದ ಮಾರಾಟ ಬೆಲೆಯು, (ದೇಶೀಯ ಉತ್ಪನ್ನಗಳಿಗೆ ಹೋಲಿಸಿದರೆ) ಯಾವುದೇ ತೆರಿಗೆಯನ್ನು ಒಳಗೊಂಡಿರುವುದಿಲ್ಲ. ಇನ್ನೂ ಹೆಚ್ಚಿಗೆ, ಉತ್ಪನ್ನವೊಂದು ವ್ಯಾಟ್-ರಹಿತ ದೇಶದಲ್ಲಿ ಮಾರಾಟವಾದಲ್ಲಿ, ಭಾಗವಹಿಸುವ ದೇಶವು ಆ ಉತ್ಪನ್ನದ ತಯಾರಿಕೆಯಲ್ಲಿ ವಸೂಲು ಮಾಡಿದ ವ್ಯಾಟ್ ತೆರಿಗೆಗಳಿಗೆ ವಿನಾಯತಿ ನೀಡುತ್ತದೆ. ವ್ಯಾಟ್ ರಹಿತ ದೇಶಗಳಲ್ಲಿ ಮಾರಾಟವಾದ ವ್ಯಾಟ್ ವಿಧಿಸುವ ದೇಶಗಳ ಸರಕಿನ ರಫ್ತುದಾರರಿಗೆ ಆ ಸರಕಿನ ಬೆಲೆಯನ್ನು ಕಡಿಮೆಗೊಳಿಸಲು ಅವಕಾಶ ನೀಡುತ್ತದೆ.
ಸುಂಕಗಳ ಮೂಲಕ ಸರ್ಕಾರಗಳು ಈ ಅಸಾಮ್ಯತೆಯನ್ನು ಬಗೆಹರಿಸಬೇಕೆಂದು ಆರ್ಥಿಕ ರಕ್ಷಣಾ ನೀತಿ ಸಮರ್ಥಕರು ನಂಬಿದ್ದಾರೆ.
Line ೯೦ ⟶ ೮೮:
* [[ನಾನ್-ಟ್ಯಾರಿಫ್ ಬ್ಯಾರಿಯರ್ಸ್ ಟು ಟ್ರೇಡ್, ವಿಕಿಪೀಡಿಯಾ]].
* [http://www.wto.org/english/forums_e/ngo_e/posp47_nftc_enlightened_e.pdf '''ಎನಲೈಟೆನ್ಡ್ ಎನ್ವಿರಾನ್ಮೆಂಟಲಿಸಮ್ ಆರ್ ಡಿಸ್ಗಯ್ಸ್ಡ್ ಪ್ರೊಟೆಕ್ಷನಿಸಮ್: ಅಸೆಸಿಂಗ್ ದಿ ಇಂಪ್ಯಾಕ್ಟ್ ಆಫ್ EU ಪ್ರಿಕಾಷನ್-ಬೇಸ್ಡ್ ಸ್ಟಾಂಡರ್ಡ್ಸ್ ಆನ್ ಡೆವೆಲಪಿಂಗ್ ಕಂಟ್ರೀಸ್ '''' ''' ], ಲಾರೆನ್ಸ್ ಎ. ಕೊಗನ್, ಫಾರ್ ದಿ ನ್ಯಾಷನಲ್ ಫಾರೀನ್ ಟ್ರೇಡ್ ಕೌನ್ಸಿಲ್ (ಏಪ್ರಿಲ್ 2004); [http://www.itssd.org/White%20Papers/L%20Kogan%20NFTC%20White%20Paper%203.pdf ].
* [http://www.itssd.org/Publications/Kogan%20TNI%2077FINAL.pdf ''ಎಕ್ಸ್ಪೋರ್ಟಿಂಗ್ ಯುರೋಪ್ಸ್ ಪ್ರೊಟೆಕ್ಷನಿಸಮ್'' ], ಲಾರೆನ್ಸ್ ಎ. ಕೊಗನ್, ದಿ ನ್ಯಾಷನಲ್ ಇಂಟರೆಸ್ಟ್ (ಸೆಪ್ಟೆಂಬರ್ 2004).
* [http://www.nytimes.com/2004/11/27/opinion/27iht-edkogan_ed3_.html?_r=1 ''ಟ್ರೇಡ್ ಪ್ರೊಟೆಕ್ಷನಿಸಮ್: ಡಕಿಂಗ್ ದಿ ಟ್ರೂತ್ ಎಬೌಟ್ ಯುರೋಪ್ಸ್ GMO ಪಾಲಿಸಿ'' ], ನ್ಯೂ ಯಾರ್ಕ್ ಟೈಮ್ಸ್ ಆಪ್-ಎಡ್ 27 ನವೆಂಬರ್ 2004).
|