ಅಸಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರಿಸಿದ್ದು
ಚು Wikipedia python library
೧ ನೇ ಸಾಲು:
375-450. ಯೋಗಾಚಾರವೆಂಬ ಬೌದ್ಧಸಂಪ್ರದಾಯದ ಪ್ರವರ್ತಕ. ಈತ ಭಾರತದ ವಾಯವ್ಯಪ್ರದೇಶದ ಪುರುಷಪುರ (ಪೇಷಾವರ್) ಎಂಬಲ್ಲಿನ ಕೌಶಿಕಗೋತ್ರದ ಬ್ರಾಹ್ಮಣ. ಇವನ ತಮ್ಮ ವಸುಬಂಧುವೂ ಪ್ರಖ್ಯಾತನಾದ ಯೋಗಾಚಾರ ದಾರ್ಶನಿಕ. ಮೊದಲಿಗೆ ಸರ್ವಾಸ್ತಿವಾದ ಪಂಥದ ಅನುಯಾಯಿಯಾಗಿದ್ದು, ಮಹಾಯಾನದಲ್ಲಿದ್ದ ಶುಷ್ಕಬೌದ್ಧಿಕ ಪ್ರಾಮುಖ್ಯದಿಂದ ಬೇಸರಗೊಂಡು ಸಮಾಧಿ-[[ಯೋಗ]]-ಧ್ಯಾನಗಳಿಗೆ ಪ್ರಾಧಾನ್ಯಕೊಡುವ ಸಲುವಾಗಿ ಹೊಸದೊಂದು ಶಾಖೆಯನ್ನೇ ಆರಂಭಿಸಿದ. ತುಷಿತ ಸ್ವರ್ಗದಲ್ಲಿ ಭವಿಷ್ಯದ್ಬುದ್ಧನಾದ ಮೈತ್ರೇಯನೇ ಅಸಂಗನಿಗೆ ಹಲವಾರು ಆಗಮಗಳನ್ನೂ ಕಾಣಿಸಿದನೆಂಬ ಶ್ರದ್ಧೆ 4 ಅಥವಾ 5ನೆಯ [[ಶತಮಾನ]]ಗಳಲ್ಲಿ ಬಲವಾಗಿತ್ತು. ವಾಸ್ತವವಾಗಿ ಅಸಂಗ ಮೈತ್ರೇಯನಾಥನೆಂಬ ಐತಿಹಾಸಿಕ ಗುರುವಿನ ಶಿಷ್ಯನಾಗಿದ್ದ. ಈ ಗುರುವಿನ ವಿಚಾರ ಹೆಚ್ಚಾಗಿ ತಿಳಿದುಬಂದಿಲ್ಲ. ಆತ ಅಸಂಗನಿಗೆ ಕಾಣಿಸಿದನೆಂದು ಹೇಳಲಾದ ಯೋಗಾಚಾರ ಭೂಮಿಶಾಸ್ತ್ರದ ಒಂದು ಪರಿಚ್ಛೇದವಾದ ಬೋಧಿಸತ್ವಭೂಮಿ ಮಾತ್ರ ಸಂಸ್ಕೃತದಲ್ಲಿ ಉಳಿದುಬಂದಿದೆ. ಈ ಗ್ರಂಥ ಅಸಂಗನದೇ ಎಂದು ಟಿಬೆಟ್ ಸಂಪ್ರದಾಯ ಹೇಳುತ್ತದೆ. ಅಸಂಗನ ಗ್ರಂಥಗಳೆಲ್ಲ ಚೀನಿ ಭಾಷೆಯ ಪರಿವರ್ತನೆಗಳಲ್ಲಿ, ಟಿಬೆಟ್ ದೇಶದ ತಾನ್‌ಜೂರ್‌ ಸಂಗ್ರಹದಲ್ಲಿ ಉಪಲಬ್ಧವಿವೆ. ಅವನ ಮಹಾಯಾನ ಸಂಪರಿಗ್ರಹವೆಂಬ ಗ್ರಂಥವನ್ನು ಸಂಸ್ಕೃತ ಭಾಷೆಯಿಂದ ಪರಮಾರ್ಥ (499-569) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ; ಅವನ ಇನ್ನೊಂದು ಗ್ರಂಥವಾದ ಮಹಾಯಾನಾಭಿಧರ್ಮ ಸಂಗೀತಿಶಾಸ್ತ್ರವನ್ನು ಯುವಾನ್‌ಚಾಂಗ್ 625ರಲ್ಲಿ ಚೀನಿಭಾಷೆಗೆ ಪರಿವರ್ತಿಸಿದ. ವಜ್ರಚ್ಛೇದಿಕಾ ಎಂಬ ಗ್ರಂಥಕ್ಕೆ ಅಸಂಗ ಬರೆದ ಭಾಷ್ಯವನ್ನು ಧರ್ಮಗುಪ್ತವೆಂಬ ಭಿಕ್ಷು (590-616) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ. ಆತ ಅಸಂಗನ ಪಾಂಡಿತ್ಯವನ್ನೂ ಹೊಗಳಿದ್ದಾನೆ; ಅದರಲ್ಲಿ ಅಸಂಗನ ಜೀವಿತಕ್ರಮವೂ ನಿರೂಪಿತವಾಗಿದೆ. ವಸುಬಂಧುವಿನ ಮತಪರಿವರ್ತನೆಗೆ ಅಸಂಗನೇ ಕಾರಣನೆಂದು ಈ ಗ್ರಂಥದಿಂದ ತಿಳಿಯುತ್ತದೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅಸಂಗ" ಇಂದ ಪಡೆಯಲ್ಪಟ್ಟಿದೆ