ಅಲ್ತಮೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರಿಸಿದ್ದು
ಚು Wikipedia python library
೧ ನೇ ಸಾಲು:
[[File:Altamira cave.jpg|thumb|ಗೂಳಿ ಶಿಲಾ ಚಿತ್ರ]]
ಸ್ಪೇನ್ ದೇಶದ ಉತ್ತರ ಭಾಗದಲ್ಲಿ ಕ್ಯಾಂಟಿಬ್ರಿಯನ್ ಪರ್ವತಶ್ರೇಣಿಯಲ್ಲಿರುವ ಗುಹೆ. ಹಳೆ ಶಿಲಾಯುಗದ ಗವಿಚಿತ್ರಗಳಿಗೆ ಪ್ರಸಿದ್ಧವಾಗಿದೆ. ಹೊರಭಾಗದಲ್ಲಿ ಸುಣ್ಣಕಲ್ಲು ಬೆಟ್ಟಗಳಿದ್ದು, ಸು.27ಮೀ.ವರೆಗೆ ಒಳಗೆ ಹೋಗಬಹುದಾದ ಈ ಗುಹೆಯಲ್ಲಿರುವ ಮುಖ್ಯ ಚಿತ್ರಗಳೆಲ್ಲವನ್ನೂ ಗುಹೆಯ ಪ್ರಾರಂಭದಿಂದ ಸು.18-30ಮೀ ದೂರದಲ್ಲೇ ಕಾಣಬಹುದು. ಗೂಳಿ, [[ಕಾಡುಹಂದಿ]], ಕಾಡುಕುದುರೆ, ಕಾಟಿ, [[ಜಿಂಕೆ]] ಮುಂತಾದ ಹಲವು ಕಾಡುಮೃಗಗಳ ವರ್ಣರಂಜಿತ ಚಿತ್ರಗಳು ಇಲ್ಲಿಯ ವೈಶಿಷ್ಟ್ಯ. ಗೂಳಿಗಳ ಬಲಿಷ್ಠ ದೃಢಕಾಯ ಎದ್ದು ಕಾಣುತ್ತದೆ. ಶಿಲಾಯುಗದ ಕಾಲಕ್ಕೆ ಸೇರಿದ್ದಾದರೂ ಇಲ್ಲಿಯ ಬಹುಪಾಲು ಚಿತ್ರಗಳು ಹಳೆಯ ಶಿಲಾಯುಗದ ಕೊನೆಯ ಭಾಗದಲ್ಲಿದ್ದ ಮ್ಯಾಗ್ಡಲೇನಿಯನ್ ಸಂಸ್ಕೃತಿಗೆ ಸೇರಿದ್ದವು. ಇಂಗಾಲ-14 ವೈಜ್ಞಾನಿಕ ವಿಧಾನದಿಂದ ಈ ಚಿತ್ರಗಳ ಕಾಲಮಾನ ಸು.ಪ್ರ.ಶ.ಪೂ. 20,000-15,000ಗಳಷ್ಟು ಪುರಾತನದವೆಂದು ಗೊತ್ತುಮಾಡಲಾಗಿದೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲ್ತಮೀರ|ಅಲ್ತಮೀರ}}
"https://kn.wikipedia.org/wiki/ಅಲ್ತಮೀರ" ಇಂದ ಪಡೆಯಲ್ಪಟ್ಟಿದೆ