ಅಲುಬು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Wikipedia python library
೧ ನೇ ಸಾಲು:
 
[[File:Fallopia convolvulus1pl.jpg|thumb|right|Fallopia convolvulus1pl]]
 
'''ಅಲುಬು''' ಅವಶ್ಯವಲ್ಲದ ಸಸ್ಯ (ವೀಡ್). ಕಳೆ ಪರ್ಯಾಯ ನಾಮ. ಇವು ಸಾಗುವಳಿಗಾಗಿ ಆರಿಸಿಕೊಂಡ ಎಲ್ಲ ಪ್ರದೇಶಗಳ ಮೇಲೂ ಆಕ್ರಮಣ ನಡೆಸುತ್ತವೆ. ಈ ಗಿಡಗಳು ವಿವಿಧ ರೀತಿಯ ಮಣ್ಣು ಹವಾಗುಣಗಳ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬಾಳುತ್ತವೆ. ಮಂಜಿನ ವಾತಾವರಣದಲ್ಲಿಯೂ ಜೀವಿಸುವ ಸಾಮರ್ಥ್ಯ ಪಡೆದಿವೆ. ಸಾಗುವಳಿ ಮಾಡದ ಅಥವಾ ಬಂಜರು ಭೂಮಿಯಲ್ಲಿ ಪ್ರಬಲವಾಗಿರುವುವಲ್ಲದೆ ಪೈರಿನೊಂದಿಗೆ ನೀರು ಬೆಳಕು ಮತ್ತು ಆಹಾರಕ್ಕಾಗಿ ಅವು ಸತತ ಹೋರಾಟ ನಡೆಸುತ್ತವೆ. ಅವುಗಳ ಕ್ಷೀಣತೆ ಅಥವಾ ಪ್ರವರ್ಧಮಾನತೆ ಪೈರಿನ ಸ್ಥಿತಿಯನ್ನು ಅವಲಂಬಿಸಿದೆ. ದುರ್ಬಲ ಪೈರಿನಲ್ಲಿ ಕಳೆಯದೇ ಮೇಲುಗೈ. ಸರಿಯಾಗಿ ಬೆಳೆದ ಪೈರಿನ ನಡುವೆ ಕಳೆ ಇದ್ದೂ ಇಲ್ಲದಂತಾಗುವುದು.
Anand
 
ಕಳೆ ಉಪಯೋಗಕರವೂ ಹೌದು; ಉಪದ್ರವಕಾರಿಯೂ ಹೌದು. ತಾತ್ಕಾಲಿಕವಾಗಿ ಅನುಪಯುಕ್ತ ಅಥವಾ ಪರಿತ್ಯಕ್ತ ಭೂಮಿಯ ಮೇಲೆ ಬೇರೆ ಏನೂ ಆಕ್ರಮಣ ನಡೆಸದಂತೆ ನಿರ್ಬಂಧಿಸುವಲ್ಲಿ ಕಳೆಯ ಪಾತ್ರ ಮಹತ್ವವುಳ್ಳದ್ದು. ಅದು ಮಣ್ಣಿನ ಸವೆತ ತಡೆಗಟ್ಟುವುದು; ನೀರು ಹರಿದು ಹೋಗುವ ವೇಗ ಕಡಿಮೆ ಮಾಡುವುದು. ಮೀನು ಮತ್ತಿತರ ಜಲಚರ ಪ್ರಾಣಿಗಳಿಗೆ ಪಾಚಿಕಳೆ ಸ್ವಭಾವಸಿದ್ಧ ಆಹಾರ. ಕೆಲವು ಕಳೆಗಳನ್ನು ಮನುಷ್ಯ [[ಆಹಾರ]], ವಸ್ತ್ರಗಳಿಗೂ ಮತ್ತೆ ಕೆಲವನ್ನು ವಸತಿ ಸೌಕರ್ಯಕ್ಕಾಗಿಯೂ ದನಗಳ ಮೇವಿಗಾಗಿಯೂ ಔಷಧಿಗಳಿಗಾಗಿಯೂ ಉಪಯೋಗಿಸುತ್ತಾನೆ. ಹೂ ಬಿಟ್ಟಿರುವ ಕಳೆ ಆ ಪ್ರದೇಶಕ್ಕೆ ಅಲಂಕಾರ ತರುವುದುಂಟು.
 
ವ್ಯವಸಾಯ ರಂಗದಲ್ಲಿ ತಲೆದೋರುವ ಬೂಷ್ಟು, ಕ್ರಿಮಿಕೀಟಗಳಂಥ ಉಪದ್ರವಕಾರಿಗಳು ಉಂಟುಮಾಡುವ ಒಟ್ಟು ನಷ್ಟಕ್ಕಿಂತ ಅಲುಬು ಕಳೆಯಿಂದ ಆಗುವ ನಷ್ಟ ಹೆಚ್ಚಿನದು. ಫಸಲು ಕಲುಷಿತವಾದರೆ ಅದರ ಆದಾಯದ ಬೆಲೆ ಇಳಿಯುವುದು. ಕಳೆಯನ್ನೊಳಗೊಂಡ ಜಮೀನಿನ ಬೆಲೆ ತಗ್ಗುವುದು. ಬೇಸಾಯದ ವೆಚ್ಚ ಮತ್ತು ಸಾಮಾನು ಸರಂಜಾಮಿನ ಏರ್ಪಾಡು ಏರುವುದು. ಬೆಳೆಯ ಆಯ್ಕೆಯೂ ಪರಿಮಿತಿಗೊಳ್ಳುವುದು. ರೋಗರುಜಿನಗಳನ್ನು ಉಂಟುಮಾಡುವ ಬೂಷ್ಟು, ಕ್ರಿಮಿಕೀಟಗಳಿಗೆ ಕಳೆ ಆಶ್ರಯ ಕೊಟ್ಟು ಬೆಳೆಗಳ ಮೇಲೆ ಅವು ಆಕ್ರಮಣ ನಡೆಸಲು ಕಾರಣವಾಗುತ್ತದೆ. ಕಳೆ ಹೊಳೆಯನ್ನಾಗಲಿ ಚರಂಡಿಯನ್ನಾಗಲಿ ಪ್ರತಿಬಂಧಿಸಿ ತೊಡಕನ್ನುಂಟುಮಾಡಬಹುದು. ಸರೋವರಗಳನ್ನೂ ಕೊಳಗಳನ್ನೂ ಹೊದಿಕೆಯಂತೆ ಮುಚ್ಚಿದ್ದು ನೀರನ್ನು ಕಲುಷಿತಗೊಳಿಸಬಹುದು.
 
==ವರ್ಗೀಕರಣ==
ಅಲುಬು ಕಳೆಯನ್ನು ವಾರ್ಷಿಕ, ದ್ವೈ ವಾರ್ಷಿಕ ಮತ್ತು ಬಹುವಾರ್ಷಿಕ ಗಿಡಗಳನ್ನಾಗಿ ವರ್ಗೀಕರಿಸಲಾಗಿದೆ. ಕಾಕಲ್ಬರ್, ಕ್ರ್ಯಾಬ್ಗ್ರಾಸ್, ಫಾಕ್ಸ್‌ಟೇಲ್‌ ವ್ಯವಸಾಯದ ಭೂಮಿಯಲ್ಲಿ ಸಾಮಾನ್ಯವಾಗಿ ಬೆಳೆಯುವ ಕಳೆ ಸಸ್ಯಗಳು ವಾರ್ಷಿಕ ಗುಂಪಿಗೆ ಸೇರಿವೆ. ದ್ವೈ ವಾರ್ಷಿಕ ಕಳೆಯ ಗುಂಪು ವೈಲ್ಡ್‌ ಕ್ಯಾರಟ್, ಬರ್ಡಾಕ್ ಮುಂತಾದ ಕೆಲವೇ ಕಳೆಗಳನ್ನು ಹೊಂದಿದೆ. ಬಹುವಾರ್ಷಿಕ ಕಳೆಯ ಗುಂಪಿನಲ್ಲಿ ನಟ್ಗ್ರಾಸ್, ಪ್ರಿಕ್ಲಿಪಿಯರ್, ರೆಡ್ ಸಾರೆಲ್, ಪಂಕ್ ಚರ್ ವೈನ್ ಮುಂತಾದುವನ್ನು ಸೇರಿಸಲಾಗಿದೆ.
"https://kn.wikipedia.org/wiki/ಅಲುಬು" ಇಂದ ಪಡೆಯಲ್ಪಟ್ಟಿದೆ