"ಅಯಾನ್‍ಗೋಳ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು (added Category:ರೇಡಿಯೋ using HotCat)
ಚು (Wikipedia python library)
[[Image:Atmosphere with Ionosphere.svg|thumb|400px|ವಾತಾವರಣ ಮತ್ತು ಅಯಾನ್‍ಗೋಳಕ್ಕೆ ಇರುವ ಸಂಬಂಧ]]
 
'''ಅಯಾನ್‍ಗೋಳ''' ಭೂಮಿಯನ್ನು ಸುತ್ತುವರೆದಿರುವ ವಿದ್ಯುದಂಶವನ್ನು ಹೊಂದಿದ [[ಪರಮಾಣು]] ಮತ್ತು [[ಅಣು]]ಗಳ ಪದರ.ಇದು ಭೂಮಿಯಿಂದ ೫೦ ಕಿ.ಮೀ ಎತ್ತರದಿಂದ ೧೦೦೦ ಕಿ.ಮೀ ಎತ್ತರದವರೆಗೆ ಹಬ್ಬಿದೆ<ref>{{cite web|title=Ionosphere|url=http://www.hq.nasa.gov/iwgsdi/Ionosphere.html}}</ref>.ಇದು [[ಸೂರ್ಯ]]ನಿಂದ [[ಭೂಮಿ]]ಗೆ ಬರುವ [[ಅತಿನೇರಳೆ ಕಿರಣಗಳು| ಅತಿನೇರಳೆ ಕಿರಣಗಳಿಂದ]] ಉಂಟಾಗುತ್ತದೆ.
==ಉಂಟಾಗುವಿಕೆ==
[[File:Ionosphere Layers en.svg|thumb|400px|ಅಯಾನ್‍ಗೋಳದ ಪದರಗಳು.]]
ಭೂಮಿಯ [[ಕಾಂತಕ್ಷೇತ್ರ]]ದ ಕ್ರಮವಾದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇಂಥ ಗೋಳವೊಂದು ಇರಬೇಕು ಎಂದುಕೊಳ್ಳಲಾಗಿತ್ತು. [[ರೇಡಿಯೊ ಅಲೆ]]ಗಳನ್ನು ಅಟ್ಲಾಂಟಿಕ್ ಸಾಗರದಾಚೆಗೆ [[ಮಾರ್ಕೋನಿ|ಮಾರ್ಕೊನಿ]] ಕಳುಹಿಸಿದಾಗ ಅಯಾನ್‍ಗೋಳವಿರುವುದು ಮತ್ತಷ್ಟು ಖಚಿತವಾಯಿತು. [[ಎ.ಇ.ಕೆನ್ನೆಲಿ]] ಮತ್ತು [[ಒ. ಹೆವಿಸೈಡ್‍]]ರವರು ಇದಕ್ಕೆ ಅಯಾನ್‍ಗೋಳ ಕಾರಣವೆಂದು ಸೂಚಿಸಿದ್ದರಿಂದ ಇದನ್ನು ''ಕೆನ್ನೆಲಿ ಹೆವಿಸೈಡ್'' ಪದರ ಎಂದೂ ಕರೆಯುತ್ತಾರೆ.
 
[[ರೇಡಿಯೊತರಂಗ]]ಗಳ ಮೇಲೆ ಅಯಾನ್‍ಗೋಳದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಶೂನ್ಯಪ್ರದೇಶದಲ್ಲಿರುವ ಒಂದು ಎಲೆಕ್ಟ್ರಾನನ್ನು ಪರಿಗಣಿಸಬೇಕು; ಅದು ರೇಡಿಯೊತರಂಗದ ಸ್ಥಿರ-ವಿದ್ಯುತ್‍ಕ್ಷೇತ್ರದಿಂದ (ಎಲೆಕ್ಟ್ರೊಸ್ಟ್ಯಾಟಿಕ್ ಫೀಲ್ಡ್) ಅದಕ್ಕನುಗುಣವಾಗಿ ಕಂಪಿಸುತ್ತದೆ. ಹೀಗೆ ಕಂಪಿಸುವ ಎಲೆಕ್ಟ್ರಾನುಗಳು ರೇಡಿಯೊತರಂಗದ ಶಕ್ತಿಯನ್ನು ಹೀರಿ ಮರುಪ್ರಸಾರ ಮಾಡುತ್ತವೆ. ಅಯಾನ್‍ಗೋಳದ ಒಟ್ಟು ಪರಿಣಾಮ ರೇಡಿಯೊತರಂಗಗಳ ದಿಕ್ಕನ್ನು ಹೆಚ್ಚು ಎಲೆಕ್ಟ್ರಾನ್ ಸಾಂದ್ರತೆಯಿರುವ ಕಡೆಯಿಂದ ಕಡಿಮೆ ಎಲೆಕ್ಟ್ರಾನ್ ಸಾಂದ್ರತೆಯ ಕಡೆಗೆ ಬದಲಾಯಿಸುವುದು. ಈ ಪರಿಣಾಮ ಎಲೆಕ್ಟ್ರಾನ್‍ನ [[ಕಂಪನವಿಸ್ತಾರ]] (ಆ್ಯಂಪ್ಲಿಟ್ಯೂಡ್) ಮತ್ತು [[ಸರಾಸರಿ ವೇಗ]] ಇವುಗಳನ್ನು ಅವಲಂಬಿಸಿರುವುದರಿಂದ, [[ಆವರ್ತ ಸಂಖ್ಯೆ]] (ಫ್ರೀಕ್ವೆನ್ಸಿ) ಕಡಿಮೆಯಾದಂತೆ ಹೆಚ್ಚುತ್ತದೆ. ಅಯಾನ್‍ಗಳೂ ಹೀಗೇ ಮಾಡಿದರೂ ಅವುಗಳ [[ಜಡತ್ವ]] ಹೆಚ್ಚಾದ್ದರಿಂದ ಅವುಗಳಿಂದಾಗುವ ಪರಿಣಾಮ ಬಲು ಕಡಿಮೆ.
 
ಪ್ರಸಾರಯಂತ್ರದಿಂದ ಹೊರಟ [[ಭೂತರಂಗ]]ಕ್ಕಿಂತ (ಗ್ರೌಂಡ್‍ವೇವ್) ಅಯಾನ್‍ಗೋಳದ ಪ್ರತಿಫಲನದಿಂದ ಬರುವ [[ಆಕಾಶತರಂಗ]] (ಸ್ಕೈವೇವ್) ಹೆಚ್ಚು ಪ್ರಯಾಣ ಮಾಡಬೇಕು. ಆದ್ದರಿಂದ ರೇಡಿಯೊತರಂಗಗಳ ಕ್ಷಣಿಕ ಮಿಡಿತವೊಂದನ್ನು (ಷಾರ್ಟ್ ಪಲ್ಸ್) ಕಳಿಸಿ ಪ್ರಸಾರಯಂತ್ರದಿಂದ ಸ್ವಲ್ಪದೂರದಲ್ಲಿರುವ [[ಆಸಿಲೊಗ್ರಾಮ್‍]]ಗೆ ಇವೆರಡು ಬರಲು ಆಗುವ ಕಾಲವ್ಯತ್ಯಾಸದಿಂದ ಅಯಾನ್‍ಗೋಳದ ಎತ್ತರವನ್ನು ಲೆಕ್ಕಹಾಕಬಹುದು. ಇಂಥ ಅಧ್ಯಯನದಿಂದ ಅಯಾನ್‍ಗೋಳದಲ್ಲಿ ಹಲವಾರು ಪದರಗಳಿರುವುದು ತಿಳಿಯಿತು. ಇವುಗಳಲ್ಲಿ ಎರಡು ಪ್ರಧಾನ. (90-120) ಕಿ.ಮೀ. ಎತ್ತರದವರೆಗೆ ಕೆಳಗಿನ E ಪದರವಿದೆ. ಮೇಲಿನ F ಪದರ (150-300) ಕಿ.ಮೀ. ಎತ್ತರದಲ್ಲಿದೆ. ಇವಲ್ಲದೆ ಸುಮಾರು (70) ಕಿ.ಮೀ. ಎತ್ತರದಲ್ಲಿ D ಪದರವೂ ಉಂಟು. ಹಗಲು ಹೊತ್ತಿನಲ್ಲಿ E ಪದರದ ಪರಮಾವಧಿ ಬೆಲೆ ಒಂದು ಘನ ಸೆಂ.ಮೀ.ಗೆ 10<sup>5</sup> ಸ್ವತಂತ್ರ ಎಲೆಕ್ಟ್ರಾನ್‍ಗಳು. ಆದರೆ ಅದೇ ವೇಳೆ F ಪದರಕ್ಕೆ ಎರಡು ಪರಮಾವಧಿ ಬೆಲೆಗಳಿವೆ. F<sub>1</sub> ಮತ್ತು F<sub>2</sub> ಪದರಗಳೆಂದು ಇವುಗಳ ಹೆಸರು.F<sub>2</sub> ಪದರ F<sub>1</sub>ಪದರದ ಮೇಲೆ ಇದೆ. ರಾತ್ರಿಯಲ್ಲಿ F<sub>1</sub>ಮತ್ತು F<sub>2</sub> ಪದರಗಳ ಬದಲು (250) ಕಿ.ಮೀ. ಎತ್ತರದಲ್ಲಿ F ಪದರವೊಂದೇ ಇರುವುದು.
 
ಊಧ್ರ್ವದಿಶೆಯಲ್ಲಿ ರೇಡಿಯೊತರಂಗವನ್ನು ಕಳುಹಿಸಿದಾಗ ಅದು ಪ್ರತಿಫಲನವಾಗುವ ಸ್ಥಳದಲ್ಲಿರುವ ಎಲೆಕ್ಟ್ರಾನ್ ಸಾಂದ್ರತೆಗೂ (N<sub>e</sub>) ಆ ತರಂಗದ ಆವರ್ತಸಂಖ್ಯೆಗೂ (ಮೆಗಾಸೈಕಲ್ಲಿನಲ್ಲಿ) ಇರುವ ಸಮೀಕರಣ N<sub>e</sub>=1.24x10<sup>4</sup>f<sup>2</sup>. ಅಲ್ಲದೆ ಅದು ಭೂಮಿಗೆ ಹಿಂದಿರುಗಿ ಬರಲು ಆಗುವ ಕಾಲದಿಂದ ಪ್ರತಿಫಲನ ಹೊಂದುವ ಸ್ಥಳದ ಎತ್ತರವೂ ತಿಳಿಯುತ್ತದೆ. ಇಂಥ ಅಧ್ಯಯನದಿಂದ ಭೂಮಿಯಿಂದ ಸುಮಾರು (100-350) ಕಿ.ಮೀ. ಎತ್ತರದವರೆಗೆ ಎತ್ತರ ಹೆಚ್ಚಾದಂತೆ ಎಲೆಕ್ಟ್ರಾನ್ ಸಾಂದ್ರತೆ ಹೆಚ್ಚುತ್ತದೆ ಎಂದು ತಿಳಿಯಿತು. ಆದ್ದರಿಂದ D, E, F<sub>1</sub>, F<sub>2</sub>ಪದರಗಳು ಮೊದಲು ತಿಳಿದುಕೊಂಡಿದ್ದ ಹಾಗೆ ಸ್ಪಷ್ಟವಾದ ಪ್ರತ್ಯೇಕ ಪದರಗಳಲ್ಲ. ಆದರೆ ಎಲೆಕ್ಟ್ರಾನ್ ಸಾಂದ್ರತೆ ಪರಮಾವಧಿಯಾಗಿದ್ದು ಸ್ವಲ್ಪ ಎತ್ತರದವರೆಗೂ ಒಂದೇ ಸಾಂದ್ರತೆಯಿರುವ ಸ್ಥಳಗಳು; ಅಂದರೆ ಈ ಪದರಗಳ ನಡುವೆಯೂ ಬಿಡಿ ಎಲೆಕ್ಟ್ರಾನ್‍ಗಳು ಇವೆಯೆಂದಾಯಿತು.
==ಅಯಾನ್‍ಗೋಳದ ಅಧ್ಯಯನ==
ಸುಮಾರು (60-90) ಕಿ.ಮೀ. ಎತ್ತರದವರೆಗೆ ಹರಡಿರುವ ಪದರದಲ್ಲಿ [[ಹೈಡ್ರೋಜನ್| ಹೈಡ್ರೊಜನ್ನಿನ]] [[ಲೈಮಾನ್ ಆಲ್ಫ]] ಕಿರಣದಿಂದ ಅಯಾನೀಕರಣವಾಗುವುದು. ಅಯಾನ್‍ಗೋಳಕ್ಕೆ ಈ ಕಿರಣದ ಕಂಪನಸಂಖ್ಯೆಯ ಕಿಟಕಿ ಅಥವಾ ಕಿಂಡಿ ಇರುವುದರಿಂದ ಈ ಕಿರಣ (60) ಕಿ.ಮೀ. ಎತ್ತರದವರೆಗೂ ಬರಲು ಸಾಧ್ಯ. [[ಸೌರಜ್ವಾಲೆ]]ಯಿಂದ (ಸೋಲಾರ್ ಫ್ಲೇರ್) ಬರುವ ಶಕ್ತಿಯುತವಾದ ಕ್ಷ-ಕಿರಣಗಳಿಂದ ಮತ್ತು ಹಲವಾರು ದಶಲಕ್ಷದಿಂದ ನೂರಾರು ದಶಲಕ್ಷ ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‍ಶಕ್ತಿಯ ಪ್ರೊಟಾನ್‍ಗಳಿಂದ ಈ ಪದರದ ಎಲೆಕ್ಟ್ರಾನ್ ಸಾಂದ್ರತೆ ಬಹಳ ಹೆಚ್ಚುತ್ತದೆ ಮತ್ತು ಎತ್ತರ ಕಡಿಮೆಯಾಗುತ್ತದೆ. ಹೀಗೆ ಎಲೆಕ್ಟ್ರಾನ್ ಸಾಂದ್ರತೆ ಬಲು ಹೆಚ್ಚಿದಾಗ ರೇಡಿಯೊ ಪ್ರಸಾರವೇ ಸಾಧ್ಯವಾಗದಿರಬಹುದು.
 
ಸುಮಾರು (90-140) ಕಿ.ಮೀ. ಎತ್ತರದವರೆಗೆ ಹರಡಿರುವ E ಪದರದಲ್ಲಿ ಸೂರ್ಯಜನಿತ ಮೃದು ಕ್ಷ-ಕಿರಣಗಳಿಂದ ಅಯಾನೀಕರಣ ಉಂಟಾಗುತ್ತದೆ. ಅತಿ ಕಡಿಮೆ ಸೂರ್ಯಕಲೆಯಿರುವಾಗ ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು (10<sup>5</sup>) (ಮಧ್ಯಾಹ್ನಕಾಲ) ಮತ್ತು ಅತಿ ಹೆಚ್ಚು ಸೂರ್ಯಕಲೆಯಿರುವಾಗ (1.5x10<sup>5</sup>) (ಮಧ್ಯಾಹ್ನಕಾಲ) ಈ ಪದರದ ಎಲೆಕ್ಟ್ರಾನ್ ಸಾಂದ್ರತೆ ಸಾಧಾರಣವಾಗಿ ಮಧ್ಯಾಹ್ನ (12) ಗಂಟೆಗೆ ಅತಿ ಹೆಚ್ಚಾಗಿ, ಅಲ್ಲಿಂದ ಎರಡು ಕಡೆಯೂ ಕಾಲಕ್ಕೆ ಸರಿಯಾಗಿ ಕಡಿಮೆಯಾಗುತ್ತ ಇರುತ್ತದೆ.
 
ಸುಮಾರು (140-200) ಕಿ.ಮೀ. ಎತ್ತರದವರೆಗೂ ಹರಡಿರುವ F<sub>1</sub> ಪದರದಲ್ಲಿ ಅಯಾನೀಕರಣವುಂಟಾಗುವುದು ಸೂರ್ಯಜನಿತ [[ಹೀಲಿಯಂ]] (304) ಕಿರಣದಿಂದ. ಅತಿ ಕಡಿಮೆ ಸೂರ್ಯಕಲೆಯಿರುವಾಗ ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು (5x10<sup>5</sup>) (ಮಧ್ಯಾಹ್ನಕಾಲ) : ಮತ್ತು ಅತಿಹೆಚ್ಚು ಸೂರ್ಯಕಲೆಯಿರುವಾಗ ಸುಮಾರು (2x10<sup>6</sup>) (ಮಧ್ಯಾಹ್ನಕಾಲ). F ಪದರ E ಮತ್ತು F<sub>2</sub>ಪದರಗಳಿಂದ ಸ್ಪಷ್ಟವಾಗಿ ಬೇರೆಯಾಗಿಲ್ಲ ಮತ್ತು ರಾತ್ರಿಕಾಲದಲ್ಲಿ ಸಾಂದ್ರತೆ 10<sup>4</sup>ಗಿಂತ ಕಡಿಮೆಯಿದ್ದು ಇದು ಇರುವುದೇ ತಿಳಿಯುವುದಿಲ್ಲ.
[[Image:Diurnal ionospheric current.jpg|frame|right|Electric currents created in sunward ionosphere.]]
==ರೇಡಿಯೋ ತರಂಗಗಳ ಮೇಲೆ ಪ್ರಭಾವ==
ಗ್ರಾಹಕ (ರಿಸೀವರ್) ಗ್ರಹಿಸುವ ರೇಡಿಯೊ ಸಂಜ್ಞೆಯ ಶಕ್ತಿ ಇದ್ದಕ್ಕಿದ್ದಂತೆ ಬದಲಾಗುವುದಕ್ಕೆ ಕುಗ್ಗುವಿಕೆ (ಫೇಡಿಂಗ್) ಎನ್ನುತ್ತೇವೆ. ಇದಕ್ಕೆ ಅಯಾನ್‍ಗೋಳದ ಸ್ಥಳೀಯ ವ್ಯತ್ಯಾಸಗಳಿಂದ ಚದರಿದ ತರಂಗಗಳ ಪ್ರತಿಯೋಗ (ಇಂಟರ್‍ಫಿಯರೆನ್ಸ್), ಅಯಾನ್‍ಗೋಳದ ಹಲವಾರು ಮಾರ್ಗಗಳಲ್ಲಿ ಬಂದ ತರಂಗಗಳ ಪ್ರತಿಯೋಗ, ಭೂತರಂಗ, ಆಕಾಶತರಂಗಗಳ ಪ್ರತಿಯೋಗ ಹೀಗೆ ಹಲವಾರು ಕಾರಣಗಳುಂಟು. ಅಲ್ಲದೆ ಈ ಪ್ರತಿಯೋಗದ ಸ್ಥಿತಿ ಆವರ್ತಸಂಖ್ಯೆಯನ್ನು ಅವಲಂಬಿಸಿರುವುದರಿಂದ ವಿವಿಧ ಆವರ್ತಸಂಖ್ಯೆಯ ತರಂಗಗಳು ವಿವಿಧ ಮಟ್ಟಕ್ಕೆ ಕುಗ್ಗಿಸಲ್ಪಟ್ಟು ಗ್ರಹಿಸಿದ ಸಂಜ್ಞೆಯ ಗುಣ (ಕ್ವಾಲಿಟಿ) ಮೂಲಸಂಜ್ಞೆಯಂತಿರುವುದಿಲ್ಲ. ಇದನ್ನು ಆರಿಸಿದ ಕುಗ್ಗುವಿಕೆ (ಸೆಲೆಕ್ಟಿವ್ ಫೇಡಿಂಗ್) ಎನ್ನುತ್ತೇವೆ. ಅಯಾನ್‍ಗೋಳದ ಸ್ಥಳೀಯ ವ್ಯತ್ಯಾಸಗಳ ಜರುಗುವಿಕೆಯ (ಡ್ರಿಫ್ಟ್) ಮೇಲಾಗುತ್ತಿರುವ ಅಧ್ಯಯನಗಳಿಂದಲೂ ಮತ್ತು ಕೃತಕ ಉಪಗ್ರಹಗಳಿಂದ ನಡೆಸುತ್ತಿರುವ ಅಧ್ಯಯನಗಳಿಂದಲೂ ಅಯಾನ್‍ಗೋಳದ ವಿವರಗಳು ಮತ್ತಷ್ಟು ತಿಳಿಯುತ್ತವೆ.
 
ಹೆಚ್ಚು ಆವರ್ತ ಸಂಖ್ಯೆಯ ಭೂಮಿತರಂಗ ಒಂದೆರಡು ಕಿ.ಮೀ.ನಲ್ಲೇ ಕ್ಷಯಿಸಿ ಹೋಗುತ್ತದೆ ಮತ್ತು ಈ ಪರಮಾವಧಿ ಪತನಕೋನವಿದ್ದಾಗ ಭೂಮಿಗೆ ಹಿಂತಿರುಗುವ ಸ್ಥಳಕ್ಕೂ ಪ್ರಸಾರ ಯಂತ್ರಕ್ಕೂ ನಡುವೆ ಆಕಾಶತರಂಗ ಬರಲು ಸಾಧ್ಯವಿಲ್ಲ. ಯಾವ ಮಾರ್ಗದಿಂದಲೂ ಆ ಪ್ರಸಾರಯಂತ್ರದ ಸಂಜ್ಞೆಗಳು ಬರಲು ಸಾಧ್ಯವಿಲ್ಲದ ಈ ದೂರಕ್ಕೆ ಹಾರುದೂರ (ಸ್ಕಿಪ್ ಡಿಸ್ಟೆನ್ಸ್) ಎಂದು ಹೆಸರು.ಪ್ರೇಕ್ಷಕಕೇಂದ್ರದಿಂದ ಗ್ರಾಹಕಕೇಂದ್ರಕ್ಕೆ ಹೋಗುವಾಗ ರೇಡಿಯೊ ಅಲೆಯೊಂದು ಭೂಮಿ ಮತ್ತು ಅಯಾನ್‍ಗೋಳದ ನಡುವೆ ಹಿಂದಕ್ಕೂ ಮುಂದಕ್ಕೂ ಪ್ರತಿಫಲನಗೊಳ್ಳುತ್ತದೆ.
 
ಹೆಚ್ಚು ದೂರದ ರೇಡಿಯೊ ಪ್ರಸಾರಕ್ಕೆ (550) ಕಿಲೊಸೈಕಲ್‍ಗಳಿಂದ (30) ಮೆಗಾಸೈಕಲ್‍ಗಳವರೆಗಿನ ಆವರ್ತ ಸಂಖ್ಯೆಯ ತರಂಗಗಳನ್ನೇ ಉಪಯೋಗಿಸುತ್ತಾರೆ. ಆವರ್ತಸಂಖ್ಯೆ ಇದಕ್ಕಿಂತ ಹೆಚ್ಚಾದರೆ ಅಯಾನ್‍ಗೋಳದಿಂದ ಪ್ರತಿಫಲನವಾಗದೇ ಅದನ್ನು ತೂರಿಕೊಂಡು ಹೊರಟುಹೋಗುತ್ತದೆ. ಆವರ್ತಸಂಖ್ಯೆ ಇದಕ್ಕಿಂತ ಕಡಿಮೆಯಾದರೆ ತರಂಗದ ಶಕ್ತಿಯೆಲ್ಲ ಆ ಪದರದ ಎಲೆಕ್ಟ್ರಾನ್‍ಗಳೇ ಹೀರಿ ಅಲ್ಲಿರುವ ಗಾಳಿಯ ಅಣುಗಳೊಡನೆ ಡಿಕ್ಕಿ ಹೊಡೆದು ಕಳೆದುಹೋಗುತ್ತದೆ. ಬಾಹ್ಯಾಕಾಶ ನೌಕೆಯೊಡನೆ (ಸ್ಪೇಸ್ ಸ್ಯಾಟೆಲ್ಲೈಟ್) ಅಥವಾ ಬೇರೆ ಗ್ರಹಗಳೊಡನೆ ರೇಡಿಯೂ ಸಂಪರ್ಕಕ್ಕೆ 30 ಮೆ.ಸೈ.ಗಿಂತ ಹೆಚ್ಚಿನ ಆವರ್ತಸಂಖ್ಯೆಯ ತರಂಗಗಳನ್ನೇ ಉಪಯೋಗಿಸಬೇಕು.
==ಇತ್ತೀಚಿಗಿನ ಆವಿಷ್ಕಾರಗಳು==
*[http://haystack.mit.edu/atm/mho/index.html Millstone Hill incoherent scatter radar]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯಾನ್ಗೋಳ}}
 
[[ವರ್ಗ:ಖಗೋಳಶಾಸ್ತ್ರ]]
[[ವರ್ಗ:ರೇಡಿಯೋ]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/714308" ಇಂದ ಪಡೆಯಲ್ಪಟ್ಟಿದೆ