ಅಮರಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
 
೩೧ ನೇ ಸಾಲು:
*ಶ್ಲೋಕಾರ್ಥ- ಮೂರು ಲಿಂಗಗಳೂ ಇವೆಯೆಂದೂ ಸೂಚಿಸಲು 'ತ್ರಿಷು' ಎಂಬ ಪದವನ್ನೂ ಸ್ತ್ರೀಲಿಂಗ ಪುಲ್ಲಿಂಗಗಳೆರಡೂ ಇವೆಯೆನ್ನಲು ದ್ವಯೋಃ ಎಂಬ ಪದವನ್ನು ಬಳಸಲಾಗಿದೆ.(ಉದಾ: ತ್ರಿಷು ಸ್ಪುಲಿಂಗೋಗ್ನಿಕಣಃ = ಇಲ್ಲಿ ಸ್ಪುಲಿಂಗ ಶಬ್ದವು ಮೂರು ಲಿಂಗಗಳಲ್ಲಿಯೂ ಇದೆಯೆಂದು ತಿಳಿಯಬೇಕು. ವಹ್ನೇರ್ದ್ವರ್ಚ್ವಾಲಕೀಲೌ = ಇಲ್ಲಿ ಜ್ವಾಲ, ಕೀಲ ಶಬ್ದಗಳು ಸ್ತ್ರೀಲಿಂಗ ಮತ್ತು ಪುಲ್ಲಿಂಗಗಳಲ್ಲಿವೆಯೆಂದು ಅರ್ಥ) ಹಾಗೆಯೇ ಒಂದು ಲಿಂಗವನ್ನು ನಿಷೇಧಿಸಿದರೆ ಉಳಿದ ಲಿಂಗಗಳಿವೆಯೆಂದು ತಿಳಿಯಬೇಕು, (ಉದಾ: ವ್ಯೋಮಯಾನಂ ವಿಮಾನೋಸ್ತ್ರೀ = ಸ್ತ್ರೀಲಿಂಗವಿಲ್ಲ ಎಂದು ನಿಷೇಧಿಸಿದ್ದರಿಂದ ವಿಮಾನ ಶಬ್ದಕ್ಕೆ ಪುಲ್ಲಿಂಗ ನಪುಂಸಕಲಿಂಗಗಳಿವೆಯೆಂದು ತಿಳಿಯಬೇಕು).ಯಾವ ಶಬ್ದದ ಮುಂದೆ 'ತು' ಎಂಬ ಪದವಿದೆಯೋ ಆ ಶಬ್ದವು ಹಿಂದಿನ ಪದಗಳೊಡನೆ ಅನ್ವಿತವಾಗುವುದಿಲ್ಲ. (ಉದಾ: ಪುಲೋಮಜಾ ಶಚೀಂದ್ರಾಣೀ ನಗರೀತ್ವಮರಾವತೀ = ಇಲ್ಲಿ ನಗರೀ ಶಬ್ದವು ಹಿಂದಿನ ಇಂದ್ರಾಣಿಯೊಡನೆ ಅನ್ವಿತವಲ್ಲ. ಅದು ಅಮರಾವತಿಯೊಡನೆ ಅನ್ವಿತ). ಯಾವ ಶಬ್ದದ ಹಿಂದೆ 'ಅಥ' ಎಂಬ ಪದವಿದೆಯೋ ಆ ಶಬ್ದವೂ ಹಿಂದಿನ ಶಬ್ದಗಳೊಡನೆ ಅನ್ವಿತವಾಗುವುದಿಲ್ಲ. (ಉದಾ: ವಿಸ್ಮಯೋದ್ಭುತಮಾಶ್ಚರ್ಯಂ ಚಿತ್ರಮಪ್ಯಥ ಭೈರವಮ್ = ಇಲ್ಲಿ ಭೈರವ ಶಬ್ದವು ಹಿಂದಿನ ಚಿತ್ರ ಶಬ್ದದೊಡನೆ ಅನ್ವಿತವಲ್ಲ. "ದಾರುಣಂ ಭೀಷಣಂ ಭೀಷ್ಮಂ" ಎಂಬುದರೊಡನೆ ಅನ್ವಿತ).
:*ಟಿಪ್ಪಣಿ : ದ್ವಿಹೀನ, ದ್ವಯಹೀನ ಎಂದರೆ ಸ್ತ್ರೀ ಪುಂಸಕಗಳೆರಡೂ ಇಲ್ಲ - ನಪುಂಸಕಲಿಂಗ ಎಂದು ತಿಳಿಯತಕ್ಕದ್ದು. ನಾ ಎಂದರೆ ಪುಲ್ಲಿಂಗ, ಕ್ಲೀಬ ಎಂದರೆ ನಪುಂಸಕ. "ಅಥ" ಶಬ್ದದಂತೆಯೇ "ಅಥೋ" ಶಬ್ದವನ್ನು ಉಪಯೋಗಿಸಿದರೂ ಪೂರ್ವಾನ್ವಯವಿಲ್ಲ. ಶಬ್ದದ ಕಡೆಯಲ್ಲಿ 'ತಿ' ಎಂಬ ಪ್ರತ್ಯಯವಿದ್ದು ಭಾವನಾಮವಾಗಿದ್ದರೆ, ಅದು ಸ್ತ್ರೀಲಿಂಗ.(ಉದಾ : ಮತಿ, ರತಿ, ನತಿ, ಇತ್ತಾದಿ).
 
===ಪ್ರಥಮ ಕಾಂಡಮ್===
:*1 - ಸ್ವರ್ಗವರ್ಗಃ
Line ೪೪ ⟶ ೪೩:
ವೃಂದಾರಕಾಃ ದೈವತಾನಿ ಪುಂಸಿ ವಾ ದೇವತಾಃ ಸ್ತ್ರಿಯಾಮ್ || 9 ||
*ಅಮರ, ನಿರ್ಜರ, ದೇವ, ತ್ರಿದಶ, ವಿಬುಧ, ಸುರ, ಸುಪರ್ವನ್, ಸುಮನಸ್, ತ್ರಿದಿವೇಶ, ದಿವೌಕಸ್, ಆದಿತೇಯ, ದಿವಿಷದ್, ಲೇಖ, ಅದಿತಿನಂದನ, ಆದಿತ್ಯ, ಋಭು, ಅಸ್ವಪ್ನ, ಅಮರ್ತ್ಯ, ಅಮೃತಾಧಸ್, ಬಹಿರ್ಮುಖ, ಕ್ರತುಭುಜ್, ಗೀರ್ವಾಣ, ದಾನವಾರಿ, ವೃಂದಾರಕ(ಇಷ್ಟು ಪದಗಳು ಪುಲ್ಲಿಂಗಳು), ದೈವತ(ಪುಲ್ಲಿಂಗ, ಮತ್ತು ನಪುಂಸಕಲಿಂಗ), ದೇವಾತಾ(ಸ್ತ್ರೀಲಿಂಗ) = ದೇವತೆಗಳು.
 
[[ವರ್ಗ:ಸಾಹಿತ್ಯ]]
"https://kn.wikipedia.org/wiki/ಅಮರಕೋಶ" ಇಂದ ಪಡೆಯಲ್ಪಟ್ಟಿದೆ