ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ತಿಳುವಳಿಕೆ → ತಿಳಿವಳಿಕೆ using AWB
ಚು Wikipedia python library
೩ ನೇ ಸಾಲು:
'''ಅದ್ವೈತ''' ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ (non-dualistic) ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. 'ಅದ್ವೈತ' ಎಂದೊಡನೆ ಶ್ರೀ [[ಆದಿ ಶಂಕರ|ಆದಿ ಶಂಕರಾಚಾರ್ಯರ]] ಹೆಸರು ಪ್ರಸ್ತಾಪಿಸಲ್ಪಡುತ್ತದೆ. ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ್ಟು, ಅದನ್ನು [[ದರ್ಶನ|ದರ್ಶನದ]] ಮಟ್ಟಕ್ಕೆ ಕೊಂಡಯ್ದು ಪ್ರಚುರ ಪಡಿಸಿದವರು ಆದಿ ಶಂಕರರು. ಹಾಗೆಂದು ಶಂಕರರ ಮೊದಲು ಅದ್ವೈತ ಸಿದ್ಧಾಂತವಿರಲಿಲ್ಲವೆಂದಲ್ಲ. ಶಂಕರರು [[ಗೌಡಪಾದ|ಗೌಡಪಾದರ]] ಪರಂಪರೆಗೆ ಸೇರಿದ [[ಗೋವಿಂದ ಭಗವತ್ಪಾದ|ಗೋವಿಂದ ಭಗವತ್ಪಾದರ]] ಶಿಷ್ಯರು. ಹಾಗಾಗಿ ಶಂಕರರಿಗಿಂತಲೂ ಮೊದಲು ಅದ್ವೈತ ಸಿದ್ಧಾಂತವು ಉದಯಿಸಿತ್ತೆಂದೂ, ಈ ಪರಂಪರೆಯಲ್ಲಿ ಅನೇಕ ಆಚಾರ್ಯರುಗಳು ಆಗಿಹೋಗಿದ್ದರೆಂದೂ ಹೇಳಬಹುದಾಗಿದೆ.
'ಅದ್ವೈತ'ವೆಂದರೆ ಎರಡಿಲ್ಲದ್ದು. ಅಂದರೆ 'ಒಂದೇ' ಆಗಿರುವುದು. ಜೀವಿಯಲ್ಲಿರುವ [[ಆತ್ಮ|ಆತ್ಮನೂ]], ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು [[ಅಭೇದ]] ಸಿದ್ಧಾಂತವೆಂದೂ ಕರೆಯಲಾಗುತ್ತದೆ.
 
== ಅದ್ವೈತ ದರ್ಶನ ಇತಿಹಾಸ ==
:'''ಪೀಠಿಕೆ''' :-
Line ೧೫ ⟶ ೧೪:
:ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಹೊರಟು ಹೋದರು .
:ಅವರ ಅತ್ಯಂತ ಪ್ರಸಿದ್ಧವಾದ ಕೃತಿ [[ಬ್ರಹ್ಮ ಸೂತ್ರ ಭಾಷ್ಯ]]. ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ ಅದು . ಅದೊಂದು ಅಮೋಘ ಕೃತಿ. ಹಾಗೆಯೇ [[ಉಪನಿಷತ್ತು]] ಮತ್ತು [[ಭಗವದ್ಗೀತೆ]]ಗಳ ಮೇಲಿನ ಅವರ ಭಾಷ್ಯಗಳೂ ಅದರ ಸರಳ ನಿರೂಪಣೆ, ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದಿದೆ . ಈ ಮೇಲಿನ ಮೂರು ವಿಷಯಕ್ಕೆ ಪ್ರಸ್ಥಾನತ್ರಯವೆಂದು ಹೆಸರು . ಅವರು ಪ್ರಸ್ಥಾನ ತ್ರಯದ ಮೊದಲ ಭಾಷ್ಯಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೆ ಅವರು "ಆತ್ಮ ಬೋಧೆ," ಮೊದಲಾದ ಅನೇಕ ಗ್ರಂಥಗಳನ್ನೂ ಸ್ತೋತ್ರಗಳನ್ನೂ ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನ ಮಿಶ್ರರು ಅವರ ಸಮಕಾಲೀನರಾದ ಮತ್ತೊಬ್ಬ ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ -ವಾರ್ತಿಕಕಾರರೆಂದೂ ಪ್ರಸಿದ್ಧಿ. ಶಂಕರ ಭಾಷ್ಯಕ್ಕೆ ಟೀಕೆ - ವಾರ್ತಿಕವನ್ನು ಬರೆದಿದ್ದಾರೆ. ಶಂಕರರ ಇನ್ನೊಬ ಶಿಷ್ಯರಾದ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ ಪಂಚಪಾದಿಕಾ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ
 
== ಶಂಕರ ಪೂರ್ವ ಯುಗ ==
:ನಂತರ ಬಂದ ವಿದ್ಯಾರಣ್ಯರ "ಪಂಚದಶೀ" ಅತ್ಯಂತ ಜನಪ್ರಿಯ ಕೃತಿ. '''ಅದ್ವೈತ ದರ್ಶನ'''ವನ್ನು '''ಶಂಕರ ಪೂರ್ವ ಯುಗ''' ; '''ಶಂಕರ ಯುಗ''' ; '''ಶಂಕರೋತ್ತರ ಯುಗ'''ವೆಂದು ವಿಂಗಡಿಸುತ್ತಾರೆ. ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು. ನಂತರದ ಯುಗದಲ್ಲಿ ಶಂಕರರ ಅಭಿಪ್ರಾಯದ ಬಗೆಗೆ ವಾದ, ವಿವಾದ, ಭಿನ್ನಾಭಿಪಾಯಗಳ ಕೃತಿಗಳು ಉದಯಿಸಿದವು
Line ೨೩ ⟶ ೨೧:
----
:ಜಾಗ್ರತ್ (ಎಚ್ಚರ) , ಸ್ವಪ್ನ (ಕನಸು), ಸುಷುಪ್ತಿ (ಗಾಢ ನಿದ್ದೆ) ಇವು ಮೂರು [[ಅವಸ್ಥಾತ್ರಯ]]ಗಳು . ಎಚ್ಚರದ, ಕನಸಿನ, ಪೂರ್ಣನಿದ್ರೆಯ ಸ್ಥಿತಿಗಳು . ಕನಸಿನಲ್ಲಿರುವಾಗ - ಕನಸು -ಅನುಭವ ಸತ್ಯವಾಗಿರುತ್ತದೆ. ಆಗ ಎಚ್ಚರ ಸುಳ್ಳು ; ಎಚ್ಚರವಾಗಿದ್ದಾಗ ಕನಸು ಸುಳ್ಳು ; ಇವೆರಡೂ ನಿದ್ದೆಯಲ್ಲಿ ಇಲ್ಲವೇ ಇಲ್ಲ. '''ಸತ್ಯಕ್ಕೆ ಅನುಭವವೇ ಆಧಾರ'''ವಾದ್ದರಿಂದ , ಕನಸಿನಲ್ಲಿ ಕಂಡದ್ದು ಮತ್ತು ಎಚ್ಚರದಲ್ಲಿ ಕಂಡದ್ದು ಸಮನಾಗಿದೆ (ಮಿಥ್ಯೆ -ಸುಳ್ಳು). '''ಸತ್ಯವು ತ್ರಿಕಾಲಾಭಾದಿತವಾಗಿರಬೇಕು''' (ಈ ಮೂರು ಕಾಲಗಳಲ್ಲಿ ಆಭಾದಿತ -ಭಾದಿತವಾಗಬಾರದು- ಮಿಥ್ಯೆ ಯಾಗಬಾರದು) ,[[ಆತ್ಮ]]ನಿಗಿಂತ ಭಿನ್ನವಾದುದು(ಬೇರೆಯಾದುದು) ಯಾವುದೂ ಇಲ್ಲ. ಆತ್ಮನಿಗಿಂತ ಬೆರೆಯಾಗಿರುವುದೇನಿದ್ದರೂ ಅದು ಮಿಥ್ಯೆ ( ಏನೊಂದು ಅತ್ಮನಿಗಿಂತ ಬೇರೆಯಾಗಿರಲು ಸಾಧ್ಯವಿಲ್ಲ, ಭಗವದ್ಗೀತೆಯ ಸಾರ). ಆದ್ದರಿಂದ ಮಿಥ್ಯೆಯು ನಮ್ಮ ಅಂತಹಕರಣದ ಜಗತ್ತಿಗೆ ಹೊರತು ಎಚ್ಚರದ ಕಾಣಿಸುವ ಜಗತ್ತಿಗೆ ಅಲ್ಲ.
 
=== ಅಜಾತಿ ವಾದ ===
----
Line ೩೪ ⟶ ೩೧:
:ಇವರು ಕ್ರಮವಾಗಿ '''ಸ್ಥೂಲ , ಸೂಕ್ಷ್ಮ , ಆನಂದ'''ಗಳನ್ನು ಅನುಭವಿಸುತ್ತಾರೆ.
:ಈ ಮೂರೂ ಸ್ಥಿತಿಗೆ ಮೀರಿದ್ದು '''ತುರೀಯ ಅವಸ್ಥೆ''' ; ಅದು '''ಆತ್ಮನ ಶುದ್ಧ ರೂಪ'''. ಅದ್ವೈತವು ಅಲ್ಲಿ ತಾನೇತಾನಾಗಿರುತ್ತದೆ.
 
=== ಸಾಧನೆ ===
----
Line ೬೧ ⟶ ೫೭:
ಅವರ ವೇದಾಂತವನ್ನೆಲ್ಲಾ ಒಂದು ವಾಕ್ಯದಲ್ಲಿ ಸಂಗ್ರಹಿಸಬಹುದು.(ವ+ಓ=ವೋ- ವಓ) '''ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋಬ್ರಹೈವನಾಪರಃ''' : (ಈ ವಾಕ್ಯವು ಶಂಕರರು ಹೇಳಿದ್ದಲ್ಲ - ಅವರ ಅನುಯಾಯಿಗಳು ಹೇಳಿದ್ದು -?) ಬ್ರಹ್ಮವು ಸತ್ಯ ಜಗತ್ತು ಮಿಥ್ಯ ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ, ಎಂಬುದೇ ಆ ಪ್ರಸಿದ್ಧ ಉಕ್ತಿ. ಸತ್,ಚಿತ್,ಆನಂದ ಸ್ವರೂಪಿಯಾದುದು ಬ್ರಹ್ಮ. ನಮ್ಮ ಕಣ್ಣಿಗೆ ಕಾಣುವ ಅನುಭವಕ್ಕೆ ಎಟುಕುವ, ಈ ಪ್ರಪಂಚವೆಲ್ಲಾ, ಮಿಥ್ಯೆ . ಅಂದರೆ ಅದು ಬ್ರಹ್ಮದ ತೋರಿಕೆಯೇ. ನೀರ ಮೇಲಿನ ಗುಳ್ಳೆಗೆ ನೀರನ್ನು ಬಿಟ್ಟು ಬೇರೆ ಅಸ್ತಿತ್ವವಿಲ್ಲದಂತೆ ಈ ಪ್ರಪಂಚಕ್ಕೆ ಪ್ರತ್ಯೇಕವಾದ ಸ್ವತಂತ್ರವಾದ ಅಸ್ತಿತ್ವವಿಲ್ಲ (ಬ್ರಹ್ಮವನ್ನು ಬಿಟ್ಟು). ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲಾ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು ಕೇವಲ ಮಾಯಾ ಕಲ್ಪಿತ (ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು). ಜೀವಿಗಳೂ ಅಷ್ಟೇ, ಅವು ಅನಾದಿಯದ ಅಜ್ಞಾನದ ಮುಸುಕಿನಲ್ಲಿದ್ದಾರೆ. ಜೀವಿಗಳ ಬೇಧಕ್ಕೆ, ಜೀವ ಜಗತ್ತುಗಳ ಬೇಧಕ್ಕೆ , ಜೀವ-ಜಗತ್ತು-ಬ್ರಹ್ಮಗಳ ಬೇಧಕ್ಕೆ ಅಜ್ಞಾನವೇ ಕಾರಣ.
;ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಬೇಧವೆಲ್ಲಾ ಅಳಿದುಹೋಗಿ, ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ ; ಅದೇ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ.
 
== ತ್ರಿವಿಧ ಸತ್ತೆಗಳು==
:ಜೀವ, ಜಗತ್ತು , ಬ್ರಹ್ಮಗಳನ್ನರಿಯಲು, ಸತ್ಯವನ್ನು ಅರಿಯುವ ಮಾರ್ಗ , ಮ್ತ್ತು ಕಂಡುಬರುವ ಅನುಭವದ ಸಂಗತಿ ಮೂರುಬಗೆ. ಮೀಮಾಂಸಕರ ಸ್ವತಃ ಪ್ರಾಮಾಣ್ಯ ವಾದವನ್ನು ಇವರು ಒಪ್ಪುತ್ತಾರೆ ಅಂದರೆ ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಯತಾರ್ಥವೆಂದೇ ತಿಳಿಯಬೇಕು. ಆದರೆ ಈ ಸತ್ಯ ಮೂರು ಬಗೆ, ೧. '''ಪಾರಮಾರ್ಥಿಕ ಸತ್ಯ,''' ೨. '''ವ್ಯಾವಹಾರಿಕ ಸತ್ಯ''' , ೩.'''ಪ್ರಾತಿಭಾಸಿಕ ಸತ್ಯ.'''
Line ೧೧೪ ⟶ ೧೦೯:
: ಕಾರ್ಯಕಾರಣ ವಾದದ ಬಲದಿಂದ ಜಗತ್ತಿಗೆ ಕಾರಣವೊಂದಿದೆ ಎಂದು ಸಿದ್ಧಪಡಿಸಬಹುದು. . '''ಆದರೆ ಈಶ್ವರನೇ ಕಾರಣವೆಂಬುದನ್ನು ಸಿದ್ಧಪಡಿಸಲಾಗದು.''' (ಬ್ರ.ಸೂ. ಜನ್ಮಾದ್ಯಸ್ಯ ಯತಃ ಕ್ಕೆ ಭಾಷ್ಯ) '''ಈಶ್ವರನೇ ಸೃಷ್ಟಿಕರ್ತನೆಂಬುದಕ್ಕೆ ಶ್ರುತಿಯೇ ಆಧಾರ.''' ಅದರಂತೆ ಈಶ್ವರನು ಜಗತ್ತಿನ ಸೃಷ್ಟಿ ,,ಸ್ಥಿತಿ,ಲಯಗಳಿಗೆ ಕಾರಣ ;ಕರ್ಮಫಲದಾತ ; ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ; ಭಕ್ತಿ ಪ್ರೀತ ವರದಾತ ; ವೇದ ರಕ್ಷಕ (ಪುನರುಜ್ಜೀವಕಾರಕ) ; ಆದರೆ ಕರ್ಮದ ಸೋಂಕಿಲ್ಲ. ಮಾಯೆ ಅವನ ಶಕ್ತಿ. ಆದರೆ ಮಾಯಾತೀತ ; ಜಗತ್ತಿನ ಸೃಷ್ಟಿ ಅವನ ಲೀಲೆ, ಮಾಯೆ. (ಕಾರಣ ಜಗತ್ತನ್ನು ಏಕೆ ಸೃಷಿಸಿದ?-ಉತ್ತರವಿಲ್ಲ,[ನೋಡಿ ಜಗತ್ತು] ಅಥವಾ ಮಾಯೆ;< ಜೀವಿಯು ಬ್ರಹ್ಮವನ್ನು ಜಗತ್ತಿನ್ನಿನ್ದಲೇ ತಿಳಿಯಬೇಕು, ಹೇಗೆಂದರೆ, ಮಡಿಕೆಯನ್ನು ಬಿಟ್ಟು ಮಣ್ಣಿನ ಸ್ವರೂಪ ಜೀವನಿಗೆ ಗೊತ್ತಿಲ್ಲವಾದ್ದರಿಂದ ಮಡಿಕೆಯಿಂದಲೇ ಮಣ್ಣನ್ನು ಅರಿಯಲು ಸಾಧ್ಯ.>[ಆಧಾರವಿಲ್ಲ]>ಇದು ಅನಾಮಧೇಯ ಸಂಪಾದಕರ ಅಭಿಪ್ರಾಯ, ಶಂಕರರ ಅಭಿಪ್ರಾಯವಲ್ಲ); ಅವನು ಅದರ ಸೂತ್ರಧಾರಿ -ಪಾತ್ರಧಾರಿ - ಪ್ರೇಕ್ಷಕ. :ನಂತರದಲ್ಲಿ ಅದ್ವೈತದ ಈ ಈಶ್ವರನ ಅಸ್ತಿತ್ವ ವಾದದಿಂದ ಬೇರೆ ಬೇರೆ ವಾದಗಳು ಪಂಥಗಳು ಹೊರಟವು / ಹುಟ್ಟಿದವು. [[ಅವಿದ್ಯೆ]] (ಮಾಯೆ) ,
:'''ಈಶ್ವರ''', - ನಿರ್ಗುಣ ಬ್ರಹ್ಮದಿಂದ, ಜೀವ, ಜಗತ್ತು ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೇ ಉಳಿದಿದೆ. [[ಅವಿದ್ಯೆ]] ದೂರವಾದ ನಂತರ ಸಾಕ್ಷಾತ್ಕಾರ . ನಂತರ ಈ ಪ್ರಶ್ನೆಗಳಿಗೆ ಅರ್ಥವಿಲ್ಲ !! ಆದ್ದರಿಂದ ಜಗತ್ತಿನ ಮಾಯೆ ಅನಿರ್ವಚನೀಯ .
 
== ಮಾಯಾವಾದ ==
:ಮಾಯಾವಾದವು ಅದ್ವೈತದ ಪ್ರಮುಖ ಸಿದ್ಧಾಂತಗಳಲ್ಲೊಂದು. ಅದ್ವೈತದ ಅಡಿಗಲ್ಲೆಂದರೆ ತಪ್ಪಲ್ಲ . ಜಗನ್ಮಿಥ್ಯಾ ತತ್ವವು ಮಾಯಾವಾದವನ್ನು ಆಧರಿಸಿದೆ. ಅದ್ವೈತದಲ್ಲಿ , ಬ್ರಹ್ಮ-ಈಶ್ವರ, ಬ್ರಹ್ಮ -ಜಗತ್ತು , ಬ್ರಹ್ಮ-ಜೀವ, ಈ ಸಂಬಂಧಗಳನ್ನು ವಿವರಿಸುವಲ್ಲಿ ಮಾಯೆಯ ಕಲ್ಪನೆ ಅಗತ್ಯ. ಹಾಗಾಗಿ '''ಅದ್ವೈತಿಗಳನ್ನು ಮಾಯಾವಾದಿಗಳೆಂದು ಕರೆಯುತ್ತಾರೆ.'''
Line ೧೬೪ ⟶ ೧೫೮:
=== ಕರ್ಮಯೋಗ ===
:ಕರ್ಮವು ಮೋಕ್ಷಕ್ಕೆ ಸಹಕಾರಿಯಾಗಿದೆ. ಕರ್ಮವು ಬಂಧನಕಾರಿ . ಕರ್ಮಗಳನ್ನು (ಕೆಲಸಗಳನ್ನುಸೇರಿ) ಮಾಡದೇ ಇರುವುದು ಸಾಧ್ಯವಿಲ್ಲ. ಆದ್ದರಿಂದ ಕರ್ಮ ಬಂಧನದಿಂದ ಬಿಡಿಸಿಕೊಳ್ಳಲು , ಅವನ್ನು ಈಶ್ವರಾರ್ಪಣ ಮಾಡುವುದೊಂದೇ ದಾರಿ/ಮಾರ್ಗ . .ಅದೇ ಕರ್ಮಯೋಗ. ಈ ರೀತಿ ಮಾಡುವುದರಿಂದ ಚಿತ್ತ ಶುದ್ಧಿಯಾಗಿ ಜ್ಞಾನೋದಯಕ್ಕೆ ಕಾರಣವಾಗುತ್ತದೆ. '''ಬ್ರಹ್ಮ ಜ್ಞಾನವಾಗುವ ವರೆಗೂ ಕರ್ಮವು ಅವಶ್ಯವಾಗಿದೆ.'''
 
=== ಉಪಾಸನೆ ===
:ಉಪಾಸನೆ ಎಂದರೆ ಉಪಾಸ್ಯ (ಧ್ಯಾನ ಮಾಡುವ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ' '''ವಿದ್ಯಾ''' "ಎಂದು ಹೆಸರು . ಉಪಾಸನೆಯು ಜ್ಙಾನದ ಅಪೇಕ್ಷೆಯ ಕರ್ಮ. ಉಪಾಸನೆ ಎಂದರೆ ಉಪಾಸ್ಯ (ಧ್ಯಾನ ಮಾಡುವ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ವಿದ್ಯಾ ಎಂದು ಹೆಸರು . ಜ್ಙಾನದ ಅಪೇಕ್ಷೆಯ ಕರ್ಮ. /// ಇದರಿಂದಲೂ ಕೊನೆಗೆ ಜ್ಞಾನವಾಗಿ ಮೋಕ್ಷ ವಾಗುವುದು ಇಲ್ಲದಿದ್ದರೆ (ಜ್ಞಾನವಾಗದಿದ್ದರೆ) ಹಿರಣ್ಯಗರ್ಭಲೋಕ.
Line ೨೦೩ ⟶ ೧೯೬:
:ಓಂತತ್ಸತ್
:ಇದರ ಬಗೆಗೆ ಇನ್ನೂ ಇತರ ಅಭಿಪ್ರಾಯಗಳಿಗೆ ಮುಂದಿನ ಪುಟಗಳನ್ನು ನೋಡಿ
 
== ಮಾಯಾವಾದ - [[ಅವಿದ್ಯೆ]] ==
 
ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಪ್ರಮುಖ ಅಂಗ 'ಮಾಯಾವಾದ'.
 
ಸತ್ ಚಿತ್ ಸ್ವರೂಪಿಯಾದ [[ಆತ್ಮ|ಆತ್ಮನೇ]] ಬ್ರಹ್ಮ. ಆದರೆ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯವನ್ನು ಗುರುತಿಸಲು ಸಾಧ್ಯವಾಗದಂತೆ ಜಗತ್ತನ್ನು [[ಮಾಯೆ|ಮಾಯೆಯು]] ಆವರಿಸಿದೆ. ಮಾಯೆಯ ಆವೃತ್ತಿಯು ಎಷ್ಟು ಘನವಾದುದೆಂದರೆ ಅದರ ಅಸ್ತಿತ್ವವೇ ಅನುಭವಕ್ಕೆ ಬರದಟ್ಟು. ಮಾಯೆಯ ಸಂಸರ್ಗದಿಂದಾಗಿ ಲೋಕದಲ್ಲಿ ಭಿನ್ನತೆಗಳೂ, ಭೇದಗಳೂ ಕಾಣಿಸತೊಡಗುತ್ತವೆ. ಮಾಯೆಯು ಲೌಕಿಕ ಜಗತ್ತಿನಲ್ಲಿ ತನ್ನನ್ನು ತಾನೇ ಅನೇಕ ರೂಪಾಂತರಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಜೀವಿಗಳಲ್ಲಿರುವ ಭೇದವೂ, ಹೆಣ್ಣು - ಗಂಡುಗಳೆಂಬ ಭೇದವೂ, ಪ್ರಾಣಿ - ಪಕ್ಷಿಗಳೆಂಬ ಪ್ರಭೇದಗಳೂ, ಗಿಡ - ಮರಗಳೂ, ನಿರ್ಜೀವ ವಸ್ತುಗಳೂ - ಹೀಗೆ ಜಗತ್ತಿನಲ್ಲಿ ಕಾಣ ಸಿಗುವ ಎಲ್ಲ ರೀತಿಯ ಭಿನ್ನತೆಗಳೂ ಮಾಯೆಯಿಂದ ಉಂಟಾದವು. ಈ ಮಾಯೆಯಿಂದಾಗಿ ಸಾಧಾರಣ ಜೀವಿಗೆ ತನ್ನ ಕಣ್ಣು ಮೊದಲಾದ ಇಂದ್ರಿಯಗಳ ಮೂಲಕ ಲೋಕದಲ್ಲಿನ ಈ ಭಿನ್ನತೆಗಳೇ ವಸ್ತುವಿನ ನಿಜ ಸ್ವರೂಪವೆಂದು ಭಾಸವಾಗುತ್ತದೆ. ಆದರೆ ವಸ್ತುತ: ಇವೆಲ್ಲವೂ ಮೂಲ ಬ್ರಹ್ಮದ ಸ್ವರೂಪವೇ ಆಗಿರುವ ವಿಚಾರವನ್ನು ಆತ್ಮದ ಅರಿವಿಗೆ ಬರದಂತೆ ಮಾಯೆಯು ತಡೆಯೊಡ್ಡುತ್ತದೆ. ಯಾವುದು ವಾಸ್ತವದಲ್ಲಿ ಇಲ್ಲವೇ ಇಲ್ಲವೋ ಅದು ಇರುವಂತೆ ಭಾಸವಾಗುವುದು ಮಾಯೆಯ ಪ್ರಭಾವದಿಂದಾಗಿ.
ಸತ್ಯವನ್ನು ಮಾಯೆಯ ಆವರಣವು ಆವರಿಸಿಕೊಂಡಿದೆ. ಮಾಯೆಯ ಘನಸ್ವರೂಪವು ಇಡೀ ಸತ್ಯವನ್ನು ಕಾಣದಂತೆ ತೆರೆ ಹಿಡಿದಿರುತ್ತದೆ. ಪ್ರತಿ ಮಾನವನೂ ತನ್ನ ಸುತ್ತಲಿನ ಜಗತ್ತಿನಲ್ಲಿ ಅನೇಕತೆಯನ್ನು ಕಾಣುವಂತೆ ಮಾಡುತ್ತದೆ ಮಾಯೆ. ಸತ್ಯವನ್ನರಿಯಲಾಗದ ಮಾನವನು ಈ ಜಗತ್ತಿನಲ್ಲಿ ನಾನು, ನನ್ನದು ಎಂದು ಸ್ವಂತಿಕೆಯನ್ನು, ಅಹಂಕಾರವನ್ನೂ ಬೆಳೆಸಿಕೊಳ್ಳುತಾನೆ. ಇದೇ [[ಅವಿದ್ಯೆ]].
Line ೨೬೮ ⟶ ೨೫೮:
#[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]]
#[[ವೇದಗಳು]]
 
==ಆಧಾರ==
:೧. ಭಾರತೀಯ ತತ್ವ ಶಾಸ್ತ್ರ ಪರಿಚಯ ಲೇ. ಎಂ. ಪ್ರಭಾಕರ ಜೋಶಿ ಮತ್ತು ಎಂ.ಎಂ. ಹೆಗಡೆ ; ಎಂಜಿಸಿ ಕಾಲೇಜು ಸಿದ್ದಾಪುರ [[ಪ್ರೊ.ಎಂ.ಎ.ಹೆಗಡೆ]]
:೨.ಬ್ರಹ್ಮಸೂತ್ರ ಭಾಷ್ಯ ನತ್ತು ಭಗವದ್ಗೀತಾ ಭಾಷ್ಯ (ಕನ್ನಡ ಅನುವಾದದಲ್ಲಿ)ಲೇಖಕರು: ಶ್ರೀ ಸಚ್ಚದಾನಂದ ಸರಸ್ವಿತೀ ಸ್ವಾಮಿಯವರು ಮತ್ತು ಪೂರ್ವಾಶ್ರಮ ನಾಮ -ಯಲ್ಲಂಬಳಸೆ ಸುಬ್ರಾಯ ಶರ್ಮಾ;ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕರ್ಯಾಲಯ ಹೊಳೆನರಸೀಪುರ, ಹಾಸನ ಜಿಲ್ಲೆ.
 
==ಬಾಹ್ಯ ಸಂಪರ್ಕಗಳು==
* [http://www.livestream.com/advaitaacademy_Subrahmanian ಅದ್ವೈತ ಅಕಾಡೆಮಿ_ಸುಬ್ರಹ್ಮಣ್ಯ]
 
[[ವರ್ಗ:ಹಿಂದೂ ಧರ್ಮ]]
[[ವರ್ಗ:ತತ್ತ್ವಶಾಸ್ತ್ರ]]
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ